Dairy Farming: ಒಂದೇ ಒಂದು ರೂಪಾಯಿಗಳ ಬಡ್ಡಿಯೂ ಇಲ್ಲದೆ ಹಸು ಹೆಮ್ಮೆ ಖರೀದಿಗೆ ಪಡೆಯಿರಿ 50,000 ರೂ.ಸಾಲ! ಹೇಗೆ ಗೊತ್ತೇ?

Dairy Farming: ಇತ್ತೀಚಿನ ದಿನಗಳಲ್ಲಿ ಹಸು (Cow Farming) ಅಥವಾ ಎಮ್ಮೆ ಎಂತಹ ಹಾಲು ಕೊಡುವ ಗೋವನ್ನು ಸಾಕುವ ಸಂಖ್ಯೆ ತೀರಾ ಕಡಿಮೆಯಾಗಿದೆ. ಅದರಲ್ಲೂ ಗೋವುಗಳಿಗೆ ಬರುತ್ತಿರುವ ಚರ್ಮ ರೋಗ ಅಕಾಲಿಕ ಮರಣ ಮೊದಲಾದ ಸಮಸ್ಯೆಯಿಂದಾಗಿ ಹೈನುಗಾರಿಕೆ ಮಾಡಲು ಜನ ಹಿಂಜರಿಯುತ್ತಿದ್ದಾರೆ. ಆದರೆ ಈ ರೀತಿ ಆದರೆ ಮುಂದಿನ ದಿನಗಳಲ್ಲಿ ಡೈರಿ ಉತ್ಪನ್ನ (Dairy Farming) ಗಳನ್ನು ತಯಾರಿಸುವುದು ಕೂಡ ಕಷ್ಟವಾಗುತ್ತದೆ ಈ ಕಾರಣಕ್ಕಾಗಿ ರೈತರಿಗೆ ಹಸು ಹಾಗೂ ಎಮ್ಮೆ ಸಾಕಲು ಹೆಚ್ಚಿನ ಪ್ರೋತ್ಸಾಹ ನೀಡುವುದಕ್ಕಾಗಿ ಬಡ್ಡಿರಹಿತ ಸಾಲವನ್ನು ನೀಡುವುದಾಗಿ ಹಾಲು ಒಕ್ಕೂಟಗಳು ತೀರ್ಮಾನಿಸಿವೆ. ಇದನ್ನೂ ಓದಿ:Anna Bhagya Scheme: ಅಗಸ್ಟ್ ತಿಂಗಳ ಅನ್ನಭಾಗ್ಯ ಹಣ ಯಾವಾಗ ಖಾತೆಗೆ ಜಮಾ ಆಗತ್ತೆ; ಈಗಾಗಲೇ ಆಗಿರಬಹುದು ಕೂಡಲೇ ಈ ರೀತಿ ಚೆಕ್ ಮಾಡ್ಕೋಳ್ಳಿ!

ಹೌದು ರಾಜ್ಯದ ಪ್ರತಿ ಜಿಲ್ಲೆಯಲ್ಲಿಯೂ ಕೂಡ ಹಸು ಹಾಗೂ ಎಮ್ಮೆ ಸಾಕಾಣಿಕೆಗೆ ಉತ್ತೇಜನ ನೀಡುವ ಸಲುವಾಗಿ ಉತ್ತಮ ತಳಿಯ ಹಸು ಖರೀದಿ ಮಾಡಲು ಬಡ್ಡಿ ರಹಿತ ಸಾಲವನ್ನು ನೀಡಲು ಹಾಲು ಒಕ್ಕೂಟ ತೀರ್ಮಾನಿಸಿದೆ. ಮೇವಿನ ಕೊರತೆ ವಾತಾವರಣದ ಬಿಸಿ ಮೊದಲಾದ ಕಾರಣಗಳಿಂದಾಗಿ ಹಸು ಸಾಕುವವರ ಸಂಖ್ಯೆ ಕಡಿಮೆ ಆಗುತ್ತದೆ. ಹಾಗಾಗಿ ಇಷ್ಟು ದಿನ ಹೈನುಗಾರಿಕೆ ಮಾಡಿಕೊಂಡು ಬರುತ್ತಿರುವ ರೈತರು ಯಾವುದೇ ಕಾರಣಕ್ಕೂ ಹೈನುಗಾರಿಕೆಯನ್ನು ಬಿಡಬಾರದು ಎನ್ನುವ ಸಲುವಾಗಿ ಅವರಿಗೆ ಬಡ್ಡಿ ರಹಿತ ವೈಯಕ್ತಿಕ ಸಾಲವನ್ನು ನೀಡಲಾಗುತ್ತಿದೆ.

50,000 ರೂ. ಗಳ ಬಡ್ಡಿ ರಹಿತ ಸಾಲ
ಈ ಬಗ್ಗೆ ಮಾತನಾಡಿರುವ ಬೆಳಗಾವಿ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ವಿವೇಕರಾವ್ ಪಾಟೀಲ್ ಹೈನುಗಾರಿಕೆ ಮಾಡುವವರಿಗೆ ಬಡ್ಡಿ ರಹಿತ 50,000 ನೀಡುತ್ತಿರುವುದಾಗಿ ತಿಳಿಸಿದ್ದಾರೆ. ಇದನ್ನು ಓದಿ: Property Rules: 12 ವರ್ಷ ಒಂದೇ ಮನೆಯಲ್ಲಿ ವಾಸಿಸಿದ ಬಾಡಿಗೆದಾರ ಆ ಮನೆಯನ್ನು ಸ್ವಾಧೀನಪಡಿಸಿಕೊಳ್ಳಬಹುದೇ? ಭಾರತದ ಕಾನೂನು ಏನನ್ನುತ್ತೆ ಗೊತ್ತೇ?

