Kannada Film: ಕನ್ನಡಿಗರ ಮನೆ-ಮನ ಗೆದ್ದ ’ಮಗಳೇ’ ಸಿನಿಮಾ ನೋಡಿ ಕಣ್ಣೀರಿಟ್ಟ ಪ್ರೇಕ್ಷಕ; ಸಿನಿಮಾ ನೋಡಿ ಜನ ಏನಂದ್ರು ಗೊತ್ತೇ?

Kannada Film: ಮಗಳೇ… A colorful darkness’ ಟೈಟಾಲ್ ನೋಡಿದ್ರೇನೆ ಡಿಫರೆಂಟ್ ಆಗಿರುವ ಸಿನಿಮಾ ಅನ್ಣೋದು ಅರ್ಥವಾಗುತ್ತೆ. ಕನ್ನಡಾ ಸಿನಿಮಾ ಇಂಡಸ್ಟ್ರಿಯಲ್ಲಿ ಚಿತ್ರಕಥೆಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ಹಾಗಾಗಿ ಮಗಳೇ ಎನ್ನುವ ವಿಭಿನ್ನ ಸಿನಿಮಾ ಸಿನಿ ಪ್ರೇಕ್ಷಕರ ಮನಸ್ಸು ಗೆದ್ದಿದೆ.  ಅಪ್ಪ-ಮಗಳ ಪವಿತ್ರ ಬಂಧವನ್ನು ಅದ್ಭುತವಾಗಿ ಈ ಸಿನಿಮಾದಲ್ಲಿ ಸೆರೆಹಿಡಿಯಲಾಗಿದೆ.

ತಾರಾಗಣ

ಬಾಲನಟಿ ಸುಪ್ರಿತಾ ರಾಜ್‌ ಮಗಳೇ ಸಿನಿಮಾದಲ್ಲಿ ಆಧ್ಯಾ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಜಪಾನ್ ಪ್ರೊಡ್ಯೂಸರ್, ಕಲಾವಿದೆ ಕೂಡ ಈ ಸಿನಿಮಾದಲ್ಲಿದ್ದಾರೆ.  ಗುರುರಾಜ್‌ ಶೆಟ್ಟಿ, ಗೀಷ್ಮಾ ಶ್ರೀಧರ್, ಬಿಂದು ರಕ್ಷಿದಿ, ಭೀಶಣ್‌ ಶೆಟ್ಟಿ ಮೊದಲಾದ ಕಲಾವಿದರ ಪಕ್ವ ಅಭಿನಯ ಈ ಸಿನಿಮಾದ ಅಟ್ರಾಕ್ಷನ್!

ನಿರ್ದೇಶನ

ಈ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದು, ನಿರ್ದೇಶಕ ಸೋಮು ಕೆಂಗೇರಿ ಸಾರಥ್ಯದಲ್ಲಿ ಅದ್ಭುತವಾಗಿ ಮೂಡಿ ಬಂದಿರುವ ಚಿತ್ರವಾಗಿದ್ದು, ರೇನು ಸೋಮು ಅವರ ಛಾಯಾಗ್ರಹಣ ಈ ಸಿನಿಮಾಕ್ಕಿದೆ. ಪ್ರವೀಣ್‌ ಬಿಎಲ್‌, ಮ್ಯಾಕ್ಸಿನ್ ಸಯೂರಿ ಮಗಳೇ ಸಿನಿಮಾಕ್ಕೆ ಬಂಡವಾಳ ಹಾಕಿದ್ದಾರೆ.

ಸಿನಿಮಾ ನೋಡಿದ ಪ್ರೇಕ್ಷಕ ಹೇಳಿದ್ದೇನು?

ಬಹು ನಿರೀಕ್ಷೆಯ ಹೊಸಬರ ಪ್ರಯತ್ನ ಮಗಳೇ ಸಿನಿಮಾ ನಿನ್ನೆ ರಿಲೀಸ್ ಆಗಿದ್ದು, ಪ್ರೇಕ್ಷಕರ ಮನಗೆದ್ದಿದೆ. ತಂದೆ ಮಗಳ ಅನುಬಂಧ ಜನರಿಗೆ ಇಷ್ಟವಾಗಿದ್ದು, ಹೊಸ ಚಿತ್ರತಂಡದ ಈ ಪ್ರಯತ್ನಕ್ಕೆ ಪ್ರೇಕ್ಷಕ ಮೆಚ್ಚುಗೆ ಸೂಚಿಸಿದ್ದಾನೆ.

Comments are closed.