Jawan:ಕರ್ನಾಟಕದ ಥಿಯೇಟರ್ ನ್ನು ಚಿಂದಿ ಮಾಡಿದ ಜವಾನ್ ಚಿತ್ರದ ಅಭಿನಯಕ್ಕೆ ಲೇಡಿ ಸೂಪರ್ ಸ್ಟಾರ್, ವಿಜಯ್ ಸೇತುಪತಿಗೆ ಸಿಕ್ಕ ಸಂಭಾವನೆ ಎಷ್ಟು ಗೊತ್ತಾ? ಒಬ್ಬೊಬ್ಬರ ಸಂಭಾವನೆ ಕೇಳಿದ್ರೆ ತಲೆ ತಿರುಗೋದು ಖಚಿತ !

Jawan: ಸತತ ಸೋಲುಗಳಿಂದ ಕಂಗೆಟ್ಟಿದ್ದ ಬಾಲಿವುಡ್ ಬಾದ್ಷಾ, ಕಿಂಗ್ ಖಾನ್ ಶಾರುಕ್ ಖಾನ್ (Sharukh Khan)  ಅವರು ಅಂತೂ ಒಂದು ಗೆಲುವಿನ ರುಚಿ ನೋಡಿದ್ದಾರೆ. ಶಾರುಕ್ ನಟನೆಯ ಜವಾನ್ (Jawan) ಸಿನೆಮಾ ಸೆ.೭ರಂದು ಬಿಡುಗಡೆಯಾಗಿದ್ದು ಪ್ರಪಂಚದಾದ್ಯಂತ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಂತೂ ಶಾರುಕ್ ಗೆಲ್ಲಿಸಲು ದಕ್ಷಿಣ ಭಾರತದ ನಿರ್ದೇಶಕರೇ ಬರಬೇಕಾಯಿತು ಎನ್ನುವುದು ವಿಶೇಷವಾಗಿದೆ. ಇದನ್ನೂ ಓದಿ: PM Kisan Samman Scheme: ಸದ್ಯದಲ್ಲಿಯೇ ಬಿಡುಗಡೆಯಾಗಲಿರುವ ಪಿಎಂ ಕಿಸಾನ್ ಸಮ್ಮಾನ್ 2,೦೦೦ ರೂ. ತಂದೆಯ ಜೊತೆ ಮಗನಿಗೂ ಸಿಗಲಿದ್ಯಾ? 15 ನೇ ಕಂತಿನ ಹಣ ಯಾರ ಕೈಸೇರಲಿದೆ!  

ಒಂದು ಕಾಲದಲ್ಲಿ ದಕ್ಷಿಣ ಭಾರತದ ಪ್ರಾದೇಶಿಕ ಭಾಷೆಗಳ ಚಿತ್ರಗಳನ್ನು ಹಳಿಯುತ್ತಿದ್ದ ಬಾಲಿವುಡ್ (Bollywood) ಮಂದಿಯನ್ನು ಮತ್ತೆ ಮೇಲಕ್ಕೆತ್ತಲು ದಕ್ಷಿಣ ಭಾರತದವರೇ ಬೇಕಾಯಿತು ಎಂದು ಸಾರ್ವಜನಿಕರು ಆಡಿಕೊಳ್ಳುತ್ತಿದ್ದಾರೆ.

ಜವಾನ್ ಸಿನೆಮಾವು ಬಿಡುಗಡೆಗೆ ಮುನ್ನವೇ ಸುಮಾರು ೫೦ ಕೋಟಿ ರೂ. ಟಿಕೆಟ್ಗಳು ಮಾರಾಟವಾಗಿದೆ ಎನ್ನುವ ಮಾಹಿತಿ ಬಂದಿದೆ. ಇನ್ನು ಈ ಸಿನೆಮಾದಲ್ಲಿ ಶಾರುಕ್ ಖಾನ್ಗೆ ನಾಯಕಿಯಾಗಿ ಲೇಡಿ ಸೂಪರ್ ಸ್ಟಾರ್ ಎಂದೇ ಹೆಸರಾದ ನಯನಾ ತಾರಾ (Nayana Tara) ನಟಿಸಿದ್ದಾರೆ. ತಮಿಳಿನ ವಿಜಯ್ ಸೇತುಪತಿ ಅವರು ಖಳನಾಯಕನಾಗಿ ಅಬ್ಬರಿಸಿದ್ದಾರೆ. ಇನ್ನು ದೀಪಿಕಾ ಪಡುಕೋಣೆ, ಪ್ರಿಯಾ ಮಣಿ, ಸಾನ್ಯಾ ಮಲ್ಹೋತ್ರಾ, ಯೋಗಿ ಬಾಬು ಮುಂತಾದವರು ನಟಿಸಿದ್ದಾರೆ.

