Anna Bhagya Scheme: 28 ಲಕ್ಷ ಜನರಿಗೆ ಅನ್ನಭಾಗ್ಯ ಯೋಜನೆಯ ಹಣ ಸಿಗೋದಿಲ್ಲ; ಕಾರಣ ಗೊತ್ತಾದ್ರೆ ಶಾಕ್ ಆಗ್ತೀರಿ!

Anna Bhagya Scheme: ಜುಲೈ (Month of July)  ತಿಂಗಳಿನಂತೆ ಆಗಸ್ಟ್ (August) ತಿಂಗಳಿನಲ್ಲಿಯೂ ಕೂಡ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಅಕ್ಕಿಯ ಬದಲು ಹಣಮನೆ ನೀಡುವುದಾಗಿ ರಾಜ್ಯ ಸರ್ಕಾರ ತಿಳಿಸಿದೆ ಆದರೆ ಬಿಪಿಎಲ್ ಕಾರ್ಡ್ (BPL Card) ಹೊಂದಿರುವ ಫಲಾನುಭವಿಗಳಿಗೂ ಕೂಡ ಸಾಕಷ್ಟು ಜನರಿಗೆ ಅನ್ನ ಭಾಗ್ಯ ಯೋಜನೆಯ ಹಣ ಖಾತಿಗೆ ಕಳೆದ ತಿಂಗಳು ಕೂಡ ವರ್ಗಾವಣೆ ಆಗಿಲ್ಲ.

ಇದನ್ನೂ ಓದಿ: RBI New Rules: ಇನ್ನು ಕೆಲವೇ ನಿಮಿಷಗಳಲ್ಲಿ ರೈತರೂ ಕೂಡ ಬ್ಯಾಂಕ್ ಗಳಿಂದ ಸಾಲ ಪಡೆದುಕೊಳ್ಳಬಹುದು; ಅದೂ ಕುಳಿತಲ್ಲಿಯೇ! ಏನಿದು ಆರ್ ಬಿ ಐ ಹೊಸ ಮಾರ್ಗಸೂಚಿ!

ತಮ್ಮ ಖಾತೆಗೆ ಆಧಾರ್ ಕಾರ್ಡ್ (Adhar card link) ಲಿಂಕ್ ಮಾಡಿಕೊಳ್ಳದೆ ಇದ್ದಲ್ಲಿ ಅಥವಾ ಯಾವುದಾದರೂ ಇತರ ನ್ಯೂನತೆಗಳು ಇದ್ದಲ್ಲಿ ಹಣ ವರ್ಗಾವಣೆ ಆಗಿರುವುದಿಲ್ಲ ಇದನ್ನು ತಕ್ಷಣವೇ ಸರಿಪಡಿಸಿಕೊಳ್ಳಬೇಕು ಎಂದು ಆಹಾರ ಹಾಗೂ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಇಲಾಖೆಯ ಜಂಟಿ ನಿರ್ದೇಶಕ ಮೊಹಮ್ಮದ್ ಖೈಜರ್ ಮಾಹಿತಿ ನೀಡಿದ್ದಾರೆ. ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ಕೊಡುತ್ತಿರುವ 5 ಕೆಜಿ ಅಕ್ಕಿಯ ಜೊತೆಗೆ ಹೆಚ್ಚುವರಿಯಾಗಿ ಐದು ಕೆಜಿ ಅಕ್ಕಿಯನ್ನು ಕೊಡಬೇಕಿತ್ತು ಆದರೆ ಅಕ್ಕಿ ಒಂದು ಸಲ ಸಾಧ್ಯವಾಗದೇ ಇರುವ ಕಾರಣ ಪ್ರತಿ ಕೆಜಿಗೆ 34 ರೂಪಾಯಿಗಳಂತೆ 5 ಕೆಜಿಗೆ 170 ರೂಪಾಯಿಗಳನ್ನು ಅವರ ಖಾತೆಗೆ ವರ್ಗಾವಣೆ ಮಾಡುತ್ತದೆ.

ಇನ್ನು ಕಳೆದ ತಿಂಗಳು ಸಾಕಷ್ಟು ಜನರಿಗೆ ಅರ್ಜಿ ಸಲ್ಲಿಸಿದ್ದರು ಕೂಡ ಅನ್ನಭಾಗ್ಯ ಯೋಜನೆಯ ಹಣ ಬಂದಿರಲಿಲ್ಲ ಈ ಬಾರಿಯೂ ಕೂಡ ಹಣ ಬರಬೇಕು ಅಂದರೆ ಕಳೆದ ಬಾರಿ ನಿಮ್ಮ ಖಾತೆಗೆ ಸಂಬಂಧಪಟ್ಟ ಹಾಗೆ ಯಾವ ಸಮಸ್ಯೆ ಇದೆ ಎಂಬುದನ್ನು ನೋಡಿಕೊಂಡು ಅದನ್ನು ಸೇವ ಕೇಂದ್ರಗಳಲ್ಲಿ ಅಥವಾ ಪಡಿತರ ಅಂಗಡಿಗಳಲ್ಲಿ ಅಥವಾ ನಾಗರಿಕ ಸರಬರಾಜು ಇಲಾಖೆಯಲ್ಲಿ ಸರಿಪಡಿಸಿಕೊಳ್ಳಬೇಕು. ಇನ್ನು ಬ್ಯಾಂಕ್ ನಲ್ಲಿ ಈ ಕೆ ವೈ ಸಿ (E-KYC) ಸರಿಯಾಗಿ ಮಾಡಿಸಿಕೊಳ್ಳದೆ ಇದ್ದಾಗಲೂ ಕೂಡ ಸರ್ಕಾರದಿಂದ ಹಣ ಬಂದಿದ್ದರು ಅದು ನಿಮ್ಮ ಖಾತೆಗೆ ನೇರವಾಗಿ ಬಂದಿರುವುದಿಲ್ಲ. ಇಂತಹ ಸಾಕಷ್ಟು ತಪ್ಪುಗಳಿಂದಾಗಿ ಸುಮಾರು 28 ಲಕ್ಷ ಜನರ ಖಾತೆಗೆ ಸರ್ಕಾರ ನೀಡುವ ಅನ್ನ ಭಾಗ್ಯ ಯೋಜನೆಯ ಹಣ ಬಂದು ಸೇರಿಲ್ಲ . ಇದನ್ನೂ ಓದಿ:BP Control: ಬಿಪಿ ನಿಯಂತ್ರಣದಲ್ಲಿ ಇರಬೇಕು ಅಂದ್ರೆ ಇದೊಂದನ್ನು ತಿನ್ನುವುದಕ್ಕೆ ರೂಢಿ ಮಾಡಿಕೊಳ್ಳಿ ಸಾಕು; ನಿಯಮಿತವಾಗಿ ಮಾತ್ರೆ ತಿನ್ನುವುದು ಕೂಡ ನಿಂತು ಹೋಗುತ್ತೆ!

