Kannada Recipe Rasam: ಜಸ್ಟ್ ಎರಡು ನಿಮಿಷದಲ್ಲಿ ಹೋಟೆಲ್ ಶೈಲಿಯ ರಸಂ ಮಾಡುವುದು ಹೇಗೆ ಗೊತ್ತೇ?? ಟೈಮ್ ಇಲ್ಲ ಅಂದ್ರೆ ಪಟ್ ಅಂತ ಮಾಡಿಬಿಡಿ!

Kannada Recipe Rasam: ರಸಂ ಅಂತ ಕೇಳಿದ್ರೆ ಬಾಯಲ್ಲಿ ನೀರೂರುತ್ತೆ ಅಲ್ವಾ.. ದೇಶದ ವಿಷಯ ಬಿಡಿ, ಕೇವಲ ನಮ್ಮ ಕರ್ನಾಟಕ ರಾಜ್ಯ ಒಂದರಲ್ಲಿಯೇ ಅದೆಷ್ಟೋ ವೆರೈಟಿ ರಸಂ ಗಳನ್ನ ಮಾಡ್ತಾರೆ. ಒಂದೊಂದು ರಸಂ ಮಾಡುವ ವಿಧಾನವೂ ಒಂದೊಂದು ಬಗೆಯಲ್ಲಿ ಇರುತ್ತವೆ. ನಾವಿಂದು ಹೇಳಿಕೊಡುವ ರಸಂ ಕೇವಲ ಎರಡು ನಿಮಿಷಗಳಲ್ಲಿ ಮಾಡಿಕೊಳ್ಳುವಂತದ್ದು. ಅದರಲ್ಲೂ ರುಚಿಯಲ್ಲಂತೂ ಕಾಂಪ್ರಮೈಸ್ ಇಲ್ಲ. ಅನ್ನ ಆಗೋದಕ್ಕೂ ಮೊದಲೇ ರೆಡಿ ಆಗತ್ತೆ ನೋಡಿ.. ಚಳಿಗಾಲದ ಶೀತ ನೆಗಡು ಕೆಮ್ಮು ಎಲ್ಲ ಹೇಳ ಹೆಸರಿಲ್ಲದಂತೆ ಓಡಿಹೋಗತ್ತೆ.. ಹಾಗಾದರೆ ಇನ್ಯಾಕೆ ತಡ.. ರುಚಿಕರವಾದ ಹೋಟೆಲ್ ಶೈಲಿಯ ರಸಂ ಅನ್ನು ದಿಢೀರ್ ಅಂತ ಹೇಗೆ ಮಾಡುವುದು ನೋಡೋಣ!

ರಸಂ ಮಾಡಲು ಬೇಕಾಗುವ ಸಾಮಗ್ರಿಗಳು:

ಒಂದು ದೊಡ್ದ ಗ್ರಾತ್ರದ ಟೊಮ್ಯಾಟೋ ಹೆಚ್ಚಿದ್ದು

ಗುಂಟುರು ಮೆಣಸು -4 (2ರುಬ್ಬಲು 2 ಒಗ್ಗರಣೆಗೆ)

ಕಾಳು ಮೆಣಸು ಮೂರು ಚಮಚ

ಬೆಳ್ಳುಳ್ಳಿ- ಒಂದ ಗಡ್ಡೆಯಷ್ಟು

ಜೀರಿಗೆ ಎರಡು ಚಮಚ

ಕೊತ್ತಂಬರಿ ಸೊಪ್ಪು ಸ್ವಲ್ಪ

ಎಣ್ಣೆ ಎರಡು ಚಮಚ

ಹುಣಸೇಹಣ್ಣು ಒಂದು ನಿಂಬೆ ಹಣ್ಣಿನ ಗಾತ್ರದ್ದು

ಹಸಿ ಮೆಣಸು ಎರಡು

ಇದನ್ನೂ ಓದಿ:Married Women Illegal Affair:ಅತ್ತಿಗೆಯ ಜೊತೆ ಮಾಡಬಾರದ ಕೆಲಸ ಮಾಡಿ ಸಿಕ್ಕಿಬಿದ್ದ, ಊರಿನವರೆಲ್ಲ ಮಂಗಾಳಾರತಿ ಮಾಡಿದ ಮೇಲೆ ಏನು ಮಾಡಿದ್ದಾನೆ ಗೊತ್ತೇ?