ಈ ಸಿನೆಮಾದಲ್ಲಿ ನಾಯಕಿಯಾಗಿ ನಟಿಸಿರುವ ನಯನಾ ತಾರಾ ಅವರಿಗೆ ಶಾರುಕ್ ಖಾನ್ ಒಡೆತನದ ಸಂಸ್ಥೆಯಾದ ರೆಡ್ ಚಿಲ್ಲಿಸ್ ಸಂಸ್ಥೆಯು ಬರೊಬ್ಬರಿ 9 ಕೋಟಿ ರೂ.ಗಳನ್ನು ನೀಡಿದೆ ಎನ್ನಲಾಗಿದೆ. ಖಳನಾಯಕನಾಗಿ ಎರಡು ಶೇಡ್ಗಳಲ್ಲಿ ಮಿಂಚಿದ ವಿಜಯ್ ಸೇತುಪತಿ ಅವರಿಗೆ 23 ಕೋಟಿ ರೂ., ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡ ದೀಪಿಕಾ ಪಡುಕೋಣೆ ಅವರಿಗೆ 6 ಕೋಟಿ ರೂ., ಪ್ರಿಯಾ ಮಣಿ, ಸಾನ್ಯಾ ಅವರಿಗೆ 3 ಕೋಟಿ ರೂ. ಹಾಸ್ಯ ನಟ ಯೋಗಿ ಬಾಬುಗೆ 2 ಕೋಟಿ ರೂ.ಗಳನ್ನು ನೀಡಿದೆ ಎನ್ನುವ ಗುಸು ಗುಸು ಎಲ್ಲೆಡೆ ದಟ್ಟವಾಗಿ ಹಬ್ಬಿದೆ.

ಇನ್ನು ಈ ಸಿನೆಮಾವನ್ನು ತಮಿಳಿನ ಖ್ಯಾತ ನಿರ್ದೇಶಕ ಅಟ್ಲಿ ಅವರು ನಿರ್ದೇಶನ ಮಾಡಿದ್ದಾರೆ. ಅನಿರುದ್ ರವಿಚಂದ್ರನ್ ಅವರ ಸಂಗೀತ ಜವಾನ್ ಸಿನೆಮಾಕ್ಕಿದೆ. ಇದನ್ನೂ ಓದಿ: Gruhalakshmi Scheme: ತಾತ್ಕಾಲಿಕವಾಗಿ ಗೃಹಲಕ್ಷ್ಮಿ ಯೋಜನೆಯ ನೋಂದಣಿ ಸ್ಥಗಿತಗೊಳಿಸಿದ ರಾಜ್ಯ ಸರ್ಕಾರ: ಲಕ್ಷಾಂತರ ಮಹಿಳೆಯರಿಗೆ ನಿರಾಸೆ!

ಇನ್ನು ಈ ಸಿನೆಮಾದಲ್ಲಿ ಶಾರುಕ್ ಖಾನ್ ಅವರು ಸೈನ್ಯಾಧಿಕಾರಿ, ಧಕ್ಷ ಪೊಲೀಸ್ ಅಧಿಕಾರಿ, ಅಪಹರಣಕಾರ, ರಾಬಿನ್ ಹುಡ್ ಹೀಗೆ ಹಲವು ಶೇಡ್ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಜನರಿಗೆ ಬಹಳ ಇಷ್ಟವಾಗುತ್ತಿದೆ. ಬಿಡುಗಡೆಯಾದ ಎರಡೇ ದಿನದಲ್ಲಿ 1೦೦ ಕೋಟಿ ರೂ. ಕ್ಲಬ್ ಸೇರುವ ಎಲ್ಲ ಲಕ್ಷಣಗಳು ಗೋಚರವಾಗಿದೆ. ಈ ಸಿನೆಮಾದ ಸಂಗೀತ, ಸಾಹಸ ದೃಶ್ಯಗಳು ಪ್ರೇಕ್ಷಕರಿಗೆ ಬಹಳ ಇಷ್ಟವಾಗಿದೆ. ಸಿನೆಮಾ ಪ್ರೇಮಿಗಳು ಫಿದಾ ಆಗಿದ್ದಾರೆ.

Comments are closed.