Kannada Serial: ಅಕ್ಕ ತಂಗಿಯರ ನಡುವೆ ನಡೆಯುತ್ತಿದೆ ಪೈಪೋಟಿ; ಭಾಗ್ಯಲಕ್ಷ್ಮಿ ಹಾಗೂ ಲಕ್ಷ್ಮಿ ಬಾರಮ್ಮ ಧಾರಾವಾಹಿಯನ್ನು ಜನರು ಜಾಸ್ತಿ ಮೆಚ್ಚಿರುವುದು ಯಾರನ್ನು ಗೊತ್ತೇ? TRP ಹೇಳೋದೇನು?

Kannada Serial: ಸದ್ಯ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಈ ಅಕ್ಕ ತಂಗಿಯರ ಸ್ಟೋರಿ ಹೆಚ್ಚು TRP ಗಳಿಸಿಕೊಂಡಿದೆ.  ಭಾಗ್ಯಲಕ್ಷ್ಮಿ ಮತ್ತು  ಲಕ್ಷ್ಮಿ ಬಾರಮ್ಮ ಎರಡು ಧಾರಾವಾಹಿಗಳು ಒಂದೇ ಕಥೆ ಆಗಿದ್ದರು ಕೂಡ ಎರಡು ಎಪಿಸೋಡ್ಗಳಾಗಿ ಪ್ರಸಾರವಾಗುತ್ತಿದೆ. ಭಾಗ್ಯಲಕ್ಷ್ಮಿ ಧಾರಾವಾಹಿ ಆರಂಭವಾದ ಸಮಯದಲ್ಲಿ 40 ನಿಮಿಷಗಳ ಕಾಲ ಪ್ರಸಾರವಾಗುತ್ತಿತ್ತು. ಅದನ್ನು 20 20 ನಿಮಿಷಗಳಿಗೆ ವಿಭಜಿಸಿ ಭಾಗ್ಯಲಕ್ಷ್ಮಿ ಹಾಗೂ ಲಕ್ಷ್ಮಿ ಬಾರಮ್ಮ ಎನ್ನುವ ಎರಡು ಧಾರಾವಾಹಿಯನ್ನಾಗಿ ಮಾಡಲಾಯಿತು. ಇದನ್ನೂ ಓದಿ: Akshaya Tritiya:ಚಿನ್ನದಂತ ಸಂಸಾರಕ್ಕೆ ಚಿನ್ನವೆ ಬೇಕಿಲ್ಲ, ಇದೇ ಬರುವ ಅಕ್ಷಯ ತೃತೀಯ ದಿನದಂದು ಇದೊಂದು ಕೆಲಸ ಮಾಡಿದರೆ ಸಾಕು ಗಂಡ ಹೆಂಡತಿ ಹೇಗೆ ಇರ್ತಾರೆ ಗೊತ್ತಾ?

ಭಾಗ್ಯಲಕ್ಷ್ಮಿ ಯಲ್ಲಿ ಅಕ್ಕನ ಕಥೆ ಹಾಗೂ ಲಕ್ಷ್ಮೀ ಬಾರಮ್ಮದಲ್ಲಿ ತಂಗಿಯ ಕಥೆ ಹೆಚ್ಚಾಗಿ ಪ್ರಸಾರವಾಗುತ್ತಿತ್ತು. ಲಕ್ಷ್ಮಿ ಬಾರಮ್ಮ ಧಾರವಾಹಿ ಟಿ ಆರ್ ಪಿ ಹೆಚ್ಚಿದೆ. ವೈಷ್ಣವ್ ಹಾಗೂ ಲಕ್ಷ್ಮಿಯ ಕಥೆಯನ್ನು ಜನರು ಇಷ್ಟಪಡುತ್ತಿದ್ದಾರೆ.

ಲಕ್ಷ್ಮಿ ಬಾರಮ್ಮದ ಲಕ್ಷ್ಮಿ:

ಈ ಹಿಂದೆ ಲಕ್ಷ್ಮಿ ಬಾರಮ್ಮ ಎನ್ನುವ ಧಾರವಾಹಿ ತುಂಬಾನೇ ಫೇಮಸ್ ಆಗಿತ್ತು. ಇದೀಗ ಲಕ್ಷ್ಮಿ ಬಾರಮ್ಮ ಕಥೆಯನ್ನು ಮಾತ್ರ ಬದಲಾಯಿಸಿ ಅದೇ ಹೆಸರಿನಲ್ಲಿ ಮತ್ತೆ ಪ್ರಸಾರ ಮಾಡಲಾಗುತ್ತಿದೆ. ಲಕ್ಷ್ಮೀ ಬಾರಮ್ಮ ಭಾಗ್ಯಲಕ್ಷ್ಮಿ ಎಪಿಸೋಡ್ ಮುಗಿದ ನಂತರ ಪ್ರಸಾರವಾಗುತ್ತದೆ. ಭಾಗ್ಯಲಕ್ಷ್ಮಿ ಹಾಗೂ ಲಕ್ಷ್ಮಿ ಬಾರಮ್ಮ ಎರಡು ಧಾರಾವಾಹಿಗಳು ಒಂದಕ್ಕೊಂದು ಕನೆಕ್ಟ್ ಆಗಿದೆ ನೀವು ಒಂದನ್ನು ಮಿಸ್ ಮಾಡಿದ್ರೆ ಇನ್ನೊಂದರಲ್ಲಿ ಆ ಕಥೆಯ ಮುಂದುವರಿದ ಭಾಗ ಇರುತ್ತೆ ಹಾಗಾಗಿ ಕನ್ಫ್ಯೂಸ್ ಆಗಬಹುದು. ಇದನ್ನೂ ಓದಿ: Bollywood: 40 ವರ್ಷಕ್ಕಿಂತ ವಯಸ್ಸು ಜಾಸ್ತಿ ಆಗಿದ್ರು ಕೂಡ, ಈ ನಟಿಮಣಿಯರು ಇನ್ನು ಮದುವೆಯಾಗಿಲ್ಲ. ಒಬ್ಬೊಬ್ಬರು ಹೇಗಿದ್ದಾರೆ ಗೊತ್ತೇ??

