Rashmika Mandanna: ಕನ್ನಡ ತೆಲುಗು ತಮಿಳು ಹಿಂದಿ ಎಲ್ಲರಿಗೂ ಬೇಡವಾದ ರಶ್ಮಿಕಾ, ಈ ಬಾರಿ ಬಕೆ-‘ಟ್’ ಹಿಡಿದಿದ್ದು ಯಾರಿಗೆ ಗೊತ್ತೇ?? ಹೊಸ ಅಸ್ತ್ರ ಪ್ರಯೋಗ. ಏನಾಗಿದೆ ಗೊತ್ತೇ??

Rashmika Mandanna: ನಟಿ ರಶ್ಮಿಕಾ ಮಂದಣ್ಣ ಕರ್ನಾಟಕದ ಹುಡುಗಿ ಅದರ ಇವರು ಈಗ ಹೆಚ್ಜು ಬೆಳೆಯುತ್ತಿರುವುದು ತೆಲುಗು ಹಾಗೂ ಬಾಲಿವುಡ್ ನಲ್ಲಿ ಎಂದರೆ ತಪ್ಪಲ್ಲ. ಪುಷ್ಪ ಸಿನಿಮಾ ಮೂಲಕ ರಶ್ಮಿಕಾ ಮಂದಣ್ಣ ಅವರು ನ್ಯಾಷನಲ್ ಕ್ರಶ್, ಪ್ಯಾನ್ ಇಂಡಿಯಾ ಹೀರೋಯಿನ್ ಎಂದು ಹೆಸರು ಮಾಡಿದ್ದಾರೆ. ಇವರಿಗೆ ಭಾಷೆಗಳಲ್ಲಿ ಬೇಡಿಕೆ ಇದೆಯಾದರೂ, ಕನ್ನಡ ಭಾಷೆಯನ್ನು ಅಸಡ್ಡೆ ಮಾಡಿ, ಕನ್ನಡ ಜನತೆಯ ಕೋಪಕ್ಕೆ ಕಾರಣವಾಗಿದ್ದಾರೆ ಎಂದರೆ ತಪ್ಪಾಗುವುದಿಲ್ಲ. ಈಗ ರಶ್ಮಿಕಾ ಅವರನ್ನು ಕಂಡರೆ ತೆಲುಗು ಜನರು ಕೂಡ ಅಷ್ಟಕ್ಕಷ್ಟೇ ಎನ್ನುತ್ತಿದ್ದಾರೆ..

ತಮಿಳಿನಲ್ಲಿ ಸಹ ರಶ್ಮಿಕಾ ಹವಾ ಜೋರಾಗೇನು ನಡೆಯುತ್ತಿಲ್ಲ, ಹಿಂದಿಯಲ್ಲಿ ಮೊದಲ ಸಿನಿಮಾ ಮಕಾಡೆ ಮಲಗಿತು. ಹಾಗಾಗಿ ಇದೀಗ ರಶ್ಮಿಕಾ ಮಂದಣ್ಣ ಅವರು ಮರಾಠಿ ಹುಡುಗಿ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಹಿಂದಿಯ ಜೀಸಿನಿಮಾ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ರಶ್ಮಿಕಾ ಅವರು ಅಪ್ಪಟ ಮರಾಠಿ ಶೈಲಿಯ ನಾಥ್ ಮತ್ತು ನೌವಾರಿ ಸೀರೆ ಧರಿಸಿ, ಮರಾಠಿ ಹಾಡುಗಳಿಗೆ ಭರ್ಜರಿ ಸ್ಟೆಪ್ಸ್ ಹಾಕಿದ್ದು, ಈ ಲುಕ್ ನಲ್ಲಿ ರಶ್ಮಿಕಾ ಅವರನ್ನು ನೋಡಿ, ನೀವು ಪಕ್ಕಾ ಮರಾಠಿ ಹುಡುಗಿಯ ಹಾಗೆ ಕಾಣುತ್ತಿದ್ದೀರಿ ಎನ್ನುತ್ತಿದ್ದಾರೆ ಅಭಿಮಾನಿಗಳು.

ವೇದಿಕೆ ಮೇಲೆ ಮರಾಠಿ ಹಾಡಿಗೆ ಡ್ಯಾನ್ಸ್ ಮಾಡಿದ ನಂತರ ತಮಗೆ ಮರಾಠಿ ಹಾಡುಗಳ ಜೊತೆಗಿರುವ ನಂಟಿನ ಬಗ್ಗೆ ರಶ್ಮಿಕಾ ಮಾತನಾಡಿದ್ದಾರೆ, “ನನಗೆ ಮರಾಠಿ ಹಾಡುಗಳ ಜೊತೆಗೆ ಬಹಳ ಹಳೆಯ ಸಂಬಂಧ, ಚಿಕ್ಕವಳಾಗಿದ್ದಾಗ ಐಕಾ ದಾಜಿಬಾ ಹಾಡಿಗೆ ಡ್ಯಾನ್ಸ್ ಮಾಡ್ತಿದ್ದೇ, ಆ ಸಮಯದಲ್ಲಿ ನಾನು ಕೇಳಿದ ಮೊದಲ ಮರಾಠಿ ಹಾಡು ಅದಾಗಿತ್ತು. ಬಹಳಷ್ಟು ವರ್ಷಗಳಾದ ಮೇಲೆ ಲಾವಣಿ ಡ್ಯಾನ್ಸ್ ಮಾಡಿ ತುಂಬಾ ಸಂತೋಷವಾಯಿತು. ಹಾಗೆಯೇ ಚಿಕ್ಕ ವಯಸ್ಸಿನ ನೆನಪಾಯಿತು..” ಎಂದು ಸ್ಟೇಜ್ ಮೇಲೆ ಹೇಳಿದ್ದಾರೆ ರಶ್ಮಿಕಾ. ಆದರೆ ಇದು ಒಂದು ಹೊಸ ಅಸ್ತ್ರ, ಮರಾಠಿ ಜನರನ್ನು ಆಕರ್ಷಿಸುವ ಪ್ರಯತ್ನ ಎನ್ನುತ್ತಿದ್ದಾರೆ ನೆಟ್ಟಿಗರು.

Comments are closed.