RBI New Rules: ಇನ್ನು ಕೆಲವೇ ನಿಮಿಷಗಳಲ್ಲಿ ರೈತರೂ ಕೂಡ ಬ್ಯಾಂಕ್ ಗಳಿಂದ ಸಾಲ ಪಡೆದುಕೊಳ್ಳಬಹುದು; ಅದೂ ಕುಳಿತಲ್ಲಿಯೇ! ಏನಿದು ಆರ್ ಬಿ ಐ ಹೊಸ ಮಾರ್ಗಸೂಚಿ!

RBI New Rules: ಗೃಹ ಸಾಲ (Home Loan) ಅಥವಾ ವೈಯಕ್ತಿಕ ಸಾಲ (Personal Loan)  ಅಷ್ಟೇ ಅಲ್ಲದೆ ರೈತರಿಗೆ ಸಿಗುವಂತಹ ಕಿಸಾನ್ ಕ್ರೆಡಿಟ್ ಸಾಲ (Kisan Credit Card Loan) ಇಂತಹ ಯಾವುದೇ ಸಾಲ ತೆಗೆದುಕೊಳ್ಳುವುದಿದ್ದರೂ ಬ್ಯಾಂಕ್ ನಿಂದ ಬ್ಯಾಂಕ್ (Bank) ಗೆ ಅಲೆದಾಡುವುದು, ಸಾಲಕ್ಕಾಗಿ ತಿಂಗಳಾನುಗಟ್ಟಲೆ ಕಾಯುವುದು ಸಾಮಾನ್ಯ. ಆದರೆ ಈ ರೀತಿ ಸಾಲಕ್ಕಾಗಿ ಕಾಯುವಾಗ ಬಹಳ ಬೇಸರ ಎನಿಸುತ್ತದೆ ಎಷ್ಟು ಸಮಯ ವ್ಯರ್ಥವಾಯಿತು ಅನಿಸುತ್ತೆ ಅಷ್ಟೇ ಅಲ್ಲ ಇಷ್ಟಪಟ್ಟರು ಕೆಲವೊಮ್ಮೆ ಸಾಲ ಸಿಗುವುದೇ ಇಲ್ಲ. ಹಾಗಾಗಿ ಜನರ ಸಮಸ್ಯೆಗಳನ್ನು ಅರಿತಿರುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಜನರಿಗೋಸ್ಕರ ಪ್ರಾಯೋಗಿಕವಾಗಿ ಪಬ್ಲಿಕ್ ಟೆಕ್ ಪ್ಲ್ಯಾಟ್ ಫಾರ್ಮ್ (Public Tech PlatForm) ಅನ್ನು ಆರಂಭಿಸಿದೆ ಇದೇನಾದ್ರೂ ಯಶಸ್ವಿಯ ಆದರೆ ಎಲ್ಲರಿಗೂ ಸಾಲ ತೆಗೆದುಕೊಳ್ಳುವುದು ಚಿಟಿಕೆ ಹೊಡೆದಷ್ಟೇ ಸುಲಭವಾಗಲಿದೆ.

ಪಬ್ಲಿಕ್ ಟೆಕ್ ಪ್ಲಾಟ್ ಫಾರ್ಮ್ ಅಂದ್ರೆ ಏನು?

ಆರ್ ಬಿ ಐ ಆಗಸ್ಟ್ 15 2023 ರಂದು ಕರ್ನಾಟಕ ಮಧ್ಯಪ್ರದೇಶ ಉತ್ತರ ಪ್ರದೇಶ ಮಹಾರಾಷ್ಟ್ರ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ಪ್ರಾಯೋಗಿಕವಾಗಿ ಪಬ್ಲಿಕ್ ಟೆಕ್ ಪ್ಲಾಟ್ ಫಾರ್ಮ್ ಆರಂಭಿಸಿದೆ. ಈ ಪ್ರಯೋಗ ಸಕ್ಸಸ್ ಆದರೆ ಇತರ ಎಲ್ಲ ರಾಜ್ಯಗಳಲ್ಲಿಯೂ ಕೂಡ ಈ ವ್ಯವಸ್ಥೆ ಜಾರಿಗೆ ಬರಲಿದೆ. ಪಬ್ಲಿಕ್ ಟೆಕ್ ಪ್ಲಾಟ್ ಫಾರ್ಮ್ ಜನರಿಗೆ ಬಹಳನೇ ಸಹಾಯಕವಾಗಲಿದೆ ಯಾಕೆಂದ್ರೆ ಸುಲಭವಾಗಿ ಕ್ಷಣಮಾತ್ರದಲ್ಲಿ ಮನೆಯಲ್ಲಿಯೇ ಕುಳಿತು ಸಾಲ ತೆಗೆದುಕೊಳ್ಳಬಹುದು.

ಹಾಗಾದ್ರೆ ನಾವು ದಾಖಲೆಗಳನ್ನೆಲ್ಲ ಕೊಡೋದು ಬೇಡ್ವಾ ಅಂತ ನಿಮಗೆ ಅನ್ನಿಸಬಹುದು. ಆದರೆ ಈ ಎಲ್ಲಾ ದಾಖಲೆಗಳನ್ನು ಕೂಡ ಡಿಜಿಟಲ್ಲಿಕರಣದ ಮೂಲಕವೇ ಪಡೆದುಕೊಳ್ಳಲಾಗುತ್ತೆ. ಬ್ಯಾಂಕ್ ಅಥವಾ ಡಿಜಿಟಲ್  ಮೂಲಕ ಎಲ್ಲಾ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ.

ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿರುವವರಿಗೆ 1.60 ಲಕ್ಷ ರೂಪಾಯಿಗಳ ವರೆಗೆ ಸಾಲ, ಹಾಗೂ ಎಂ ಎಸ್ ಎಮ್ ಇ ಅಥವಾ ಸಣ್ಣ ಉದ್ದಿಮೆ ವ್ಯಾಪಾರ ಮಾಡುವವರಿಗೆ 10 ಲಕ್ಷ ರೂಪಾಯಿಗಳ ವರೆಗೆ ಅತಿ ಕಡಿಮೆ ದಾಖಲೆಗಳ ಮೂಲಕ ಯಾವುದೇ ಬ್ಯಾಂಕ್ ಗೆ ಹೋಗದೆ ಮನೆಯಲ್ಲಿಯೇ ಕುಳಿತು ಆನ್ಲೈನ್ ಮೂಲಕ ಸುಲಭವಾಗಿ ಸಾಲ ಸಿಗುತ್ತದೆ. ಈ ಪ್ರಯೋಗ ವರ್ಕೌಟ್ ಆದರೆ ವಿಶ್ವವೇ ಭಾರತದತ್ತ ಡಿಜಿಟಲೀಕರಣದ ವಿಷಯದಲ್ಲಿ ತಲೆ ಎತ್ತಿ ನೋಡುತ್ತೆ ಅಂತ ಇತ್ತೀಚಿಗೆ ಆರ್ ಬಿ ಐ ಗವರ್ನರ್ ಶಕ್ತಿಕಾಂತ ದಾಸ್ ತಿಳಿಸಿದ್ದಾರೆ.

Comments are closed.