Krishi sinchay Scheme: ರೈತರಿಗೆ ಶುಭ ಸುದ್ದಿ: ಸಬ್ಸಿಡಿ ಬೆಲೆಗೆ ಸ್ಪ್ರಿಂಕ್ಲರ್ ಪೈಪ್! ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಸಂಪೂರ್ಣ ಡೀಟೇಲ್ಸ್!

Krishi sinchay Scheme: ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ (Central Government) ರೈತರಿಗೆ ಅನುಕೂಲವಾಗುವಂತಹ ಸಾಕಷ್ಟು ಯೋಜನೆಗಳನ್ನು ಜಾರಿಗೆ ತರುತ್ತವೆ, ಅದರಲ್ಲೂ ಕೇಂದ್ರ ಸರ್ಕಾರ ರೈತರ ಜಮೀನುಗಳಿಗೆ ನೀರಾವರಿ ವ್ಯವಸ್ಥೆ ಮಾಡಲು ಸ್ಪ್ರಿಂಕಲಿಂಗ ಪೈಪ್ ಅನ್ನು ಉಚಿತವಾಗಿ ನೀಡುತ್ತಿದ್ದು ಇದನ್ನು ರೈತರು ಪಡೆದುಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ಇದೆ.

ಕೃಷಿ ಸಿಂಚಾಯ್ ಯೋಜನೆ:
ಕೇಂದ್ರ ಸರ್ಕಾರ ಕೃಷಿ ಸಿಂಚಾಯಿ ಯೋಜನೆ ಅಥವಾ ನೀರಾವರಿ ಯೋಜನೆಯ ಅಡಿಯಲ್ಲಿ ರೈತರಿಗೆ ಸ್ಪ್ಲಿಂಕ್ಲರ್ ಪೈಪ್ ಅನ್ನು ಸಬ್ಸಿಡಿಯಲ್ಲಿ ನೀಡುತ್ತಿದೆ. ರೈತರು ಈ ಸ್ಪ್ಲಿಂಕ್ಲರ್ (Sprinkler) ಉಪಕರಣಗಳನ್ನು ರೈತ ಸಂಪರ್ಕ ಕೇಂದ್ರಗಳಿಂದ ಪಡೆಯಬಹುದು.

ಉಪಕರಣದಲ್ಲಿ 30 ಪೈಪ್ಗಳು 20 ಸೀಟ್ ಅಥವಾ ಆರು ಮೀಟರ್ ಉದ್ದವಾಗಿರುತ್ತದೆ. ಇದರ ಜೊತೆಗೆ 5 ಬ್ರಾಸ್ ನಾಸಲ್ ಗಳು ಬರುತ್ತವೆ. ಇನ್ನು ಈ ಉಪಕರಣವನ್ನು ಪಡೆಯುವುದು ಹೇಗೆ ಎನ್ನುವುದನ್ನು ನೋಡುವುದಾದರೆ, ಪ್ರತಿ ವರ್ಷ ಈ ಯೋಜನೆಯನ್ನು ಬಿಡುಗಡೆ ಮಾಡುತ್ತದೆ ರೈತರು ರೈತ ಸಂಪರ್ಕ ಕೇಂದ್ರಗಳಲ್ಲಿ ಅಗತ್ಯವಿರುವ ಮಾಹಿತಿಯನ್ನು ಸಲ್ಲಿಸಿ ಉಪಕರಣವನ್ನು ಪಡೆದುಕೊಳ್ಳಬಹುದಾಗಿದೆ. ರೈತ ಕೇಂದ್ರ ಗಳಲ್ಲಿ ಈ ಉಪಕರಣಗಳು ಯಾವಾಗ ಬರುತ್ತವೆ ಯಾವ ತಿಂಗಳಿನಲ್ಲಿ ಅರ್ಜಿ (Application) ಹಾಕಬೇಕು ಎಂಬುದರ ಬಗ್ಗೆ ಮಾಹಿತಿ ಪಡೆದುಕೊಳ್ಳಿ.

ಅರ್ಜಿ ಸಲ್ಲಿಸಲು ಬೇಕಾಗಿರುವ ಮಾಹಿತಿ:
ಆಧಾರ್ ಕಾರ್ಡ್
ಪಾಸ್ ಪೋರ್ಟ್ ಅಳತೆಯ ಫೋಟೋ
ಜಮೀನಿನ ಪಹಣಿ ಪತ್ರ
20 ರೂಪಾಯಿಗಳ ರೋಟರಿ ಬ್ಯಾಂಡ್
ಬೆಳೆ ನೀರಾವರಿ ಪ್ರಮಾಣ ಪತ್ರ
ಬ್ಯಾಂಕ್ ಪಾಸ್ ಬುಕ್ ಪ್ರತಿ
ಎಲ್ಲ ದಾಖಲೆಗಳನ್ನು ರೈತ ಸಹಾಯ ಕೇಂದ್ರಗಳಲ್ಲಿ ಕೊಟ್ಟು ನೀವು ಸ್ಪ್ರಿಂಟ್ಲರ್ ಸೆಟ್ ಗಾಗಿ ಅರ್ಜಿ ಸಲ್ಲಿಸಬಹುದು. ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಆನ್ಲೈನ್ ಮೂಲಕವೇ ಆರ್‌ಸಿ ಸಲ್ಲಿಸಲು ಕೂಡ ಅವಕಾಶವಿದೆ

Comments are closed.