Winter Care: ಚಳಿಗಾಲದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ ಈ ರೋಗಗಳು; ಇದರಿಂದ ಬಚಾವಾಗಲು ಈ ಉಪಾಯ ಬೆಸ್ಟ್ ನೋಡಿ! ಯಾವುದು ಗೊತ್ತಾ?

Winter Care: ಚಳಿಗಾಲ ಆರಂಭಗೊಂಡು ಹಲವು ದಿನಗಳು ಕಳೆದಿವೆ. ಚಳಿಗಾಲ ಅಂದ್ರೆ ಖುಷಿಯೂ ಹೌದು ಜೊತೆಗೆ ತ್ವಚೆಯನ್ನು ರಕ್ಷಿಸಿಕೊಳ್ಳುವ ತಲೆನೋವೂ ಹೌದು. ಚಳಿಗಾಲದ ಸಮಯದಲ್ಲಿ ಬಹಳಷ್ಟು ಜನರಿಗೆ ಒಂದಲ್ಲ ಒಂದು ರೀತಿಯ ಆರೋಗ್ಯ ಸಮಸ್ಯೆಗಳು ಕಾಡುತ್ತದೆ. ಇದಕ್ಕೆ ವಾತಾವರಣದಲ್ಲಿ ಆಗುವ ಬದಲಾವಣೆಯೂ ಒಂದು ಕಾರಣವಾಗಿದೆ. ಇದರ ಜೊತೆ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದು ಸಹ ಒಂದು ಪ್ರಮುಖ ಕಾರಣವಾಗಿರುತ್ತದೆ. ಹಾಗಾಗಿ ಚಳಿಗಾಲದಲ್ಲಿ ನಾವು ಸೇವಿಸುವ ಆಹಾರದ ಬಗ್ಗೆಯೂ ನಾವು ಕಾಳಜಿ ವಹಿಸಬೇಕು. ಚಳಿಗಾದಲ್ಲಿ ಕಾಡುವ ಸಮಸ್ಯೆಗಳ ಬಗ್ಗೆ ನಾವು ಈಗ ತಿಳಿದುಕೊಳ್ಳೊಣ.


ವಾತ: ಚಳಿಗಾಲದಲ್ಲಿ ವಾತಕ್ಕೆ ಸಂಬಂಧಿಸಿದ ಅನೇಕ ಕಾಯಿಲೆಗಳು ನಿಮ್ಮನ್ನು ಕಾಡಬಹುದು. ಆದ್ದರಿಂದ ನೀವು ಚಳಿಗಾಲದಲ್ಲಿ ಕಾದಾರಿಸಿದ ನೀರನ್ನು ಕುಡಿಯುವ ರೂಢಿ ಮಾಡಿಕೊಳ್ಳಬೇಕು. ಉಗುರು ಬೆಚ್ಚಗಿರುವ ಆಹಾರ ಸೇವಿಸುವುದು ಉತ್ತಮ. ಸ್ನಾನಕ್ಕೆ ತೆರಳುವ ಮೊದಲು ಎಳ್ಳೆಣ್ಣೆ ಅಥವಾ ತೆಂಗಿನ ಎಣ್ಣೆಯಿಂದ ಮಸಾಜ್ ಮಾಡಿಕೊಳ್ಳಿ. ಹಣ್ಣುಗಳ ಸೇವನೆಗೆ ಆದ್ಯತೆ ನೀಡಿ. ಸಲಾಡ್, ಐಸ್ಕ್ರೀಮ್, ತಂಪಾದ ಪಾನೀಯಗಳನ್ನು ಆದಷ್ಟು ಕಡಿಮೆ ಮಾಡುವುದು ಒಳಿತು. ಇದನ್ನೂ ಓದಿ: Vastu Tips: ಮನೆಯಲ್ಲಿ ಹಾಲು ಉಕ್ಕಿದರೆ ಶುಭವೋ ಅಶುಭವೋ? ಏನನ್ನುತ್ತದೆ ವಾಸ್ತು ಶಾಸ್ತ್ರ ಗೊತ್ತೇ?


