LIC:2023 ರಲ್ಲಿ ಹೂಡಿಕೆ ಮಾಡಬೇಕೆ? ಇಲ್ಲಿದೆ ನೋಡಿ ಬೆಸ್ಟ್ ಎಲ್ ಐ ಸಿ ಪಾಲಿಸಿಗಳು; ಇಲ್ಲಿ ಇನ್ವೆಸ್ಟ್ ಮಾಡಿದ್ರೆ ಎಷ್ಟು ಲಾಭ ಸಿಗುತ್ತೆ ಗೊತ್ತಾ?

LIC: ಪ್ರತಿಯೊಬ್ಬರು ದುಡಿಯುವುದು ಭವಿಷ್ಯದಲ್ಲಿ ಉತ್ತಮ ಜೀವನ ನಡೆಸಬೇಕು ಎನ್ನುವ ಉದ್ದೇಶದಿಂದ. ಹೀಗೆ ದುಡಿದ ಹಣದಲ್ಲಿ ಸ್ವಲ್ಪ ಭಾಗವನ್ನು ಎಲ್ಲರೂ ಉಳಿತಾಯ ಮಾಡಲು ಬಯಸುತ್ತಾರೆ. ಈಗ ಉಳಿತಾಯ ಮಾಡಲು ಅಥವಾ ಉಳಿಸಿದ ಹಣವನ್ನು ಹೂಡಿಕೆ ಮಾಡಲು ಬೇಕಾದಷ್ಟು ಅವಕಾಶಗಳಿವೆ. ಆದರೆ ಹೂಡಿಕೆ ಮಾಡುವ ವೇಳೆ ಹಣದ ಸುರಕ್ಷತೆಯನ್ನು ನೋಡಬೇಕಾಗುತ್ತದೆ. ಇದಕ್ಕೆ ಎಲ್ಐಸಿ ಒಳ್ಳೆಯ ಹಾಗೂ ಸುರಕ್ಷಿತ ಜಾಗವಾಗಿದೆ.

ನಾವು ಜೀವ ವಿಮೆಯನ್ನು ಮಾಡುವುದರಿಂದ ತುರ್ತು ಅಗತ್ಯ ಬಿದ್ದಾಗ ಇವು ನೆರವಿಗೆ ಬರುತ್ತದೆ. ವಿಮೆ ಎನ್ನುವುದು ಕುಟುಂಬದ ಆರ್ಥಿಕ ಸುರಕ್ಷತೆಯಾಗಿದೆ. ವಿಮೆಯನ್ನು ಖರೀದಿ ಮಾಡುವ ಮೂಲಕ ನೀವು ಅಪಘಾತ, ಅನಾರೋಗ್ಯ ಮೊದಲಾದ ಸಂದರ್ಭದಲ್ಲಿ ಆರ್ಥಿಕ ಸಂಕಷ್ಟಕ್ಕೆ ಒಳಗಾಗುವುದನ್ನು ತಪ್ಪಿಸಬಹುದು. ಇದನ್ನೂ ಓದಿ:Home Remedy: ಅಬ್ಬಾ, ಇದೊಂದು ಕಷಾಯ ಮಾಡಿಕೊಂಡು ಕುಡಿದ್ರೆ, ಅನಗತ್ಯ ಅತಿಥಿಯಾಗಿ ಬರುವ ಶೀತ ಕೆಮ್ಮು ನೆಗಡಿ ಹೇಳಹೆಸರಿಲ್ಲದಂತೆ ಓಡಿ ಹೋಗುತ್ತವೆ, ಯಾವ ಕಷಾಯ ಗೊತ್ತೇ?

ನಮ್ಮ ದೇಶದಲ್ಲಿ ಜೀವ ವಿಮೆ ಖರೀದಿಸಲು ಭಾರತೀಯ ಜೀವ ವಿಮಾ ನಿಗಮ ಪ್ರತಿಷ್ಠಿತ ಸಂಸ್ಥೆಯಾಗಿದೆ. ಇದು ಈ ವರ್ಷ ಶೇರು ಮಾರುಕಟ್ಟೆಗೂ ಲಗ್ಗೆ ಇಟ್ಟಿದೆ. 2023 ರಲ್ಲಿ ಯಾವ ಯಾವ ವಿಮೆ ಖರೀದಿ ಮಾಡುವುದರಿಂದ ನಿಮಗೆ ಲಾಭ ಬರುತ್ತದೆ ಎನ್ನುವುದನ್ನು ತಿಳಿದುಕೊಳ್ಳಿ.

