Benefits of drumsticks: ನುಗ್ಗೇಕಾಯಿ ಪುರುಷರ ಶಕ್ತಿ ಹೆಚ್ಚಿಸುವುದು ಮಾತ್ರವಲ್ಲ, ಇನ್ನಷ್ಟು ಆರೋಗ್ಯಕರ ಪ್ರಯೋಜನಗಳನ್ನೂ ಹೊಂದಿದೆ; ಯಾವವು ಗೊತ್ತೇ?

Benefits of drumsticks: ಪ್ರತಿಯೊಬ್ಬರಿಗೂ ಜೀವನದಲ್ಲಿ ಆರಾಮವಾಗಿರಬೇಕು ಎಂದರೆ ಆರೋಗ್ಯ ಬಹಳ ಮುಖ್ಯವಾಗುತ್ತದೆ. ಆರೋಗ್ಯವನ್ನು ಸರಿಯಾಗಿ ಇಟ್ಟುಕೊಳ್ಳಬೇಕು ಎಂದಾಗ ನಾವು ಎಲ್ಲ ರೀತಿಯ ತರಕಾರಿ, ಸೊಪ್ಪುಗಳನ್ನು ಸೇವಿಸಬೇಕಾಗುತ್ತದೆ. ಈ ರೀತಿ ತರಕಾರಿಗಳಲ್ಲಿ ನುಗ್ಗೆಕಾಯಿ ಕೂಡ ಒಂದು. ನುಗ್ಗೇಕಾಯಿ ಖನಿಜಾಂಶಗಳ ಆಗರವಾಗಿದ್ದು, ಇದನ್ನು ಸೇವನೆ ಮಾಡುವುದಿರಿಂದ ನಮಗೆ ಹಲವಾರು ಲಾಭಗಳಿವೆ.

ನುಗ್ಗೆಕಾಯಿಯಲ್ಲಿ ನಮ್ಮ ಆರೋಗ್ಯವನ್ನು ಕಾಪಾಡುವ ಅನೇಕ ಅಂಶಗಳು ಅಡಗಿದೆ. ವಾರದಲ್ಲಿ ಎರಡು ದಿನವಾದರೂ ನುಗ್ಗೇಕಾಯಿ ಸೇವನೆ ಮಾಡುವುದರಿಂದ ನಾವು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ನುಗ್ಗೆ ಕಾಯಿಯಲ್ಲಿ ಖನಿಜಾಂಶಗಳು, ಪ್ರೋಟಿನ್, ವಿಟಾಮಿನ್ ಅಂಶಗಳು ಇವೆ. ಕರಗುವ ನಾರು ಕೂಡ ಇದೆ. ಕೇವಲ ನುಗ್ಗೆಕಾಯಿ ಮಾತ್ರವಲ್ಲ ಇದರ ಎಲೆ, ಬೀಜದಲ್ಲೂ ಔಷಧಿಯ ಗುಣಗಳಿವೆ. ಇವುಗಳನ್ನು ಕೂಡ ನಾವು ಸೇವನೆ ಮಾಡಬಹುದು. ಇದರಿಂದ ಫೈಟೋ ನ್ಯೂಟ್ರಿಯನ್ಸ್ ಅಂಶಗಳು ನಮ್ಮ ದೇಹಕ್ಕೆ ಸಿಗುತ್ತದೆ. ನುಗ್ಗೆಕಾಯಿ ಒಂದು ಉತ್ತಮ ಬ್ಯಾಕ್ಟಿರಿಯಾ ನಿರೋಧಕವಾಗಿದೆ. ವಿವಿಧ ಬಗೆಯ ಸೋಂಕುಗಳಿಂದ ರಕ್ಷಣೆ ನೀಡುತ್ತದೆ. ಇದನ್ನೂ ಓದಿ: Roopesh Shetty:ಬಿಗ್ ಬಾಸ್ ವಿನ್ನರ್ ರೂಪೇಶ್ ಶೆಟ್ಟಿ ಊರಿಗೆ ಹೋಗಿ ನೇರವಾಗಿ ಪೋಲೀಸ್ ಸ್ಟೇಷನ್ ಮೆಟ್ಟಿಲೇರಿದ್ದು ಯಾಕೆ ಗೊತ್ತಾ?

