Airavata Scheme: ವಿದ್ಯಾವಂತ ನಿರುದ್ಯೋಗಿಗಳಿಗೆ ಸರ್ಕಾರದ ಬಂಪರ್ ಯೋಜನೆ; 5 ಲಕ್ಷ ರೂ. ವರೆಗೆ ಸಹಾಯಧನ, ಇಂದೇ ಅಪ್ಲೈ ಮಾಡಿ!

Airavata Scheme: ಕೇಂದ್ರ (Central Government)  ಹಾಗೂ ರಾಜ್ಯ ಸರ್ಕಾರಗಳು ಜನಸಾಮಾನ್ಯರ ಅದರಲ್ಲೂ ಬಡವರ, ದೀನದಲಿತರ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳು ತಂದಿವೆ. ಆದರೆ ಮಾಹಿತಿ ಕೊರತೆಯಿಂದ ಅದೆಷ್ಟೋ ಯೋಜನೆಗಳು ಜನರಿಗೆ ಮುಟ್ಟುವುದೇ ಇಲ್ಲ. ರಾಜ್ಯ ಸರ್ಕಾರವು ಐರಾವತ ಎನ್ನುವ ಯೋಜನೆ ಜಾರಿಗೆ ತಂದಿದೆ. ಈ ಯೋಜನೆ ಅಡಿಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ (SC/ST) ಕಾರು ಖರೀದಿಗಾಗಿ 5 ಲಕ್ಷ ರೂ. ವರೆಗೂ ಸಹಾಯಧನ ನೀಡಲಿದೆ.

ಲಘು ವಾಹನ ಚಾಲನಾ ಪರವಾನಿಗೆ ಹೊಂದಿರುವ ನಿರುದ್ಯೋಗಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಯುವಕರಿಗಾಗಿ ರಾಜ್ಯ ಸರ್ಕಾರವು ಈ ಯೋಜನೆ ಜಾರಿಗೆ ತಂದಿದೆ. ಈ ಯೋಜನೆ ಅಡಿಯಲ್ಲಿ ಗರಿಷ್ಟ ೫ ಲಕ್ಷ ರೂ. ವರೆಗೆ ಸಹಾಯಧನ ಒದಗಿಸಲಾಗುತ್ತದೆ. ಉಳಿದ ಹಣವನ್ನು ಬ್ಯಾಂಕ್ ಸಾಲ, ಅಥವಾ ವಂತಿಕೆಯಿಂದ ಭರಿಸಲಾಗುತ್ತದೆ.

ಈ ಯೋಜನೆಯಡಿ ಆಯ್ಕೆ ಆಗಿರುವ ಫಲಾನುಭವಿಗಳು ಒಲಾ, ಊಬರ್ ಸೇರಿದಂತೆ ವಿವಿಧ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲು ಸಿದ್ದರಿರಬೇಕು. ಬೆಂಗಳೂರು, ಮೈಸೂರು, ಮಂಗಳೂರು, ಹುಬ್ಬಳ್ಳಿ, ಧಾರವಾಡ, ಗುಲ್ಬರ್ಗಾ, ಬೆಳಗಾವಿ ಸೇರಿದಂತೆ ವಿವಿಧ ಕಡೆ ವಾಹನ ಚಾಲನೆ ಮಾಡಲು ಸಿದ್ದರಿರಬೇಕು.

ಇನ್ನು ಈ ಐರಾವತ ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು

1. ಅರ್ಜಿ ಸಲ್ಲಿಸುವ ವ್ಯಕ್ತಿ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿದವನಾಗಿರಬೇಕು.

2.ಕರ್ನಾಟಕದ ನಿವಾಸಿಯಾಗಿರಬೇಕು.

3. ಅರ್ಜಿದಾರರು 21 ರಿಂದ 5೦ ವರ್ಷದ ಒಳಗಿನವರಾಗಿರಬೇಕು.

4. ಲಘು ವಾಹನ ಚಾಲನಾ ಪರವಾನಿಗೆ ಹೊಂದಿರಬೇಕು.

5.ಅರ್ಜಿ ಸಲ್ಲಿಸುವ ವ್ಯಕ್ತಿಯ ಕುಟುಂಬದ ಆದಾಯವು ವಾರ್ಷಿಕವಾಗಿ 5 ಲಕ್ಷ ರೂ. ಮೀರಿರಬಾರದು.

6. ಅರ್ಜಿದಾರರು ಅಥವಾ ಆತನ ಕುಟುಂಬದ ಸದಸ್ಯರು ಬೇರೆ ಯಾವುದಾದರೂ ಸರ್ಕಾರಿ ಯೋಜನೆಯಡಿ ೧ ಲಕ್ಷ ರೂ.ಗಳಿಗಿಂತ ಅಧಿಕ ಸಾಲ ಸೌಲಭ್ಯ ಪಡೆದಿರಬಾರದು. ಒಂದು ವೇಳೆ ಪಡೆದಿದ್ದರೆ ಅಂತವರು ಈ ಯೋಜನೆ ಲಾಭ ಪಡೆಯಲು ಸಾಧ್ಯವಾಗುವುದಿಲ್ಲ.

ಸರ್ಕಾರದ ಶರತ್ತುಗಳು:

1.ಆಯ್ಕೆಯಾದ ಫಲಾನುಭವಿ ಓಲಾ, ಊಬರ್ ಸೇರಿದಂತೆ ವಿವಿಧ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ಕೆಲಸ ನಿರ್ವಹಿಸಲು ಸಿದ್ದರಿರಬೇಕು.

2. ಫಲಾನುಭವಿಯನ್ನು ಅರ್ಜಿ ಆಯ್ಕೆ ಸಮಿತಿಯೇ ಆಯ್ಕೆ ಮಾಡಿರಬೇಕು.

3. ಫಲಾನುಭವಿಯು ಒಲಾ, ಊಬರ್ ಸಂಸ್ಥೆಯವರು ನಡೆಸುವ ಟ್ಯಾಕ್ಸಿ ನಿರ್ವಹಣಾ ಕಾರ್ಯಾಗಾರದಲ್ಲಿ ಕಡ್ಡಾಯವಾಗಿ ಪಾಲ್ಗೊಂಡು ಎಲ್ಲ ರೀತಿಯ ಜ್ಞಾನ ಪಡೆದಿರಬೇಕು.

ಇನ್ನು ಈ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದಿಯೇ ಹೊರತು ಕೊನೆ ದಿನವನ್ನು ಘೋಷಣೆ ಮಾಡಲಾಗಿಲ್ಲ. ಆದ್ದರಿಂದ ಅಗತ್ಯ ಇರುವವರು ಈಗಲೇ ಅರ್ಜಿ ಸಲ್ಲಿಸಿ ಫಲಾನುಭವಿಗಳಾಗಿ ಸ್ವಾವಲಂಭಿ ಜೀವನ ನಡೆಸಿ.

Comments are closed.