Nagara Panchami: ನಾಗರ ಪಂಚಮಿ ದಿನವೇ ಸರ್ಪದೋಷಕ್ಕೆ ಪರಿಹಾರ ಮಾಡಿಕೊಳ್ಳಬಹುದಾ? ಅದಕ್ಕಾಗಿ ನೀವು ತಪ್ಪದೇ ನಾಳೆ ಇದೊಂದು ಕೆಲಸ ಮಾಡಿ!

Nagara Panchami: ನಾಡಿನಾದ್ಯಂತ ಅಗಸ್ಟ್ 21, 2023 ಅಂದರೆ ನಾಳೆ ಶ್ರಾವಣ ಮಾಸದ ಶುಕ್ಲ ಪಕ್ಷದಲ್ಲಿ ನಾಗರ ಪಂಚಮಿ (nagara panchami) ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಹೆಂಗಳೆಯರು ಹಾವಿನ ಹುತ್ತಕ್ಕೆ ಅಥವಾ ಹಾವಿನ ವಿಗ್ರಹಕ್ಕೆ ಭಕ್ತಿಯಿಂದ ಪೂಜೆ ಮಾಡಿ ಕೃತಾರ್ಥರಾಗುವ ದಿನ ನಾಗರ ಪಂಚಮಿ. ಶಿವನ ಪ್ರಿಯ ನಾಗನನ್ನು ಭಕ್ತಿಯಿಂದ ಪೂಜಿಸಿದಾಗ ಇಷ್ಟಾರ್ಥಗಳು ಈಡೇರುತ್ತವೆ ಎನ್ನುವ ಮಾತಿದೆ.

ಸಂತಾನ ಭಾಗ್ಯಕ್ಕಾಗಿ, ಮದುವೆ ಆಗುದಕ್ಕೆ, ಮನೆಯಲ್ಲಿ ಸುಖ ಶಾಂತಿ ನೆಲೆಸಲು, ಧನಪ್ರಾಪ್ತಿಗಾಗಿ ಹೀಗೆ ಎಲ್ಲಾ ರೀತಿಯ ಸಮಸ್ಯೆ ಪರಿಹಾರಕ್ಕೂ ನಾಗಸಂಕುಲನವನ್ನೇ ಪೂಜಿಸುವುದು ಬಹಳ ಒಳ್ಳೆಯದು. ಬೇರೆ ಬೇರೆ ಭಾಗದಲ್ಲಿ ಬೇರೆ ಬೇರೆ ರೀತಿಯಾಗಿ ಹೆಂಗಳೆಯರು ನಾಳೆ ನಾಗರ ಪಂಚಮಿ ಪೂಜೆಯನ್ನು ಮಾಡುತ್ತಾರೆ.

ನಾಗರಪಂಚಮಿ ದಿನ ನಾಗವನ್ನು ಪ್ರತಿಷ್ಠಾಪಿಸಿ ಪೂಜೆ ಮಾಡಿದರೆ ಸರ್ಪದೋಷ ನಿವಾರಣೆಯಾಗುತ್ತದೆ ಎನ್ನುವ ನಂಬಿಕೆ ಇದೆ. ಈ ದಿನ ಉಪವಾಸ ಮಾಡುವುದು ಹಾಗೂ ನಾಗರ ಪಂಚಮಿಯ ದಿನ ನಾಗದೇವತೆಗಳಿಗೆ ವಿಶೇಷವಾದ ಪೂಜೆ ಸಲ್ಲಿಸುವುದರಿಂದ ಸರ್ಪದೋಷ ಮುಕ್ತರಾಗಬಹುದು. ಇನ್ನು ಯಾರದೆ ಜಾತಕದಲ್ಲಿ ರಾಹು ಕೇತುಗಳ ದೋಷವಿದ್ದರೆ ಅದರ ನಿವಾರಣೆಗೂ ಕೂಡ ನಾಗರ ಪಂಚಮಿಯ ಭಕ್ತಿ ಪೂರ್ವಕ ಪೂಜೆ ಸಹಾಯಕವಾಗಲಿದೆ.

ಇನ್ನು ವೈದಿಕ ಶಾಸ್ತ್ರಗಳಲ್ಲಿ ಹೇಳುವಂತೆ ಶಿವಲಿಂಗಕ್ಕೆ ಹಿತ್ತಾಳೆ ಪತ್ರೆಯಿಂದ ಹಾಲು ತೆರೆಯುವುದು ಹಾಗೂ ನೀರನ್ನು ಅರ್ಪಿಸುವುದು ಒಳ್ಳೆಯದು. ನಾಗರ ಪಂಚಮಿಯ ದಿನ ಶಿವನಿಗೆ ರುದ್ರಾಭಿಷೇಕ ಮಾಡಿಸಿದರೆ, ನಾಗದೇವತೆಗಳು ಕೃಥಾರ್ಥರಾಗುತ್ತಾರೆ. ಶಿವನ ಜೊತೆಗೆ ನಾಗದೇವತೆಗಳ ಆಶೀರ್ವಾದವೂ ಕೂಡ ಸಿಗುತ್ತದೆ ಎನ್ನುವ ನಂಬಿಕೆ ಇದೆ. ಹಾಗಾಗಿ ಯಾವುದೇ ಕಾರಣಕ್ಕೂ ತಪ್ಪದೇ ನಾಳೆ ನಾಗರ ಪಂಚಮಿಯ ದಿನದಂದು ನಾಗದೇವತೆಗಳನ್ನು ನೆನೆದು ನಿಮ ಕೈಲಾದಷ್ಟು ಸರಿಯಾದ ರೀತಿಯಲ್ಲಿ ಪೂಜಿಸುವುದನ್ನ ಮರೆಯಬೇಡಿ. ನಾಗ ದೇವತೆಯ ಕೃಪೆ ನಿಮ್ಮ ಮೇಲಿರಲಿ.

Comments are closed.