Ayodhya: ಸದ್ಯದಲ್ಲಿಯೇ ಶ್ರೀ ರಾಮ ಮಂದಿರ ಅಯೋಧ್ಯದಲ್ಲಿ ಪ್ರತಿಷ್ಠಾಪನೆಗೊಳ್ಳಲಿದೆ ಶ್ರೀರಾಮ ಮೂರ್ತಿ! ಭಕ್ತಾದಿಗಳಲ್ಲಿ ಮೂಡಿದ ಹರ್ಷೋದ್ಗಾರ!

Ayodhya: ಇದು ಭಾರತೀಯರ ಅದರಲ್ಲೂ ಹಿಂದುಗಳ (Hindu) ಬಹು ವರ್ಷದ ಕನಸು. ಶ್ರೀರಾಮ (Shree Ram) ಜನ್ಮಭೂಮಿ ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರ ನಿರ್ಮಾಣವಾಗಬೇಕು ಇದರಲ್ಲಿ ಶ್ರೀ ರಾಮನ ಮೂರ್ತಿಯನ್ನು ಪಟ್ಟಾಭಿಷೇಕ ಮಾಡಬೇಕು ಶ್ರೀರಾಮನ ಪಟ್ಟಾಭಿಷೇಕವನ್ನ ಕಣ್ತುಂಬಿಸಿಕೊಳ್ಳಬೇಕು ಎನ್ನುವುದು ಹಲವು ಶ್ರೀರಾಮ ಭಕ್ತರ ಆಸೆಯಾಗಿತ್ತು. ಭಕ್ತರ ಈ ಕನಸನ್ನು ನನಸಾಗಿಸಲು ಪ್ರಾಜೆಕ್ಟ್ ಕೈಗೆತ್ತಿಕೊಂಡ ಕೇಂದ್ರ ಸರ್ಕಾರ (Central Government)  ಅಯೋಧ್ಯೆಯ ಶ್ರೀರಾಮ ಮಂದಿರ ನಿರ್ಮಾಣವನ್ನು ಬಹುತೇಕ ಮುಗಿಸಿದ ಇನ್ನೇನು ಕೆಲವೇ ತಿಂಗಳುಗಳಲ್ಲಿ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ ಆಗುತ್ತೆ. ಶ್ರೀ ರಾಮನ ಪಟ್ಟಾಭಿಷೇಕವನ್ನು ಆಗುತ್ತೆ. ಇದನ್ನೂ ಓದಿ: Tirupati: ಬರಗಾಲದಲ್ಲೂ ತಿರುಪತಿಯಲ್ಲಿ ನಡೆದ ಪವಾಡ;  ತಿರುಪತಿಯಲ್ಲಿ ತಿಮ್ಮಪ್ಪ ಸ್ವತ: ನೆಲೆಸಿದ್ದಾನೆ ಎನ್ನುವುದಕ್ಕೆ  ಇದಕ್ಕಿಂತ ಬೇರೇನು ಬೇಕು?

ಹೌದು ಇಷ್ಟು ದಿನ ಭಕ್ತಾದಿಗಳ ಕಾಯುವಿಕೆಗೆ ಕೊನೆಗೂ ಗುಡ್ ನ್ಯೂಸ್ ಸಿಕ್ಕಿದೆ. ಅಯೋಧ್ಯೆ (Ayodya mandir) ನಿರ್ಮಾಣವಾಗುತ್ತಿದ್ದು ಭವ್ಯ ರಾಮಮಂದಿರದ ಗರ್ಭಗುಡಿ 80% ನಷ್ಟು ನಿರ್ಮಾಣ ಪೂರ್ಣಗೊಂಡಿದೆ. ಮೊದಲ ಅಂತಸ್ತಿನ ಕಾಮಗಾರಿ ಪೂರ್ಣಗೊಂಡಿದೆ ಮುಂದಿನ ವರ್ಷ ಅಂದರೆ 2024 ಜನವರಿ 16 ರಿಂದ 24ರ ಒಳಗೆ ರಾಮಮೂರ್ತಿ ಪ್ರತಿಷ್ಠಾಪನೆ ನಡೆಯಲಿದೆ ಎಂದು ಶ್ರೀರಾಮ ಮಂದಿರ ತೀರ್ಥ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಸಂಪತ್ ರಾಯ್ ಮಾಹಿತಿ ನೀಡಿದ್ದಾರೆ.

ಶೇ. 80 ಮುಗಿದ ಕಾಮಗಾರಿ:

ರಾಮಮಂದಿರದ ಗರ್ಭಗುಡಿಯ ಕೆಲಸ ಬಹುತೇಕ ಪೂರ್ಣಗೊಂಡಿದೆ. ಶ್ರೀರಾಮನ ಭವ್ಯ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲು ಸಿದ್ಧವಾಗಿದೆ. ಇದು ಎರಡು ಅಂತಸ್ತುಗಳನ್ನು ಹೊಂದಿರುವ ದೇವಸ್ಥಾನವಾಗಿದೆ ಮೇಲ್ಚಾವಣಿಯ 80ರಷ್ಟು ಭಾಗ ಪೂರ್ಣಗೊಂಡಿದೆ. ದೇವಸ್ಥಾನದಲ್ಲಿ ಭಕ್ತರ ದರ್ಶನಕ್ಕೂ ಕೂಡ ವಿಶೇಷವಾದ ಜಾಗವನ್ನು ನಿರ್ಮಾಣ ಮಾಡಲಾಗುತ್ತಿದೆ ಕೋಟ್ಯಂತರ ರಾಮಭಕ್ತರ ಕನಸಾಗಿರುವ ಶ್ರೀ ರಾಮನ ಮೂರ್ತಿ ಪ್ರತಿಷ್ಠಾಪನೆ ಹಾಗೂ ಶ್ರೀ ರಾಮನ ಪಟ್ಟಾಭಿಷೇಕ ಇನ್ನು ಕೆಲವೇ ತಿಂಗಳುಗಳಲ್ಲಿ ಸಾಕಾರಗೊಳ್ಳಲಿದೆ.

ಇದರ ಜೊತೆಗೆ ಶ್ರೀರಾಮ ಮಂದಿರದಲ್ಲಿ ಸುರಕ್ಷತೆಗಾಗಿ ವಿಶೇಷ ಭದ್ರತಾ ಪಡೆ ಎನ್ನು ಕೂಡ ನೇಮಿಸಲು ಸಿಎಂ ಯೋಗಿ ಆದಿತ್ಯನಾಥ (CM. Yogi Adityanath) ಸೂಚನೆ ನೀಡಿದ್ದಾರೆ. ವಿಶೇಷವಾಗಿ ತರಬೇತಿಗೊಂಡ ತಂಡವನ್ನು ನಿಯೋಜಿಸಲಾಗುತ್ತೆ ಅವರಿಗೆ ವಸತಿ ಉಡುಗೆ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗುತ್ತದೆ ಎಂದು ಮಾನ್ಯ ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: Nagara Panchami: ನಾಗದೇವತೆಯನ್ನು ಈ ರೀತಿ ಸಂತೃಪ್ತಿಪಡಿಸಿದರೆ ಜೀವನದಲ್ಲಿ ನಾಗದೋಷ ಎಂಬುದರಿಂದ ಶಾಶ್ವತ ಮುಕ್ತಿ ಸಿಗುತ್ತದೆ ನೋಡಿ!

Comments are closed.