NTR: ಯಾರಿಗೂ ತಲೆಬಾಗದ ಎನ್ಟಿಆರ್, ಅಂದು ವಿಜಯಶಾಂತಿ ರವರಿಗೆ ಕ್ಷಮೆ ಕೇಳಿದ್ದು ಯಾಕೆ ಗೊತ್ತೇ?? ನಟಿ ಮಂದಿ ದೇಶವೇ ಮೆಚ್ಚಿದ ನಟ ಮಾಡಿದ್ದೇನು ಗೊತ್ತೆ?

NTR: ಸೀನಿಯರ್ ಎನ್ಟಿಆರ್ ಅವರ ಬಗ್ಗೆ ತೆಲುಗು ಚಿತ್ರರಂಗದಲ್ಲಿ ಗೊತ್ತಿಲ್ಲದವರೆ ಇಲ್ಲ. ಇವರು ನಟನಾಗಿ, ರಾಜಕಾರಣಿಯಾಗಿ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಜನಸೇವೆ ಮಾಡಲು ತೆಲುಗು ದೇಶಂ ಪಕ್ಷ ಶುರುಮಾಡಿ, ಕೆಲವೇ ತಿಂಗಳುಗಳಲ್ಲಿ ಎಲೆಕ್ಷನ್ ಗೆದ್ದು ಮುಖ್ಯಮಂತ್ರಿಯಾದರು. ಜನರಿಗೆ ಅನುಕೂಲವಾಗುವ ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ. ಇಂದಿಗೂ ಇವರನ್ನು ಜನರು ಮರೆತಿಲ್ಲ. ಇತ್ತೀಚೆಗೆ ಎನ್ಟಿಆರ್ ಅವರ ಶಯಮಾನೋತ್ಸವ ಕಾರ್ಯಕ್ರಮ ನಡೆಯಿತು. ಇದರ ಅಂಗವಾಗಿ ಹಲವು ಕಲಾವಿದರು ಎನ್ಟಿಆರ್ ಅವರ ಜೊತೆಗಿನ ನೆನಪುಗಳನ್ನು ಶೇರ್ ಮಾಡಿಕೊಂಡಿದ್ದಾರೆ.

viajayashanti abt ntr | Live Kannada News
NTR: ಯಾರಿಗೂ ತಲೆಬಾಗದ ಎನ್ಟಿಆರ್, ಅಂದು ವಿಜಯಶಾಂತಿ ರವರಿಗೆ ಕ್ಷಮೆ ಕೇಳಿದ್ದು ಯಾಕೆ ಗೊತ್ತೇ?? ನಟಿ ಮಂದಿ ದೇಶವೇ ಮೆಚ್ಚಿದ ನಟ ಮಾಡಿದ್ದೇನು ಗೊತ್ತೆ? https://sihikahinews.com/2023/05/30/vijayashanti-abt-ntr/

ನಟಿ ವಿಜಯಶಾಂತಿ ಅವರು ಕೂಡ ಎನ್ಟಿಆರ್ ಅವರೊಡನೆ ನಡೆದ ಅದೊಂದು ಘಟನೆಯನ್ನು ಟ್ವೀಟ್ ಮಾಡಿ, ಎನ್ಟಿಆರ್ ಅವರ ಗುಣ ಎಂಥದ್ದು ಎನ್ನುವುದನ್ನು ತಿಳಿಸಿದ್ದಾರೆ.. “ವಿಶ್ವವಿಖ್ಯಾತ ನಟ ನಟರತ್ನ ತಾರಕ ರಾಮಾರಾವ್.. ಡಾ.ಎನ್ಟಿಆರ್.. ನಾನು 14 ವರ್ಷದ ಮಗುವಾಗಿದ್ದಾಗ ನನ್ನ ಸಿನಿಜೀವನದ ಆರಂಭದ ವರ್ಷಗಳಲ್ಲಿ 1980ರಲ್ಲಿ ಸತ್ಯಂ ಶಿವಂ ಸಿನಿಮಾದಲ್ಲಿ ಎನ್ಟಿಆರ್ ಮತ್ತು ಎ.ಎನ್.ಆರ್ ಅವರೊಡನೆ ತಂಗಿ ಪಾತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತು. ಬಳಿಕ 1985ರಲ್ಲಿ ನಾ ಪ್ರತಿಭಟನಾ ಸಿನಿಮಾಗೆ ನನಗೆ ನಂದಿ ಅವಾರ್ಡ್ ಬಂದಾಗ ಅದನ್ನು ಎನ್ಟಿಆರ್ ಅವರೇ ನನಗೆ ನೀಡಿ, ಇನ್ನು ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಮುಂದುವರೆಯಲು ಆಶೀರ್ವಾದ ಮಾಡಿದರು.

