Nagara Panchami: ನಾಗದೇವತೆಯನ್ನು ಈ ರೀತಿ ಸಂತೃಪ್ತಿಪಡಿಸಿದರೆ ಜೀವನದಲ್ಲಿ ನಾಗದೋಷ ಎಂಬುದರಿಂದ ಶಾಶ್ವತ ಮುಕ್ತಿ ಸಿಗುತ್ತದೆ ನೋಡಿ!

Nagara Panchami: ಹಿಂದೂ ಧರ್ಮದ ಆಚರಣೆಗಳ ಪ್ರಕಾರ ಇದೇ ಬರುವ ಆಗಸ್ಟ್ 21ಕ್ಕೆ ನಾಡಿನಾದ್ಯಂತ ನಾಗರ ಪಂಚಮಿ ಹಬ್ಬವನ್ನು ಆಚರಿಸಲಾಗುತ್ತದೆ. ನಾಗರಪಂಚಮಿ ಹಬ್ಬ ಬಂತು ಅಂದ್ರೆ ಆ ವರ್ಷದ ಹಬ್ಬಗಳ ಸಡಗರ ಆರಂಭವಾಯಿತು ಎಂದೇ ಅರ್ಥ. ಹಿಂದೂ ಧರ್ಮದಲ್ಲಿ ನಾಗದೇವತೆಗೆ ಬಹಳ ಮಹತ್ವದ ಸ್ಥಾನವಿದೆ ಭಾವದಿಂದ ನಾಗರಪಂಚಮಿಯ ದಿನ ನಾಗದೇವತೆಗೆ ಪೂಜೆ ಮಾಡಿದರೆ ಶಿವನ ಕೃಪೆಯು ಕೂಡ ಜೊತೆಗೆ ಇರುತ್ತದೆ ಎನ್ನುವ ನಂಬಿಕೆ ಇದೆ.

ಶ್ರಾವಣ ಮಾಸದ ಶುಕ್ಲ ಪಕ್ಷದಂದು ನಾಗರ ಪಂಚಮಿ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ. ನಾಗರ ಪಂಚಮಿ ಹಬ್ಬವನ್ನು ಭಕ್ತಿ ಭಾವದಿಂದ ಆಚರಿಸಿ ನಾಗದೇವತೆಗೆ ಪೂಜೆ ಪುನಸ್ಕಾರ ಮಾಡಿದರೆ ಸಂತಾನ ಭಾಗ್ಯ ಆಗುವುದು ಆರೋಗ್ಯ ಸರಿಹೋಗುವುದು ಇಂತಹ ಹಲವಾರು ಪ್ರಯೋಜನಗಳು ಸಿಗುತ್ತವೆ. ಈ ಬಾರಿ ಆಗಸ್ಟ್ 21ರಂದು ನಾಗರ ಪಂಚಮಿ ಹಬ್ಬ ಬಂದಿದ್ದು ಸಕಲ ಯೋಗದಿಂದ ಈ ದಿನ ಆರಂಭವಾಗುತ್ತದೆ. ಹಾಗಾಗಿ ತಪ್ಪದೆ ನಾಗರ ಪಂಚಮಿ ಹಬ್ಬವನ್ನು ಬಹಳ ಭಕ್ತಿ ಭಾವದಿಂದ ಆಚರಿಸಿ ನಾಗದೇವತೆಯ ಕೃಪೆಗೆ ಪಾತ್ರರಾಗಿ.

ಈ ಬಾರಿ ನಾಗರಪಂಚಮಿ ಶಿವಯೋಗದಲ್ಲಿ ಬಂದಿದೆ. ಆಗಸ್ಟ್ 20 ರಾತ್ರಿ 12:21ಕ್ಕೆ ಆರಂಭವಾಗುವ ಯೋಗ 22 ಮಂಗಳವಾರ ಮಧ್ಯಾಹ್ನ 2 ಗಂಟೆಯವರೆಗೆ ಇರುತ್ತದೆ. ಶಿವಯೋಗ ದೈವಿಕ ಯೋಗವಾಗಿದ್ದು ಈ ಸಮಯದಲ್ಲಿ ನೀವು ನಾಗದೇವತೆ ಪೂಜೆ ಮಾಡಿದರೆ ಜೀವನದಲ್ಲಿ ಅಷ್ಟೈಶ್ವರ್ಯಗಳು ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗುತ್ತೆ.