ಎಲ್ಐಸಿ ಟೆಕ್ ಟರ್ಮ್ ಯೋಜನೆ: ಟೆಕ್ ಟರ್ಮ್ ನಾನ್ ಲಿಂಕ್ ಯೋಜನೆಯಾಗಿದೆ. ಇದು ಯಾವುದೇ ಲಾಭವಿಲ್ಲದ ಸಂಪೂರ್ಣ ರಕ್ಷಣೆ ನೀಡುವ ಪಾಲಿಸಿಯಾಗಿದೆ. ಈ ಯೋಜನೆಯ ಪಾಲಿಸಿದಾರರ ಮರಣದ ವೇಳೆ ಅವರ ಕುಟುಂಬಕ್ಕೆ ಸಂಪೂರ್ಣ ರಕ್ಷಣೆ ನೀಡುತ್ತದೆ. ಈ ಪಾಲಿಸಿಯನ್ನು ಆನ್ಲೈನ್ ಮೂಲಕವೂ ಖರೀದಿ ಮಾಡಬಹುದು. ಇದನ್ನೂ ಓದಿ: Mudra Yojana: ಸ್ವಂತ ಉದ್ದಿಮೆ ಶುರು ಮಾಡ್ಬೇಕಾ? ಬ್ಯುಸೆನೆಸ್ ಐಕಾನ್ ಆಗ್ಬೇಕಾ; ಸುಲಭ ಬಂಡವಾಳಕ್ಕೆ ಇಲ್ಲಿದೆ ಸೊಲ್ಯೂಶನ್; 1೦ ಲಕ್ಷ ರೂ. ವರೆಗೆ ಸಾಲ ಸಿಗುವ ಯೋಜನೆ ಯಾವುದು ಗೊತ್ತೇ?
ಎಲ್ಐಸಿ ಜೀವನ್ ಲಾಭ ಯೋಜನೆ:
ಈ ಯೋಜನೆಯಲ್ಲಿ ಹೂಡಿಕೆ ಮಾಡುವುದರಿಂದ ನೀವು ಹೆಚ್ಚಿನ ಲಾಭ ಗಳಿಸುತ್ತೀರಿ. ಈ ಯೋಜನೆಯಲ್ಲಿ ನೀವು ಪ್ರತಿದಿನ 250 ರೂ. ಗಿಂತ ಅಧಿಕ ಮೊತ್ತ 54 ಲಕ್ಷ ರೂ.ಗಳನ್ನು ಹೂಡಿಕೆ ಮಾಡಬಹುದು. ಈ ಯೋಜನೆಯೂ ನಾನ್ ಲಿಂಕ್ಡ್ ಹಾಗೂ ಲಾಭ ನೀಡುವ ಪಾಲಿಸಿಯಾಗಿದೆ. ಈ ಯೋಜನೆಯ ಪಾಲಿಸಿದಾರರು ಮೃತಪಟ್ಟರೆ ಅವರ ಕುಟುಂಬದವರಿಗೆ ಈ ಯೋಜನೆಯ ಸಂಪೂರ್ಣ ಲಾಭ ದಕ್ಕಲಿದೆ. ಪಾಲಿಸಿಯ ಮ್ಯಾಚುರಿಟಿಯವರೆಗೂ ಪಾಲಿಸಿದಾರರು ಬದುಕಿದ್ದರೆ ದೊಡ್ಡ ಮೊತ್ತದ ಹಣವನ್ನು ಕ್ಲೈಮ್ ಮಾಡಬಹುದು. ಅವಧಿ ಹಾಗೂ ಮೊತ್ತವನ್ನು ಪಾಲಿಸಿದಾರರು ಆಯ್ಕೆ ಮಾಡಬಹುದು. 8 ರಿಂದ 59 ವರ್ಷದ ಒಳಗಿನವರು ಈ ಪಾಲಿಸಿ ಖರೀದಿಸಬಹುದು. 1೦,13,16 ವರ್ಷಗಳವರೆಗೆ ಈ ಪಾಲಿಸಿಯಲ್ಲಿ ಹೂಡಿಕೆ ಮಾಡಬಹುದು.

ಎಲ್ಐಸಿ ಹೊಸ ಜೀವನ ಆನಂದ ಯೋಜನೆ:
ಈ ಪಾಲಿಸಿಯು ಹಲವಾರು ಟರ್ಮ್, ಪಿಂಚಣಿಯೋಜನೆಗಳನ್ನು ಹೊಂದಿದೆ. ಹಾಗೆಯೇ ಜೀವ ವಿಮೆ ಕೂಡ ಇದೆ. ಎಲ್ಐಸಿಯ ಪ್ರಸಿದ್ದ ಪಾಲಿಸಿಗಳಲ್ಲಿ ಹೊಸ ಜೀವನ ಆನಂದ ಯೋಜನೆ ಒಂದಾಗಿದೆ. ಈ ಯೋಜನೆಯೂ ರಕ್ಷಣೆ ಕೂಡಾ ನೀಡುತ್ತದೆ. ನಿಮ್ಮ ಹಣದ ಉಳಿತಾಯವು ಆಗಲಿದೆ.

ಜೀವನ ಉಮಾಂಗ್ ಪಾಲಿಸಿ
ಎಲ್ಐಸಿಯ ಅತಿ ಪ್ರಖ್ಯಾತಿ ಪಡೆದ ಪಾಲಿಸಿಗಳಲ್ಲಿ ಜೀವನ ಉಮಾಂಗ್ ಪಾಲಿಸಿಯೂ ಒಂದಾಗಿದೆ. ಹಾಗೆಯೇ ಕಡಿಮೆ ಅಪಾಯವುಳ್ಳ ಯೋಜನೆಯಾಗಿದೆ. ಈ ಯೋಜನೆಯಲ್ಲಿ ಉತ್ತಮ ರಿಟರ್ನ್ ಲಭ್ಯವಾಗಲಿದೆ. 90 ದಿನದಿಂದ 59 ವರ್ಷದ ಒಳಗಿನವರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಇದು ದೀರ್ಘಾವಧಿಯ ಹೂಡಿಕೆ ಯೋಜನೆಯಾಗಿದೆ. ಮ್ಯಾಚುರಿಟಿ ಬಳಿಕ ಅಧಿಕ ಮೊತ್ತ ನಿಮಗೆ ಸಿಗಲಿದೆ.

Comments are closed.