Ratha saptami:ಇಂದಿನ ರಥ ಸಪ್ತಮಿಯ ದಿನ ನೀವು ಹೀಗೆ ಮಾಡಿದ್ರೆ ಮತ್ತೆ ನಿಮ್ಮ ಕೈಗೆ ದುಡ್ಡು ಬರೋದು ನಿಲ್ಲೋದೇ ಇಲ್ಲ; ಏನು ಮಾಡಬೇಕು ಗೊತ್ತೇ?

Ratha saptami: ಪ್ರತಿ ವರ್ಷ ಮಾಘ ಮಾಸದ ಶುಕ್ಲ ಪಕ್ಷದ ಏಳನೇ ದಿನದಂದು ರಥಸಪ್ತಮಿ ಅಥವಾ ಅಚಲ ಸಪ್ತಮಿಯನ್ನ ಆಚರಣೆ ಮಾಡಲಾಗುತ್ತೆ. ಈ ದಿನ ಸೂರ್ಯದೇವನ ಜನ್ಮದಿನ ಎಂದು ಶಾಸ್ತ್ರಗಳು ಹೇಳುತ್ತವೆ. ರಥಸಪ್ತಮಿಯ ದಿನ ಸಾಕಷ್ಟು ಜನ ಉಪವಾಸ ಮಾಡುತ್ತಾರೆ. ಇದರಿಂದ ಸಕಲ ರೋಗಗಳು ದೂರವಾಗುತ್ತವೆ. ಇನ್ನು ಸೂರ್ಯನು ಈ ದಿನ ಕೆಲವು ರಾಶಿಗಳಲ್ಲಿ ಬಲವಾಗಿರುತ್ತಾನೆ ಹಾಗಾಗಿ ನೀವು ರಥಸಪ್ತಮಿಯ ದಿನ ಕೆಲವೊಂದು ಆಚರಣೆಗಳನ್ನು ಮಾಡಿದ್ರೆ ನಿಮ್ಮ ವೃತ್ತಿ ಜೀವನದಲ್ಲಿಯೂ ಸಂಸಾರಕ ಜೀವನದಲ್ಲಿಯೂ ಸೂರ್ಯನ ಕೃಪೆ ಇದ್ದೇ ಇರುತ್ತೆ.

ರಥಸಪ್ತಮಿಯ ದಿನ ಏನು ಮಾಡಬೇಕು?

ಇಂದು ರಥಸಪ್ತಮಿ ಉಪವಾಸ (Fasting) ಮಾಡಿದ್ರೆ ತುಂಬಾನೇ ಒಳ್ಳೆಯದು ಅದರಲ್ಲೂ ಉಪ್ಪನ್ನು(salt) ಸೇವಿಸಲೇಬಾರದು. ಅದರ ಬದಲು ಉಪ್ಪನ್ನು ಈ ದಿನ ದಾನ ಮಾಡಿ. ಇದರಿಂದ ಸೂರ್ಯನ ಕೃಪೆಗೆ ನೀವು ಪಾತ್ರರಾಗುತ್ತೀರಿ ಜೊತೆಗೆ ದೇಹದಲ್ಲಿ ಇರುವಂತಹ ಯಾವುದೇ ನೋವುಗಳು ಕೂಡ ದೂರಾಗುತ್ತದೆ.

ಇನ್ನು ವೈವಾಹಿಕ ಜೀವನದಲ್ಲಿಯೂ ಕೂಡ ಸಂತೋಷ ನೆಮ್ಮದಿಯಿಂದ ಇರಲು ರಥಸಪ್ತಮಿಯ ದಿನ ಮುಂಜಾನೆ ಸ್ನಾನ ಮಾಡಿ ಶುದ್ಧವಾದ ಬಟ್ಟೆಗಳನ್ನ ಧರಿಸಿ ಪವಿತ್ರ ನದಿ ಅಥವಾ ಜಲಾಶಯದಲ್ಲಿ ದಾನ ಮಾಡಬೇಕು.

