Darshan Kranti Film: ದರ್ಶನ್ ಗೆ ಮತ್ತೊಂದು ಬಿಗ್ ಶಾಕ್: ದಿನೇ ದಿನೇ ಕುಗ್ಗುತ್ತಿದೆ ದರ್ಬಾರ್: ಕ್ರಾಂತಿ ಸಿನೆಮಾಗೆ ಒಳ್ಳೆ ಮಾತುಗಳು ಕೇಳಿ ಬಂದರು ಏನಾಗಿದೆ ಗೊತ್ತೇ??

Darshan Kranti Film: ಕನ್ನಡ Kannada) ಹಾಗೂ ಬಾಲಿವುಡ್ (Bollywood) ದಿಗ್ಗಜ ನಟರ ಸಿನಿಮಾ (Film) ಗಳು ಒಟ್ಟಿಗೆ ಬಿಡುಗಡೆ ಆಗಿ ಥಿಯೇಟರ್ (theater) ನಲ್ಲಿ ಬಲಪ್ರದರ್ಶನ ಮಾಡುತ್ತಿವೆ. ಇತ್ತ ಕನ್ನಡ ನಾಡಿನಲ್ಲಿ ಕ್ರಾಂತಿ ಸಿನಿಮಾ ಜನವರಿ 26ರಂದು ತೆರೆಗೆ ಬಂತು. ಅತ್ತ ಬಾಲಿವುಡ್ ನಲ್ಲಿ ಶಾರುಖ್ ಖಾನ್ (Sharukh Khan) ಅಭಿನಯದ ಪಠಾಣ್ ಚಿತ್ರ 25 ನೆ ತಾರಿಕಿಗೆ ತೆರೆ ಕಂಡಿದೆ. ಒಂದು ದಿನದ ಅಂತರದಲ್ಲಿ ಈ ಎರಡು ಸ್ಟಾರ್ ನಟರ ಸಿನಿಮಾಗಳು ಬಿಡುಗಡೆ ಆಗಿದ್ದು ಭಯಂಕರ ಪೈಪೋಟಿ ಎದುರಿಸುತ್ತಿವೆ.

ಅದರಲ್ಲೂ ಕರ್ನಾಟಕದಲ್ಲಿ ಕನ್ನಡ ಹಾಗೂ ಹಿಂದಿ ಸಿನಿಮಾದ ಪೈಪೋಟಿ ಹೆಚ್ಚಾಗಿದೆ. ಕರ್ನಾಟಕದಲ್ಲಿ ಬೇರೆ ಭಾಷಾ ಸಿನಿಮಾದ ಅಭಿಮಾನಿಗಳು ಸಾಕಷ್ಟು ಜನ ಇದ್ದಾರೆ. ಹಾಗಾಗಿ ಪಠಾಣ್ ಸಿನಿಮಾ ಕರ್ನಾಟಕದಲ್ಲಿಯೂ ಕೂಡ ಉತ್ತಮ ಕಲೆಕ್ಷನ್ ಮಾಡುತ್ತಿದೆ. ಶಾರುಖ್ ಖಾನ್ ಅಭಿನಯದ ಪಠಾಣ್ (Pathan) ಸಿನಿಮಾ ಬೆಂಗಳೂರಿನಲ್ಲಿ ಮೊದಲ ದಿನ ಬಿಡುಗಡೆಯಾಗಿ ದಾಖಲೆಯ ಪ್ರದರ್ಶನ ಪಡೆದುಕೊಂಡಿತ್ತು. ಈ ಹಿನ್ನೆಲೆಯಲ್ಲಿ ಸ್ಟಾರ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ (darshan) ಅವರ ಕ್ರಾಂತಿ ಸಿನಿಮಾಕ್ಕೆ ಸರಿಯಾಗಿ ಥಿಯೇಟರ್ ಸಿಗದೇ ಇರುವುದು ನಿಜಕ್ಕೂ ಬೇಸರದ ಸಂಗತಿ.

ಈ ಘಟನೆ ನಡೆದಿರುವುದು ಹೊಸತೇನೂ ಅಲ್ಲ. ಈ ಹಿಂದೆಯೂ ಹೀಗೆ ನಡೆದಿದೆ ಬಾಲಿವುಡ್ ಸ್ಟಾರ್ ನಟರ ಸಿನಿಮಾ ಬಿಡುಗಡೆ ಆದ್ರೆ ಕನ್ನಡದ ಸಿನಿಮಾ ಕೆಲವೊಮ್ಮೆ ಸೈಡ್ ಲೈನ್ ಆಗುತ್ತೆ. ಮುಂಗಡ ಬುಕಿಂಗ್ ನಲ್ಲಿ ಸ್ಯಾಂಡಲ್ವುಡ್ ನಲ್ಲಿ ದಾಖಲೆ ಮಾಡಿದ ಚಿತ್ರ ಕ್ರಾಂತಿ ಇದೀಗ ಮೂರನೇ ದಿನದ ಪ್ರದರ್ಶನದ ಹೊತ್ತಿಗೆ ಹೆಚ್ಚು ಪ್ರದರ್ಶನಗಳನ್ನು ಪಡೆದುಕೊಂಡ ಚಿತ್ರಗಳ ಪೈಕಿ ಎರಡನೇ ಸ್ಥಾನಕ್ಕೆ ಕುಸಿದಿದೆ. ಇದನ್ನೂ ಓದಿ: annada Recipe: ಚಪಾತಿಯು ಮೃದುವಾಗಿ ಬರಬೇಕು ಎಂದರೆ ಏನು ಮಾಡಬೇಕು ಗೊತ್ತೇ?? ಗಟ್ಟಿ ಚಪಾತಿ ಬಿಡಿ, ಮೃದುವಾಗಿ ಮಾಡಿ.

