Real Story: ರಾಜ್ಯದಲ್ಲಿ ಭಾರಿ ಸುದ್ದಿ ಮಾಡಿದ್ದ ಶಂಕ್ರಣ್ಣ-ಮೇಘನಾ ಮದುವೆ; ಶಂಕ್ರಣ್ಣ ಜೀವ ಕಳೆದುಕೊಂಡ ಐದು ತಿಂಗಳಲ್ಲಿ ಮೇಘನಾ 4 ತಿಂಗಳ ಗರ್ಭಿಣಿ; ವೈರಲ್ ಆಯ್ತು ಹೊಸ ಬಾಯ್ ಫ್ರೆಂಡ್ ಜೊತೆಗಿನ ವಿಡಿಯೋ!

Real Story: ರಾಜ್ಯದಲ್ಲಿ 45 ವರ್ಷದ ಶಂಕ್ರಣ್ಣ ಎನ್ನುವ ವ್ಯಕ್ತಿಯನ್ನು 25 ವರ್ಷದ ಮೇಘನಾ ಎನ್ನುವ ಹುಡುಗಿ ಮದುವೆಯಾಗಿದ್ದು ಸಿಕ್ಕಾಪಟ್ಟೆ ಸುದ್ದಿ ಆಗಿತ್ತು. ಮದುವೆಯಾಗದೆ ತನ್ನ ತಾಯಿಯ ಜೊತೆಗೆ ಜೀವನ ಸಾಗಿಸುತ್ತಿದ್ದ ಶಂಕ್ರಣ್ನನನ್ನು ಮರಳು ಮಾಡಿ ತನಗೆ ಯಾರು ಇಲ್ಲ ಎಂದು ಹೇಳಿ ಮೇಘನಾ ಮದುವೆ ಆಗಿದ್ದಳು. ಆದರೆ ಮದುವೆಯಾಗಿ 5 ತಿಂಗಳಿಗೆ ಶಂಕ್ರಣ್ಣ ಜೀವ ಕಳೆದುಕೊಳ್ಳುವಂತೆ ಆಯ್ತು.

ಮದುವೆಯಾಗಿ ಮನೆಗೆ ಬಂದ ಸೊಸೆ 24 ಗಂಟೆ ಫೋನ್ ನಲ್ಲಿ ಮಾತಾಡುತ್ತಿದ್ದಳು. ಮನೆಯಲ್ಲಿ ಯಾವುದೇ ಕೆಲಸವನ್ನು ಮಾಡುತ್ತಿರಲಿಲ್ಲ ಅದರ ಬದಲಿಗೆ ಶಂಕ್ರಣ್ಣನ ಬಳಿ ಹಣವನ್ನು ಪೀಕಿಸಿ ಶೋಕಿ ಮಾಡುತ್ತಿದ್ದಳು. ಅಷ್ಟೇ ಅಲ್ಲ ಶಂಕ್ರಣ್ಣನ ಬಳಿ ಆಸ್ತಿ ಮಾರಿ ಬೆಂಗಳೂರಿಗೆ ಹೋಗಿ ಸೆಟಲ್ ಆಗೋಣ ಎಂದು ಕೂಡ ಹೇಳಿದಳಂತೆ. ಶಂಕ್ರಣ್ಣನ ತಾಯಿ ಹಾಗೂ ಹೆಂಡತಿ ದಿನವೂ ಜಗಳ ಆಡುವುದನ್ನು ನೋಡಲಾರದೆ ಶಂಕ್ರಣ್ಣ ಐದು ತಿಂಗಳ ಹಿಂದೆ ತೋಟದಲ್ಲಿ ಹಲಸಿನ ಮರ ಒಂದಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು.

ಶಂಕ್ರಣ್ಣ ತೀರಿ ಹೋಗಿ ಇನ್ನು ಐದು ತಿಂಗಳು ಆಗಿಲ್ಲ ಇದೀಗ ಮೇಘನಾ 4 ತಿಂಗಳ ಗರ್ಭಿಣಿಯಂತೆ. ಮೇಘನಾಗೆ ಈಗಾಗಲೇ ಮದುವೆ ಆಗಿತ್ತು. ಆದರೆ ತನ್ನ ಗಂಡ ಬಿಟ್ಟು ಓಡಿ ಹೋಗಿದ್ದಾನೆ ಎಂದು ಹೇಳಿ ಶಂಕ್ರಣ್ಣರನ್ನು ಮದುವೆ ಆಗಿದ್ದಳು. ಮೇಘನಾ ತನ್ನ ಪ್ರಿಯತಮನ ಜೊತೆಗೆ ಇರುವ ವಿಡಿಯೋ ಸದ್ಯ ಇನ್ಸ್ಟಾಗ್ರಾಮ್ ನಲ್ಲಿ ವೈರಲ್ ಆಗುತ್ತಿದೆ. ಏಕೆ ಯಾರೂ ಎಂದು ಗುರುತಿಸುತ್ತೀರಾ ಎಂದು ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. ಶಂಕ್ರಣ್ಣ ತೀರಿ ಹೋದ ಮೇಲೆ ಮೇಘನಾ ಬಗ್ಗೆ ಎಲ್ಲಿಯೂ ಸುದ್ದಿ ಇರಲಿಲ್ಲ ಬೂದಿ ಮುಚ್ಚಿದ ಕೆಂಡದಂತೆ ಇದ್ದ ವಿಷಯ ಈಗ ಆಚೆ ಬಂದಿದೆ ಅನ್ನೋದು ಈಗ ಅರಿವಾಗುತ್ತಿದೆ. ಮೇಘನಾಳ ವಿಡಿಯೋ ನೋಡಿ ಜನ ಹಿಗ್ಗಾ ಮುಗ್ಗ ಉಗಿಯುತ್ತಿದ್ದಾರೆ.

Comments are closed.