Healthy Food: ಇನ್ನೂ ಒಂದು ಐವತ್ತು ವರ್ಷ ಹೆಚ್ಚಿಗೆ ಬದುಕಬೇಕೇ? ಅದಕ್ಕೆ ತಪ್ಪದೇ ಇದೊಂದು ಆಹಾರ ಸೇವನೆ ಮಾಡಿ. ಯಾವುದು ಗೊತ್ತೇ?

Healthy Food: ಮನುಷ್ಯನಿಗೆ ಬದುಕಲು ಆಹಾರ ಬಹಳ ಮುಖ್ಯ. ಮನುಷ್ಯನು ದುಡಿಯುವ ಪ್ರಮುಖ ಉದ್ದೇಶವೇ ಆಹಾರಕ್ಕಾಗಿ. ಮನುಷ್ಯನು ಆರೋಗ್ಯವಂತನಾಗಿರಬೇಕು ಎಂದರೆ ಆತ ಎಲ್ಲ ರೀತಿಯ ಖನಿಜಾಂಶಗಳು, ವಿಟಾಮಿನ್ (Vitamin) ಗಳು, ಪ್ರೋಟಿನ್ (Protein)  ಇರುವ ಆಹಾರ (Food) ಸೇವನೆ ಮಾಡಬೇಕು. ಆಗ ಮಾತ್ರ ಮನುಷ್ಯ ದೈಹಿಕವಾಗಿ, ಮಾನಸಿಕವಾಗಿ ಆರೋಗ್ಯವಂತನಾಗಿರಲು ಸಾಧ್ಯ. ಮನುಷ್ಯನ ದೇಹಕ್ಕೆ ವಿಟಾಮಿನ್ಗಳು ಅಗತ್ಯ. ಅದರಲ್ಲೂ ವಿಟಾಮಿನ್ ಡಿ (Vitamin D) ಇರುವ ಪದಾರ್ಥಗಳನ್ನು ಹೆಚ್ಚಿಗೆ ಸೇವನೆ ಮಾಡುವುದರಿಂದ ದೀರ್ಘಾಯುಷ್ಯಂತರಾಗಿರುತ್ತಾರೆ ಎಂದು ವರದಿಯೊಂದು ತಿಳಿಸಿದೆ.

JYO 1 | Live Kannada News
Healthy Food: ಇನ್ನೂ ಒಂದು ಐವತ್ತು ವರ್ಷ ಹೆಚ್ಚಿಗೆ ಬದುಕಬೇಕೇ? ಅದಕ್ಕೆ ತಪ್ಪದೇ ಇದೊಂದು ಆಹಾರ ಸೇವನೆ ಮಾಡಿ. ಯಾವುದು ಗೊತ್ತೇ? https://sihikahinews.com/should-you-take-vitamin-d-with-food/

ದಕ್ಷಿಣ ಆಸ್ಟ್ರೇಲಿಯಾ ವಿಶ್ವವಿದ್ಯಾನಿಲಯದ ಅಧ್ಯಯನದ ಪ್ರಕಾರ ವಿಟಾಮಿನ್ ಡಿ ಕೊರತೆ ಆದರೆ ಅಕಾಲಿಕ ಮರಣ ಹೊಂದಬಹುದು ಎಂದು ತಿಳಿದುಬಂದಿದೆ. ಸೂರ್ಯನ ಎಳೆ ಬಿಸಿಲಿನಲ್ಲಿ ವಿಟಾಮಿನ್ ಡಿ ಅಂಶ ಇರುತ್ತದೆ ಎನ್ನುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಬಿಸಿಲೇ ಹೆಚ್ಚಿರುವ ಆಸ್ಟ್ರೇಲಿಯಾದಲ್ಲಿ ಮೂವರಲ್ಲಿ ಒಬ್ಬರು ವಿಟಾಮಿನ್ ಡಿ ಕೊರತೆಯಿಂದ ಬಳಲುತ್ತಿದ್ದಾರೆ. ಹಾಗಾಗಿ ಪ್ರತಿಯೊಬ್ಬರು ವಿಟಾಮಿನ್ ಡಿ ಕೊರತೆ ಆಗದಂತೆ ನೋಡಿಕೊಳ್ಳಬೇಕು ಎಂದು ಈ ವಿವಿ ತಿಳಿಸಿದೆ. ಇದನ್ನೂ ಓದಿ: Kitchen Hacks: ತಂದಿರುವ ಸೊಪ್ಪುಗಳೆಲ್ಲಾ ಒಂದೇ ದಿನಕ್ಕೆ ಹಾಳಾಗ್ತಾ ಇದ್ಯಾ? ಹಾಗಾದ್ರೆ ಒಮ್ಮೆ ಈ ಟ್ರಿಕ್ಸ್ ಟ್ರೈ ಮಾಡಿ; ಸೊಪ್ಪು ಹಾಳಾಯ್ತು ಎನ್ನುವ ಮಾತೇ ಇಲ್ಲ!  