ಈ ಶುಭ ಮುಹೂರ್ತದಲ್ಲಿ ರುದ್ರಾಭಿಷೇಕ ಮಾಡುವುದು ಒಳ್ಳೆಯದು. ಜೊತೆಗೆ ತಪ್ಪದೆ ಈ ದಿನ ರುದ್ರಾಭಿಷೇಕ ಮಾಡಿಸಿ. ರುದ್ರಾಭಿಷೇಕ ಮಾಡುವಾಗ “ಓಂ ಭುಜಂಗೇಶಾಯ ವಿದ್ಮಹೇ, ಸರ್ಪರಾಜಾಯ ಧೀಮಹಿ, ತನ್ನೋ ನಾಗ: ಪ್ರಚೋದಯಾತ್.” ಮಂತ್ರವನ್ನು ಪಠಿಸಿ.

ರುದ್ರಾಭಿಷೇಕಕ್ಕೆ ಹಾಲು, ತುಪ್ಪ, ಮೊಸರು, ಹಾಲು ಮತ್ತು ಜೇನನ್ನು ಬಳಸಬಹುದು. ನಿಮ್ಮ ಜಾತಕದಲ್ಲಿ ಯಾವುದೇ ನಾ ಕಾಳು ಸರ್ಪ ದೋಷವಿದ್ದರೂ ಅದರ ಪರಿಹಾರಕ್ಕೆ ನಾಗರ ಪಂಚಮಿಯ ದಿನ, ತುಪ್ಪ ಶ್ರೀಗಂಧ ಎಲೆ ಅಡಿಕೆ, ರೂಪ ಕರ್ಪೂರ ಮೊದಲಾದ ವಸ್ತುಗಳನ್ನು ಇಟ್ಟು ನಾಗದೇವತೆಯನ್ನು ಪೂಜೆ ಮಾಡಿ. ನಾಗದೋಷ ಇರುವವರು ನಾಗರಪಂಚಮಿಯ ದಿನ ನಾಗಬನಕ್ಕೆ ಹೋಗಿ ಪೂಜೆ ಸಲ್ಲಿಸಿ ಬಂದರೆ ಉತ್ತಮ.

ನಿಮ್ಮ ಜಾತಕದಲ್ಲಿ ಯಾವುದೇ ನಾಗದೋಷ ಇದ್ದರೂ ನಾಗರ ಪಂಚಮಿಯ ಬ್ರಾಹ್ಮೀ ಮುಹೂರ್ತದಲ್ಲಿ ಸ್ನಾನ ಮಾಡಿ ನಾಗದೇವತೆಯ ಪೂಜೆ ಮಾಡಬೇಕು ಶಿವನಿಗೆ ರುದ್ರಾಭಿಷೇಕ ಮಾಡಿ 108 ಬಾರಿ ಶಿವ ನಾಮವನ್ನು ಪಠಿಸಬೇಕು. ಈ ರೀತಿ ಮಾಡುವುದರಿಂದ ರಾಹುವಿನ ಕೆಟ್ಟ ದೋಷವು ಕೂಡ ನಿಮಗೆ ತಗುಲದಂತೆ ನಾಗದೇವತೆಗಳು ಕಾಪಾಡುತ್ತವೆ. ನಾಗದೇವತೆಯ ದಿನ, ನಾಗ ದೇವತೆಗೆ ಸಿಹಿಯನ್ನು ಅರ್ಪಿಸಿ ಮನೆಯವರೊಂದಿಗೆ ಹಬ್ಬವನ್ನು ಆಚರಿಸಿ.

Comments are closed.