ಪಿತ್ತ: ಪಿತ್ತದ ಸಮಸ್ಯೆ ಇರುವವರು ತಮ್ಮ ಆಹಾರ ಪದ್ದತಿಯನ್ನು ಬದಲಾಯಿಸಿಕೊಳ್ಳಲೇಬೇಕು. ಇಲ್ಲದಿದ್ದರೆ ಚಳಿಗಾಲದಲ್ಲಿ ಇನ್ನಷ್ಟುಉಲ್ಬಣ ಗೊಳ್ಳುವ ಸಾಧ್ಯತೆ ಇರುತ್ತದೆ. ಮಸಾಲೆ ಪದಾರ್ಥಗಳನ್ನು ಹೆಚ್ಚಿಗೆ ಸೇವನೆ ಮಾಡಬೇಕು. ಏಲಕ್ಕಿ, ಪುದಿನಾ, ಅರಿಶಿನವನ್ನು ಹೆಚ್ಚು ಬಳಕೆ ಮಾಡಬೇಕು. ಜಿರಿಗೆ ಹಾಗೂ ಕೊತ್ತಂಬರಿ ಕಶಾಯವನ್ನು ಆದಷ್ಟು ಹೆಚ್ಚು ಕುಡಿಯಬೇಕು. ಇದನ್ನೂ ಓದಿ: Vastu Tips: ಕಲ್ಲುಪ್ಪನ್ನು ಮನೆಯ ಈ ಒಂದು ಜಾಗದಲ್ಲಿ ಇಟ್ಟರೆ ಆರ್ಥಿಕ ಸಮಸ್ಯೆ ನಿವಾರಣೆ ಆಗುತ್ತೆ ಎಲ್ಲಿ ಇಡಬೇಕು ಗೊತ್ತೇ?


ಕಫ: ಚಳಿಗಾಲದಲ್ಲಿ ಕಾಣಿಸಿಕೊಳ್ಳುವ ಸಾಮಾನ್ಯ ಸಮಸ್ಯೆಗಳಲ್ಲಿ ಶೀತವು ಒಂದು. ಶೀತದಿಂದ ದೇಹದಲ್ಲಿ ಕಫ ಉತ್ಪತ್ತಿ ಆಗುತ್ತದೆ. ಇದು ಬಹಳ ತೊಂದರೆ ನೀಡುತ್ತದೆ. ಇದರಿಂದ ಕೆಲವಷ್ಟು ಉಸಿರಾಟದ ಸಮಸ್ಯೆಗಳು ಎದುರಾಗುತ್ತದೆ. ಹಾಗಾಗಿ ಬೆಳಿಗ್ಗೆ ಎದ್ದ ತಕ್ಷಣ ಅರ್ಧ ಗಂಟೆಯಾದರೂ ವಾಕಿಂಗ್ ಮಾಡುವ ಹವ್ಯಾಸ ಬೆಳೆಸಿಕೊಳ್ಳುವುದು ಒಳ್ಳೆಯದು. ಇದರ ಜೊತೆ ಯೋಗ, ಪ್ರಾಣಾಯಾಮ, ಒಂದಿಷ್ಟು ವ್ಯಾಯಾಮ ಮಾಡುವುದು ಉತ್ತಮ. ಚಳಿಗಾಲದಲ್ಲಿ ಆದಷ್ಟು ಬೇಗ ಜೀರ್ಣವಾಗುವ ಆಹಾರ ಸೇವನೆ ಮಾಡುವುದು ಆರೋಗ್ಯಕ್ಕೆ ಉತ್ತಮವಾಗಿರುತ್ತದೆ. ಬೆಳಗ್ಗಿನ ಉಪಹಾರದ ಜೊತೆ ಲವಂಗ ಮತ್ತು ದಾಲ್ಚಿನ್ನಿ ಬಳಸಿದ ಕಷಾಯ ಸೇವನೆ ಮಾಡುವುದರಿಂದ ಆರೋಗ್ಯ ವೃದ್ಧಿಸುತ್ತದೆ.

Comments are closed.