Hasta Rekha: ಅಬ್ಬಬ್ಬಾ ಕೈನಲ್ಲಿ ಈ ರೇಖೆ ಇದ್ರೆ ಆ ವ್ಯಕ್ತಿಯ ಸ್ವಭಾವ ಎಂಥದ್ದು ಗೊತ್ತಾ? ಸೆಲ್ಫ್ ಮೇಡ್ ಮ್ಯಾನ್ ಅಂದ್ರೆ ಇವರೇ ನೋಡಿ!

Hasta Rekha: ಮಣಿಬಂಧ ರೇಖೆಯಿಂದ ಶನಿಪರ್ವಕ್ಕೆ ಸಾಗಿದ ಭಾಗ್ಯರೇಖೆ. ಇವರ ಭಾಗ್ಯವನ್ನು ಇವರೇ ಬರೆದುಕೊಳ್ಳುತ್ತಾರೆ. ಸೆಲ್ಫ್ ಮೇಡ್ ಮ್ಯಾನ್ ಅಂತಾರಲ್ಲ ಹಾಗೆ. ಇವರಿಗೆ ವ್ಯಾಪಾರದಲ್ಲಿ ತೀರಾ ಆಸಕ್ತಿ. ಕಬ್ಬಿಣಕ್ಕೆ ಸಂಬಂಧ ಪಟ್ಟ ವಿಷಯಗಳು ತುಂಬಾ ಆಕರ್ಷಿತವಾಗುತ್ತವೆ. ಇವರು ಒಂದೋ ಕಂಟ್ರಾಕ್ಟರ್ ಆಗಿರುತ್ತಾರೆ ಅಥವಾ ಲಾಜಿಸ್ಟಿಕ್ಸ್ ಮತ್ತು ಟ್ರಾನ್ಸ್ಪೋರ್ಟ್ ಸಂಬಂಧಿತ ಉದ್ದಿಮೆಯಲ್ಲಿ ತೊಡಗಿಸಿಕೊಂಡಿರುತ್ತಾರೆ ಅಥವಾ ಹಾರ್ಡ್ ವೇರ್ ಅಂಗಡಿ ಹಾಕಿರುತ್ತಾರೆ. ಡಾಕ್ಟರ್ ಆಗಿದ್ದರೆ ದೊಡ್ಡ ಆಸ್ಪತ್ರೆಯನ್ನು ಕಟ್ಟಿಸಬಹುದು. ಏನಿದ್ದರೂ ಹತ್ತು ಜನರಿಗೆ ಕಂಡುಬರುವ ಒಂದು ಸ್ಥಿತಿಯನ್ನು ಹೊಂದಿರುತ್ತಾರೆ. ಇದನ್ನೂ ಓದಿ: Bank News: ಬಿಗ್ ನ್ಯೂಸ್: 8 ಬ್ಯಾಂಕ್ ಗಳನ್ನೂ ಮುಚ್ಚಲು ಆದೇಶ ನೀಡಿದ RBI: ಖಾತೆಯಲ್ಲಿ ಹಣ ಇದ್ದರೇ, ಈಗಲೇ ಹೋಗಿ ಡ್ರಾ ಮಾಡಿರಿ. ಕೊಂಚ ಮಿಸ್ ಆದರೂ…