ಒಬ್ಬ ನಟನಾಗಿ, ನಾಯಕನಾಗಿ ಅವರು ದೊಡ್ಡ ಪರಂಪರೆ ಹೊಂದಿದ್ದಾರೆ. ಅವರ ಶ್ರೇಷ್ಠ ವ್ಯಕ್ತಿತ್ವಕ್ಕೆ ಉದಾಹರಣೆಯಾಗಿ ಒಂದು ಘಟನೆ ಬಗ್ಗೆ ಹೇಳುತ್ತೇನೆ.. 1990ರಲ್ಲಿ ಇವಿಎಂ ಸ್ಟುಡಿಯೋದಲ್ಲಿ ಬ್ರಹ್ಮರ್ಷಿ ವಿಶ್ವಾಮಿತ್ರ ಸಿನಿಮಾ ಡಬ್ಬಿಂಗ್ ಗಾಗಿ ಎನ್ಟಿಆರ್ ಅವರು ಬಂದಿದ್ದರು, ಅದೇ ಸ್ಟುಡಿಯೋದಲ್ಲಿ ನಾನು ಚಿರಂಜೀವಿ ಅವರ ಸಿನಿಮಾ ಮಾಡುತ್ತಿದ್ದೆ, ಡಬ್ಬಿಂಗ್ ಥಿಯೇಟರ್ ಗೆ ಅವರನ್ನು ಭೇಟಿಯಾಗಲು ಹೋದಾಗ, ಅಲ್ಲಿನ ವಾತಾವರಣದಲ್ಲಿ ಅವರು ನನ್ನನ್ನು ಸರಿಯಾಗಿ ಗಮನಿಸಲಿಲ್ಲ ಎಂದು ಬೇಸರವಾಗಿತ್ತು.. ಎನ್ಟಿಆರ್ ಅವರಿಗೆ ಈ ವಿಷಯ ಗೊತ್ತಾಗಿ ಮರುದಿನ ಬೆಳಗ್ಗೆ 6 ಗಂಟೆಗೆ ಚೆನ್ನೈನಲ್ಲಿ ನಮ್ಮ ಮನೆಗೆ ಬಂದರು.. (ಅಂದು ನಾನು ಶೂಟಿಂಗ್ ಗೆ ಹೋಗಿದ್ದೆ..)

