No Tax in this country: ಭವಿಷ್ಯದಲ್ಲಿ ಈ ದೇಶಗಳಿಗೆ ಶಿಫ್ಟ್ ಆಗೋಕ್ಕೇ ಯೋಚಿಸುತ್ತಿದ್ದಾರೆ ಹಲವರು; ಎಷ್ಟು ಹಣ ಮಾಡಿದ್ರೂ ಸರ್ಕಾರಕ್ಕೆ ಒಂದು ರೂ. ಟ್ಯಾಕ್ಸ್ ಕೂಡ ಕಟ್ಟೋದು ಬೇಡವಂತೆ; ಯಾವ ದೇಶಗಳು ಗೊತ್ತೇ?

No Tax in this country: ಒಂದು ದೇಶ ಅಭಿವೃದ್ಧಿ ಹೊಂದಬೇಕು ಎಂದರೆ ಆ ದೇಶದ ಆರ್ಥಿಕ ಸ್ಥಿತಿ (Financial condition) ಚೆನ್ನಾಗಿರಬೇಕು. ಆದರೆ ಈ ಹಣವನ್ನು ಜನರ ಮೇಲೆ ವಿಧಿಸುವ ತೆರಿಗೆಯಿಂದ ದೇಶದ ಬೊಕ್ಕಸ ತುಂಬುತ್ತದೆ. ಅದು ದೇಶದ ಅಭಿವೃದ್ಧಿಗೆ ಬಳಕೆಯಾಗುತ್ತದೆ. ಒಬ್ಬ ವ್ಯಕ್ತಿಯು ಸರ್ಕಾರ ತಿಳಿಸಿದ ಮೊತ್ತಕ್ಕಿಂತ ಹೆಚ್ಚಿನ ಹಣ ಗಳಿಸಿದರೆ ಆತ ಆದಾಯ ತೆರಿಗೆ (Income tax) ಪಾವತಿಸಬೇಕಾಗುತ್ತದೆ. ಇದಕ್ಕಾಗಿಯೇ ಹಲವರು ಆದಾಯ ತರಿಗೆ ಪಾವತಿ ಮಾಡದಿರಲು ಹಲವಾರು ದಾರಿಗಳನ್ನು ಕಂಡುಕೊಂಡಿರುತ್ತಾರೆ. ಆದರೆ ಕೆಲವೊಂದು ದೇಶದಲ್ಲಿ ಆದಾಯ ತೆರಿಗೆ ಪಾವತಿ ಮಾಡುವ ಪದ್ಧತಿಯೇ ಇಲ್ಲ !.. ಇದು ಅಚ್ಚರಿಯಾದರೂ ಸತ್ಯ. ಇದನ್ನೂ ಓದಿ: Kannada language: ಇನ್ನು ಮುಂದೆ ಬ್ಯಾಂಕ್ ನಲ್ಲಿ ಯಾರೂ ’ಕನ್ನಡ್ ಗೊತ್ತಿಲ್ಲ’ ಎನ್ನುವ ಹಾಗಿಲ್ಲ ಎಂದ ರಾಜ್ಯ ಸರ್ಕಾರ; ’ಕನ್ನಡಿಗರಿಗೆ ಕೆಲಸ’ ಕೂಡ ಸಿಗಲಿದ್ಯಾ?

ಹೌದು, ಕೆಲವೊಂದು ದೇಶಗಳು ಆದಾಯ ತೆರಿಗೆ ಪಾವತಿ ನೀತಿಯನ್ನು ಹೊಂದಿಲ್ಲ. ಆದರೆ ಈ ದೇಶಗಳು ತಮ್ಮ ದೇಶಕ್ಕೆ ಬರುವ ಪ್ರವಾಸಿಗರಿಂದ ಹೆಚ್ಚಿನ ಹಣ ವಸೂಲಿ ಮಾಡಿ ಅದರಿಂದ ದೇಶವನ್ನು ನಡೆಸುತ್ತಾರೆ.

ವಿಶ್ವದ ದೊಡಣ್ಣ ಅಮೆರಿಕಾ (America) ಪಕ್ಕದಲ್ಲಿರುವ ಕೆರೆಬಿಯನ್ ದ್ವೀಪದ ಹತ್ತಿರದಲ್ಲಿರುವ ಬಹಮಾಸ್ ಲ್ಲಿ ಆದಾಯ ತೆರಿಗೆ ಪಾವತಿ ಪದ್ಧತಿ ಇಲ್ಲ. ಆದರೆ ಅಲ್ಲಿ ಕೆಲವೊಂದು ಶರತ್ತುಗಳನ್ನು ವಿಧಿಸಲಾಗುತ್ತದೆ. ಅದನ್ನು ನಾಗರೀಕರು ಪಾಲಿಸಲೇಬೇಕು. ಅಲ್ಲದೆ ಬಹಮಾಸ್ನಲ್ಲಿ ಮೂರು ತಿಂಗಳಿಗೂ ಹೆಚ್ಚಿನ ಕಾಲ ಇದ್ದಲ್ಲಿ ನಿಮಗೆ ಅಲ್ಲಿನ ನಾಗರೀಕತ್ವಕ್ಕೆ ಅರ್ಜಿ ಸಲ್ಲಿಸಬಹುದು. ಖಾಯಂ ನಾಗರೀಕತ್ವ ಸಿಕ್ಕಿದಲ್ಲಿ ನೀವು ಎಷ್ಟೇ ಆದಾಯ ಗಳಿಸಿದರೂ ಅದಕ್ಕೆ ತೆರಿಗೆ ಪಾವತಿ ಮಾಡುವ ಅವಶ್ಯಕತೆ ಇಲ್ಲ.

