Father’s property: ಹೆಣ್ಣು ಮಕ್ಕಳಿಗೆ ಆಸ್ತಿ ವಿಚಾರದಲ್ಲಿ ಮಹತ್ವದ ಆದೇಶ ಹೊರಡಿಸಿದ ಕೋರ್ಟ್; ಯಾವಾಗ ಪಾಲು ಕೇಳಲು ಸಾಧ್ಯವಿಲ್ಲ ಗೊತ್ತೇ? ಯಾವಾಗ ಆಸ್ತಿ ಪಾಲು ಕೊಡಲೇಬೇಕಾಗುತ್ತದೆ ಗೊತ್ತೇ?

Father’s property: ಈಗಾಗಲೇ ತಂದೆಯ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೂ ಕೂಡ ಪಾಲು ಇದೆ ತಂದೆಯ ಆಸ್ತಿಯನ್ನು ಕೇವಲ ಗಂಡು ಮಕ್ಕಳು ಮಾತ್ರ ಅನುಭವಿಸಲು ಸಾಧ್ಯವಿಲ್ಲ ಹೆಣ್ಣುಮಕ್ಕಳಿಗೂ ಕೊಡಬೇಕು ಎನ್ನುವ ಕಾನೂನು ದೇಶದಲ್ಲಿ ಜಾರಿಯಲ್ಲಿದೆ. ಆದರೆ ತಂದೆಯ ಆಸ್ತಿ (Father’s property) ಯಲ್ಲಿ ಎಲ್ಲಾ ಹೆಣ್ಣು ಮಕ್ಕಳಿಗೂ ಪಾಲಿದೆಯಾ ಅಥವಾ ಯಾವ ಸಂದರ್ಭದಲ್ಲಿ ಮಾತ್ರ ಪಡೆದುಕೊಳ್ಳಲು ಸಾಧ್ಯ ಎಂಬುದರ ಬಗ್ಗೆ ಹಲವರಿಗೆ ಸರಿಯಾದ ಮಾಹಿತಿ ಇಲ್ಲ. ಇದನ್ನೂ ಓದಿ: Actor Vinod Raj Family: ರಾಜ್ಯವೇ ಗಡ ಗಡ ನಡುಗುವ ಸುದ್ದಿ ಬಿಚ್ಚಿಟ್ಟ ನಿರ್ದೇಶಕ; ವಿನೋದ್ ರಾಜ್ ಗೆ ಬೆಳೆದ ಮಗ, ಹಾಗೂ ಹೆಂಡತಿ ಇದ್ದಾರೆಯೇ? ಸತ್ಯ ತಿಳಿದರೆ, ಊಟ ಮಾಡೋದೇ ಬಿಡ್ತೀರಾ.

2005ರಲ್ಲಿ ಭಾರತದಲ್ಲಿ ಆಸ್ತಿ ವಿಚಾರವಾಗಿ ತಿದ್ದುಪಡಿ (Amendment) ಮಾಡಲಾಯಿತು. ಆ ತಿದ್ದುಪಡಿಯ ಪ್ರಕಾರ ಹೆಣ್ಣು ಮಕ್ಕಳಿಗೂ ತಂದೆ ಆಸ್ತಿಯಲ್ಲಿ ಸಮಾನ ಹಕ್ಕಿದೆ ಎಂದು ಆದೇಶ ಹೊರಡಿಸಲಾಗಿತ್ತು. ಈ ಆದೇಶದ ಬಗ್ಗೆ ಸರಿಯಾಗಿ ತಿಳಿದುಕೊಳ್ಳದೆ ಹಲವರು ತಂದೆಯ ಆಸ್ತಿಯಲ್ಲಿ ಪಾಲು ಬೇಕು ಎಂದು ನ್ಯಾಯಾಲಯದ ಮೊರೆ ಹೋಗಲು ಶುರು ಮಾಡಿದರು ಆದರೆ 2020ರಲ್ಲಿ ಹೊಸ ತೀರ್ಪು ಬಂದು ಈ ಗೊಂದಲಗಳು ನಿವಾರಣೆಯಾಗಿವೆ. ಹಾಗಾದ್ರೆ ಯಾವಾಗ ಹೆಣ್ಣು ಮಕ್ಕಳಿಗೆ ಆಸ್ತಿಯಲ್ಲಿ ಪಾಲು ಸಿಗುವುದಿಲ್ಲ ನೋಡೋಣ.