ಆನಲ್ಸ್ ಆಫ್ ಇಂಟರ್ನಲ್ ಮೆಡಿಸಿನ್ ಜರ್ನಲ್ನಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ ವಿಟಾಮಿನ್ ಡಿ ಕೊರತೆ ಹೆಚ್ಚಾದರೆ ಅಕಾಲಿಕ ಮರಣ ಸಂಭವಿಸಬಹುದು ಎಂದು ತಿಳಿಸಲಾಗಿದೆ. ವಿಟಾಮಿನ್ ಡಿ ಶರೀರಕ್ಕೆ ಬಹಳ ಅಗತ್ಯವಾಗಿದೆ. ಇದು ದೇಹದ ಸ್ನಾಯುಗಳನ್ನು ಗಟ್ಟಿಯಾಗಿಸುತ್ತದೆ. ಈ ಮೂಲಕ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಸಹ ಸಹಾಯ ಮಾಡುತ್ತದೆ ಎಂದು ತಿಳಿಸಲಾಗಿದೆ.

ಈ ಅಧ್ಯಯನದಲ್ಲಿ ಕಡಿಮೆ ಗುಣಮಟ್ಟದ ವಿಟಾಮಿನ್ ಡಿ ಹಾಗೂ ಮರಣದ ನಡುವಿನ ಹಲವಾರು ದಾಖಲೆಗಳನ್ನು ನೀಡಿದೆ. ಸಂಶೋಧನೆಯಲ್ಲಿ ಹೊಸ ರೀತಿಯ ಅನುವಂಶೀಯ ಮ್ಯಾಪಿಂಗ್ ತಂತ್ರವನ್ನು ಬಳಸಿದ್ದು, ಇದರಿಂದ ವಿಟಾಮಿನ್ ಡಿ ಮತ್ತು ಅಕಾಲಿಕ ಮರಣದ ನಡುವೆ ಇರುವ ಸಂಬಂಧವನ್ನು ತೋರಿಸಲಾಗಿದೆ. ಇದನ್ನೂ ಓದಿ: Astrology: ಬೆಳಿಗ್ಗೆ ಎದ್ದ ಕೂಡಲೇ ಮೊದಲು ವಸ್ತು ಕಣ್ಣಿಗೆ ಬಿದ್ರೆ ಮುಗೀತು, ಆ ದಿನ ನಿಮ್ಮ ಜೀವನದ ದಿಕ್ಕೇ ಬದಲಾಗಬಹುದು; ಯಾವ ವಸ್ತು ಗೊತ್ತೇ!

ಹಾಗಾಗಿ ಪ್ರತಿಯೊಬ್ಬರು ಇರುವಷ್ಟು ದಿನ ಆರೋಗ್ಯವಂತರಾಗಿ ಇರಬೇಕು. ಪ್ರತಿನಿತ್ಯ ವ್ಯಾಯಾಮ, ಯೋಗ ಮಾಡುವ ಪದ್ದತಿ ರೂಢಿಸಿಕೊಳ್ಳಬೇಕು. ಅಲ್ಲದೆ ಆರೋಗ್ಯಕರ ಆಹಾರ ಸೇವನೆ ಪದ್ದತಿ ರೂಡಿಸಿಕೊಳ್ಳಬೇಕು. ಮನೆಯ ಆಹಾರಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಹೊರಗಿನ ಕುರುಕಲು ತಿಂಡಿಗಳನ್ನು ಆದಷ್ಟು ಕಡಿಮೆ ಮಾಡಬೇಕು. ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯುವ ರೂಢಿ ಬೆಳೆಸಿಕೊಳ್ಳುವುದರಿಂದ ಮನುಷ್ಯ ಆರೋಗ್ಯವಂತನಾಗಿರಲು ಸಾಧ್ಯ. ಆರೋಗ್ಯನಂತನಾಗಿದ್ದರೆ ಏನು ಬೇಕಾದರೂ ಸಾಧನೆ ಮಾಡಬಹುದು.

Comments are closed.