ಬೆಂಗಳೂರು ನಗರದಲ್ಲಿ ಅತಿ ಹೆಚ್ಚು ಪ್ರದರ್ಶನ ಪಡೆದುಕೊಂಡ ಈ ಮೂರು ಚಿತ್ರಗಳು ನೇರ ನೇರ ಪೈಪೋಟಿ ನಡೆಸುತ್ತಿವೆ. ಬೆಂಗಳೂರಿನಲ್ಲಿ ಪಠಾಣ್ ಸಿನಿಮಾ ಬಿಡುಗಡೆಯಾದ ದಿನದಿಂದಲೇ 581 ಪ್ರದರ್ಶನಗಳನ್ನ ಕಂಡಿದೆ. ಆದರೆ ದರ್ಶನ್ ಅವರ ಕ್ರಾಂತಿ ಸಿನಿಮಾ 559 ಪ್ರದರ್ಶನಗಳನ್ನು ಕಂಡಿದೆ. ಇನ್ನು ಗಾಂಧಿ ಗೋಡ್ಸೆ ಏಕ್ ಯುದ್ದ್ ಸಿನಿಮಾ 61 ಪ್ರದರ್ಶನಗಳನ್ನು ಕಂಡಿತ್ತು. ಇದನ್ನೂ ಓದಿ: Ratha saptami:ಇಂದಿನ ರಥ ಸಪ್ತಮಿಯ ದಿನ ನೀವು ಹೀಗೆ ಮಾಡಿದ್ರೆ ಮತ್ತೆ ನಿಮ್ಮ ಕೈಗೆ ದುಡ್ಡು ಬರೋದು ನಿಲ್ಲೋದೇ ಇಲ್ಲ; ಏನು ಮಾಡಬೇಕು ಗೊತ್ತೇ?

ಕ್ರಾಂತಿ ಸಿನಿಮಾ ಬಿಡುಗಡೆ ಆದ ದಿನ ಬೆಂಗಳೂರಿನಲ್ಲಿ 680 ಪ್ರದರ್ಶನವನ್ನು ಕಂಡಿತ್ತು. ಆ ದಿನ ಪಠಾಣ್ ಸಿನಿಮಾಕ್ಕೆ 541 ಪ್ರದರ್ಶನಗಳು ಸಿಕ್ಕಿದ್ದವು. ಎರಡನೇ ದಿನಕ್ಕೆ 583 ಪ್ರದರ್ಶನಗಳನ್ನ ಕ್ರಾಂತಿ ಸಿನಿಮ ಪಡೆದುಕೊಂಡರೆ 563 ಪ್ರದರ್ಶನವನ್ನ ಪಠಾಣ್ ಸಿನಿಮಾ ಪಡೆದುಕೊಂಡಿದೆ. ಮೊದಲನೆಯ ದಿನಕ್ಕಿಂತ 2ನೇ ದಿನಕ್ಕೆ ಪ್ರದರ್ಶನದಲ್ಲಿ ಇಳಿತ ಕಂಡಿದೆ ಕ್ರಾಂತಿ ಆದರೆ ಪಟ್ಟಣ ಸಿನಿಮಾಕ್ಕಿಂತ ಹೆಚ್ಚಿನ ಪ್ರದರ್ಶನ ಕಂಡಿದೆ ಎನ್ನುವುದಷ್ಟೇ ಸಮಾಧಾನ. ಆದರೂ ಮೂರನೇ ದಿನದ ಹೊತ್ತಿಗೆ 24 ಪ್ರದರ್ಶನಗಳಲ್ಲಿ ಕಡಿತ ಕಂಡಿರುವ ಕ್ರಾಂತಿ ಸಿನಿಮಾ ಪಠಾಣ್ ಗಿಂತಲೂ ಕಡಿಮೆ ಪ್ರದರ್ಶನ ಕಂಡಿದೆ. ಆನ್ಲೈನ್ ಬುಕಿಂಗ್ ನಲ್ಲಿಯೂ ಪಠಾಣ್ ಸಿನಿಮಾವೇ ಮೊದಲ ಸ್ಥಾನದಲ್ಲಿ ನಿಂತಿದೆ.

ಅದೇ ರೀತಿ ಮೈಸೂರಿನಲ್ಲಿಯೂ ಕ್ರಾಂತಿ ಸಿನಿಮಾ 75 ಪ್ರದರ್ಶನಗಳನ್ನ ಕಂಡಿದ್ದರೆ ಪಠಾಣ್ ಸಿನಿಮಾ 54 ಪ್ರದರ್ಶನವನ್ನು ಕಂಡಿತ್ತು. ವಾರದ ಅಂತ್ಯದಲ್ಲಿ ಕ್ರಾಂತಿ ಸಿನಿಮಾದ ಕಲೆಕ್ಷನ್ ಎಷ್ಟಾಗುತ್ತೆ ನೋಡಬೇಕಿದೆ.

Comments are closed.