Tabu Photos Viral: ಈ ಫೋಟೊದಲ್ಲಿ ಇರುವ ಸ್ಟಾರ್ ನಟಿಯರು ಯಾರು ಎಂದು ಗುರುತಿಸಿದರೆ ನೀವೇ ಬುದ್ಧಿವಂತರು; ನಿಮ್ಮ ನೆಚ್ಚಿನ ಸ್ಟಾರ್ ನಟಿಯರು ಇವರು!
Tabu Photos Viral: ಸೋಶಿಯಲ್ ಮೀಡಿಯಾದಲ್ಲಿ ಒಂದು ಟ್ರೆಂಡ್ ಶುರುವಾಗಿದೆ. ಸೆಲೆಬ್ರಿಟಿಗಳು ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ಆಕ್ಟಿವ್ ಆಗಿ ಇರುತ್ತಾರೆ ಎನ್ನುವುದು ನಿಮಗು ಗೊತ್ತು. ಸಾಕಷ್ಟು ಜನ ಅವರನ್ನು ಫಾಲೋ ಮಾಡುತ್ತಾರೆ ಕೂಡ. ಹಾಗಾಗಿ ಸಾಕಷ್ಟು ಸೆಲೆಬ್ರಿಟಿಗಳು ತಮ್ಮ ಜೀವನದ ಕೆಲವು ವಿಷಯಗಳನ್ನು ಅಭಿಮಾನಿಗಳ ಜೊತೆಗೆ ಹಂಚಿಕೊಳ್ಳುತ್ತಾರೆ. ಇತ್ತೀಚಿಗೆ ತಮ್ಮ ಬಾಲ್ಯದ ಫೋಟೋಗಳನ್ನು ಸೆಲೆಬ್ರಿಟಿಗಳು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಹೌದು ಇತ್ತೀಚಿಗಷ್ಟೇ ಅಗ್ನಿಸಾಕ್ಷಿ ಖ್ಯಾತಿಯ ವೈಷ್ಣವಿ ಗೌಡ ತಮ್ಮ ಬಾಲ್ಯದ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿ ಈ ಫೋಟೋದಲ್ಲಿ ಇರುವವರನ್ನು ಗುರುತಿಸಿ ಎಂದು ಚಾಲೆಂಜ್ ಹಾಕಿದ್ದರು. ಅದೇ ರೀತಿ ಇದೀಗ ಬಾಲಿವುಡ್ ನಟಿ ಒಬ್ಬರು ತಮ್ಮ ಬಾಲ್ಯದ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ.
ಬಾಲ್ಯದ ನೆನಪುಗಳು ಯಾವತ್ತಿಗೂ ಚಂದ. ಹಾಗಾಗಿ ನಮ್ಮದೇ ಆದ ಹಳೆಯ ಫೋಟೋಗಳನ್ನು ನೋಡಿಕೊಂಡರೆ ಇನ್ನಷ್ಟು ಮನಸ್ಸಿಗೆ ಖುಷಿ ಅನಿಸುತ್ತದೆ. ಅದೇ ರೀತಿ ಬಾಲಿವುಡ್ ನ ಸ್ಟಾರ್ ನಟಿ ಒಬ್ಬರು ತಮ್ಮ ಬಾಲ್ಯದ ಫೊಟೋ ಒಂದನ್ನು ಹಂಚಿಕೊಂಡಿದ್ದಾರೆ. ಅಂದಹಾಗೆ ಈ ಫೋಟೋದಲ್ಲಿ ಇರುವವರು ಬೇರೆ ಯಾರು ಅಲ್ಲ ಬಾಲಿವುಡ್ ನ ಖ್ಯಾತ ನಟಿ ಟಬು (Tabu) ಹಾಗೂ ಅವರ ಅಕ್ಕ ಫರಾ ಹಶ್ಮಿ (Fara Hashmi). ತಾಯಿಯ ಜೊತೆ ಕುಳಿತಿರುವ ಈ ಫೋಟೋವನ್ನು ತಗೋ ಶೇರ್ ಮಾಡಿದ್ದಾರೆ ಇದು ಸುಮಾರು 70ರ ದಶಕದಲ್ಲಿ ತೆಗೆದ ಹಳೆಯದಾದ ಫೋಟೋ. ಅಂದ ಹಾಗೆ ಈ ಫೋಟೋದಲ್ಲಿ ಟಬು ಎಲ್ಲಿ ಕುಳಿತಿದ್ದಾರೆ ಹೇಳಿ ನೋಡೋಣ?
