Temple: ಈ ಸ್ಥಳದಲ್ಲಿ ಮಹಿಳೆಯರ ಸ್ತನಗಳಿಗೆ ನಡೆಯುತ್ತೆ ನಿತ್ಯ ಪೂಜೆ: ಈ ವಿಶಿಷ್ಟ ಪದ್ದತಿಯಿಂದ ನಡೆಯುತ್ತೆ ಪವಾಡ, ವೈದ್ಯರೂ ಇಲ್ಲಿಗೆ ಬಂದು ಹರಕೆ ಕಟ್ಟುತ್ತಾರಾ? ಈ ಸ್ಥಳ ಎಲ್ಲಿದೆ ಗೊತ್ತೇ?

Temple: ನಾವು ನಮ್ಮ ನಂಬಿಕೆಯ ಆಧಾರದ ಮೇಲೆ ನಮ್ಮ ಇಷ್ಟದ ದೇವರನ್ನ ಪೂಜೆ ಮಾಡುತ್ತೇವೆ ಆ ದೇವರಿಗೆ ಹರಕೆಯನ್ನು ಕಟ್ಟಿಕೊಳ್ಳುತ್ತೇವೆ. ಸಾಮಾನ್ಯವಾಗಿ ದೇವಾಲಯ ಅಂದಮೇಲೆ ಅಲ್ಲಿ ದೇವರ ಮೂರ್ತಿ ಆ ದೇವರಿಗೆ ಪೂಜೆ ಪುನಸ್ಕಾರಗಳು ನಡೆಯುವುದು ಸಹಜ. ಅದೆಷ್ಟೋ ಕಡೆ ದೇವರು ಎಂದ ಮಾತ್ರಕ್ಕೆ ಅಲ್ಲಿ ದೇವರ ಕಲ್ಲಿನ ಮೂರ್ತಿಯೇ ಇರಬೇಕು ಎಂದೇನು ಇಲ್ಲ ಕೆಲವು ವಿಶೇಷವಾದ ವಸ್ತುಗಳಿಗೂ ಕೂಡ ಪೂಜೆ ಮಾಡಲಾಗುತ್ತದೆ. ಇಂತಹ ಒಂದು ವಿಶಿಷ್ಟವಾದ ದೇವಾಲಯದಲ್ಲಿ  ಮಹಿಳೆಯರ ಸ್ತನಕ್ಕೆ ಪೂಜೆ ಮಾಡಲಾಗುತ್ತದೆ ಹೀಗೆ ಸ್ತನ ಪೂಜೆಗೆ ಸ್ತನಕ್ಕೆ ಸಂಬಂಧಪಟ್ಟ ಹಾಗೆ ಮಹಿಳೆಯರು ಹರಕೆ ಕಟ್ಟಿಕೊಳ್ಳುವುದಕ್ಕೂ ಕೂಡ ಕಾರಣವಿದೆ.  ಇದನ್ನೂ ಓದಿ: Kannada Serial: ಅಕ್ಕ ತಂಗಿಯರ ನಡುವೆ ನಡೆಯುತ್ತಿದೆ ಪೈಪೋಟಿ; ಭಾಗ್ಯಲಕ್ಷ್ಮಿ ಹಾಗೂ ಲಕ್ಷ್ಮಿ ಬಾರಮ್ಮ ಧಾರಾವಾಹಿಯನ್ನು ಜನರು ಜಾಸ್ತಿ ಮೆಚ್ಚಿರುವುದು ಯಾರನ್ನು ಗೊತ್ತೇ? TRP ಹೇಳೋದೇನು?

ಜಪಾನಿನಲ್ಲಿದೆ ಸ್ತನ ದೇವಾಲಯ:

ಇಲ್ಲಿ ಯಾವುದೇ ಮೂರ್ತಿ ಇಲ್ಲ ಆದರೆ ಮಹಿಳೆಯರ ಸ್ತನಗಳ ಆಕಾರ ಇರುವಂತಹ ವಸ್ತುಗಳು ಸುತ್ತಲೂ ಕಾಣಿಸುತ್ತದೆ. ವಿಶ್ವಾದ್ಯಂತ ಜಪಾನಿನ ಈ ಸ್ತನ ದೇವಾಲಯ ಪ್ರಸಿದ್ಧಿ ಪಡೆದುಕೊಂಡಿದೆ. ಇಲ್ಲಿಗೆ ಬಂದು ಪೂಜೆ ಮಾಡಿ ಹರಕೆ ಸಲ್ಲಿಸಿದರೆ ಸ್ತನ ಕ್ಯಾನ್ಸರ್ ಇರುವ ಮಹಿಳೆಯರು ಗುಣಮುಖರಾಗುತ್ತಾರೆ ಎನ್ನುವ ಪ್ರತಿತಿ ಇದೆ. ಹಾಗಾಗಿ ಇಲ್ಲಿ ಹತ್ತಿ ಹಾಗೂ ಬಟ್ಟೆಯಿಂದ ಮಾಡಿದ ಸ್ತನಗಳನ್ನು ಹರಕೆಯಾಗಿ ಸಲ್ಲಿಸಬಹುದು. ಬೇರೆ ಬೇರೆ ಪ್ರದೇಶಗಳಿಂದ ಬೇರೆ ಬೇರೆ ಊರುಗಳಿಂದ ಮಹಿಳೆಯರು ಇಲ್ಲಿಗೆ ಬರುತ್ತಾರೆ. ಕ್ಯಾನ್ಸರ್ ನಿಂದ ಮುಕ್ತಿ ಪಡೆಯುವುದಕ್ಕಾಗಿ ಸುರಕ್ಷಿತ ಗರ್ಭಧಾರಣೆಗಾಗಿ ಇಲ್ಲಿಗೆ ಬಂದು ಪೂಜೆ ಮಾಡುತ್ತಾರೆ. ಇದನ್ನೂ ಓದಿ: Akshaya Tritiya:ಚಿನ್ನದಂತ ಸಂಸಾರಕ್ಕೆ ಚಿನ್ನವೆ ಬೇಕಿಲ್ಲ, ಇದೇ ಬರುವ ಅಕ್ಷಯ ತೃತೀಯ ದಿನದಂದು ಇದೊಂದು ಕೆಲಸ ಮಾಡಿದರೆ ಸಾಕು ಗಂಡ ಹೆಂಡತಿ ಹೇಗೆ ಇರ್ತಾರೆ ಗೊತ್ತಾ?

