Kannada language: ಇನ್ನು ಮುಂದೆ ಬ್ಯಾಂಕ್ ನಲ್ಲಿ ಯಾರೂ ’ಕನ್ನಡ್ ಗೊತ್ತಿಲ್ಲ’ ಎನ್ನುವ ಹಾಗಿಲ್ಲ ಎಂದ ರಾಜ್ಯ ಸರ್ಕಾರ; ’ಕನ್ನಡಿಗರಿಗೆ ಕೆಲಸ’ ಕೂಡ ಸಿಗಲಿದ್ಯಾ?

Kannada language: ನಮ್ಮ ದೇಶ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ದೇಶ. ನಮ್ಮ ದೇಶದಲ್ಲಿ ರಾಜ್ಯಗಳನ್ನು ವಿಂಗಡನೆ ಮಾಡುವ ವೇಳೆಗೆ ಭಾಷೆಯನ್ನು ಮುಖ್ಯ ಆಧಾರವಾಗಿಟ್ಟುಕೊಂಡು ವಿಂಗಡನೆ ಮಾಡಲಾಗಿದೆ. ಹಾಗಾಗಿಯೇ ಕರ್ನಾಟಕದಲ್ಲಿ ಕನ್ನಡ ಭಾಷೆ ರಾಜ್ಯ ಭಾಷೆಯಾಗಿದೆ. ನವೆಂಬರ್ ೧ರಂದು ನಾವು ಕನ್ನಡ ಅಥವಾ ಕರ್ನಾಟಕ ರಾಜ್ಯೋತ್ಸವನ್ನು ವಿಜೃಂಭಣೆಯಿಂದ ಆಚರಿಸುತ್ತೇವೆ. ನಮ್ಮ ರಾಜ್ಯದ ಆಡಳಿತದಲ್ಲಿಯೂ ಕನ್ನಡ ಭಾಷೆ ಇದೆ. ಇದರ ಜೊತೆ ಬ್ಯಾಂಕಿಂಗ್ ಕ್ಷೇತ್ರದಲ್ಲಿಯೂ ಕನ್ನಡ ಕಡ್ಡಾಯ ಮಾಡುವತ್ತ ಸರ್ಕಾರ ಇದೀಗ ಗಮನ ಹರಿಸಿದೆ. ಇದನ್ನೂ ಓದಿ: Samman Scheme: ಸದ್ಯದಲ್ಲಿಯೇ ಬಿಡುಗಡೆಯಾಗಲಿರುವ ಪಿಎಂ ಕಿಸಾನ್ ಸಮ್ಮಾನ್ 2,೦೦೦ ರೂ. ತಂದೆಯ ಜೊತೆ ಮಗನಿಗೂ ಸಿಗಲಿದ್ಯಾ? 15 ನೇ ಕಂತಿನ ಹಣ ಯಾರ ಕೈಸೇರಲಿದೆ!  

ರಾಜ್ಯದ ಕನ್ನಡ ಹಾಗೂ ಸಂಸ್ಕೃತಿ ಇಲಾಖೆಯೂ ಈಗಾಗಲೇ ಬ್ಯಾಂಕ್ಗಳಲ್ಲಿ ಕನ್ನಡ ಕಡ್ಡಾಯ ಬಳಕೆ ಆರಂಭಿಸುವ ಸಲುವಾಗಿ ನಾಲ್ಕಾರು ಸಭೆಗಳನ್ನು ನಡೆಸಿದೆ. ಬ್ಯಾಂಕ್ಗಳಿಗೆ ಕೇವಲ ಸಿರಿವಂತರಷ್ಟೇ ಅಲ್ಲ. ಜನಸಾಮಾನ್ಯರು ಬರುತ್ತಾರೆ. ಅವರಿಗೆ ಬೇರೆ ಭಾಷೆಯಲ್ಲಿ ಮಾತನಾಡಿದರೆ ಅವರು ವ್ಯವಹಾರ ನಡೆಸುವುದು ಕಷ್ಟವಾಗಲಿದೆ. ಇದಕ್ಕಾಗಿಯೇ ಕನ್ನಡ ಕಡ್ಡಾಯ ಮಾಡಬೇಕು ಎನ್ನುವ ಕೂಗು ಬಹಳ ವರ್ಷದಿಂದ ಕೇಳಿ ಬರುತ್ತಿದೆ.

ರಾಜ್ಯದ ಎಲ್ಲ ಸರ್ಕಾರಿ ಹಾಗೂ ಸರ್ಕಾರೇತರ ಸಂಘ ಸಂಸ್ಥೆಗಳು, ಕೈಗಾರಿಕೆಗಳು, ಬ್ಯಾಂಕುಗಳು ಹಾಗೂ ಸಾರ್ವಜನಿಕರು ವ್ಯವಹರಿಸುವ ಜಾಗಗಳಲ್ಲಿ ಅಲ್ಲಿನ ಉದ್ಯೋಗಿಗಳು ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಬಳಕೆ ಮಾಡಬೇಕು ಎಂದು ಕಳೆದ ಮಾರ್ಚ್ನಲ್ಲಿ ಅಂಗೀಕರಿಸಲ್ಪಟ್ಟ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಕಾಯ್ದೆ-೨೦೨೨ ರ ತಿದ್ದುಪಡಿ ಕಾಯ್ದೆಯನ್ನು ರಾಜ್ಯ ಸರ್ಕಾರ ಇದೀಗ ಜಾರಿಗೆ ತರಲು ಚಿಂತನೆ ನಡೆಸಿದೆ.

