Gruhalakshmi Scheme: ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ ಮೇಲೆ ಈ ತಪ್ಪು ಮಾಡಿದ್ದೀರಾ? ಹಾಗಾದರೆ ಖಾತೆಗೆ ಹಣ ಜಮಾ ಆಗದೇ ಇರಬಹುದು; ತಕ್ಷಣವೇ ಸರಿಪಡಿಸಿಕೊಳ್ಳಿ!

Gruhalakshmi Scheme: ನೀವು ಇದೊಂದು ಮಿಸ್ಟೇಕ್ ಮಾಡಿದ್ರೆ ಖಂಡಿತವಾಗಿಯೂ ನಿಮ್ಮ ಖಾತೆಗೆ ಗೃಹಲಕ್ಷ್ಮಿ ಯೋಜನೆಯ Gruhalakshmi Scheme) 2000 ರೂ. ಹಣ ಬಂದು ಸೇರುವುದಿಲ್ಲ. ನೀವು ಎಲ್ಲ ದಾಖಲೆಗಳು ಸರಿಯಾಗಿಯೇ ಇದೆ ಎಂದು ತಿಳಿದುಕೊಂಡಿದ್ದರೂ ಕೂಡ ಇದೊಂದು ತಪ್ಪು ನಿಮ್ಮಿಂದ ಆಗಿರಬಹುದು ಹಾಗಾಗಿ ಕೂಡಲೇ ಇದನ್ನು ಚೆಕ್ (Check) ಮಾಡಿ ಇಲ್ಲವಾದರೆ ಉಚಿತವಾಗಿ ಸಿಗುವ 2000ರೂ.ಗಳನ್ನು ಕಳೆದುಕೊಳ್ಳಬೇಕಾಗಿತ್ತು. ಇದನ್ನೂ ಓದಿ: Hyundai I20:  ಕೆಲವೇ ದಿನಕ್ಕೆ ಸೀಮಿತ ಹುಂಡೈ ನ ಈ ಕೊಡುಗೆ; ಹೊಸ ಐ-2೦ ಕೈಗೆಟುಕುವ ಬೆಲೆಯಲ್ಲಿ, ಈಗಲೇ ಬುಕ್ ಮಾಡಿ!

ಕೋಟ್ಯಾಂತರ ಜನ ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ರೂಪಾಯಿಗಳ ನಿರೀಕ್ಷೆಯಲ್ಲಿ ಇದ್ದಾರೆ. ಹಲವರಿಗೆ ಈ ನಿರೀಕ್ಷೆ ಸತ್ಯವಾಗಿದ್ದರೆ ಇನ್ನೂ ಹಲವರಿಗೆ ನಿರೀಕ್ಷೆ ಸುಳ್ಳಾಗಿದೆ. ಗೃಹಲಕ್ಷ್ಮಿ ಯೋಜನೆಗೆ ಸರ್ಕಾರ ಕೆಲವು ಪ್ರಮುಖ ನಿಯಮಗಳನ್ನು ತಿಳಿಸಿದೆ ಅವೆಲ್ಲವನ್ನು ಸರಿಯಾಗಿ ಪಾಲಿಸಿ ನೀವು ಅರ್ಜಿ ಹಾಕಿದ್ದರೆ ನಿಮ್ಮ ಖಾತೆಗೆ ಹಣ ಬಂದು ಸೇರುತ್ತದೆ, ಸ್ವಲ್ಪ ವಿಳಂಬವಾದರೂ ಸರಿ ನೀವು ಫಲಾನುಭವಿಗಳಾಗಿದ್ದರೆ ನಿಮ್ಮ ಖಾತೆಗೆ ಹಣ ಬರುತ್ತದೆ.

ಇನ್ನು ಅರ್ಜಿ ಸಲ್ಲಿಸಿದ 1.07 ಕೋಟಿ ಮಹಿಳೆಯರಲ್ಲಿ 45ರಷ್ಟು ಮಹಿಳೆಯರಿಗೆ ಹಣ ಬಂದಿಲ್ಲ ಇದಕ್ಕೆ ಸರ್ಕಾರದಿಂದ ಹಣ ಮಂಜೂರು ಮಾಡುವುದಕ್ಕೆ ಕೆಲವು ತಾಂತ್ರಿಕ ಕಾರಣಗಳಿಂದ ವಿಳಂಬವಾಗುತ್ತಿದೆ. ಇದರ ಜೊತೆಗೆ ಮಹಿಳೆಯರು ಕೂಡ ಕೆಲವು ತಪ್ಪುಗಳನ್ನು ಮಾಡುತ್ತಿದ್ದಾರೆ. ಮೊದಲನೆಯದಾಗಿ ನಿಮ್ಮ ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಅಕೌಂಟ್ ಲಿಂಕ್ (bank Account Link) ಆಗಿರಲೇಬೇಕು. ಇದರ ಜೊತೆಗೆ ಬ್ಯಾಂಕನ್ನಲ್ಲಿ ಇರುವ ನಿಮ್ಮ ಖಾತೆ ಚಾಲ್ತಿಯಲ್ಲಿ ಇರಬೇಕು.

