Bengaluru land price: ಬೆಂಗಳೂರು ಸುತ್ತಮುತ್ತ 30* 40 site ಖರೀದಿ ಮಾಡಬೇಕು ಅಂತಿದ್ರೆ ಎಷ್ಟಾಗಬಹುದು ದರ ಗೊತ್ತೇ? ನೀವು ಖರೀದಿ ಮಾಡಬಹುದಾ ನೋಡಿ!

Bengaluru land price: ದುಡಿಯುವ ಕೈಗಳು ಕೇವಲ ತಮ್ಮ ದೈನಂದಿನ ವ್ಯವಹಾರ ನಡೆಸುವುದು ಮಾತ್ರವಲ್ಲ ಭವಿಷ್ಯಕ್ಕಾಗಿ ಏನಾದರು ಕೂಡಿಡಬೇಕು ಅಂತ ಬಯಸುವುದು ಸಹಜ. ಅದರಲ್ಲೂ ಬೆಂಗಳೂರಿನಂತಹ ಸಿಲಿಕಾನ್ ಸಿಟಿಯಲ್ಲಿ ಜೀವನ ನಡೆಸಬೇಕು ಅಂದರೆ ಜೀವನಪರ್ಯಂತ ಬಾಡಿಗೆ ಮನೆಯಲ್ಲಿ ಇರೋದು ಕಷ್ಟ. ಹಾಗಾಗಿ ಸಣ್ಣ ಪುಟ್ಟ ಸೈಟ್ ಆದರೂ ತೆಗೆದುಕೊಂಡು ಅದರಲ್ಲಿ ಮನೆ ಕಟ್ಟಿಸುವ ಅಥವಾ ಅದನ್ನು ಹೆಚ್ಚು ಬೆಲೆಗೆ ಮಾರಾಟ ಮಾಡಿ ಬೇರೊಂದು ಮನೆ ಖರೀದಿಸುವ ಪ್ಲಾನ್ ಅನ್ನು ಹಲವರು ಮಾಡುತ್ತಾರೆ. ಹಾಗೆ ನೀವು ಬೆಂಗಳೂರಿನ ನಿವಾಸಿಯಾಗಿದ್ದು ಇಲ್ಲೇ ಒಂದು 30*40 ಸೈಟ್ ಖರೀದಿ ಮಾಡೋಣ ಅಂದುಕೊಂಡಿದ್ದರೆ ಅದಕ್ಕೆ ಎಷ್ಟು ಬೆಲೆ ಆಗಬಹುದು ಅನ್ನುವ ಒಂದು ಸಣ್ಣ ಲೆಕ್ಕಚಾರ ಈ ಲೇಖನದಲ್ಲಿದೆ. ಹಾಗಾಗಿ ತಪ್ಪದೆ ಮುಂದೆ ಓದಿ.

ಬೆಂಗಳೂರಿನ ಜನಸಂಖ್ಯೆಯ ಲೆಕ್ಕಾಚಾರ ಹಾಕಿದರೆ ಸುಮಾರು ಒಂದು ಕೋಟಿಯಷ್ಟು ಜನರು ಇಲ್ಲಿ ವಾಸಿಸುತ್ತಾರೆ. ಬೇರೆ ಬೇರೆ ಊರುಗಳಿಂದ ಬೇರೆ ಬೇರೆ ರಾಜ್ಯಗಳಿಂದ ಅಷ್ಟೇ ಯಾಕೆ ವಿದೇಶಗಳಿಂದಲೂ ಕೂಡ ಭಾರತಕ್ಕೆ ಬಂದು ನೆಲೆಸಿರುವವರು ಇದ್ದಾರೆ. ಹಾಗಾಗಿ ಬೆಂಗಳೂರಿನಲ್ಲಿಯೇ ದುಡಿತ ದುಡಿತ ತಮ್ಮ ಜೀವನವನ್ನು ಇಲ್ಲೇ ಕಟ್ಟಿಕೊಳ್ಳೋಣ ಎಂದು ಬಯಸುವವರು ಒಂದು ಸೈಟ್ ಖರೀದಿ ಮಾಡಲು ಯೋಚಿಸುವುದು ಸಹಜ. ಹೀಗೆ ನೀವೇನಾದರೂ 30*40 ಅಳತೆಯ ಸೈಟ್ ಒಂದನ್ನು ಖರೀದಿ ಮಾಡಬೇಕು ಅಂದ್ರೆ ಬೆಲೆ ಎಷ್ಟು ಆಗಬಹುದು ಗೊತ್ತಾ? ಇದನ್ನೂ ಓದಿ: Birth Certificate: ಇನ್ಮುಂದೆ ಆಧಾರ್ ಅಲ್ಲ, ಎಲ್ಲಾ ಕೆಲಸಕ್ಕೂ ಈ ದಾಖಲೆಯೇ ಕಡ್ದಾಯ; ಕೂಡಲೇ ಮಾಡಿಸಿಕೊಳ್ಳಿ!