ಇದರ ಸಲುವಾಗಿಯೇ ಕನ್ನಡ ಹಾಗೂ ಸಂಸ್ಕೃತಿ ಇಲಾಖೆ ಅಧಿಕಾರಿಗಳ ಮಟ್ಟದಲ್ಲಿ ಸಭೆಗಳನ್ನು ನಡೆಸಲಾಗಿದೆ. ಇದಕ್ಕೆ ಬೇಕಾದ ನಿಯಮಾವಳಿಗಳನ್ನು ರೂಪಿಸಲಾಗಿದೆ ಎನ್ನಲಾಗಿದೆ. ಇದಾದ ಬಳಿಕ ರಾಜ್ಯ ಸರ್ಕಾರದಿಂದ ಅಧಿಸೂಚನೆ ಹೊರ ಬೀಳಲಿದೆ. ಇದನ್ನೂ ಓದಿ: Gruhalakshmi Scheme: ತಾತ್ಕಾಲಿಕವಾಗಿ ಗೃಹಲಕ್ಷ್ಮಿ ಯೋಜನೆಯ ನೋಂದಣಿ ಸ್ಥಗಿತಗೊಳಿಸಿದ ರಾಜ್ಯ ಸರ್ಕಾರ: ಲಕ್ಷಾಂತರ ಮಹಿಳೆಯರಿಗೆ ನಿರಾಸೆ!

ನೂರಕ್ಕೂ ಅಧಿಕ ಉದ್ಯೋಗಿಗಳನ್ನು ಹೊಂದಿರುವ ಬ್ಯಾಂಕ್ ಅಥವಾ ಸಹಕಾರಿ ಸಂಘಗಳು ಹಿರಿಯ ಅಧಿಕಾರಿಗಳ ನೇತೃತ್ವದ ಕನ್ನಡ ಕೋಶ ಹೊಂದಿರಬೇಕಾಗುತ್ತದೆ. ಕನ್ನಡೇತರ ಉದ್ಯೋಗಿಗಳು ಹಾಗೂ ಕನ್ನಡ ಮಾತನಾಡಲು ಬಾರದ ಉದ್ಯೋಗಿಗಳಿಗೆ ಕನ್ನಡ ಕಲಿಸಲು ಕನ್ನಡ ಕಲಿಕಾ ಘಟಕ ಆರಂಭೀಸಬೇಕು. ಇದಕ್ಕೆ ರಾಜ್ಯ ಸರ್ಕಾರವು ಅಗತ್ಯ ಬೋಧಕ ಸಿಬ್ಬಂದಿಯನ್ನು ನೀಡಲಿದೆ. ಆದರೆ ಇದಕ್ಕೆ ತಗಲುವ ವೆಚ್ಚವನ್ನು ಬ್ಯಾಂಕ್ಗಳೇ ಭರಿಸಬೇಕಾಗುತ್ತದೆ ಎನ್ನಲಾಗಿದೆ.

ಇತ್ತಿಚಿನ ದಿನಗಳಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳಲ್ಲಿ ಪರಭಾಷಿಕರೇ ಹೆಚ್ಚಾದ ಕಾರಣ ಜನಸಾಮಾನ್ಯರಿಗೆ ಅಲ್ಲಿ ವ್ಯವಹಾರ ಮಾಡುವುದು ಕಷ್ಟವಾಗಿದೆ. ಅವರು ಹೇಳಿದ ಮಾತುಗಳು ಜನರಿಗೆ ಅರ್ಥವಾಗುವುದಿಲ್ಲ ಇದರಿಂದ ಬ್ಯಾಂಕಿಂಗ್ ವ್ಯವಹಾರಗಳಿಗೆ ತೊಂದರೆಯಾಗುತ್ತಿದೆ. ಇದನ್ನು ಅರಿತ ಸರ್ಕಾರವು ಕನ್ನಡ ಕಡ್ಡಾಯ ಮಾಡಲು ಹೊರಟಿದೆ. ಇದೊಂದು ಸ್ವಾಗತಾರ್ಹ ಬೆಳವಣಿಗೆಯಾಗಿದೆ. ಇದೇ ರಿತಿ ಕನ್ನಡಿಗರಿಗೆ ಕೆಲಸದಲ್ಲಿಯೂ ಮೊದಲ ಆದ್ಯತೆ ಕೊಡಬೇಕು ಎನ್ನುವ ಕೂಗು ಕೂಡ ಕೇಳಿಬರುತ್ತಿದೆ! ಇದನ್ನೂ ಓದಿ: Electric two-wheeler problems: ಪೆಟ್ರೋಲ್ ಸ್ಕೂಟರ್ ದುಬಾರಿ ಅಂತ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿ ಮಾಡಿದ್ರೆ ಇದರಲ್ಲೂ ಇಂತಹ ಸಮಸ್ಯೆ ಇದೆಯಾ; ಖರೀದಿಗೂ ಮೊದಲು ನೂರು ಬಾರಿ ಯೋಚನೆ ಮಾಡಿ!

Comments are closed.