Political News: ಈ ಕೂಡಲೇ ಗೋಹತ್ಯೆ ನಿಷೇದ ಕಾಯ್ದೆಯನ್ನು ಹಿಂಪಡೆಯಿರಿ ಎಂದ ಸಿದ್ದು: ನೀಡಿದ ಕಾರಣ ಏನು ಗೊತ್ತೇ?? ಯಾಕೆ ಹಿಂಪಡೆಯ ಬೇಕಂತೆ ಗೊತ್ತೆ??

Political News: ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಎಲೆಕ್ಷನ್ ಪ್ರಚಾರ ಜೋರಾಗಿದೆ. ಒಂದಿಷ್ಟು ಭರವಸೆಗಳ ಪ್ರಣಾಳಿಕೆಗಳ ಜೊತೆ ಆಡಳಿತ ಪಕ್ಷಕ್ಕೆ ಬಯ್ಯುತ್ತಾ ಸಿದ್ದು ಮೆರವಣಿಗೆ ಸಾಗಿದೆ. ಇನ್ನು ಭಾಷಣ ಮಾಡುವಾಗ ಇತ್ತಿಚೀಗೆ ಗೋ ಹತ್ಯೆ ನಿಷೇಧ ಕಾಯಿದೆಯನ್ನೇ ಹಿಂಪಡೆಯಿರಿ ಎಂದು ಹೇಳುತ್ತಾ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಕೋಮುವಾದಿ ಉದ್ದೇಶದಿಂದ ಗೊಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೆ ತರಲಾಗಿದೆ ಎಂದು ಗುಡುಗಿದ್ದಾರೆ.

ನಿನ್ನೆ ವಿಧಾನ ಸಭೆಯಲ್ಲಿ ಮಾತನಾಡಿದ ಸಿದ್ಧರಾಮಯ್ಯ ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ನಿನ್ನೆ ವಿಧಾನಸಭೆಯಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಕುರಿತು ಸಿದ್ದರಾಮಯ್ಯ ಮಾತನಾಡಿದರು. ಈ ಸಂದರ್ಭದಲ್ಲಿ ಪಶುಸಂಗೋಪನಾ ಇಲಾಖೆಯ ನಿರ್ದೇಶಕರು 2019ರಲ್ಲಿ ಒಂದು ಕೋಟಿ 29 ಲಕ್ಷ ಜಾನುವಾರುಗಳು ಇದ್ದು, 2022ರಲ್ಲಿ ಒಂದು ಕೋಟಿ 14 ಲಕ್ಷ ಜಾನುವಾರಗಳಿವೆ ಎಂದು ಮಾಹಿತಿ ನೀಡಿದ್ದಾರೆ, ಹಾಗಾದರೆ ಮೂರು ವರ್ಷಗಳಲ್ಲಿ 15 ಲಕ್ಷ ಜಾನುವಾರುಗಳು ಕಾಣೆಯಾಗಿವೆ ಎಂದರೆ ನಂಬೋದಕ್ಕೆ ಸಾಧ್ಯಾನಾ ಅಂತ ಪ್ರಶ್ನೆ ಮಾಡಿದ್ದಾರೆ.

 ಗೋಹತ್ಯೆ ನಿಷೇದ ಮಾಡಿದ ಸರ್ಕಾರ, ಗೋಶಾಲೆ ತೆರೆದು ಗೋಸಂಪತ್ತು ಅಭಿವೃದ್ಧಿ ಮಾಡುತ್ತೇವೆ ಎಂದಿತ್ತು, ಎಲ್ಲಿ ಅಭಿವೃದ್ಧಿಯಾಗಿದೆ. ರೈತರಿಗೆ ಗೋವು ಸಾಕಲು ದಿನಕ್ಕೆ 17 ರೂ. ಸರ್ಕಾರ ಕೊದತ್ತೆ. ಆದರೆ ಅದರ ಮೇವಿಗೆ ಕನಿಷ್ಠ 60 ರೂ. ಗಳು ಬೇಕು. ಗೋಹತ್ಯೆ ನಿಷೇಧ ಕಾಯ್ದೆ ಇರುವುದರಿಂದ ವಯಸ್ಸಾದ, ರೋಗ ಬಂದಿರುವ, ಉಳುಮೆ ಮಾಡಲು ಸಾಧ್ಯವಾಗದ ಜಾನುವಾರುಗಳನ್ನು ಯಾರು ಖರೀದಿಸುವುದಿಲ್ಲ. ಹಾಗಾಗಿ ಆ ಗೋವುಗಳನ್ನು ಕಾಡಿಗೆ ಬಿಟ್ಟು ಬರುವಂತಾಗಿದೆ. ಎಂದರು.

ಇನ್ನು ಗೋವುಗಳಿಗೆ ಚರ್ಮಗಂಟು ರೋಗ ಬಂದಿದೆ, ಕಳೆದ ಅಧಿವೇಶನದಲ್ಲಿ ಜಾನುವಾರುಗಳಿಗೆ ಲಸಿಕೆ ಹಾಕಿಸುವುದಾಗಿ ಹೇಳಿದ್ದರು, ಆದರೂ ಈ ವರೆಗೆ 1 ಕೋಟಿ ಜಾನುವಾರುಗಳಿಗೆ ಮಾತ್ರ ಲಸಿಕೆ ಹಾಕಿದ್ದೇವೆ ಎಂದು ತಿಳಿಸಲಾಗಿದೆ. ಇನ್ನು 14 ಲಕ್ಷ ಜಾನುವಾರುಗಳಿಗೆ ಲಸಿಕೆ ಹಾಕಿಲ್ಲ. ಈ ರೋಗದಿಂದ ಎತ್ತುಗಳು, ಎಮ್ಮೆಗಳು, ಹಸುಗಳು ಸುತ್ತಹೋಗಿವೆ, ಅದಕ್ಕೆ ಪರಿಹಾರ ನೀಡಿಲ್ಲ, ಹಾಲಿನ ಉತ್ಪಾದನೆ ಕೂಡ ಇಳಿಕೆಯಾಗಿದೆ. ಹಾಗಾಗಿ ಗೋಹತ್ಯೆ ನಿಷೇಧ ಸರ್ಕಾರದ ತಪ್ಪು ನಿರ್ಧಾರ, ಬೇಜವಾಬ್ದಾರಿತನ ಎಂದು ನಾನು ಘಂಟಾಘೋಷವಾಗಿ ಹೇಳುತ್ತೇನೆ ಎಂದು ಸಿದ್ದು ಸರ್ಕಾರದ ವಿರುದ್ಧ ಟೀಕೆ ಮಾಡಿದ್ದಾರೆ.  

Comments are closed.