Swara Bhaskar: ಮುಸ್ಲಿಂ ನಾಯಕನನ್ನು ಮದುವೆಯಾದ ನಂತರ ನಟಿಗೆ ನೆನಪಾಯ್ತು ಹಿಂದೂ ಧರ್ಮದ ಆಚರಣೆ: ಅದೆಂತಹ ಕೆಲಸ ಮಾಡಿದ್ದಾರೆ ಗೊತ್ತೇ?

Swara Bhaskar: ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಅವರ ಮದುವೆ ಎಷ್ಟರ ಮಟ್ಟಿಗೆ ವಿವಾದ ಸೃಷ್ಟಿಸಿತ್ತು ಎಂದು ನಮಗೆಲ್ಲ ಗೊತ್ತೇ ಇದೆ. ಅಣ್ಣ ಎಂದು ಕರೆದ ವ್ಯಕ್ತಿಯ ಜೊತೆಯಲ್ಲೇ ಸ್ವರಾ ಅವರ ಮದುವೆ ಆಗಿದೆ ಎನ್ನುವುದು ಒಂದು ವಿಚಾರ ಆದರೆ, ಮತ್ತೊಂದು ಕಡೆ ಇದು ಬೇರೆ ಯದೇ ರೀತಿಯ ವಿವಾದಕ್ಕೆ ಕಾರಣವಾಯಿತು. ಸಮಾಜವಾದಿ ಪಕ್ಷದ ಯುವನಾಯಕ ಫಹಾದ್ ಅಹ್ಮದ್ ಅವರೊಡನೆ ಸ್ವರಾ ಭಾಸ್ಕರ್ ಮದುವೆ ನಡೆಯಿತು. ಮಾರ್ಚ್ 13ರಂದು ಎಲ್ಲರ ಸಮ್ಮುಖದಲ್ಲಿ ಅದ್ಧೂರಿಯಾಗಿ ಮದುವೆ ನಡೆದಿದೆ..

ಸ್ವರಾ ಭಾಸ್ಕರ್ ಅವರ ಮದುವೆ ಮತ್ತು ಆರತಕ್ಷತೆಗೆ ಹಲವು ಗಣ್ಯರು, ರಾಜಕೀಯ ವ್ಯಕ್ತಿಗಳು ಸಹ ಬಂದಿದ್ದರು. ರಾಹುಲ್ ಗಾಂಧಿ ಅವರಿಂದ ಹಿಡಿದು ಎಲ್ಲರೂ ಬಂದಿದ್ದು ವಿಶೇಷವಾಗಿತ್ತು. ಇನ್ನು ಸ್ವರಾ ಭಾಸ್ಕರ್ ಅವರ ಮದುವೆ ವಿಚಾರದಲ್ಲಿ ಈಗ ಮತ್ತೊಂದು ಅಂಶ ವೈರಲ್ ಆಗುತ್ತಿದೆ. ಅದೇನೆಂದರೆ, ಸ್ವರಾ ಅವರ ಕತ್ತಿನಲ್ಲಿ ಕಾಣಿಸಿಕೊಂಡಿರುವ ಮಾಂಗಲ್ಯ. ಅದನ್ನು ನೋಡಿದರೆ, ಅಪ್ಪಟ ಸಂಪ್ರದಾಯದ ತಾಳಿಚೈನಿನ ವಿನ್ಯಾಸದಲ್ಲಿದೆ. ಇದನ್ನು ನೋಡಿ ಕೆಲವರು ಟ್ರೋಲ್ ಮಾಡಲಾಗುತ್ತಿದೆ..

ಬೇರೆಯವರನ್ನು ಮದುವೆ ಆಗಿ ಈಗ ನಮ್ಮ ಸಂಪ್ರದಾಯ ಸಂಸ್ಕೃತಿ ನೆನಪಾಯಿತಾ ಎಂದು ಹೇಳುತ್ತಿದ್ದಾರೆ ನೆಟ್ಟಿಗರು. ಇನ್ನು ಸ್ವರಾ ಭಾಸ್ಕರ್ ಅವರ ತಂದೆ ಉದಯ್ ಭಾಸ್ಕರ್ ಅವರು ಮೂಲತಃ ಆಂಧ್ರಪ್ರದೇಶದವರು ಹಾಗಾಗಿ ಸ್ವರಾ ಅವರು ತೆಲುಗು ಸಂಪ್ರದಾಯದಲ್ಲಿ ಮದುವೆ ಆಗಿದ್ದಾರೆ. ಸ್ವರ ಅವರು ಧರಿಸಿರುವ ಮಾಂಗಲ್ಯ ಬೇರೆ ಬಾಲಿವುಡ್ ಸೆಲೆಬ್ರಿಟಿಗಳಿಗಿಂತ ಭಿನ್ನವಾಗಿದೆ. ಒಟ್ಟಿನಲ್ಲಿ ಮದುವೆ ಅಂತೂ ಅದ್ಧೂರಿಯಾಗಿ ನಡೆದು ಟ್ರೋಲ್ ಕೂಡ ನಡೆಯುತ್ತಿದೆ.

Comments are closed.