Bollywood: 40 ವರ್ಷಕ್ಕಿಂತ ವಯಸ್ಸು ಜಾಸ್ತಿ ಆಗಿದ್ರು ಕೂಡ, ಈ ನಟಿಮಣಿಯರು ಇನ್ನು ಮದುವೆಯಾಗಿಲ್ಲ. ಒಬ್ಬೊಬ್ಬರು ಹೇಗಿದ್ದಾರೆ ಗೊತ್ತೇ??

Bollywood: ಚಿತ್ರರಂಗದಲ್ಲಿರುವ ನಾಯಕಿಯರು ಮದುವೆ ಎಂದರೆ ಬಹಳಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿರುತ್ತಾರೆ. ತಾವು ಮದುವೆ ಆಗುವ ಹುಡುಗ ಹೀಗಿರಬೇಕು, ಹಾಗಿರಬೇಕು, ಮದುವೆ ಹೀಗೆ ನಡೆಯಬೇಕು ಎಂದು ಕನಸು ಕಟ್ಟಿಕೊಂಡಿರುತ್ತಾರೆ. ಮದುವೆ ಎಲ್ಲರಿಗೂ ಸ್ಪೆಶಲ್, ಆದರೆ ಕೆಲವು ನಟಿಯರು ಅನೇಕ ಕಾರಣಗಳಿಂದ ಮದುವೆಯಾಗದೆ ಹಾಗೆಯೇ ಉಳಿದುಬಿಟ್ಟಿರುತ್ತಾರೆ, ಹೀಗೆ ವಯಸ್ಸು 40 ದಾಟಿದ್ದರು ಇನ್ನು ಮದುವೆಯಾಗದ ಕೆಲವು ಬಾಲಿವುಡ್ ನಟಿಯರು ಇದ್ದಾರೆ. ಆ ನಟಿಯರು ಯಾರ್ಯಾರು ಗೊತ್ತಾ? ಈಗಲೂ ಎಷ್ಟು ಸುಂದರವಾಗಿದ್ದಾರೆ ಗೊತ್ತಾ? ತಿಳಿಸುತ್ತೇವೆ ನೋಡಿ.. ಇದನ್ನೂ ಓದಿ: Actor Vinod Raj Family: ರಾಜ್ಯವೇ ಗಡ ಗಡ ನಡುಗುವ ಸುದ್ದಿ ಬಿಚ್ಚಿಟ್ಟ ನಿರ್ದೇಶಕ; ವಿನೋದ್ ರಾಜ್ ಗೆ ಬೆಳೆದ ಮಗ, ಹಾಗೂ ಹೆಂಡತಿ ಇದ್ದಾರೆಯೇ? ಸತ್ಯ ತಿಳಿದರೆ, ಊಟ ಮಾಡೋದೇ ಬಿಡ್ತೀರಾ.

ಸುಶ್ಮಿತಾ ಸೇನ್ :- ಇವರು ಮಾಜಿ ವಿಶ್ವಸುಂದರಿ, ಸುಶ್ಮಿತಾ ಸೇನ್ ಅವರಿಗೆ ಈಗ 47 ವರ್ಷ, ಇಂದಿಗೂ ತಮ್ಮ ಸೌಂದರ್ಯದ ಮೂಲಕ ಸದ್ದು ಮಾಡುತ್ತಾರೆ. ಚಿತ್ರರಂಗದಿಂದ ದೂರ ಉಳಿದಿರುವ ನಟಿ ಸುಶ್ಮಿತಾ ಅವರ ಹೆಸರು ಕೆಲವು ಹೀರೋಗಳ ಜೊತೆಗೆ ತಳುಕು ಹಾಕಿಕೊಂಡಿತ್ತು, ತಮಗಿಂತ 20 ವರ್ಷ ಚಿಕ್ಕವರಾದ ನಟಿ ರೋಷ್ಮನ್ ಶಾಲ್ ಅವರೊಡನೆ ರಿಲೇಶನ್ಶಿಪ್ ನಲ್ಲಿದ್ದ ಸುಶ್ಮಿತಾ ಸೇನ್ ಅವರು, ಕೆಲ ಸಮಯದ ಹಿಂದೆ ಲಲಿತ್ ಮೋದಿ ಅವರೊಡನೆ ರಿಲೇಶನ್ಶಿಪ್ ನಲ್ಲಿದ್ದು ಸುದ್ದಿಯಾಗಿದ್ದರು. ಆದರೆ ಇಂದಿಗೂ ಮದುವೆಯಾಗದೆ ಸಿಂಗಲ್ ಆಗಿದ್ದಾರೆ.

ತನಿಶಾ :- ಇವರು ನಟಿ ಕಾಜೋಲ್ ಅವರ ತಂಗಿ, ತನಿಷಾ ಅವರಿಗೆ ಈಗ 45 ವರ್ಷ. ಅಕ್ಕನ ಹಾಗೆ ಇವರು ಹೆಚ್ಚಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿಲ್ಲ. ಆದರೆ ತನಿಶಾ ಅವರು ಇಂದಿಗೂ ಇನ್ನು ಮದುವೆಯಾಗಿಲ್ಲ. ತಮಗೆ ಇಷ್ಟ ಆಗುವಂತಹ ಹುಡುಗ ಇನ್ನು ಸಿಕ್ಕಿಲ್ಲದ ಕಾರಣ ಮದುವೆ ಆಗಿಲ್ಲ ಎನ್ನುತ್ತಾರೆ. ತಡವಾಗಿ ಮದುವೆಯಾದರೆ ತೊಂದರೆ ಆಗಬಾರದು ಎನ್ನುವ ಕಾರಣಕ್ಕೆ, ತಮ್ಮ ಎಗ್ಸ್ ಅನ್ನು ಫ್ರೀಜ್ ಮಾಡಿ ಇಟ್ಟಿದ್ದಾರೆ.