ಬೆಂಗಳೂರಿನಲ್ಲಿ ಜಾಗಕ್ಕೆ ಬೆಲೆ ಎಷ್ಟು?

ಬೆಂಗಳೂರಿನಲ್ಲಿ ಒಂದೊಂದು ಸೈಟ್ ಕೂಡ ಬಂಗಾರದ ಬೆಲೆ ಬಾಳುತ್ತದೆ. ಅಥವಾ ಅದಕ್ಕಿಂತ ಜಾಸ್ತಿ ಎಂದರು ತಪ್ಪಲ್ಲ. ಇಲ್ಲಿ ಬದುಕುವ ಜನರ ಸಂಖ್ಯೆ ಹೆಚ್ಚಾಗುತ್ತಿದ್ದ ಹಾಗೆ ಸೈಟ್ (site rate) ಬೆಲೆ ಕೂಡ ದಿನದಿಂದ ದಿನಕ್ಕೆ ಗಗನಕ್ಕೆ ಏರುತ್ತಿದೆ. ಉದಾಹರಣೆಗೆ ಬೆಂಗಳೂರಿನಿಂದ ಸ್ವಲ್ಪ ಹೊರವಲಯದಲ್ಲಿ ಸೈಟ್ ಖರೀದಿ ಮಾಡುವುದಾದರೆ ಒಂದು ಸ್ಕ್ವೇರ್ ಫೀಟ್ (square feet) ಗೆ 2,900 ರೂ. ಗಳಿಂದ 5000 ರೂ.ವರೆಗೂ ಇದೆ.

ಬೆಂಗಳೂರಿನ ಹೊರವಲಯದ ಸಾಮಾನ್ಯ ಪ್ರದೇಶದಲ್ಲಿ ನೀವು ಸೈಟ್ ಖರೀದಿ ಮಾಡುವುದಾದರೆ ಒಂದು ಸ್ಕ್ವೇರ್ ಫೀಟ್ ಗೆ 1500 ರೂಪಾಯಿಗಳಿಂದ 2,000 ರೂ.ವರೆಗೂ ಇದೆ. ಇನ್ನು ಬೆಂಗಳೂರಿನ ಒಳಭಾಗದಲ್ಲಿ ಅಂತೂ ಜಾಗ ಸಿಗುವುದೇ ಕಷ್ಟ, ಸಿಕ್ಕರು ಇದರ ಬೆಲೆ ಈಗ ಹೇಳಿರುವ ಬೆಲೆಗಿಂತ 10 ಪಟ್ಟು ಜಾಸ್ತಿ ಇರುತ್ತದೆ ಎಂದು ಅಂದಾಜಿಸಿಕೊಳ್ಳಬಹುದು. ಇದನ್ನೂ ಓದಿ: Gruhalakshmi Scheme: ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ ಮೇಲೆ ಈ ತಪ್ಪು ಮಾಡಿದ್ದೀರಾ? ಹಾಗಾದರೆ ಖಾತೆಗೆ ಹಣ ಜಮಾ ಆಗದೇ ಇರಬಹುದು; ತಕ್ಷಣವೇ ಸರಿಪಡಿಸಿಕೊಳ್ಳಿ!

Comments are closed.