ನಿಮ್ಮ ಊಹೆ ಸರಿಯಾಗಿದೆ. ಫರಾ ಪರ ಅಮ್ಮನ ಪಕ್ಕದಲ್ಲಿ ಕುಳಿತಿದ್ದರೆ, ಟಬು ಅಮ್ಮನ ತೊಡೆಯ ಮೇಲೆ ಕುಳಿತಿದ್ದಾರೆ ಈ ಬ್ಲಾಕ್ ಅಂಡ್ ವೈಟ್ ಫೋಟೋಕ್ಕೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಲೈಕ್ಸ್ ಬರುತ್ತಿದೆ.
ಟಬು ಅವರ ಸಹೋದರಿ ಫರಾ ಸುಮಾರು 80ರ ದಶಕದಲ್ಲಿ ಚಿತ್ರರಂಗದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. 2005ರಲ್ಲಿ ಚಿತ್ರರಂಗವನ್ನು ತೊರೆದರು. ಮತ್ತೆ ಅವರು ಬಣ್ಣದ ಲೋಕಕ್ಕೆ ಬರಲೇ ಇಲ್ಲ. ಅಭಿಮಾನಿಗಳು ಅವರು ಮತ್ತೆ ಸಿನಿಮಾಕ್ಕೆ ಬರಬೇಕು ಅಂತ ಹಲವಾರು ಬಾರಿ ಕೇಳಿಕೊಂಡಿದ್ದರು ಕೂಡ.
ಇನ್ನು ಟಬು ವಿಚಾರಕ್ಕೆ ಬಂದ್ರೆ ಈಗಲೂ ಕೂಡ ಸಿನಿಮಾರಂಗದಲ್ಲಿ ಆಕ್ಟಿವ್ ಆಗಿರುವ ನಟಿ ಇವರು. ಕೇವಲ ಬಾಲಿವುಡ್ ನಲ್ಲಿ ಮಾತ್ರವಲ್ಲದೆ ಸೌತ್ ಸಿನಿಮಾಗಳಲ್ಲಿಯೂ ಕೂಡ ಟಬು ಕಾಣಿಸಿಕೊಳ್ಳುತ್ತಾರೆ. ಅವರ ಇತ್ತೀಚಿಗಿನ ಭೂಲ್ ಭ್ಹುಲಯ್ಯಾ 2 ಹಾಗೂ ದೃಶ್ಯಂ 2 ಚಿತ್ರ ಸಿಕ್ಕಾಪಟ್ಟೆ ಹೆಸರು ಮಾಡಿದೆ. ತಮಿಳಿನ ಸೂಪರ್ ಹಿಟ್ ಸಿನಿಮಾ ಕೈದಿಯ ಹಿಂದಿ ರಿಮೇಕ್ ಬೋಲಾ ಸಿನಿಮಾದಲ್ಲಿಯೂ ಕೂಡ ಟಬು ಅಭಿನಯಿಸುತ್ತಿದ್ದಾರೆ. ವರ್ಷ 50 ದಾಟಿದರೂ ಟಬು ಸಿನಿಮಾದ ಬಹು ಬೇಡಿಕೆಯ ನಟಿ ಎನಿಸಿದ್ದಾರೆ.
Comments are closed.