ಡಿ ಬಿ ಟಿ ಸ್ಟೇಟಸ್ (DBT status) ಚೆಕ್ ಮಾಡಿ ನಂತರ ಬ್ಯಾಂಕ್ ನಲ್ಲಿಯೂ ಕೂಡ ಆಧಾರ್ ಕಾರ್ಡ್ ಲಿಂಕ್ ಆಗಿದೆಯೋ ಇಲ್ಲವೋ ಎಂಬುದನ್ನು ಪರಿಶೀಲನೆ ಮಾಡಿಕೊಳ್ಳಬೇಕು ಎಂದು ಜಂಟಿ ನಿರ್ದೇಶಕರು ತಿಳಿಸಿದ್ದಾರೆ. ಇದರ ಜೊತೆಗೆ ಸಾಕಷ್ಟು ಬಿಪಿಎಲ್ ಕಾರ್ಡ್ ಗಳು ಕೂಡ ರದ್ದಾಗಿವೆ ಇದರಿಂದಾಗಿಯೂ ಹಲವರಿಗೆ ಅನ್ನ ಭಾಗ್ಯ ಯೋಜನೆಯ ಹಣ ಬರುವುದಿಲ್ಲ.

ಬಿಪಿಎಲ್ ಕಾರ್ಡ್ ರದ್ದಾಗಿರುವುದನ್ನು ಚೆಕ್ ಮಾಡುವುದು ಹೇಗೆ ಅನು ಭಾಗ್ಯ ಯೋಜನೆ ಅಥವಾ ಗ್ರಹ ಲಕ್ಷ್ಮಿ ಯೋಜನೆಯ ಪ್ರಯೋಜನ ಸಿಗಬೇಕು ಅಂದ್ರೆ ಪಡಿತರ ಚೀಟಿ ಹೊಂದಿರಲೇಬೇಕು ಇನ್ನು ನಿಮ್ಮ ಹೆಸರಿನಲ್ಲಿ ಸರ್ಕಾರ ನೀಡಿರುವ ಮಾನದಂಡಗಳ ಆಧಾರದ ಮೇಲೆ ಪಡಿತರ ಚೀಟಿ ಇದ್ದರೆ ಮಾತ್ರ ನಿಮ್ಮ ಪಡಿತರ ಚೀಟಿ ರದ್ದಾಗುವುದಿಲ್ಲ ಇಲ್ಲವಾದರೆ ಅದನ್ನು ತಕ್ಷಣಕ್ಕೆ ರದ್ದುಪಡಿಸಲಾಗುತ್ತದೆ. ಇದನ್ನು ಚೆಕ್ ಮಾಡಲು ಆಹಾರ ಇಲಾಖೆಯ ವೆಬ್ಸೈಟ್ನಲ್ಲಿ ಈ ಸೇವೆಗಳು ಎನ್ನುವ ಆಯ್ಕೆಯನ್ನು ಕ್ಲಿಕ್ ಮಾಡಿ. ನಂತರ ಎಡ ಭಾಗದಲ್ಲಿ ಕಾಣಿಸುವ ಆಪ್ಷನ್ ಗಳಲ್ಲಿ ಈ ಪಡಿತರ ಚೀಟಿ ಎನ್ನುವುದರ ಮೇಲೆ ಕ್ಲಿಕ್ ಮಾಡಿ. ಒಂತರ ಪಡಿತರ ಚೀಟಿ ರದ್ದು ಪಡಿಸಲಾಗುವುದು ಎನ್ನುವ ಆಯ್ಕೆ ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಿದರೆ, ಪರದೆಯ ಮೇಲೆ ಕಾಣಿಸುವ ನಿಮ್ಮ  ಜಿಲ್ಲೆ ಹಾಗೂ ಇತರ ವಿವರಗಳನ್ನು ನೀಡಿದರೆ ನಿಮ್ಮ ಹೆಸರಿನಲ್ಲಿ ಇರುವ ಪಡಿತರ ಚೀಟಿ ರತ್ತಾಗಿದೆಯೋ ಇಲ್ಲವೋ ಎನ್ನುವ ಮಾಹಿತಿ ಸಿಗುತ್ತದೆ.

Comments are closed.