  • ಒಂದು ವೇಳೆ ತಂದೆಯ ಆಸ್ತಿ ಸ್ವಯಾರ್ಜಿತವಾಗಿದ್ದರೆ, ಅಂದರೆ ತಂದೆಯ ಆಸ್ತಿ ಅವರೇ ದುಡಿದು ಸಂಪಾದನೆ ಮಾಡಿದ್ದೇ ಆಗಿದ್ದರೆ ಆ ಸಂದರ್ಭದಲ್ಲಿ ಹೆಣ್ಣು ಮಕ್ಕಳನ್ನು ಬಿಟ್ಟು ತನಗೆ ಯಾರು ಇಷ್ಟವೋ ಆ ಮಕ್ಕಳಿಗೆ ಅಥವಾ ಬೇರೆ ಯಾರಿಗಾದರೂ ತಂದೆ ಆಸ್ತಿ ಬರೆದಿಟ್ಟಿದ್ದರೆ ಹೆಣ್ಣು ಮಕ್ಕಳು ಅಂತಹ ಆಸ್ತಿಯಲ್ಲಿ ಪಾಲು ಕೇಳಲು ಸಾಧ್ಯವಿಲ್ಲ. ಅದು ತಂದೆಯ ಸ್ವಂತ ಸಂಪಾದನೆ ಆಗಿದ್ದು ಅವರು ಇಷ್ಟ ಬಂದವರಿಗೆ ಆಸ್ತಿ ರಿಜಿಸ್ಟರ್ ಮಾಡಿಕೊಡಬಹುದು ಅದಕ್ಕೆ ಯಾರು ತಗಾದೆ ಎತ್ತುವಂತಿಲ್ಲ.
  • ಇನ್ನು ಪಿತ್ರಾರ್ಜಿತ ಆಸ್ತಿಯ ವಿಷಯದಲ್ಲಿ ಹೆಣ್ಣು ಮಕ್ಕಳಿಗೆ ಸಮಾನವಾದ ಹಕ್ಕಿದೆ ಆದರೆ ಹೆಣ್ಣು ಮಕ್ಕಳಿಗೆ ಮದುವೆ ಖರ್ಚಿಗೆ ಮದುವೆಯ ನಂತರದ ಖರ್ಚಿಗಾಗಿ ಹಣ ನೀಡಿದ್ದರೆ ಹೆಣ್ಣು ಮಕ್ಕಳಿಗಾಗಿ ಸಾಕಷ್ಟು ಹಣ ಖರ್ಚು ಮಾಡಿದರೆ ಆ ಸಂದರ್ಭದಲ್ಲಿಯೂ ಹೆಣ್ಣು ಮಕ್ಕಳಿಗೆ ಆಸ್ತಿ ಕೊಡಲಾಗುವುದಿಲ್ಲ.
  • ಮೂರನೆಯದಾಗಿ ಆಸ್ತಿಯನ್ನು ಹೆಣ್ಣು ಮಕ್ಕಳು ಈಗಾಗಲೇ ತನಗೆ ಬೇಡ ಎಂದು ಬರೆದು ಕೊಟ್ಟಿದ್ದರೆ ಆಸ್ತಿಯ ಬದಲಾಗಿ ಬೇರೆ ಏನಾದರೂ ಉಡುಗೊರೆ ಪಡೆದುಕೊಂಡು ಹಕ್ಕು ಬಿಡುಗಡೆ ಪತ್ರಕ್ಕೆ ಸಹಿ ಹಾಕಿದ್ದರೆ ಆಸ್ತಿಯ ಮೇಲಿನ ಹಕ್ಕನ್ನು ಕಳೆದುಕೊಳ್ಳುತ್ತಾರೆ.
  • 2005ಕ್ಕಿಂತ ಹಿಂದೆ ಅಥವಾ 2005ರ ನಂತರ ಹಕ್ಕು ಬಿಡುಗಡೆ ಪತ್ರದ ಮೂಲಕ ತಂದೆ ಮನೆಯ ಆಸ್ತಿ ಬೇಡ ಎಂದು ಬರೆದು ಕೊಟ್ಟಿದ್ದರೆ ಮತ್ತೆ ನ್ಯಾಯಾಲಯದಲ್ಲಿ ಆಸ್ತಿಗಾಗಿ ಧಾವೆ ಹುಡುವಂತಿಲ್ಲ.
  • 2005ರಲ್ಲಿಯೇ ಅಥವಾ 2005ರ ತಿದ್ದುಪಡಿಗಿಂತ ಹಿಂದೆ ಆಸ್ತಿ ಪಾಲಾಗಿದ್ದರೆ ಅಂತಹ ಸಂದರ್ಭದಲ್ಲಿಯೂ ತಂದೆಯ ಆಸ್ತಿಯ ಬಗ್ಗೆ ಪಾಲು ಕೇಳಲು ಹೆಣ್ಣು ಮಕ್ಕಳಿಗೆ ಹಕ್ಕು ಇಲ್ಲ.

ಹಾಗಾಗಿ ಕಾನೂನು ಬಂದಿದೆ ಎನ್ನುವ ಕಾರಣಕ್ಕೆ ಎಲ್ಲಾ ಹೆಣ್ಣು ಮಕ್ಕಳಿಗೂ ಎಲ್ಲಾ ಸಂದರ್ಭದಲ್ಲೂ ತಂದೆಯ ಆಸ್ತಿಯಲ್ಲಿ ಪಾಲು ಕೇಳುವ ಹಕ್ಕಿ ಇರುವುದಿಲ್ಲ ಇದನ್ನು ತಿಳಿದುಕೊಳ್ಳುವುದು ಮುಖ್ಯ. ಇದನ್ನೂ ಓದಿ: IRCTC Recruitment: ಬಿಗ್ ನ್ಯೂಸ್: ಯಾವುದೇ ಪರೀಕ್ಷೆ ಇಲ್ಲದೆ ಕಡಿಮೆ ಓದಿದ್ದರೂ, ನೇರವಾಗಿ ಉದ್ಯೋಗಿಗಳನ್ನು ಆಯ್ಕೆ ಮಾಡಲು ಮುಂದಾದ ರೈಲ್ವೆ ಇಲಾಖೆ: ಅರ್ಜಿ ಸಲ್ಲಿಸುವುದು ಹೇಗೆ ಗೊತ್ತೇ?

Comments are closed.