ಮಾಡುವ ವಿಧಾನ: ಮೊದಲಿಗೆ ಒಂದು ಮಿಕ್ಸರ್ ಜಾರ್ ಗೆ ಎರಡು ಗುಂಟೂರು ಮೆಣಸು, ಮೂರು ಚಮಚ ಕಾಳು ಮೆಣಸು, ಒಂದು ಗಡ್ಡೆ ಬೆಳ್ಳುಳ್ಳಿ, ಎರಡು ಚಮಚ ಜೀರಿಗೆ, ಹೆಚ್ಚಿಟ್ಟುಕೊಂಡ ಟೊಮ್ಯಾಟೋದಲ್ಲಿ ಅರ್ಧ, ಹಸಿ ಮೆಣಸು ಎರಡು, ಕೊತ್ತಂಬರಿ ಸೊಪ್ಪು ಹಾಗೂ ಹುಣಸೆಹಣ್ಣನ್ನು ಹಾಕಿ. ಸ್ವಲ್ವ ನೀರನ್ನು ಸೇರಿಸಿ ನುಣ್ನಗೆ ರುಬ್ಬಿಕೊಳ್ಳಿ.

ಇದನ್ನೂ ಓದಿ:Radish health benefits: 99% ಜನರು ಮೂಲಂಗಿ ತಿನ್ನುವಾಗ ಈ ದೊಡ್ಡ ತಪ್ಪನ್ನು ಮಾಡುತ್ತಾರೆ, ಸರಿಯಾದ ವಿಧಾನ ಮತ್ತು ಪ್ರಯೋಜನ ಏನು ಗೊತ್ತೇ??

ಈಗ ಒಂದು ಕಡಾಯಿಗೆ ಎಣ್ಣೆಯನ್ನು ಹಾಕಿ ಅದು ಬಿಸಿಯಾದ ನಂತರ ಕರಿಬೇವು ಹಾಗೂ ಎರಡು ಒಣಮೆಣಸನ್ನು ಹಾಕಿ. ಬಳಿಕ ಅರ್ಧ ಹೆಚ್ಚಿಟ್ಟುಕೊಂಡ ಟೊಮ್ಯಾಟೋ ಸೇರಿಸಿ. ಟೊಮ್ಯಾಟೋ ಸ್ವಲ್ಪ ಬಾದಿದ ಕೂಡಲೆ, ರುಬ್ಬಿದ ಮಿಶ್ರಣವನ್ನು ಹಾಕಿ. ಅದಕ್ಕೆ ಅರ್ಧ ಚಮಚ ಅರಿಶಿನ ಹಾಗೂ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ. ರಸಂ ಗೆ ಬೇಕಾದಷ್ಟು ನೀರನ್ನು ಸೇರಿಸಿ. ಒಂದು ಕುದಿ ಬಂದ ನಂತರ ಸ್ವಲ್ಪ ಕೊತ್ತಂಬರಿ ಸೊಪ್ಪನ್ನು ಹಾಕಿ ಬಿಸಿ ಬಿಸಿಯಾಗಿ ಈ ರಸಂ ನ್ನು ಕುಡಿಯಿರಿ ಅಥವಾ ಬಿಸಿ ಬಿಸಿ ಅನ್ನಕ್ಕೆ ಹಾಕಿಕೊಂಡು ಊಟ ಮಾಡಿ.. ಬಲ್ಲವರೇ ಬಲ್ಲ ಈ ರಸಂ ನ ರುಚಿಯ..

Comments are closed.