Banana recipe Kannada: ಕೇವಲ ಐದು ಪದಾರ್ಥಗಳನ್ನ ಬಳಸಿಕೊಂಡು, ಒಮ್ಮೆ ಮಾಡಿದ್ರೆ ವಾರದ ಪೂರ್ತಿ ಇಟ್ಟು ತಿನ್ನಬಹುದಾದಂತಹ ಬಾಳೆಹಣ್ಣಿನ ತಿನಿಸು ಮಾಡೋದು ಹೇಗೆ ಗೊತ್ತೇ ? ಒಮ್ಮೆ ತಿಂದ್ರೆ ಮತ್ತೆ ಮತ್ತೆ ಬೇಕು ಅಂತಾರೆ ನೋಡಿ!

Banana recipe Kannada: ಬಾಳೆಹಣ್ಣಿನಿಂದ ಸಾಕಷ್ಟು ವಿಧವಾದ ಅಂತಹ ರೆಸಿಪಿಗಳನ್ನು ಮಾಡಬಹುದು. ಬಹಳ ರುಚಿಕರವಾದ ಸ್ವೀಟ್ ಕೂಡ ತಯಾರಿಸಬಹುದು. ಕರಾವಳಿ ಭಾಗದಲ್ಲಿ ಬಾಳೆಹಣ್ಣಿಗೆ ವಿಶೇಷ ಮಹತ್ವ ನೀಡಲಾಗಿದೆ ಪೂಜೆ ಪುನಸ್ಕಾರಗಳಿಂದ ಹಿಡಿದು ಹಲವು ರೀತಿಯ ಅಡುಗೆಗಳಿಗೂ ಕೂಡ ಬಾಳೆಹಣ್ಣನ್ನು ಬಳಸಿಕೊಳ್ಳಲಾಗುತ್ತೆ. ಅಂದ ಹಾಗೆ ಈಗ ನಾವು ಹೇಳುವಂತಹ ರೆಸಿಪಿ ನೀವು ಈ ಹಿಂದೆ ಮಾಡಿರಲು ಸಾಧ್ಯವೇ ಇಲ್ಲ ಹಾಗಾದ್ರೆ ಹೊಸ ರೀತಿಯ ಬಾಳೆಹಣ್ಣಿನ ರೆಸಿಪಿ ಮಾಡುವುದು ಹೇಗೆ ನೋಡೋಣ ಬನ್ನಿ. ಇದನ್ನೂ ಓದಿ: Live in Hotel: ಮದುವೆಯಾಗದೆ ಇರುವವರು, ಹೋಟೆಲ್ ನಲ್ಲಿ ರೂಮ್ ತೆಗೆದುಕೊಳ್ಳಬಹುದೇ?? ಕಾನೂನು ಏನು ಹೇಳುತ್ತದೆ ಗೊತ್ತೇ? ಇನ್ನು ಮುಂದಿದೆಯೇ ಹಬ್ಬ?

ಬೇಕಾಗುವ ಸಾಮಗ್ರಿಗಳು;

ಆರು ಬಾಳೆಹಣ್ಣು (ರಸಬಾಳೆ, ಏಲಕ್ಕಿ ಬಾಳೆ)

ಏಲಕ್ಕಿ ಪುಡಿ ಸ್ವಲ್ಪ

ಬೆಲ್ಲ ಒಂದು ಬೌಲ್

ಗೋದಿ ಹಿಟ್ಟು ಒಂದು ಬೌಲ್

ಕರಿಯಲು ಎಣ್ಣೆ

ಮಾಡುವ ವಿಧಾನ; ಮೊದಲಿಗೆ ಬಾಳೆಹಣ್ಣನ್ನು ಚೆನ್ನಾಗಿ ತೊಳೆದು ಅದನ್ನ ಒಂದು ಸ್ವಚ್ಛವಾದ ಬಟ್ಟೆಯಲ್ಲಿ ಒರೆಸಿ ನೀರಿನ ಅಂಶ ಇಲ್ಲದ ರೀತಿಯಲ್ಲಿ ಡ್ರೈ ಮಾಡಿಕೊಳ್ಳಬೇಕು. ಮೊದಲಿಗೆ ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿಕೊಳ್ಳಿ ಎಣ್ಣೆ ಕುದಿದ ನಂತರ ಅದಕ್ಕೆ ನೇರವಾಗಿ ಬಾಳೆಹಣ್ಣನ್ನು ಹಾಕಿ ಸ್ವಲ್ಪ ಫ್ರೈ ಮಾಡಬೇಕು. ಬಾಳೆಹಣ್ಣಿನ ಸಿಪ್ಪೆ ಬ್ರೌನ್ ಬಣ್ಣಕ್ಕೆ ತಿರುಗುವವರೆಗೆ ಫ್ರೈ ಮಾಡಿ ಮಧ್ಯಮ ಉರಿಯಲ್ಲಿ ಬಾಳೆಹಣ್ಣನ್ನು ಫ್ರೈ ಮಾಡಿಕೊಳ್ಳಿ. ನಂತರ ಇದನ್ನು ತೆಗೆದು ಒಂದು ಪಾತ್ರೆಗೆ ವರ್ಗಾಯಿಸಿಕೊಳ್ಳಿ. ಇದನ್ನೂ ಓದಿ: Salt Effect: ಉಪ್ಪು ಹೆಚ್ಚು ತಿನ್ನುತ್ತಿದ್ದೀರಾ?? ಹಾಗಿದ್ದರೆ ಆ ಕೆಲಸ ಮಾಡಲು ಆಗುತ್ತಿಲ್ಲವೇ? ಉಪ್ಪು ಹೆಚ್ಚು ತಿಂದರೆ ಏನಾಗುತ್ತದೆ ಗೊತ್ತೇ?? ಹುಷಾರ್!

