Radish health benefits: 99% ಜನರು ಮೂಲಂಗಿ ತಿನ್ನುವಾಗ ಈ ದೊಡ್ಡ ತಪ್ಪನ್ನು ಮಾಡುತ್ತಾರೆ, ಸರಿಯಾದ ವಿಧಾನ ಮತ್ತು ಪ್ರಯೋಜನ ಏನು ಗೊತ್ತೇ??

Radish health benefits: ಸ್ನೇಹಿತರೆ, ಚಳಿಗಾಲ (Winter Season) ಆರಂಭವಾಗಿದೆ. ಈ ಋತುವಿನಲ್ಲಿ ಸಾಕಷ್ಟು ತಾಜಾ ಮತ್ತು ಹಸಿರು ತರಕಾರಿಗಳು (Green Vegetables)  ಸಹ ಸಿಗುತ್ತವೆ. ನಿಮ್ಮ ಆರೋಗ್ಯವನ್ನು ಇನ್ನಷ್ಟು ಸುಧಾರಿಸಿಕೊಳ್ಳಲು ಸೂಕ್ತವಾದ ಸಮಯ ಇದು. ನೀವು ತರಕಾರಿ ಸಲಾಡ್ (Vegitable salad)  ತಿನ್ನುವುದು ಬಹಳ ಆರೋಗ್ಯಕರವೂ (Healthy) ಹೌದು. ಅವುಗಳಲ್ಲಿ ಒಂದು ಅತ್ಯಂತ ಆರೋಗ್ಯಕರವಾದ ತರಕಾರಿ ಬಗ್ಗೆ ಹೇಳುತ್ತೇವೆ. ಅದುವೇ ರಸಭರಿತವಾದ ಮೂಲಂಗಿ (Radish). ಚಳಿಗಾಲದಲ್ಲಿ ಮೂಲಂಗಿಯನ್ನು ಸೇವಿಸುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದು ಚಳಿಗಾಲದಲ್ಲಿ ಉಂಟಾಗುವ ಅನೇಕ ರೋಗಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ನೀವು ಇದನ್ನು ನೇರವಾಗಿ ಸಲಾಡ್ ರೂಪದಲ್ಲಿ ಅಥವಾ ಪರಾಟಾ ಮಾಡಿಕೊಂಡು ಸೇವಿಸಬಹುದು.

ಮೂಲಂಗಿಯಲ್ಲಿ ಹಲವಾರು ರೀತಿಯ ಪೋಷಕಾಂಶ (Nutrients) ಗಳಿವೆ. ವಿಟಮಿನ್ ಎ, ವಿಟಮಿನ್ ಸಿ, ಕಬ್ಬಿಣ, ಕ್ಯಾಲ್ಸಿಯಂ, ರಂಜಕ, ಪ್ರೋಟೀನ್, ಕಬ್ಬಿಣ, ಅಯೋಡಿನ್, ಸಲ್ಫರ್, ಸೋಡಿಯಂ, ಮೆಗ್ನೀಸಿಯಮ್ ಮತ್ತು ಕ್ಲೋರಿನ್ ನಂತಹ ಪೋಷಕಾಂಶಗಳನ್ನು ಒಳಗೊಂಡಿದ್ದು ದೇಹದ ಆರೋಗ್ಯಕ್ಕೆ ಬಹಳ ಮುಖ್ಯ. ಹಾಗಾದರೆ ಚಳಿಗಾಲದಲ್ಲಿ ಮೂಲಂಗಿಯನ್ನು ಸೇವಿಸುವುದರಿಂದ ಏನೆಲ್ಲಾ ಲಾಭಗಳು ಸಿಗುತ್ತವೆ  ನೋಡೋಣ ಬನ್ನಿ.

ಚಳಿಗಾಲದಲ್ಲಿ ಮೂಲಂಗಿ ತಿನ್ನುವ ಪ್ರಯೋಜನಗಳು

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ (Boosts immunity):

