Kannada News: ಅಧಿಕಾರಕ್ಕೆ ಏರಿದ ತಕ್ಷಣ ಮತ್ತೊಂದು ಖಡಕ್ ಆದೇಶ ಕೊಟ್ಟ ಡಿಕೆಶಿ- ಪಕ್ಷಾತೀತವಾಗಿ ಬೆಂಬಲ ಕೊಟ್ಟ ಬಿಜೆಪಿ ಫ್ಯಾನ್ಸ್. ಏನು ಗೊತ್ತೇ?

Kannada News: ರಾಜ್ಯದ ಡಿಸಿಎಂ ಆಗಿ ಡಿಕೆ ಶಿವಕುಮಾರ್ ಅವರು ಅಧಿಕಾರ ಸ್ವೀಕರಿಸಿದ್ದಾರೆ. ಇದೀಗ ಅವರು ಅಧಿಕಾರಕ್ಕೆ ಬಂದ ತಕ್ಷಣವೇ ಒಂದು ಖಡಕ್ ಆದೇಶ ನೀಡಿದ್ದು, ಇದಕ್ಕೆ ರಾಜ್ಯದ ಜನತೆ ಹಾಗೂ ಬಿಜೆಪಿ ಅಭಿಮಾನಿಗಳ ಬೆಂಬಲ ಕೂಡ ಸಿಕ್ಕಿದೆ. ಹಾಗಿದ್ದರೆ ಡಿಕೆಶಿ ಅವರು ಕೊಟ್ಟ ಆ ಆದೇಶ ಏನು ? ತಿಳಿಸುತ್ತೇವೆ ನೋಡಿ..

dk shivakumar | Live Kannada News
Kannada News: ಅಧಿಕಾರಕ್ಕೆ ಏರಿದ ತಕ್ಷಣ ಮತ್ತೊಂದು ಖಡಕ್ ಆದೇಶ ಕೊಟ್ಟ ಡಿಕೆಶಿ- ಪಕ್ಷಾತೀತವಾಗಿ ಬೆಂಬಲ ಕೊಟ್ಟ ಬಿಜೆಪಿ ಫ್ಯಾನ್ಸ್. ಏನು ಗೊತ್ತೇ? https://sihikahinews.com/2023/05/30/kannada-news-dk-shivakumar/

ಬಿಬಿಎಂಪಿ ಅನುಮತಿ ಇಲ್ಲದೆ ನಡೆಯುತ್ತಿರುವ ಕಾಮಗಾರಿ ಕೆಲಸಗಳು, ಸಮಯ ಮುಗಿದಿದ್ದರು ಕಾಮಗಾರಿ ಮುಗಿಯದ ಕೆಲಸಗಳು, ಕಾಮಗಾರಿ ಆಗದೆ ಇದ್ದರು ಬಿಲ್ ಆಗಿರುವುದು, ಒಂದು ಕಾಮಗಾರಿಗೆ ಎರಡು ಸಾರಿ ಬಿಲ್ ಆಗಿರುವುದು, ಇದೆಲ್ಲದರ ಕಾಮಗಾರಿ ನಿಲ್ಲಿಸಿ, 10 ದಿನಗಳ ಒಳಗೆ ರಿಪೋರ್ಟ್ ಕೊಡಬೇಕು ಎಂದು ಬಿಬಿಎಂಪಿ ಅಧಿಕಾರಿಗೆಳಿಗೆ ಡಿಕೆಶಿ ಅವರು ಆದೇಶ ನೀಡಿದ್ದಾರೆ. ಬಿಬಿಎಂಪಿ ಕಚೇರಿವಲ್ಲಿ ಸೋಮವಾರ ಸಭೆ ಏರ್ಪಡಿಸಲಾಗಿತ್ತು, ಅದರಲ್ಲಿ ಡಿಕೆಶಿ ಅವರು ಮಾತನಾಡಿದ್ದು. ಇದನ್ನು ಓದಿ..Gold Rate: ನಡುಗುತ್ತಿದೆ ಅಮೇರಿಕ ಆರ್ಥಿಕತೆ- ಭಾರತದ ಗೃಹಿಣಿಯರಿಗೆ ಸದ್ಯದಲ್ಲಿ ಸಿಹಿ ಸುದ್ದಿ. ಏನಾಗಲಿದೆ ಗೊತ್ತೇ? ತಿಳಿದರೆ ಕುಣಿದು ಡಾನ್ಸ್ ಮಾಡ್ತೀರಾ.

ಹಿಂದಿನ ಮೂರು ವರ್ಷಗಳಿಂದ ಬೆಂಗಳೂರು ವಿಧಾನಸಭೆ ಕ್ಷೇತ್ರದಲ್ಲಿ ಆಗಿರುವ ಕೆಲಸಗಳು, ಅದಕ್ಕೆ ಆಗಿರುವ ಖರ್ಚು, ಅವುಗಳ ವಿವರ, ಕೆಲಸ ನಡೆದಿರುವ ಫೋಟೋಗಳು ಹಾಗೂ ಇನ್ನಿತರ ದಾಖಲೆಗಳನ್ನು ನೀಡಬೇಕು, ಇಲ್ಲಿ ನಿಮ್ಮ ಪ್ರಾಮಾಣಿಕತೆಯನ್ನು ನಾನು ನೋಡುತ್ತೇನೆ.. ನೀವು ರಿಪೋರ್ಟ್ ಕೊಡದೆ ಇದ್ದರೆ, ನಾನೇ ನಿಮಗೆ ರಿಪೋರ್ಟ್ ಕೊಡುತ್ತೇನೆ.. ಎಂದು ವಾರ್ನಿಂಗ್ ಕೊಟ್ಟಿದ್ದಾರೆ ಡಿಕೆಶಿ. ನಾನು ಬಂದಿರೋದು ಹಳ್ಳಿಯಿಂದ, ಆದರೆ ನನಗೆ ಮಾಹಿತಿ ಕೊಡುವವರಿದ್ದಾರೆ. ನೀವು ಮಾಹಿತಿ ಕೊಡದೆ ಇದ್ದರೆ ಖುದ್ದಾಗಿ ನಾನೇ ಹೋಗಿ ಜಾಗಗಳ ಪರಿಶೀಲನೆ ಮಾಡುತ್ತೇನೆ..

