Tirupati Tirumala: ನೀವು ತಿರುಪತಿ ತಿಮ್ಮಪ್ಪನ ಭಕ್ತರ ಹಾಗಾದ್ರೆ ಈ ಗುಡ್ ನ್ಯೂಸ್ ನಿಮಗಾಗಿ ಮಾತ್ರ! ಭಕ್ತರಿಗಾಗಿ ಎಂತಹ ಬದಲಾವಣೆ ತಂದಿದೆ ನೋಡಿ ಟಿಟಿಡಿ!

Tirupati Tirumala: ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ದಿನವೂ ಲಕ್ಷಾಂತರ ಯಾತ್ರಾರ್ಥಿಗಳು ಹೋಗುತ್ತಾರೆ. ಸಾಮಾನ್ಯ ಭಕ್ತರು ಮಧ್ಯವರ್ತಿಗಳಿಂದ ಸಾಕಷ್ಟು ಸಮಸ್ಯೆಗಳನ್ನು ಅನುಭವಿಸಬೇಕಿತ್ತು. ತಿರುಪತಿಯಲ್ಲಿ ಕೊಡಲಾಗುವ ಲಡ್ಡು ಪ್ರಸಾದ, ಸರ್ವ ದರ್ಶನಂ ಟೋಕನ್ ವಿತರಣೆಯಿಂದ ಹಿಡಿದು ವಸತಿಯವರಿಗೆ ಸಾಕಷ್ಟು ಅಕ್ರಮಗಳು ನಡೆಯುತ್ತಿದ್ದವು ಆದರೆ ಇದೀಗ ಟಿಟಿಡಿ ಇದೆಯಲ್ಲ ಅಕ್ರಮಗಳಿಗೆ ತಡೆ ಹಾಕಲು ಒಂದು ಹೊಸ ಆಧುನಿಕ ವ್ಯವಸ್ಥೆಯನ್ನು ಕಂಡುಕೊಂಡಿದೆ.

ಹೌದು ಇದು ತಿರುಮಲ ತಿಮ್ಮಪ್ಪನ ಭಕ್ತರಿಗೆ ಗುಡ್ ನ್ಯೂಸ್ ಆಗಲಿದೆ. ಮಾರ್ಚ್ 1ರಿಂದ ಪ್ರಾಯೋಗಿಕವಾಗಿ ಆಧುನಿಕವಾದ ಫೇಸ್ ರೆಕಗ್ನಿಷನ್ ಯೋಜನೆಯನ್ನು ಜಾರಿಗೆ ತರಲಿದೆ. ತಿರುಮಲದಲ್ಲಿ ಸುಮಾರು ರೂ.7000 ವಸತಿ ಗ್ರಹಗಳು ಇವೆ. ಅದರಲ್ಲಿ 5000 ಸಾಮಾನ್ಯ ಭಕ್ತರಿಗೆ ಮೀಸಲಾತಿ ಇಟ್ಟರೆ ಸಾವಿರ ವಸತಿಗಳನ್ನು ವಿಐಪಿಗಳಿಗಾಗಿ ಇಡಲಾಗಿದೆ. ಬೆಟ್ಟದ ದೇಗುಲದ ಮೇಲಿನ ವಸತಿ ಸಂಕೀರ್ಣದಲ್ಲಿ 5- 10,000 ಭಕ್ತರಿಗೆ ವಸತಿ ವ್ಯವಸ್ಥೆ ಮಾಡಲಾಗಿದೆ.

ಆದರೆ ಸಾಮಾನ್ಯ ಭಕ್ತರು ರೂ ಪಡೆಯುವಲ್ಲಿ ಮೋಸ ಹೋಗುತ್ತಿದ್ದರು. ಮಧ್ಯವರ್ತಿಗಳು ತಿರುಪತಿಗೆ ಆಗಮಿಸಿದ ಭಕ್ತರಿಗೆ ರೂಮ್ ಕೊಡಿಸುವ ನೆಪದಲ್ಲಿ ಪಂಗನಾಮ ಹಾಕಿದ್ದೆ ಹೆಚ್ಚು. ಹಾಗಾಗಿ ತಿರುಪತಿಗೆ ಬಂದ ಭಕ್ತರಿಗೆ ಮೋಸ ಆಗಬಾರದು ಎನ್ನುವ ಕಾರಣಕ್ಕೆ ಟಿಟಿಡಿ ಡಿಜಿಟಲ್ ಪಾವತಿ ಓಟಿಪಿ ಫೇಸ್ ರೆಗಗ್ನೇಷನ್ ಮೊದಲಾದ ವ್ಯವಸ್ಥೆಗಳನ್ನು ಜಾರಿಗೊಳಿಸಲಿದೆ. ಇದರಿಂದಾಗಿ ಭಕ್ತಾದಿಗಳು ಯಾವುದೇ ರೀತಿಯ ಮೋಸವು ಇಲ್ಲದೆ ಆನ್ಲೈನ್ ಮೂಲಕವೇ ಪಾವತಿ ಮಾಡಿಕೊಂಡು ವಸತಿ ವ್ಯವಸ್ಥೆ ಮಾಡಿಕೊಳ್ಳಬಹುದು.

ಟಿಟಿಡಿ ಯಲ್ಲಿ ರೂಮಿಗೆ ಚೆಕಿಂಗ್ ಆದಾಗ ಓಟಿಪಿಯನ್ನು ಕಳುಹಿಸಲಾಗುತ್ತಿದೆ. ರೂಮನ್ನು ಖಾಲಿ ಮಾಡುವಾಗ ಆ ಓಟಿಪಿಯನ್ನು ಹೇಳಿ ಮುಂಗಡ ಹಣವನ್ನು ಹಿಂತಿರುಗಿ ಪಡೆಯಬೇಕು. ಇವರಿಗೆ ಟಿಟಿಬಿಯಲ್ಲಿ ದಲ್ಲಾಳಿಗಳು ಭಕ್ತರ ಸಾಕಷ್ಟು ಹಣವನ್ನು ನುಂಗಿ ಹಾಕಿದ್ದಾರೆ. ಇನ್ನು ಮುಂದೆ ಇದೆಲ್ಲಾಲಿಗಳ ಆಟವಿಲ್ಲದೆ ತಿರುಪತಿಯಲ್ಲಿ ವಸತಿ ಮಾಡಿ ತಿಮ್ಮಪ್ಪನ ದರ್ಶನ ಮಾಡಿ.

Comments are closed.