ನುಗ್ಗೆಕಾಯಿಯಲ್ಲಿ ಅಡಕವಾಗಿರುವ ವಿಟಾಮಿನ್ ಸಿ ಅಂಶವು ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರದಲ್ಲಿರುವ ಬ್ಯಾಕ್ಟಿರಿಯಾ ವಿರೋಧಿ ಗುಣಲಕ್ಷಣಗಳು ಸಾಮಾನ್ಯ ನೆಗಡಿ, ಜ್ವರ, ಶೀತದಂತಹ ಕಾಯಿಲೆಗಳಿಂದ ನಮ್ಮನ್ನು ದೂರವಿರಿಸುತ್ತದೆ.

ನುಗ್ಗೇಕಾಯಿಯ ಬೀಜ ಹಾಗೂ ಎಲೆಯಲ್ಲಿ ರಕ್ತವನ್ನು ಶುದ್ಧಿಕರಿಸುವ ಅಂಶಗಳಿವೆ. ಅಲ್ಲದೆ ಇದನ್ನು ಸೇವನೆ ಮಾಡುವುದರಿಂದ ಬ್ಯಾಕ್ಟಿರಿಯಾ ವಿರುದ್ಧ ಹೋರಾಡುವ ಶಕ್ತಿಯು ದೇಹಕ್ಕೆ ಬರುತ್ತದೆ. ಆದ್ದರಿಂದ ನಮ್ಮ ದಿನನಿತ್ಯದ ಆಹಾರದಲ್ಲಿ ನುಗ್ಗೇಕಾಯಿ ಅಥವಾ ಅದರ ಬೀಜ, ಎಲೆಗಳು ಇರುವಂತೆ ನೋಡಿಕೊಳ್ಳುವುದರಿಂದ ರಕ್ತದ ಶುದ್ಧಿಕರಣ ಹೆಚ್ಚಾಗುತ್ತದೆ. ಇದನ್ನೂ ಓದಿ:Kannada Astrology: ದಾನ ಮಾಡಿದರೆ ಪುಣ್ಯಪ್ರಾಪ್ತಿಯಾಗುತ್ತೆ ಆದರೆ ಈ ತಪ್ಪನ್ನು ಮಾಡಿದರೆ ನೀವೇ ದಾರಿದ್ರ್ಯ ಅನುಭವಿಸುತ್ತೀರಿ!

ನುಗ್ಗೆಕಾಯಿಯಲ್ಲಿರುವ ಕಾರ್ಬೋಹೈಡ್ರೇಟ್ಗಳು ಪ್ರೋಟಿನುಗಳು ದೇಹದಲ್ಲಿರುವ ಕೊಬ್ಬಿನ ಅಂಶವನ್ನು ಕರಗಿಸಿ ಚಿಕ್ಕ ಚಿಕ್ಕ ಕಣಗಳಾಗಿ ಮಾರ್ಪಡಿಸುವ ಮೂಲಕ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.

ನುಗ್ಗೆ ಸಾರವು ಪಿತ್ತಜನಕಾಂಗಕ್ಕೆ ಉಂಟಾಗುವ ಹಾನಿಯಿಂದ ರಕ್ಷಿಸುತ್ತದೆ. ಮತ್ತು ಅದರ ಚೇತರಿಕೆಗೆ ಸಹಾಯ ಮಾಡುತ್ತದೆ. ಸಂಶೋಧಕರ ಪ್ರಕಾರ ನುಗ್ಗೆ ಕಾಯಿ ಆಕ್ಸಿಡಿಕರಣ ಮತ್ತು ಹಾನಿಯಿಂದ ಯಕೃತ್ತನ್ನು ಸಕ್ರಿಯವಾಗಿ ರಕ್ಷಿಸಬಲ್ಲ ಆಹಾರವಾಗಿದೆ. “ಕಾಯಿ ಕಾಯಿ ನುಗ್ಗೇಕಾಯಿಯಲ್ಲಿನ ಮಹಿಮೆ” ಏನು ಅಂತ ಗೊತ್ತಾಯ್ತಲ್ಲ.. ಇನ್ಯಾಕೆ ತಡ ಮಾರುಕಟ್ಟೆಯಿಂದ ವಾರಕ್ಕೊಮ್ಮೆಯಾದರೂ ತಪ್ಪದೇ ತಂದು ತಿನ್ನಿ

Comments are closed.