ಹಲವು ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ ನಂತರ ಒಂದು ಬ್ಯಾಂಕ್ ನಲ್ಲಿ ಇರುವ ಖಾತೆಯನ್ನು ಸಕ್ರಿಯಗೊಳಿಸುವುದು ಅಥವಾ ಈಕೆ ವೈ ಸಿ ಮಾಡಿಸುವುದನ್ನು ಬಿಟ್ಟು ಬೇರೆಯದೆ ಬ್ಯಾಂಕ್ ನಲ್ಲಿ ಹೊಸ ಖಾತೆಯನ್ನು ಆರಂಭಿಸುತ್ತಿದ್ದಾರೆ. ಈ ಹೊಸ ಖಾತೆಗೆ ಆಧಾರ್ ಸೀಡಿಂಗ್ (Aadhaar Seeding)  ಕೂಡ ಮಾಡಿಸಿಕೊಳ್ಳುತ್ತಾರೆ. ಈ ರೀತಿ ಮಾಡಿದರೆ ಗೃಹಲಕ್ಷ್ಮಿ ಯೋಜನೆಗೆ ಯಾವುದೇ ಪ್ರಯೋಜನ ಆಗುವುದಿಲ್ಲ ನಿಮ್ಮ ಈ ಹೊಸ ಖಾತೆಗೆ ಹಣ ಕೂಡ ಬರುವುದಿಲ್ಲ.

ನೀವು ಅರ್ಜಿ ಸಲ್ಲಿಸುವಾಗ ಬ್ಯಾಂಕ್ ಮಾಹಿತಿ ನೀಡಿದ್ದರೆ ಅದೇ ಬ್ಯಾಂಕ್ ಗೆ ಹಣ ಮಂಜೂರಾಗುತ್ತದೆ ಅದರ ಬದಲು ಈಗ ಹೊಸ ಬ್ಯಾಂಕ್ ಖಾತೆಯನ್ನು ನೀಡಿದರೆ ಅದಕ್ಕೆ ಹಣ ಮಂಜೂರಾಗುವುದಿಲ್ಲ. ಅಷ್ಟೇ ಅಲ್ಲದೆ ನೀವು ಸರ್ಕಾರದ ಇತರ ಪ್ರಯೋಜನಗಳನ್ನು ಕೂಡ ಪಡೆದುಕೊಂಡಿದ್ದರೆ ಅನ್ನಭಾಗ್ಯ ಕಿಸಾನ್ ಯೋಜನೆ ಮೊದಲ ಅದುವುಗಳ ಹಣ ನಿಮ್ಮ ಖಾತೆಗೆ ಬಂದಿದ್ದರೆ ಅದು ನಿಮ್ಮ ರೇಷನ್ ಕಾರ್ಡ್ ಜೊತೆಗೆ ಲಿಂಕ್ ಆಗಿರುತ್ತದೆ. ಹಾಗಾಗಿ ಇದೇ ಲಿಂಕ್ ಆಗಿರುವ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣವು ಕೂಡ ಬರುತ್ತದೆ. ಇದನ್ನೂ ಓದಿ: Health Benefits of Buttermilk: ಈ ಒಂದು ಖಾಯಿಲೆಗೆ ಧರೆಯ ಅಮೃತ ಮಜ್ಜಿಗೆ ಸೇವಿಸಿದ್ರೆ ಸಾಕು, ಯಾವ ಔಷಧಿಯೂ ಬೇಕಾಗಿಲ್ಲ; ಟ್ರೈ ಮಾಡ್ ನೋಡಿ!

ಇನ್ನು ನೀವು ಬ್ಯಾಂಕಿನಲ್ಲಿ ಹೊಂದಿರುವ ಖಾತೆಯನ್ನು ಸಕ್ರಿಯವಾಗಿ ಇಟ್ಟುಕೊಳ್ಳುವುದು ಬಹಳ ಮುಖ್ಯ ಹಳ್ಳಿ ಪ್ರದೇಶಗಳಲ್ಲಿ ಸಾಕಷ್ಟು ಜನ ಬ್ಯಾಂಕ್ ಖಾತೆ ಹೊಂದಿದ್ದರು ಕೂಡ ಅದರ ಮೂಲಕ ಯಾವುದೇ ರೀತಿಯ ವ್ಯವಹಾರವನ್ನು ಕೂಡ ಮಾಡುವುದಿಲ್ಲ ಈ ರೀತಿ ಮಾಡಿದರೆ ಆ ಬ್ಯಾಂಕ್ಗಳು ಗ್ರಾಹಕರ ಖಾತೆಯನ್ನು ನಿಷ್ಕ್ರಿಯಗೊಳಿಸಿರುತ್ತದೆ. ನೀವು ಇದೇ ಖಾತೆಯನ್ನು ಸಕ್ರಿಯಗೊಳಿಸಿಕೊಳ್ಳಬೇಕೆ ಹೊರತು ಅದರ ಬದಲಾಗಿ ಮತ್ತೊಂದು ಬ್ಯಾಂಕಿನಲ್ಲಿ ಹೊಸ ಖಾತೆ ತೆರೆದರೆ ಯಾವುದೇ ಪ್ರಯೋಜನ ಇಲ್ಲ.