ಯಾವುದಕ್ಕೆ ಟಿಆರ್ ಪಿ ಜಾಸ್ತಿ?

ಲಕ್ಷ್ಮೀ ಬಾರಮ್ಮ ಭಾಗ್ಯಲಕ್ಷ್ಮಿಗಿಂತ ಹೆಚ್ಚು ಟಿ ಆರ್ ಪಿ ಪಡೆದುಕೊಂಡಿದೆ ಲಕ್ಷ್ಮಿಯ ಗುಣ ವೈಷ್ಣವಿಗೆ ಇಷ್ಟವಾಗುತ್ತಿದೆ ಇವರಿಬ್ಬರ ನಡುವೆ ಪ್ರೀತಿ ಚಿಗುರೊಡೆಯಬಹುದು ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಆದರೆ ವೈಷ್ಣವ ತಾಯಿ ಮಾತ್ರ ಮಗ ಎಲ್ಲಿ ಹೆಂಡತಿಗೆ ಹತ್ತಿರವಾಗಿ ತನ್ನನ್ನು ದೂರ ಮಾಡುತ್ತಾನೋ ಎನ್ನುವ ಭಯದಲ್ಲಿಯೇ ಜೀವನ ಮಾಡುವಂತೆ ಆಗಿದೆ. ಅಷ್ಟೇ ಅಲ್ಲದೆ ಕೀರ್ತಿ ಕೂಡ ಮತ್ತೆ ಎಂಟ್ರಿ ಕೊಟ್ಟಿದ್ದು ಕಾವೇರಿಗೆ ಬೇಗ ಮಗನಿಗೆ ವಿಚ್ಛೇದನ ಕೊಡಿಸಿ ತನ್ನ ಜೊತೆ ಮದುವೆ ಮಾಡಿಸಿ ಎಂದು ಕಿರಿಕ್ ಮಾಡಲು ಆರಂಭಿಸಿದ್ದಾರೆ.

ಭಾಗ್ಯಲಕ್ಷ್ಮಿಯ ಭಾಗ್ಯ:

ಭಾಗ್ಯಲಕ್ಷ್ಮಿಯ ಕಥೆಯನ್ನು ನೋಡುವುದಾದರೆ ತಾಂಡವ್ ಒತ್ತಾಯದಿಂದ ಭಾಗ್ಯಳನ್ನು ಮದುವೆ ಆಗಿದ್ದಾನೆ. ಹಾಗಾಗಿ ಹೆಂಡತಿ ಇಷ್ಟ ಇಲ್ಲ ಎಂದು ತನ್ನ ಕೊಲಿಗ್ ಆಗಿರುವ ಶ್ರೇಷ್ಠ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಾನೆ. ವಿನಾಕಾರಣ ಹೆಂಡತಿಗೆ ಬಯ್ಯುವ ತಾಂಡವ ತಾಯಿಗೆ ಮಾತ್ರ ಹೆದರುತ್ತಾನೆ. ಭಾಗ್ಯ ಮತ್ತೆ ಕುಸುಮಾಳಿಗೆ ತಕ್ಕ ಸೊಸೆ ಹೊರತು ಗಂಡನಿಗೆ ತಕ್ಕ ಹೆಂಡತಿಯಲ್ಲ. ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ ಭಾಗ್ಯಳ ಗೋಳು ಜನರಿಗೆ ಸ್ವಲ್ಪ ಬೇಸರ ತರಿಸಿರಬಹುದು ಹಾಗಾಗಿ ಲಕ್ಷ್ಮಿ ಬಾರಮ್ಮ ಧಾರಾವಾಹಿಯೆ ಹೆಚ್ಚು ಟಿ ಆರ್ ಪಿ ಗಳಿಸಿಕೊಂಡಿದೆ. ಇದನ್ನೂ ಓದಿ: Father’s property: ಹೆಣ್ಣು ಮಕ್ಕಳಿಗೆ ಆಸ್ತಿ ವಿಚಾರದಲ್ಲಿ ಮಹತ್ವದ ಆದೇಶ ಹೊರಡಿಸಿದ ಕೋರ್ಟ್; ಯಾವಾಗ ಪಾಲು ಕೇಳಲು ಸಾಧ್ಯವಿಲ್ಲ ಗೊತ್ತೇ? ಯಾವಾಗ ಆಸ್ತಿ ಪಾಲು ಕೊಡಲೇಬೇಕಾಗುತ್ತದೆ ಗೊತ್ತೇ?

Comments are closed.