ನಾನು ಮಗುವನ್ನು ಸರಿಯಾಗಿ ನೋಡಲಿಲ್ಲ..ಗೊತ್ತಾಗದೆ ಈ ರೀತಿ ಆಯಿತು.. ನನ್ನನ್ನು ಕ್ಷಮಿಸಿ ಎಂದು ಶ್ರೀನಿವಾಸ್ ಪ್ರಸಾದ್ ಅವರೊಡನೆ ಹೇಳಿದ ಘಟನೆ ಎಷ್ಟೋ ವರ್ಷಗಳು ಕಳೆದರೂ ನೆನಪಿನಲ್ಲಿದೆ. ಅಂದು ನಾನು ಹೈದರಾಬಾದ್ ನಲ್ಲಿದ್ದ ಜಾಗದ ಫೋನ್ ನಂಬರ್ ತೆಗೆದುಕೊಂಡು ಕರೆಮಾಡಿ, “ತಪ್ಪಾಗಿ ನಡೆದುಹೋಯಿತಮ್ಮ, ಐ ಆಮ್ ಎಕ್ಸ್ಟ್ರೀಮ್ಲಿ ಸಾರಿ..” ಎಂದರು. ಅಷ್ಟು ದೊಡ್ಡ ಕಲಾವಿದರಾಗಿದ್ದರು, ತಮ್ಮ ಜವಾಬ್ದಾರಿ ಮರೆಯಾದ ವ್ಯಕ್ತಿತ್ವವನ್ನು ಎಷ್ಟು ಹೊಗಳಿದರು ಸಾಲದು. ತಮ್ಮ ಸಹಕಾಲವಿದರ ಗೌರವ ಕಾಪಾಡುವ ವ್ಯಕ್ತಿತ್ವ ಅವರದ್ದು..

ಎನ್ಟಿಆರ್ ಅವರು ಚೆನ್ನೈಗೆ ಬಂದಾಗಲೆಲ್ಲಾ ಅವರಿಗಾಗಿ ಶ್ರೀನಿವಾಸ್ ಪ್ರಸಾದ್ ಬೆಳಗ್ಗೆ 11 ಗಂಟೆಗೆ ಮಧ್ಯಾಹ್ನದ ಊಟ ಕಳಿಸಿಕೊಡುತ್ತಿದ್ದರು. ಎನ್ಟಿಆರ್ ಅವರು ತುಂಬಾ ಪ್ರೀತಿಯಿಂದ ಅದನ್ನು ಸ್ವೀಕರಿಸುತ್ತಿದ್ದರು. ನಾನು ಅವರನ್ನು ಭೇಟಿ ಮಾಡಲು ಹೈದರಾಬಾದ್ ಗೆ ಹೋದಾಗ, ಬಿಡುಗಿಲ್ಲದೆ ಇದ್ದರು ಭೇಟಿಯಾಗಿ ಅವರೇ ಟಿಫನ್ ಬಡಿಸಿ ತಿನ್ನಿಸಿದ್ದರು, ಅವರ ಆತಿಥ್ಯ ಪ್ರೀತಿಗೆ ಇನ್ನೊಂದು ಹೆಸರು..ಎನ್ಟಿಆರ್ ಅವರು ಬಹಳ ಅಪರೂಪದ ವ್ಯಕ್ತಿ. ಪ್ರಪಂಚ ಮತ್ತೆ ನೋಡಲು ಸಾಧ್ಯವಾಗದ ಯುಗಪುರುಷ.. 100 ವರ್ಷಗಳು, ಇನ್ನು ನೂರು ವರ್ಷಗಳು ಕಳೆದ ಮೇಲು ಎನ್ಟಿಆರ್ ಅವರು ಚಿತ್ರರಂಗಕ್ಕೆ ಕಲಿಸಿದ ಶಿಸ್ತು ಹೀಗೆ ಇರುತ್ತದೆ.. ಕಾಲವಿದರಿಗೆ ಅವರು ಹಾಕಿಕೊಟ್ಟ ನಿಯಮಗಳು ಯಾವಾಗಲೂ ನೆನಪಿನಲ್ಲಿ ಇರುತ್ತದೆ..” ಎಂದು ಸುದೀರ್ಘ ಟ್ವೀಟ್ ಮಾಡುವ ಮೂಲಕ, ಸೀನಿಯರ್ ಎನ್ಟಿಆರ್ ಅವರು ತಮಗೆ ಕ್ಷಮೆ ಕೇಳಿದ ಘಟನೆಯನ್ನು ನೆನಪು ಮಾಡಿಕೊಂಡಿದ್ದಾರೆ ನಟಿ ವಿಜಯಶಾಂತಿ.

Comments are closed.