ದೇವಾಲಯದ ಇತಿಹಾಸ:

ಈ ಹಿಂದೆ ಜಪಾನಿನ ವೈದ್ಯರೊಬ್ಬರು ಸ್ತನ ಕ್ಯಾನ್ಸರ್ ಇಂದ ಬಳಲುತ್ತಿದ್ದ ರೋಗಿಯನ್ನ ರಕ್ಷಿಸುವಂತೆ ಇಲ್ಲಿಗೆ ಬಂದು ಹರಕೆ ಹೊತ್ತಿದ್ದರಂತೆ. ಇದರ ಪರಿಣಾಮವಾಗಿ ಆ ರೋಗಿ ಸ್ತನ ಕ್ಯಾನ್ಸರ್ ಇಂದ ಗುಣಮುಖರಾಗದಂತೆ. ಈ ಕಾರಣಕ್ಕಾಗಿ ದೇವಾಲಯ ಹೆಚ್ಚು ಪ್ರಸಿದ್ಧಿಯನ್ನು ಪಡೆದುಕೊಂಡಿದೆ. 1492ರಲ್ಲಿ ಮೌಂಟ್ ಕೋಮಾಯಿಯಲ್ಲಿ ಈ ದೇವಾಲಯವನ್ನು ಸ್ಥಾಪಿಸಲಾಗಿತ್ತು. 16ನೇ ಶತಮಾನದಲ್ಲಿ ಸಮುರಾಯ ಲಾರ್ಡ್ ಓಡಾ ನೋಬುನಾಗ ಅವರ ಆಜ್ಞೆಯ ಮೇರೆಗೆ ದೇವಾಲಯವನ್ನು ಸ್ಥಳಾಂತರಿಸಲಾಯಿತು. ಈಗ ಮಮ್ಮ ಕಣ್ಣೋನ್ ಎಂದೇ ಪ್ರಸಿದ್ಧವಾಗಿದೆ.

ಇನ್ನು 1665ರಲ್ಲಿ ತನ್ನ ಮಗುವಿಗೆ ಸ್ತನ್ಯಪಾನ ಮಾಡಲು ಸಾಧ್ಯವಾಗದೆ ಮಹಿಳೆ ಒಬ್ಬಳು ಈ ದೇವಾಲಯಕ್ಕೆ ಬಂದು ಕಣ್ಣೀರಿಟ್ಟು ಪ್ರಾರ್ಥಿಸುತ್ತಾಳೆ. ಆಗ ಆಕೆಗೆ ಮಗುವಿಗೆ ಹಾಲುಣಿಸಲು ಸಾಧ್ಯವಾಗುತ್ತದೆ. ಹಾಗಾಗಿ ಈ ದೇವಾಲಯಕ್ಕೆ ಸಾಕಷ್ಟು ಮಹಿಳೆಯರು ಬಂದು ತಮ್ಮ ಯೋಗ ಕ್ಷೇಮಕ್ಕಾಗಿ ಆರೋಗ್ಯಕ್ಕಾಗಿ ಹರಕೆ ಕಟ್ಟಿಕೊಳ್ಳುತ್ತಾರೆ. ಅದರಲ್ಲೂ ಸ್ತನ ಕ್ಯಾನ್ಸರ್ ಇರುವ ಮಹಿಳೆಯರು ಇಲ್ಲಿಗೆ ಬಂದು ಬೇಡಿಕೊಂಡರೆ ಅವರ ರೋಗ ಗುಣಮುಖವಾಗುತ್ತದೆ ಎನ್ನುವ ನಂಬಿಕೆ ಇದೆ. ಇದನ್ನೂ ಓದಿ: IRCTC Recruitment: ಬಿಗ್ ನ್ಯೂಸ್: ಯಾವುದೇ ಪರೀಕ್ಷೆ ಇಲ್ಲದೆ ಕಡಿಮೆ ಓದಿದ್ದರೂ, ನೇರವಾಗಿ ಉದ್ಯೋಗಿಗಳನ್ನು ಆಯ್ಕೆ ಮಾಡಲು ಮುಂದಾದ ರೈಲ್ವೆ ಇಲಾಖೆ: ಅರ್ಜಿ ಸಲ್ಲಿಸುವುದು ಹೇಗೆ ಗೊತ್ತೇ?

Comments are closed.