ಈಗ ಒಂದು ಸ್ವಚ್ಛವಾದ ಬಟ್ಟೆಯ ಮೇಲೆ ಗಟ್ಟಿ ಬೆಲ್ಲವನ್ನು ಹಾಕಿ ಅದನ್ನು ಚೆನ್ನಾಗಿ ಜಜ್ಜಿಕೊಳ್ಳಿ. ಸಣ್ಣದಾಗಿ ಜಜ್ಜಿದ ಈ ಬೆಲ್ಲವನ್ನು ಒಂದು ಪಾತ್ರೆಗೆ ವರ್ಗಾಯಿಸಬೇಕು. ಈಗ ಫ್ರೈ ಮಾಡಿಕೊಂಡ ಬಾಳೆಹಣ್ಣಿನ ಸಿಪ್ಪೆಯನ್ನು ತೆಗೆದುಕೊಳ್ಳಿ. ಬಾಳೆಹಣ್ಣಿನ ಸಿಪ್ಪೆ ತೆಗೆದ ನಂತರ ಅದನ್ನು ಚೆನ್ನಾಗಿ ಮ್ಯಾಶ್ ಮಾಡಿಕೊಳ್ಳಬೇಕು.

ನಂತರ ಪೇಸ್ಟು ತರ ಆದ ಬಾಳೆಹಣ್ಣಿಗೆ ಒಂದು ಲೋಟದಷ್ಟು ಗೋಧಿ ಹಿಟ್ಟನ್ನು ಸೇರಿಸಿ. ಇದನ್ನು ಕೈಯಿಂದ ಚೆನ್ನಾಗಿ ಮಿಕ್ಸ್ ಮಾಡಿ ಕಲಸಿ. ಇದಕ್ಕೆ ಜಜ್ಜಿಟ್ಟುಕೊಂಡ ಬೆಲ್ಲವನ್ನ ಸೇರಿಸಿ. ಇದಕ್ಕೆ ಅರ್ಧ ಚಮಚದಷ್ಟು ಏಲಕ್ಕಿ ಪೌಡರ್ ಕೂಡ ಹಾಕಿ ಮತ್ತೊಮ್ಮೆ ಕಲಸಿ.

ಈಗ ಈ ಹಿಟ್ಟನ್ನು ಕೈಯಿಂದ ಸ್ವಲ್ಪೇ ಸ್ವಲ್ಪ ತೆಗೆದುಕೊಂಡು ಬಿಸಿಯಾದ ಎಣ್ಣೆ ಬಂಡಿಗೆ ಹಾಕಿ. ಕೈಗೆ ಸ್ವಲ್ಪ ನೀರನ್ನ ಸವರಿಕೊಂಡು ಬಾಳೆಹಣ್ಣಿನ ಈ ಹಿಟ್ಟನ್ನು ಎಣ್ಣೆಯಲ್ಲಿ ಬಿಡಲು ಸುಲಭ ಅಥವಾ ನೀವು ಚಮಚದ ಸಹಾಯದಿಂದ ಕೂಡ ಎಣ್ಣೆಯಲ್ಲಿ ಹಾಕಬಹುದು. ಚೆನ್ನಾಗಿ ಗೋಲ್ಡನ್ ಬ್ರೌನ್ ಅಥವಾ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ. ಎಣ್ಣೆಯಿಂದ ರುಚಿಯಾದ ಬಾಳೆಹಣ್ಣಿನ ಸ್ವೀಟ್ ಸವಿಯಲು ಸಿದ್ಧ.

Comments are closed.