ಚರ್ಮಗಂಟು ರೋಗದಿಂದ ಬೆಳಗಾವಿ ಜಿಲ್ಲೆಯಲ್ಲಿಯೂ ಕೂಡ ಈಗಾಗಲೇ ಅಸಂಖ್ಯಾತ ಹೆಮ್ಮೆ ಹಸು ಕರುಗಳು ಸಾವನ್ನಪ್ಪಿದೆ. ಇದರಿಂದಾಗಿ ಹೈನುಗಾರಿಕೆಗೆ ದೊಡ್ಡ ಪೆಟ್ಟು ಬಿದ್ದಿದೆ ಇದನ್ನು ಸರಿದೂಗಿಸುವ ಸಲುವಾಗಿ ಉತ್ತಮ ತಳಿಯ ಹಸುಗಳನ್ನು ರೈತರು ಖರೀದಿ ಮಾಡಬೇಕು ಎಂದು ಅಧ್ಯಕ್ಷರು ತಿಳಿಸಿದ್ದಾರೆ. ಇನ್ನು ಚರ್ಮ ಗಂಟು ರೋಗದಿಂದ ವಾಸಿಯಾಗಿರುವ ಹಸು ಹಾಗೂ ಎಮ್ಮೆ ಹಾಲು ಕೊಡುವ ಸಾಮರ್ಥ್ಯವನ್ನು ಕೂಡ ಕುಗ್ಗಿಸಿಕೊಂಡಿವೆ. ಇದರಿಂದಾಗಿ ಮುಂದೆ ಹಸು ಖರೀದಿ ಮಾಡುವ ರೈತರು ಉತ್ತಮವಾಗಿರುವ ತಳಿಯನ್ನು ನೋಡಿ ಖರೀದಿ ಮಾಡಬೇಕು ಎಂಬುದು ಅವರ ಅಭಿಪ್ರಾಯ.

5, ಲಕ್ಷ ಅನುದಾನ ಬಿಡುಗಡೆ
ಜಿಲ್ಲೆಯಲ್ಲಿ 14 ಹಾಲು ಒಕ್ಕೂಟಗಳಿಗೆ ತಲ ಐದು ಲಕ್ಷದಂತೆ 70 ಲಕ್ಷ ರೂಪಾಯಿಗಳ ಸಹಾಯಧನವನ್ನು ಬಿಡುಗಡೆ ಮಾಡಲಾಗಿದೆ. ರೈತರು ಇದರ ಉಪಯೋಗ ಪಡೆದುಕೊಳ್ಳಬೇಕು ಒಕ್ಕೂಟಗಳಿಗೂ ಕೂಡ ನೀಡಲಾಗುವ ಸಾಲದ ಮೊತ್ತವನ್ನು ಮುಂದಿನ ದಿನಗಳಲ್ಲಿ ಹೆಚ್ಚಿಸಲಾಗುವುದು ಎಂದು ಒಕ್ಕೂಟಗಳ ಅಧ್ಯಕ್ಷರು ತಿಳಿಸಿದ್ದಾರೆ.

ದಾವಣಗೆರೆ ಭಾಗದಲ್ಲಿಯೂ ಸಿಗಲಿದೆ ರೈತರಿಗೆ ಸಹಾಯಧನ

ದಾವಣಗೆರೆಯ ಕಾರ್ಯಕ್ರಮ ಒಂದರಲ್ಲಿ ಉಪಸ್ಥಿತರಿದ್ದ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಅವರು ಹಾಲು ಒಕ್ಕೂಟದಿಂದ ರೈತರಿಗೆ 40,000 ನೀಡಬೇಕೆಂದು ಆದೇಶ ನೀಡಿದ್ದಾರೆ. ದಾವಣಗೆರೆ ಚಿತ್ರದುರ್ಗ ಜಿಲ್ಲೆಯಲ್ಲಿ ಹಾಲಿನ ಒಕ್ಕೂಟ ರಚನೆ ಮಾಡಿ ರೈತರಿಗೆ 40,000 ಸಬ್ಸಿಡಿ ಯನ್ನು ಹಸು, ಎಮ್ಮೆ ಖರೀದಿಗೆ ಕೊಡುವುದಾಗಿ ಭರವಸೆ ನೀಡಿದ್ದಾರೆ. ಇದರ ಜೊತೆಗೆ ರಾಜ್ಯ ಸರ್ಕಾರವೂ ಕೂಡ ಅಕಾಲಿಕ ಮರಣ ಹೊಂದಿದ ಹಸುವಿನ ಮಾಲಿಕನಿಗೆ 10 ಸಾವಿರ ರೂ. ಸಹಾಯ ಧನ ನೀಡುವುದಾಗಿ ಘೋಷಿಸಿದೆ.

Comments are closed.