Kannada Astrology: ಗಣೇಶ ಚತುರ್ಥಿ ಮುಗಿದು 5 ದಿನಗಳ ಬಳಿಕ ಮಂಗಳನ ಅಸ್ತ: ಈ ಮೂರು ರಾಶಿಯವರ ಜೀವನದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿ, ಜಾಗರೂಕರಾಗಿರಿ

Kannada Astrology: ವೈದಿಕ ಶಾಸ್ತ್ರದ ಪ್ರಕಾರ ಮಂಗಳ ತನ್ನ ಸ್ಥಾನಮಾನವನ್ನು ಬದಲಾಯಿಸಿದಾಗ ಅದು ವ್ಯಕ್ತಿಯ ಉದ್ಯೋಗ ವ್ಯವಹಾರ ಹಾಗೂ ಆರ್ಥಿಕ ಪರಿಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ ಮಂಗಳ ರಾಶಿಯಲ್ಲಿ ಅಸ್ತಮಿಸಲಿರುವ ಮಂಗಳ, ಈ ಕೆಲವು ಜಾತಕದಲ್ಲಿ ಅಶುಭ ಉಂಟು ಮಾಡಲಿದ್ದಾನೆ. ಗ್ರಹಗಳ ಕಮಾಂಡರ್ ಎಂದು ಕರೆಯಲ್ಪಡುವ ಮಂಗಳನ ಸ್ಥಾನ ನಿಮ್ಮ ರಾಶಿಯಲ್ಲಿ ಬಲವಾಗಿದ್ದರೆ ಸಾಕಷ್ಟು ಸುಖ ಶಾಂತಿ ಸಿಗುತ್ತದೆ. ಅದೇ ಆತ ಅಶುಭ ಸ್ಥಾನದಲ್ಲಿದ್ದರೆ ಸಮಸ್ಯೆಗಳು ಕೂಡ ಉಂಟಾಗಬಹುದು. ಸಪ್ಟೆಂಬರ್ 24ರಂದು ಮಂಗಳನು ಕನ್ಯಾ ರಾಶಿಯಲ್ಲಿ ಅಸ್ತಮಿಸಲಿದ್ದಾನೆ. ಇದರಿಂದ ಯಾವೆಲ್ಲಾ ರಾಶಿಯವರಿಗೆ ಸಂಕಷ್ಟ ಎದುರಾಗಲಿ ಯಾವ ರೀತಿ ಎಚ್ಚರಿಕೆಯಿಂದ ಇರಬೇಕು ನೋಡೋಣ.

ವೃಷಭ ರಾಶಿ: ಸೆಪ್ಟೆಂಬರ್ 24ರಂದು ಮಂಗಳ ಹಸ್ತ ಗೊಳ್ಳುವುದರಿಂದ ವೃಷಭ ರಾಶಿಯವರ ಉದ್ಯೋಗದಲ್ಲಿ ಸಮಸ್ಯೆ ಉಂಟಾಗಬಹುದು ಅನಾವಶ್ಯಕವಾದ ಹಾಗೂ ಅನಗತ್ಯವಾದ ವಿಷಯಗಳ ಬಗ್ಗೆ ಮಾತನಾಡಬೇಡಿ ಬಹಳ ತಾಳ್ಮೆಯಿಂದ ಇರಿ ಪ್ರಯಾಣದ ವೇಳೆ ಕೂಡ ಜಾಗರೂಕತೆಯಿಂದ ಇರಬೇಕು ಹಣಕಾಸಿನ ನಷ್ಟ ಉಂಟಾಗುವ ಸಾಧ್ಯತೆ ಇದೆ, ಮಗಳ ಆರೋಗ್ಯದ ಚಿಂತೆ ಕೂಡ ನಿಮ್ಮನ್ನು ಕಾಡಬಹುದು.

ಸಿಂಹ ರಾಶಿ: ಮಂಗಳನ ಬದಲಾವಣೆ ಸಿಂಹ ರಾಶಿಯವರ ಹಣಕಾಸಿನ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ ಆದಾಯಕ್ಕಿಂತ ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ. ಕಣ್ಣಿಗೆ ಸಂಬಂಧಿಸಿದ ಸಮಸ್ಯೆ ಇದ್ದರೆ ನಿರ್ಲಕ್ಷ್ಯ ಮಾಡದೇ ಕೂಡಲೇ ವೈದ್ಯರನ್ನು ಸಂಪರ್ಕಿಸಿ. ಅನವಶ್ಯಕವಾದ ವಾದ ವಿವಾದಗಳಲ್ಲಿ ಭಾಗಿಯಾಗುವುದು ಅನಗತ್ಯ ವಿಚಾರಗಳಲ್ಲಿ ಮೂಗು ತೋರಿಸುವುದು ತಪ್ಪಿಸಿ.

ಮೀನ ರಾಶಿ: ಮಂಗಳನ ಅಸ್ತ ಮೀನ ರಾಶಿಯವರ ವ್ಯಾಪಾರ ವ್ಯವಹಾರದ ಮೇಲೆಯೂ ಕೂಡ ಕೆಟ್ಟ ಪರಿಣಾಮ ಬೀರಲಿದೆ. ವಿದೇಶ ವ್ಯಾಪಾರಕ್ಕೆ ಸಂಬಂಧಿಸಿದ ಜನರು ಆರ್ಥಿಕ ಸಂಕಷ್ಟ ಅನುಭವಿಸಬೇಕಾಗಬಹುದು. ನಿಮ್ಮ ಆರೋಗ್ಯದ ಬಗ್ಗೆಯೂ ಹೆಚ್ಚು ಜಾಗರೂಕತೆಯಿಂದ ಇರಿ.

Comments are closed.