Senior Citizen Plan: ಹಿರಿಯ ನಾಗರಿಕರಿಗೆ ಬಂತು ನೋಡಿ ಗುಡ್ ನ್ಯೂಸ್; ಈ ಯೋಜನೆಯಲ್ಲಿ ಇಷ್ಟು ಹೂಡಿಕೆ ಮಾಡಿದ್ರೆ ವೃದ್ಧಾಪ್ಯದಲ್ಲಿ ದುಡ್ಡಿಗಾಗಿ ಯೋಚಿಸೋದೇ ಬೇಡ!

Senior Citizen Plan: ಪ್ರತಿಯೊಬ್ಬರು ಕೂಡ ತಮ್ಮ ವೃದ್ಧಾಪ್ಯದಲ್ಲಿ ಅಂದರೆ ನಿವೃತ್ತಿಯ ನಂತರ ಆರ್ಥಿಕ ಸ್ವಾತಂತ್ರ್ಯದ ಜೊತೆಗೆ ಜೀವನ ನಡೆಸಬೇಕು ಎನ್ನುವಂತಹ ಆಸೆಯನ್ನು ಹೊಂದಿರುತ್ತಾರೆ. ಅದೇ ಕಾರಣಕ್ಕಾಗಿ ಸುರಕ್ಷಿತ ಹಾಗೂ ಹೆಚ್ಚಿನ ಲಾಭವನ್ನು ತರುವಂತಹ ಯೋಜನೆಗಳಲ್ಲಿ ಹಣವನ್ನು ಹೂಡಿಕೆ ಮಾಡುವುದಕ್ಕೆ ಹಿರಿಯ ನಾಗರಿಕರು ಹೆಚ್ಚಾಗಿ ಇಷ್ಟಪಡುತ್ತಾರೆ. ಅಂತಹ ಹಿರಿಯ ನಾಗರಿಕರಿಗೆ ಇವತ್ತಿನ ಈ ಲೇಖನದ ಮೂಲಕ ಒಳ್ಳೆಯ ರಿಟರ್ನ್ ನೀಡುವಂತಹ ಹೂಡಿಕೆಯ ಯೋಜನೆಯ ಬಗ್ಗೆ ಮಾಹಿತಿಯನ್ನು ನೀಡಲು ಹೊರಟಿದ್ದು ತಪ್ಪದೆ ಲೇಖನವನ್ನು ಕೊನೆವರೆಗೂ ಓದಿ.

ಹೌದು ಇವತ್ತಿನ ಈ ಲೇಖನದಲ್ಲಿ ನಾವು ನಿಮಗೆ ಹೇಳುವುದಕ್ಕೆ ಹೊರಟಿರೋದು ಸೀನಿಯರ್ ಸಿಟಿಜನ್ ಸೇವಿಂಗ್ ಸ್ಕೀಮ್ ಬಗ್ಗೆ. ಖಂಡಿತವಾಗಿ ಇದರಲ್ಲಿರುವಂತಹ ಬಡ್ಡಿದರ ಕೂಡ ನಿಮಗೆ ಆಕರ್ಷಕವಾಗಿ ಕಾಣಿಸಿಕೊಳ್ಳುತ್ತದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡುವಂತಹ ಲಿಮಿಟ್ 15ಲಕ್ಷ ರೂಪಾಯಿಗಳಿಂದ 30 ಲಕ್ಷ ರೂಪಾಯಿಗಳಿಗೆ ಏರಿಕೆ ಮಾಡಲಾಗಿದೆ. ಇದು ಹಿರಿಯ ನಾಗರಿಕರಿಗೆ 8.02 ಪ್ರತಿಶತ ಬಡ್ಡಿ ದರವನ್ನ ಒದಗಿಸುತ್ತದೆ. ಸಾವಿರ ರೂಪಾಯಿಗಳಿಂದ ಈ ಯೋಜನೆಯಲ್ಲಿ ಹಣವನ್ನ ಹೂಡಿಕೆ ಮಾಡುವುದಕ್ಕೆ ಪ್ರಾರಂಭ ಮಾಡಬಹುದಾಗಿದೆ.

ಹಿರಿಯ ನಾಗರಿಕರಿಗೆ ಈ ಯೋಜನೆ ಅಡಿಯಲ್ಲಿ ಇನ್ಕಮ್ ಟ್ಯಾಕ್ಸ್ ಆಕ್ಟ್ 80 ಸಿ ಪ್ರಕಾರ 1.50 ಲಕ್ಷ ರುಪಾಯಿಗಳವರೆಗೂ ಕೂಡ ತೆರಿಗೆಯಲ್ಲಿ ಉಳಿತಾಯ ಮಾಡಬಹುದಾಗಿದೆ. ಹಿರಿಯ ನಾಗರಿಕರಲ್ಲಿ ಗಂಡ ಹೆಂಡತಿ ಒಟ್ಟಿಗೆ ಸೇರಿ 30 ಲಕ್ಷ ರೂಪಾಯಿಗಳ ವರೆಗೂ ಕೂಡ ಮ್ಯಾಕ್ಸಿಮಮ್ ಹೂಡಿಕೆಯನ್ನು ಯೋಜನೆಯಲ್ಲಿ ಮಾಡುವಂತಹ ಅವಕಾಶವಿದೆ. ಅಥವಾ ಇಬ್ಬರೂ ಬೇರೆ ಪ್ರತ್ಯೇಕ ಖಾತೆಗಳನ್ನು ತೆರೆದು ಒಟ್ಟಾರೆ 60 ಲಕ್ಷಗಳ ಹೂಡಿಕೆಯನ್ನು ಕೂಡ ಈ ಯೋಜನೆಯಲ್ಲಿ ಮಾಡಬಹುದಾಗಿದೆ.

ಐದು ವರ್ಷಗಳ ಮೆಚುರಿಟಿ ಅವಧಿ ಈ ಯೋಜನೆಯಲ್ಲಿ ಇರುತ್ತದೆ. ಮೆಚುರಿಟಿ ಮುಗಿದ ನಂತರ ಕೂಡ ಮೂರು ವರ್ಷಗಳವರೆಗೆ ಈ ಯೋಜನೆಯ ಇನ್ನಷ್ಟು ಮುಂದುವರಿಸಬಹುದಾಗಿದೆ ಎನ್ನುವಂತಹ ಮಾಹಿತಿಯನ್ನು ಕೂಡ ಸರ್ಕಾರ ನೀಡಿದೆ. ಸ್ವಯಂ ನಿವೃತ್ತಿ ಪಡೆದುಕೊಂಡಿರುವಂತಹ 55 ರಿಂದ 60 ವರ್ಷದ ನಾಗರಿಕರು ಕೂಡ ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡಬಹುದಾಗಿದೆ ಹಾಗೂ 60 ವರ್ಷ ಅಥವಾ ಅದಕ್ಕೂ ಮೇಲ್ಪಟ್ಟ ನಿವೃತ್ತ ಡಿಫೆನ್ಸ್ ಕ್ಷೇತ್ರದಲ್ಲಿರುವಂತಹ ಉದ್ಯೋಗಿಗಳು ಕೂಡ ಈ ಯೋಜನೆಯಲ್ಲಿ ಖಾತೆ ತೆರೆಯುವ ಮೂಲಕ ಲಾಭವನ್ನು ಗಳಿಸಬಹುದಾಗಿದೆ.

Comments are closed.