ಕಣ್ಣಿಗೆ ಕಾಣುವುದನ್ನು ನಂಬಬೇಕು. ರಸ್ತೆ ಕಾಮಗಾರಿಗಳನ್ನು ಏಜೆನ್ಸಿ ಇಂದ ಮಾಡುವುದಾದರೆ, ಪಾಲಿಕೆಯಲ್ಲಿ ಇಂಜಿನಿಯರ್ ಗಳು ಇರೋದು ಯಾಕೆ? ಬೆಂಗಳೂರಿಗೆ ಕನೆಕ್ಟ್ ಆಗುವ ಹೊರಗಿನ ರಸ್ತೆಗಳಲ್ಲಿ ಎಲ್ಲಿ ಬೇಕೆಂದರೆ ಅಲ್ಲಿ ತ್ಯಾಜ್ಯ ವಸ್ತುಗಳನ್ನು ವಿಲೇವಾರಿ ಮಾಡಲು ಅವಕಾಶ ಕೊಡಬಾರದು. ಹೀಗೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಒಣಕಸ ಹಸಿಕಸ ವಿಲೇವಾರಿ ಮಾಡಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ನೈರ್ಮಲ್ಯ, ಆರೋಗ್ಯ, ರಕ್ಷಣೆ ಇದೆಲ್ಲದಕ್ಕೂ ಆದ್ಯತೆ ಕೊಡಬೇಕು. ಅಕ್ರಮ ಮಾಡದೆ, ಟಿಡಿಆರ್ ಜಾರಿಗೆ ತರಬೇಕು, ರಸ್ತೆ ಯೋಜನೆ ಇಂದ ಆಸ್ತಿ ಕಳೆದುಕೊಂಡವರಿಗೆ ಪರಿಹಾರ ನೀಡಬೇಕು. ಕಾಮಗಾರಿ ಶುರುವಾಗುವುದಕ್ಕಿಂತ ಮೊದಲು ಸ್ಥಳದ ಫೋಟೋ ತೆಗೆದಿರಬೇಕು.. ಇದನ್ನು ಓದಿ..Dk Shivakumar: ಮನೆಯಲ್ಲಿ ಅತ್ತೆ ಸೊಸೆ ಇಬ್ಬರೂ ಇದ್ದರೇ, ಕಾಂಗ್ರೆಸ್ ಯಾರಿಗೆ ದುಡ್ಡು ಕೊಡುತ್ತೆ?? ಎರಡು ಸಾವಿರ ಪಡೆಯುವರು ಯಾರು ಗೊತ್ತೇ? ಡಿಕೆಶಿ ಹೇಳಿದ್ದೇನು??

ಯೋಜನೆಗಳಿಂದ ಜನರಿಗೆ ಉಪಯೋಗ ಆಗುತ್ತಿದೆಯೋ ಅಥವಾ ಬೇರೆಯವರಿಗೆ ಪ್ರಗತಿ ಆಗುತ್ತಿದೆಯೋ ಎಂದು ಜನರಿಗು ಗೊತ್ತಾಗಲಿ. ಮಳೆ ಬಂದಾಗ ನೀರು ಹರಿಯಲು ತಡೆ ಆಗಿರುವ ಬಾಟಲ್ ನೆಕ್ ಗಳನ್ನು ಸರಿಮಾಡಬೇಕು. ಮಳೆನೀರಿನ ಸಮಸ್ಯೆಯಿಂದ ಬೆಂಗಳೂರಿಗೆ ಕೆಟ್ಟ ಹೆಸರು ಬರುತ್ತಿದೆ, ಅದು ಬರದ ಹಾಗೆ ಮಾಡುವ ಜವಾಬ್ದಾರಿ ನಮ್ಮೆಲ್ಲರದ್ದು. ಈ ಬಿಬಿಎಂಪಿ ಒಂದು ಸಾಗರ ಇದ್ದ ಹಾಗೆ, ಮುಳುಗುವುದು ತೇಲುವುದು ಗೊತ್ತಾಗುವುದಿಲ್ಲ. ರಾಜಕಾರಣಿಗಳು ಹಾಗೂ ಅಧಿಕಾರಿಗಳು ಯಾವೆಲ್ಲ ಕೆಲಸ ಮಾಡುತ್ತಾರೆ ಎಂದು ಗೊತ್ತಿದೆ. ಬೆಂಗಳೂರು ಈ ದೇಶದ ಆಸ್ತಿ. ಭ್ರಷ್ಟಾಚಾರ ಮಾಡುವವರನ್ನು, ಮಂತ್ರಿಗಳಿಗೆ ಚಾಡಿ ಹೇಳಿಕೊಂಡು ಬದುಕುತ್ತೇನೆ ಎನ್ನುವವರನ್ನು ಮಟ್ಟ ಹಾಕುತ್ತೇನೆ.. ನಾನೊಬ್ಬನೇ ಮಾಡುವುದಲ್ಲ, ನಾವೆಲ್ಲರೂ ಸೇರಿ ಮಾಡೋಣ.ಮ್ ಎಂದು ಹೇಳಿದ್ದಾರೆ ಡಿಸಿಎಂ ಡಿಕೆ ಶಿವಕುಮಾರ್..

Comments are closed.