 ಶೀತ ವಾತಾವರಣದಲ್ಲಿ ನಾವು ಸೋಂಕುಗಳಿಗೆ ಒಳಗಾಗುವ ಸಾಧ್ಯತೆ ಹೆಚ್ಚು. ಅಂತಹ ಪರಿಸ್ಥಿತಿಯಲ್ಲಿ, ಈ ಸೂಕ್ಷ್ಮಜೀವಿಗಳ ವಿರುದ್ಧ ಹೋರಾಡಲು ನಿಮ್ಮ ದೇಹದ ರೋಗನಿರೋಧಕ ಶಕ್ತಿ ಬಲಗೊಳಿಸಿಕೊಳ್ಳಬೇಕು. ಅದನ್ನು ಬಲಪಡಿಸಲು, ನೀವು ಪ್ರತಿದಿನ ಸಲಾಡ್‌ನಲ್ಲಿ ಮೂಲಂಗಿಯನ್ನು ತಿನ್ನಲು ಪ್ರಾರಂಭಿಸಿ. ಇದು ನಿಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ. ಆಗ ಸಣ್ಣಪುಟ್ಟ ಸೋಂಕುಗಳು ನಿಮನ್ನು ಭಾದಿಸುವುದಿಲ್ಲ. ಇದನ್ನೂ ಓದಿ: ಪೊರಕೆಯ ವಿಚಾರದಲ್ಲಿ ಅಪ್ಪಿ ತಪ್ಪಿಯೂ ಈ ತಪ್ಪು ಮಾಡಬೇಡಿ, ಏನು ಮಾಡಬೇಕು, ಮಾಡಬಾರದು ಗೊತ್ತೆ? ಲಕ್ಷ್ಮಿ ದೇವಿ ಆಶೀರ್ವಾದ ಬೇಕು ಎಂದರೆ ಏನು ಮಾಡಬೇಕು ಗೊತ್ತೇ?

ಶೀತಕ್ಕೆ ಅತ್ಯುತ್ತಮ ಪರಿಹಾರ (Best Remedy for Cold):

ಚಳಿಗಾಲದಲ್ಲಿ, ನಾವು ಶೀತ, ನೆಗಡಿಗೆ ಒಳಗಾಗುವುದು ಸಾಮಾನ್ಯ. ಇದರಿಂದ ದೂರ ಇರಲು, ನೀವು ಪ್ರತಿದಿನ ಕನಿಷ್ಠ ಒಂದು ಮೂಲಂಗಿಯನ್ನಾದರೂ ತಿನ್ನುವುದನ್ನು ರೂಢಿಸಿಕೊಳ್ಳಬೇಕು. ಇದನ್ನು ಸೇವಿಸುವುದರಿಂದ ಶೀತಕ್ಕೆ ಕಾರಣವಾಗುವ ರೋಗಾಣುಗಳು ಸಾಯುತ್ತವೆ. ಒಂದು ಮೂಲಂಗಿ ಸೇವನೆ ನೀವು ವೈದ್ಯರಿಗೆ ಕೊಡುವ ಹಣವನ್ನು ಉಳಿಸಬಹುದು! ಇದನ್ನೂ ಓದಿ: Married Women Illegal Affair:ಅತ್ತಿಗೆಯ ಜೊತೆ ಮಾಡಬಾರದ ಕೆಲಸ ಮಾಡಿ ಸಿಕ್ಕಿಬಿದ್ದ, ಊರಿನವರೆಲ್ಲ ಮಂಗಾಳಾರತಿ ಮಾಡಿದ ಮೇಲೆ ಏನು ಮಾಡಿದ್ದಾನೆ ಗೊತ್ತೇ?

ಮಧುಮೇಹಕ್ಕೆ ಪ್ರಯೋಜನಕಾರಿ (Beneficial for Diabetes):

ನಿಮಗೆ ಮಧುಮೇಹ ಸಮಸ್ಯೆ ಇದ್ದರೆ ಪ್ರತಿದಿನ ಮೂಲಂಗಿ ತಿನ್ನಲು ಇಂದೇ ಪ್ರಾರಂಭಿಸಿ. ಸಕ್ಕರೆ ಖಾಯಿಲೆಗೆ ಒಂದು ಔಷಧಿಯಂತೆ ಇದು ಕೆಲಸಮಾಡುತ್ತದೆ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ನಿಮ್ಮ ದೇಹದ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ಬರುತ್ತದೆ. ಇದಲ್ಲದೆ, ನೀವು ಇನ್ನೂ ಅನೇಕ ಆರೊಗ್ಯಕರ ಪ್ರಯೋಜನಗಳನ್ನು ಪಡೆಯಬಹುದು. ಆದಾಗ್ಯೂ, ಸಕ್ಕರೆ ರೋಗಿಗಳು ಇದನ್ನು ಸೇವಿಸುವ ಮೊದಲು ಒಮ್ಮೆ ವೈದ್ಯರ ಸಲಹೆಯನ್ನು ತೆಗೆದುಕೊಳ್ಳಬಹುದು.