ಶಮಿತಾ ಶೆಟ್ಟಿ :- ಇವರು ಖ್ಯಾತ ನಟಿ ಶಿಲ್ಪಾ ಶೆಟ್ಟಿ ಅವರ ತಂಗಿ, ಶಮಿತಾ ಅವರಿಗೆ ಈಗ 45 ವರ್ಷ. ಇನ್ನು ಇವರಿಗೂ ಕೂಡ ಮದುವೆಯಾಗಿಲ್ಲ. ಬಿಗ್ ಬಾಸ್ ಓಟಿಟಿ ಶೋಗೆ ಬಂದಿದ್ದಾಗ, ನಟ ರಾಕೇಶ್ ಬಾಪತ್ ಅವರೊಡನೆ ಅನ್ಯೋನ್ಯವಾಗಿದ್ದು ಸುದ್ದಿಯಾಗಿದ್ದರು. ಈ ಹಿಂದೆ ಅವರಿಗೆ ಸಂಬಂಧಗಳನ್ನು ನೋಡಿ, ಅವುಗಳು ಸಕ್ಸಸ್ ಆಗಲಿಲ್ಲ. ಹಾಗಾಗಿ ಶಮಿತಾ ಅವರು ಇನ್ನು ಮದುವೆಯಾಗಿಲ್ಲ. ಇದನ್ನೂ ಓದಿ: IRCTC Recruitment: ಬಿಗ್ ನ್ಯೂಸ್: ಯಾವುದೇ ಪರೀಕ್ಷೆ ಇಲ್ಲದೆ ಕಡಿಮೆ ಓದಿದ್ದರೂ, ನೇರವಾಗಿ ಉದ್ಯೋಗಿಗಳನ್ನು ಆಯ್ಕೆ ಮಾಡಲು ಮುಂದಾದ ರೈಲ್ವೆ ಇಲಾಖೆ: ಅರ್ಜಿ ಸಲ್ಲಿಸುವುದು ಹೇಗೆ ಗೊತ್ತೇ?

ತಬು :- 90ರ ದಶಕದ ಸ್ಟಾರ್ ನಟಿ, ಬಾಲಿವುಡ್ ಮತ್ತು ಟಾಲಿವುಡ್ ಎರಡು ಕಡೆ ಸಕ್ರಿಯವಾಗಿದ್ದ ನಟಿ ತಬು ಅವರಿಗೆ ಈಗ 52ವರ್ಷ. ಆದರೆ ತಬು ಅವರು ಇಂದಿಗೂ ಮದುವೆಯಾಗಿಲ್ಲ. ತಮಗೆ ಪರ್ಫೆಕ್ಟ್ ಸಿಕ್ಕಿಲ್ಲದ ಕಾರಣ ಇನ್ನು ಮದುವೆಯಾಗಿಲ್ಲ ಎಂದು ನಟಿ ತಬು ಹೇಳಿದ್ದರು. ತೆಲುಗು ಚಿತ್ರರಂಗದ ಖ್ಯಾತ ನಟ ನಾಗಾರ್ಜುನ ಅವರೊಡನೆ ತಬು ಅವರ ಹೆಸರು ಕೇಳಿಬಂದಿತ್ತು.

ಅಮಿಷಾ ಪಟೇಲ್ :- ನಟಿ ಅಮಿಷಾ ಪಟೇಲ್ ಅವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು ಸೂಪರ್ ಹಿಟ್ ಆದ ಕಹೋನಾ ಪ್ಯಾರ್ ಹೈ ಸಿನಿಮಾ ಮೂಲಕ, ಈಗ ಇವರಿಗೆ 47 ವರ್ಷ. ಆಫರ್ ಅಮಿಷಾ ಅವರಿಗೆ ಮದುವೆಯಾಗಿಲ್ಲ. ಸಿನಿಮಾ ನಿರ್ಮಾಪಕ ವಿಕ್ರಂ ಭಟ್ ಅವರ ಜೊತೆಗೆ ಅಮಿಷಾ ಅವರ ಹೆಸರು ಕೇಳಿಬಂದಿತ್ತು, ಆದರೆ ಇಬ್ಬರ ನಡುವೆ ಬ್ರೇಕಪ್ ಆಯಿತು. ಆಮಿಷ ಅವರು ಇನ್ನು ಸಿಂಗಲ್ ಆಗಿದ್ದಾರೆ. ಇದನ್ನೂ ಓದಿ: Business Idea: ಒಮ್ಮೆ 850 ರೂಪಾಯಿ ಹಾಕಿದರೆ ಸಾಕು, ತಿಂಗಳಿಗೆ 30 ಸಾವಿರ ಖಚಿತ ಆದಾಯ ಕೊಡುವ ಬಿಸಿನೆಸ್ ಯಾವುದು ಗೊತ್ತೇ??

Comments are closed.