ಹಳೆಯ ಖಾತೆ ಆಕ್ಟಿವೇಟ್ ಮಾಡಿಕೊಳ್ಳುವುದು ಹೇಗೆ

ನೀವು ಬ್ಯಾಂಕ್ ನಲ್ಲಿ ಖಾತೆಯನ್ನು ತೆರೆದು ಅದರಲ್ಲಿ ಹಣಕಾಸಿನ ವ್ಯವಹಾರ ಮಾಡದೆ ಇದ್ದರೂ ಕೂಡ ಖಾತೆ ತೆರೆಯುವಾಗ ಆಧಾರ್ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್ ಅನ್ನು ದಾಖಲೆಯಾಗಿ ಕೊಟ್ಟಿರುತ್ತೀರಿ ಹಾಗಾಗಿ ಸರ್ಕಾರದ ದಾಖಲೆಯಲ್ಲಿ ಇದೇ ಖಾತೆ ಇರುತ್ತದೆ ಈ ಖಾತೆ ಈಗ ಸಕ್ರಿಯವಾಗಿ ಇಲ್ಲದೆ ಇದ್ದರೆ ಕೂಡಲೇ ಬ್ಯಾಂಕ್ ಗೆ ಹೋಗಿ ಆ ಖಾತೆಗೆ ಕನಿಷ್ಠ ಮೊತ್ತದ ಹಣವನ್ನು ಹಾಕಿ ಸಕ್ರಿಯ ವಾಗುವಂತೆ ಮಾಡಿಕೊಳ್ಳಿ. ಆ ಬ್ಯಾಂಕ್ ಖಾತೆಗೆ ಕೆ ವೈ ಸಿ (KYC) ಆಗದೇ ಇದ್ದರೆ ಅದನ್ನು ಕೂಡ ಮಾಡಿಸಿಕೊಳ್ಳಿ. ಈ ರೀತಿ ಮಾಡುವುದರಿಂದ ನಿಮ್ಮ ಹಳೆಯ ಖಾತೆ ಸಕ್ರಿಯ ವಾಗುತ್ತದೆ ಹಾಗೂ ಗೃಹಲಕ್ಷ್ಮಿ ಯೋಜನೆಯ ಹಣ ಇದೇ ಖಾತೆಗೆ ಬಂದು ತಲುಪುತ್ತದೆ. ಇದನ್ನು ಓದಿ: Kannada entertainment: ಬಿಗ್ ಬಾಸ್ TRP ಮುಂದೆ ಧಾರಾವಾಹಿಗಳು ತಂದುಕೊಡುವ TRP ಲೆಕ್ಕಕ್ಕೆ ಇಲ್ವಾ: ಅರ್ಧದಲ್ಲಿಯೇ ಜನರ ನೆಚ್ಚಿನ ಧಾರಾವಾಹಿಗಳು ಮುಗಿಯುತ್ತಾ? ಇದು ಸರಿನಾ!

ಈಗಾಗಲೇ ಸಾಕಷ್ಟು ಗ್ರಾಹಕರು ಹಳೆಯ ಬ್ಯಾಂಕ್ ಖಾತೆಯನ್ನು ಸಕ್ರಿಯಗೊಳಿಸುವುದನ್ನು ಬಿಟ್ಟು ಅಥವಾ ಆ ಖಾತೆಗೆ ಆಧಾರ್ ಕಾರ್ಡ್ ಮ್ಯಾಪಿಂಗ್ ಮಾಡಿಕೊಳ್ಳುವುದನ್ನು ಬಿಟ್ಟು ಹೊಸ ಬ್ಯಾಂಕ್ ಖಾತೆಯನ್ನು ಆರಂಭಿಸುತ್ತಿದ್ದಾರೆ. ಏನು ಹೀಗೆ ಹೊಸ ಬ್ಯಾಂಕ್ ಖಾತೆ ಆರಂಭಿಸುವವರು ರೇಷನ್ ಕಾರ್ಡ್ ನಲ್ಲಿ ಇರುವ ಹೆಸರನ್ನು ಕೂಡ ಸರಿಯಾಗಿ ನಮೂದಿಸುತ್ತಿಲ್ಲ ಸಣ್ಣ ಪುಟ್ಟ ತಪ್ಪುಗಳು ಕೂಡ ನಿಮ್ಮ ಖಾತೆಗೆ ಹಣ ಬಾರದೆ ಇರುವುದಕ್ಕೆ ಕಾರಣವಾಗಿದೆ.

Comments are closed.