TTD: ಇನ್ನು ಮೇಲೆ ತಿರುಪತಿಗೆ ಹೋಗಲು ಬಯಸುವವರಿಗೆ ಫ್ರೀ VIP ದರ್ಶನ; ಅದಕ್ಕೆ ನೀವು ಈ ಒಂದು ಕೆಲಸ ಮಾಡ್ಬೇಕು ಏನು ಗೊತ್ತಾ?

TTD: ಭಾರತವು ಹಿಂದೂ ರಾಷ್ಟ್ರ. ಇಲ್ಲಿ ಲಕ್ಷಾಂತರ ದೇಗುಲಗಳಿವೆ. ಒಂದೊಂದು ದೇಗುಲಕ್ಕೂ ಒಂದೊಂದು ಇತಿಹಾಸವಿದೆ. ಭಾರತದ ಶ್ರೀಮಂತ ದೇಗುಲಗಳಲ್ಲಿ ಒಂದಾದ ಶ್ರೀ ತಿರುಪತಿ ತಿರುಮಲ ದೇವಸ್ಥಾನ (Tirupati Tirumala Temple) ದಲ್ಲಿ ಯುವಕರಿಗೆ ಉಚಿತ ದರ್ಶನ ನೀಡಲು ತೀರ್ಮಾನಿಸಲಾಗಿದೆ. ಇದಕ್ಕಾಗಿ ಯುವಕರು ಗೋವಿಂದ ಕೋಟಿಯನ್ನು ಪೂರ್ಣ ಮಾಡಬೇಕಾಗಿದೆ. ಇದನ್ನೂ ಓದಿ:Jawan:ಕರ್ನಾಟಕದ ಥಿಯೇಟರ್ ನ್ನು ಚಿಂದಿ ಮಾಡಿದ ಜವಾನ್ ಚಿತ್ರದ ಅಭಿನಯಕ್ಕೆ ಲೇಡಿ ಸೂಪರ್ ಸ್ಟಾರ್, ವಿಜಯ್ ಸೇತುಪತಿಗೆ ಸಿಕ್ಕ ಸಂಭಾವನೆ ಎಷ್ಟು ಗೊತ್ತಾ? ಒಬ್ಬೊಬ್ಬರ ಸಂಭಾವನೆ ಕೇಳಿದ್ರೆ ತಲೆ ತಿರುಗೋದು ಖಚಿತ !

ಇದೇ ಮಂಗಳವಾರ ತಿರುಪತಿ ತಿರುಮಲ ದೇವಸ್ಥಾನ ಸಮಿತಿಯ ಸಭೆ ನಡೆದಿದ್ದು, ಈ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಯುವಕರಲ್ಲಿ ದೈವ ಶ್ರದ್ಧೆ, ಸನಾತನ ಧರ್ಮದಲ್ಲಿ ಆಸಕ್ತಿ ಮೂಡಿಸುವ ಸಲುವಾಗಿ ಟಿಟಿಡಿ (TTD) ಅಧ್ಯಕ್ಷ ಭೂಮನ ಕರುಣಾಕರ ರೆಡ್ಡಿ ನೇತೃತ್ವದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಗೋವಿಂದ ಕೋಟಿ ಮುಗಿಸಿದ ಯುವಕರಿಗೆ ಬ್ರೇಕ್ ದರ್ಶನ ನೀಡಲು ನಿರ್ಧರಿಸಲಾಗಿದೆ. ಸಮಿತಿಯವರು ತಿಳಿಸಿದ ಪ್ರಕಾರ 1೦,೦1,116 ಬಾರಿ ಗೋವಿಂದ ಕೋಟಿಯನ್ನು ಬರೆಯಬೇಕು. ಇದನ್ನು ಬರೆಯಲು ಕನಿಷ್ಠ ಮೂರು ವರ್ಷವಾದರೂ ಬೇಕಾಗುತ್ತದೆ. ಎಷ್ಟೇ ನಿರಂತರವಾಗಿ ಬರೆದರೂ ಒಂದು ವರ್ಷವಾದರೂ ಬೇಕಾಗುತ್ತದೆ. ಇದನ್ನು ಪೂರ್ಣಗೊಳಿಸಿದ ಯುವಕರು ಹಾಗೂ ಆತನೊಂದಿಗೆ ಒಬ್ಬರಿಗೆ ಉಚಿತ ದರ್ಶನ ನೀಡಲಾಗುತ್ತದೆ. ಇದನ್ನೂ ಓದಿ: Samman Scheme: ಸದ್ಯದಲ್ಲಿಯೇ ಬಿಡುಗಡೆಯಾಗಲಿರುವ ಪಿಎಂ ಕಿಸಾನ್ ಸಮ್ಮಾನ್ 2,೦೦೦ ರೂ. ತಂದೆಯ ಜೊತೆ ಮಗನಿಗೂ ಸಿಗಲಿದ್ಯಾ? 15 ನೇ ಕಂತಿನ ಹಣ ಯಾರ ಕೈಸೇರಲಿದೆ!  