ಹೃದಯದ ಆರೋಗ್ಯಕ್ಕೆ ಸಹಕಾರಿ (Good for Heart): ಚಳಿಗಾಲದಲ್ಲಿ ಹೃದಯಾಘಾತ, ಪರಿಧಮನಿಯ ಕಾಯಿಲೆಯ ಅಪಾಯ ಹೆಚ್ಚು. ಈ ಋತುವಿನಲ್ಲಿ ಚಳಿಗೆ ತಕ್ಕ ಹಾಗೆ ಕರಿದ ಪದಾರ್ಥಗಳನ್ನು ಕೂಡ ಹೆಚ್ಚಾಗಿ ಸೇವಿಸುತ್ತೀರಿ ಅಲ್ಲವೇ? ಇದರಿಂದ ಆರೋಗ್ಯ ಸಮಸ್ಯೆ ಉಂಟಾಗುವುದು ಹೆಚ್ಚು. ಹಾಗಾಗಿ ಮೂಲಂಗಿಯನ್ನು ಸೇವಿಸುವ ಮೂಲಕ ನಿಮ್ಮ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಇದು ಹೃದಯದ ಆರೈಕೆಗೆ ಸಹಾಯಕವಾಗಿದೆ ಎಂದು ಆರೊಗ್ಯ ತಜ್!ಜರು ಹೇಳುತ್ತಾರೆ.

ಮೂಲಂಗಿಯನ್ನು ಯಾವಾಗ ಮತ್ತು ಹೇಗೆ ಸೇವಿಸಬೇಕು ಗೊತ್ತಾ? (How to Use Radish)

ಮೂಲಂಗಿಯನ್ನು ಖಾಲಿ ಹೊಟ್ಟೆಯಲ್ಲಿ ಮತ್ತು ರಾತ್ರಿ ಹೊತ್ತು ತಿನ್ನಬಾರದು. ಬೆಳಗಿನ ಉಪಾಹಾರದ ನಂತರ ಅಥವಾ ಊಟದ ಮೊದಲು ಇದನ್ನು ಸೇವಿಸಿದರೆ ಹೆಚ್ಚು ಪರಿಣಾಮಕಾರಿ. ಅಥವಾ ಮಧ್ಯಾಹ್ನ ಮತ್ತು ರಾತ್ರಿ ಊಟದ ಜೊತೆಗೆ ಇದನ್ನು ಸೇವಿಸಬಹುದು. ನೀವು ಹಸಿ ಮೂಲಂಗಿಯನ್ನು ತಿನ್ನುವುದಾದರೆ, ಅದರೊಂದಿಗೆ ಸೌತೆಕಾಯಿ, ಟೊಮೆಟೊ, ಕ್ಯಾರೆಟ್ ಮುಂತಾದ ಇತರ ಹಸಿ ತರಕಾರಿಗಳನ್ನು  ಕೂಡ ಸೇವಿಸಿ.

ಮೂಲಂಗಿಯನ್ನು ಸಿಪ್ಪೆ ತೆಗೆದು ಅದಕ್ಕೆ ಬ್ಲಾಕ್ ಸಾಲ್ಟ್ ಸೇರಿಸಿ ತಿನ್ನಬಹುದು. ಮೂಲಂಗಿಯನ್ನು ಜೀರ್ಣಿಸಿಕೊಳ್ಳಲು ಸಮಯ ತೆಗೆದುಕೊಳ್ಳುತ್ತದೆ, ಆದ್ದರಿಂದ ತಿನ್ನುವಾಗ ಅಥವಾ ತಿಂದ ನಂತರ ವಾಕಿಂಗ್ ಮಾಡುವುದು ಉತ್ತಮ. ಮಾರುಕಟ್ಟೆಯಿಂದ ಮೂಲಂಗಿ ಖರೀದಿಸುವಾಗ ಅದು ಅತಿಯಾಗಿ ಬೆಳೆದಿದೆಯೇ ಎಂದು ನೋಡಿಕೊಳ್ಳಿ. ಅದರಲ್ಲೂ ಹಸಿ ಮೂಲಂಗಿ ಸೇವಿಸುವವರು ಎಳೆಯ, ಪ್ರೇಶ್ ಆಗಿರುವ ಸಿಹಿ ಮೂಲಂಗಿ ಖರೀದಿಸಿ.

Comments are closed.