ಇನ್ನು ಯೂರೋಪ್ನ (Europe)  ಮೊನೇಕೋದಲ್ಲಿಯೂ ಸಹ ಆದಾಯ ತೆರಿಗೆ ಪಾವತಿ ಮಾಡುವ ವಿಧಾನವಿಲ್ಲ. ಈ ದೇಶವು ಸಂಪೂರ್ಣ ಪ್ರವಾಸಿಗರ ಮೇಲೆ ಡಿಪೆಂಡ್ ಆಗಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ಇಲ್ಲಿ ದೊಡ್ಡ ದೊಡ್ಡ ಹೊಟೇಲ್ಗಳು, ರೆಸ್ಟೋರೆಂಟ್ಗಳು, ರೆಸಾರ್ಟ್ಗಳಿವೆ. ಇವುಗಳಿಂದ ಬರುವ ಆದಾಯದಿಂದಲೇ ಈ ದೇಶ ನಡೆಯುತ್ತಿದೆ. ವಿಶ್ವದ ಅತ್ಯಂತ ಸುಂದರ ಸ್ಥಳಗಳ ಪಟ್ಟಿಯಲ್ಲಿ ಮೊನೇಕೋ ಅಗ್ರಣೀಯ ಸ್ಥಾನದಲ್ಲಿದೆ. ಹಾಗಾಗಿಯೇ ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಿ ಎಂಜಾಯ್ ಮಾಡುತ್ತಾರೆ. ಈ ದೇಶದಲ್ಲಿ ನೀವು ಖಾಯಂ ಆಗಿ ವಾಸಿಸಬೇಕು ಎಂದು ಹೇಳಿದರೆ ಅಲ್ಲಿನ ಸರ್ಕಾರಕ್ಕೆ ನೀವು 5 ಲಕ್ಷ ಯುರೋ ಪಾವತಿಸಬೇಕಾಗುತ್ತದೆ. ಇದನ್ನೂ ಓದಿ: TTD: ಇನ್ನು ಮೇಲೆ ತಿರುಪತಿಗೆ ಹೋಗಲು ಬಯಸುವವರಿಗೆ ಫ್ರೀ VIP ದರ್ಶನ; ಅದಕ್ಕೆ ನೀವು ಈ ಒಂದು ಕೆಲಸ ಮಾಡ್ಬೇಕು ಏನು ಗೊತ್ತಾ?

ಇನ್ನು ವಿಶ್ವದ ಪ್ರಮುಖ ಅರೇಬಿಯನ್ ದೇಶಗಳಾದ ದುಬೈ, ಶಾರ್ಜಾ, ಅಬುದಾಬಿಯನ್ನು ಒಳಗೊಂಡ ಯುಎಇ (UAE) ನಲ್ಲಿಯೂ ಆದಾಯ ತೆರಿಗೆ ಪಾವತಿಸುವ ಪದ್ಧತಿ ಇಲ್ಲ. ಅಲ್ಲದೆ ಈ ದೇಶದಲ್ಲಿ ಯಾವುದೇ ರೀತಿಯ ಕಾರ್ಪೋರೇಟ್ ತೆರಿಗೆಯನ್ನು ಸಹ ವಿಧಿಸುವುದಿಲ್ಲ. ಇದೇ ರೀತಿ ಹಲವು ಗಲ್ಫ್ ದೇಶಗಳಲ್ಲಿಯೂ ಆದಾಯ ತೆರಿಗೆ ವಿಧಿಸುವ ಪದ್ಧತಿ ಇಲ್ಲ.

ದುಬಾರಿ ಕೆರಬಿಯನ್ ದೇಶಗಳಲ್ಲಿ ಒಂದಾಗಿರುವ ಬರ್ಮುಡಾದಲ್ಲಿಯೂ ಆದಾಯ ತೆರಿಗೆ ವಿಧಿಸುವುದಿಲ್ಲ. ಈ ಮಾತನ್ನು ನೀವು ನಂಬಲೇ ಬೇಕು. ಈ ದೇಶವು ಬಹಳಷ್ಟು ಬೀಚ್ಗಳನ್ನು ಹೊಂದಿದ್ದು, ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತದೆ. ಇಲ್ಲಿ ಕಂಪನಿಗಳಿಗೆ ಪರೋಲ್ ತೆರಿಗೆ ವಿಧಿಸಲಾಗುತ್ತದೆ. ಅಲ್ಲದೆ ಆಸ್ತಿ ಮಾಲೀಕರು ಹಾಗೂ ಬಾಡಿಗೆದಾರರಿಗೆ ಲ್ಯಾಂಡ್ ಟ್ಯಾಕ್ಸ್ ವಿಧಿಸಲಾಗುತ್ತದೆ. ಇದರಿಂದ ಬರುವ ಆದಾಯದಿಂದಲೇ ಇಲ್ಲಿನ ಸರ್ಕಾರಗಳು ನಡೆಯುತ್ತಿವೆ.

Comments are closed.