ತುಂಬಾ ಛಲವಂತರಾದ ಇವರು ಯಾವುದೇ ಸಂದರ್ಭದಲ್ಲೂ ಸೋಲೊಪ್ಪಿಕೊಳ್ಳುವುದಿಲ್ಲ. ವ್ಯಾಪಾರ ವ್ಯವಹಾರದಲ್ಲಿ ಯಾವುದೇ ದೊಡ್ಡ ನಷ್ಟ ಸಂಭವಿಸಿದರೂ ಧೃತಿಗೆಡುವುದುದಿಲ್ಲ. ಮುನ್ನಡೆಸಿಕೊಂಡು ಹೋಗುವ ಚಾಕಚಕ್ಯತೆ ಇರುತ್ತದೆ. ರಾಜಕಾರಣಿಗಳಾಗಿದ್ದರೂ ಒಳ್ಳೆಯ ಹೆಸರು ಮಾಡಿರುತ್ತಾರೆ. ಹತ್ತಾರು ಜನಕ್ಕೆ ಉದ್ಯೋಗ ಕೊಡುವ ಸ್ಥಿತಿವಂತರಾಗಿರುತ್ತಾರೆ. ಇವರ ಬದುಕೆಂದರೆ ತೆರೆದ ಪುಸ್ತಕ. ಹಿಂದೊಂದು ಮುಂದೊಂದು ಮಾತನಾಡೂವ ವ್ಯಕ್ತಿ ಇವರಾಗಿರುವುದಿಲ್ಲ. ಕೈಹಿಡಿದ ವಹಿವಾಟಿನಲ್ಲಿ ಎಷ್ಟರ ಮಟ್ಟಿನ ಜಾಣ್ಮೆ ಇರುತ್ತದೆ ಎಂದರೆ ಅವರನ್ನು ನೋಡಿ ಬೇರೆಯವರು ಮೂಗಿನ ಮೇಲೆ ಬೆರೆಳಿಟ್ಟುಕೊಳ್ಳೂತ್ತಾರೆ. ಸಾಧಾರಣವಾಗಿ ಇಪ್ಪತ್ತೆಂಟು ವರ್ಷದ ನಂತರ ಇವರ ಪರಿಚಯ ಸಮಾಜಕ್ಕೆ ಆಗುತ್ತದೆ. ಅಂದಾಜು ನಲವತ್ತು – ನಲವತ್ತೈದು ವರ್ಷದ ವರೆಗೂ ಇವರ ಗಳಿಕೆ ಮತ್ತು ಖರ್ಚು ಆಲ್ಲಿಂದ ಅಲ್ಲಿ ಆಗಿರುತ್ತದೆ. ಆದರೂ ಸಮಾಜದಲ್ಲಿ ಒಳ್ಳೆಯ ಶ್ರೀಮಂತ ಅನ್ನಿಸಿಕೊಳ್ಳುತ್ತಾರೆ. ನಲವತ್ತೈದರ ನಂತರ ಅವರ ಆದಾಯದಲ್ಲಿ ಶೇಕಡಾ ಮೂವತ್ತರಷ್ಟು ಮಾತ್ರ ಖರ್ಚಿರುತ್ತದೆ.

ಸ್ವಭಾವ: ಒಂದು ಬಾರಿ ಯಾವುದೇ ನಿರ್ಣಯ ಮಾಡಿದರೂ ಅದರಲ್ಲಿ ಬದಲಾವಣೆ ಮಾಡದಂತಹ ಸ್ವಭಾವ ಇವರದ್ದು. ಮೂಗಿನ ತುದಿಯಲ್ಲಿ ಕೋಪ ಇವರಿಗೆ. ಇವರು ಇನ್ನೊಬ್ಬರ ಕೆಳಗೆ ಕೆಲಸ ಮಾಡುವುದು ಕಷ್ಟ. ಇವರ ಜೀನವಶೈಲಿಯಲ್ಲಿ ಎಲ್ಲವೂ ಸ್ಟಾಂಡರ್ಡ್ ಆಗಿರಬೇಕು. ’ಋಣಂ ಕೃತ್ವ ಘೃತಂ ಪಿಬೇತ್’ ಎಂಬ ಸಂಸ್ಕೃತ ಮಾತಿನಂತೆ ಸಾಲ ಮಾಡಿಯಾದರೂ ತಿನ್ನುವುದಾದರೆ ತುಪ್ಪ ತಿನ್ನಬೇಕು ಎನ್ನುವ ಮನಸ್ಥಿತಿ ಇವರದ್ದು. ಇವರು ಇಟ್ಟದ್ದೇ ಹೆಜ್ಜೆ. ಸಿಂಹಾವಲೋಕನ ಇವರ ಸ್ವಭಾವದಲ್ಲೇ ಇಲ್ಲ. ಸಂಗೀತ ಮತ್ತು ಇತರ ಕಲೆಗಳಲ್ಲಿ ಆಸಕ್ತಿ ಹೊಂದಿದ್ದರೂ ಕಲಾವಿದರಾಗಿರುವುದಿಲ್ಲ. ಒಟ್ಟಾರೆ ಜೀವನದಲ್ಲಿ ಸಕ್ಸಸ್ ಫುಲ್ ವ್ಯಕ್ತಿ ಇವರಾಗಿರುತ್ತಾರೆ. ಇದನ್ನೂ ಓದಿ: Loan:ನೀವು ತೆಗೆದುಕೊಂಡ ಸಾಲ ಕಟ್ಟದೆ ಇರುವಾಗ ಲೋನ್ ಏಜೆಂಟ್ ಗಳು ತೊಂದರೆ ಕೊಡುತ್ತಿದ್ದಾರೆಯೇ?? ಈ ರೀತಿ ಮಾಡಿ, ಯಾರು ಹತ್ತಿರ ಕೂಡ ಬರಲ್ಲ.

Comments are closed.