ಈ ಗೋವಿಂದ ಕೋಟಿಯನ್ನು 5 ವರ್ಷದ ಮಕ್ಕಳಿಂದ ಹಿಡಿದು ಸ್ನಾತಕೋತ್ತರ ಅಧ್ಯಯನ ಮಾಡುವ ಯುವಕರ ವರೆಗೆ ಯಾರೂ ಬೇಕಾದರೂ ಬರೆಯಬಹುದು. ಹೀಗೆ ಬರೆಯುವುದರಿಂದ ಮಕ್ಕಳಲ್ಲಿ ಸನಾತನ ಧರ್ಮದ ಮೇಲೆ ಶ್ರದ್ಧೆ, ಆಸಕ್ತಿ ಹುಟ್ಟುತ್ತದೆ. ಮುಂದೆ ಅವರು ಸಮಾಜದಲ್ಲಿ ಒಳ್ಳೆಯ ವ್ಯಕ್ತಿಗಳಾಗಿ ಸಮಾಜದ ಆಸ್ತಿಯಾಗುತ್ತಾರೆ.

ಈ ಗೋವಿಂದ ಕೋಟಿಗೆ ಸಂಬಂಧಿಸಿದಂತೆ ಯಾವ ರೀತಿ ಬರೆಯಬೇಕು ಎನ್ನುವ ನಿಯಮಾವಳಿಯನ್ನು ಟಿಟಿಡಿ ಇನ್ನೊಂದು ವಾರದಲ್ಲಿ ಪ್ರಕಟಿಸುವ ಸಾಧ್ಯತೆ ಇದೆ. ಇದರ ಜೊತೆ ಸರಳ ರೀತಿಯಲ್ಲಿ ಚಿಕ್ಕ ಮಕ್ಕಳಿಗೂ ಅರ್ಥವಾಗುವ ರೀತಿಯಲ್ಲಿ ಬರೆದಿರುವ ಭಗವದ್ಗೀತೆ ಪುಸ್ತಕಗಳನ್ನು ವಿತರಿಸಲು ಈ ಸಭೆಯಲ್ಲಿ ನಿರ್ಧಾರಕ್ಕೆ ಬರಲಾಗಿದೆ.

ಸನಾತನ ಧರ್ಮ ಹಾಗೂ ಹಿಂದೂ ಧರ್ಮದ ಬಗ್ಗೆ ಹಲವು ರೀತಿಯ ಚರ್ಚೆಗಳು ನಡೆಯುತ್ತಿರುವ ವೇಳೆಯಲ್ಲಿಯೇ ಟಿಟಿಡಿ ಈ ರೀತಿಯ ನಿರ್ಧಾರ ಕೈಗೊಂಡಿರುವುದು ಶ್ಲಾಘನೀಯವಾಗಿದೆ ಎನ್ನುವುದು ಸಾರ್ವಜನಿಕರ ಅನಿಸಿಕೆ.

Comments are closed.