ಇನ್ನು ರಥಸಪ್ತಮಿಯ ದಿನ ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸುವುದು ಬಹಳ ಒಳ್ಳೆಯದು ಇದರಿಂದ ವೃತ್ತಿ ಜೀವನದಲ್ಲಿ ಬಹಳ ದೊಡ್ಡ ಯಶಸ್ಸನ್ನ ಸಾಧಿಸುತ್ತಿರಿ. ಅದಕ್ಕಾಗಿ ನೀವು ಮಾಡಬೇಕಾಗಿರುವುದು ಇಷ್ಟೇ. ಒಂದು ತಾಮ್ರದ ಪಾತ್ರೆಯಲ್ಲಿ ನೀರನ್ನು ಹಾಕಿ ಅದಕ್ಕೆ ಕೆಂಪು ಚಂದನ ಬೆಲ್ಲ ಹಾಗೂ ಕೆಂಪು ಹೂವುಗಳನ್ನು ಹಾಕಿ ಅದನ್ನ ಸೂರ್ಯನಿಗೆ ಅರ್ಘ್ಯವಾಗಿ ಅರ್ಪಿಸಬೇಕು. ನಂತರ ಆದಿತ್ಯ ಹೃದಯ ಸ್ತೋತ್ರವನ್ನು ಪಠಿಸಿದರೆ ಒಳ್ಳೆಯದು. ಹೀಗೆ ಮಾಡಿದರೆ ನೀವು ಊಹಿಸಲಾಗದ ರೀತಿಯಲ್ಲಿ ವೃದ್ಧಿ ಜೀವನದಲ್ಲಿ ಪ್ರಗತಿಯನ್ನು ಪಡೆಯುತ್ತೀರಿ. ಅಷ್ಟೇ ಅಲ್ಲ ನಿಮ್ಮ ಆತ್ಮವಿಶ್ವಾಸವು ಹೆಚ್ಚುತ್ತದೆ ಜೊತೆಗೆ ಇತರರು ನಿಮಗೆ ಎರಡು ಪಟ್ಟು ಹೆಚ್ಚು ಗೌರವ ನೀಡುತ್ತಾರೆ.

ನಿಮ್ಮಲ್ಲಿ ಆತ್ಮಸ್ಥೈರ್ಯ ಹೆಚ್ಚಾಗಬೇಕು, ಮನೆಯಲ್ಲಿ ಸಂತೋಷ ಸಮೃದ್ಧಿ ತುಂಬಿರಬೇಕು ಅಂದ್ರೆ, ಇಂದಿನ ರಥಸಪ್ತಮಿಯ ದಿನದಲ್ಲಿ ಸ್ನಾನ ಮಾಡುವಾಗ ನೀರಿಗೆ ಕೆಂಪು ಚಂದನ ಗಂಗಾಜಲ ಮತ್ತು ಕುಂಕುಮವನ್ನು ಸೇರಿಸಿ ಸ್ನಾನ ಮಾಡಿ ಇದರಿಂದ ಸೂರ್ಯನ ಕೃಪೆಯು ಕೂಡ ನಿಮ್ಮ ಮೇಲಿರುತ್ತದೆ.

ಅಚಲ ಸಪ್ತಮಿಯ ಈ ದಿನ ಸ್ನಾನ ಮತ್ತು ಪೂಜೆಯ ನಂತರ ಬಡ ಬ್ರಾಹ್ಮಣರಿಗೆ ಬೇಳೆ ಬೆಲ್ಲ ಗೋಧಿ ತಾಮ್ರ ಕೆಂಪು ಅಥವಾ ಕಿತ್ತಳೆ ಬಣ್ಣದ ಬಟ್ಟೆಯನ್ನು ದಾನ ಮಾಡುವುದು ಸೂಕ್ತ. ಯಾರು ಹೀಗೆ ಮಾಡುತ್ತಾರೋ ಅವರ ಜಾತಕದಲ್ಲಿ ಸೂರ್ಯ ಬಲಗೊಳ್ಳುತ್ತಾನೆ ಹಾಗೂ ಅತಿ ಹೆಚ್ಚು ಶುಭ ಫಲಿತಾಂಶವನ್ನು ನೀಡುತ್ತಾನೆ.

Comments are closed.