Shukradese: ಕಡೆಗೂ ಶುರುವಾಗ್ಹೋಯ್ತು ಶುಕ್ರದೆಸೆ ಶುಕ್ರನ ನೇರ ಸಂಚಾರದಿಂದ ಈ ಮೂರು ರಾಶಿಯವರಿಗೆ ಒಲಿದು ಬರಲಿದೆ ಅದೃಷ್ಟ! ನಿಮ್ಮ ರಾಶಿಯೂ ಇದ್ಯಾ ನೋಡಿಕೊಳ್ಳಿ

Shukradese: ಜ್ಯೋತಿಷ್ಯ ಎನ್ನುವುದು ವೈಜ್ಞಾನಿಕವಾಗಿ ಸಾಭೀತಾದ ವಿಚಾರವಾಗಿದೆ. ಈ ಜ್ಯೋತಿಷ್ಯವನ್ನು ಶತಮಾನಗಳ ಕೆಳಗೆ ನಮ್ಮ ಹಿರಿಯರು ರಚಿಸಿದ್ದಾರೆ. ಸೂರ್ಯನನ್ನು ಕೇಂದ್ರವಾಗಿಟ್ಟುಕೊಂಡು ಜ್ಯೋತಿಷ್ಯವನ್ನು ರಚಿಸಲಾಗಿದೆ. ಈ ಜ್ಯೋತಿಷ್ಯದಲ್ಲಿ ೮ ಗೃಹಗಳ ಚಲನೆಯನ್ನು ಗ್ರಹಿಸಲಾಗುತ್ತದೆ. ಅದರ ಆಧಾರದ ಮೇಲೆ ನಮ್ಮ ಜೀವನದಲ್ಲಿ ಏನೆಲ್ಲ ಘಟನೆಗಳು ನಡೆಯಬಹುದು ಎಂದು ನೋಡಲಾಗುತ್ತದೆ. ಪ್ರಸ್ತುತ ಶುಕ್ರನ ಸಂಚಾರ ಆರಂಭವಾಗಿದೆ. ಶುಕ್ರನು ಅದೃಷ್ಟ ಹಾಗೂ ಆರಾಮವನ್ನು ತರುವ ಗ್ರಹವಾಗಿದೆ. ಇದು ತುಲಾ ಹಾಗೂ ವೃಷಭ ರಾಶಿಯ ಅಧಿಪತಿಯಾಗಿದೆ. ಶನಿಶ್ಚರನೊಂದಿಗೆ ಸಾಮರಸ್ಯದ ಸಂಬಂಧ ಹೊಂದಿದ್ದಾನೆ. ಶುಕ್ರ ಗ್ರಹದ ಪರಿಣಾಮವು ಎಲ್ಲ ರಾಶಿಯವರ ಮೇಲೂ ಒಂದೇ ತರಹ ಇರುವುದಿಲ. ವಿಭಿನ್ನವಾಗಿರುತ್ತದೆ. ಈಗ ಆರಂಭವಾಗಿರುವ ಶುಕ್ರನ ಸಂಚಾರದಿಂದ ಮೂರು ರಾಶಿಯಲ್ಲಿ ಜನಿಸಿದವರಿಗೆ ಅದೃಷ್ಟ ಖುಲಾಯಿಸಲಿದೆ.

ತುಲಾ ರಾಶಿ;

ಈ ರಾಶಿಯಲ್ಲಿ ಜನಿಸಿದವರಿಗೆ ಶುಕ್ರನ ನೇರ ಚಲನೆ ಹೆಚ್ಚು ಅನುಕೂಲಕರವಾಗಿರುತ್ತದೆ. ಇದರಿಂದ ಅವರು ಹೆಚ್ಚು ಲಾಭ ಗಳಿಸುತ್ತಾರೆ.ನಿಮ್ಮ ವೃತ್ತಿಯಲ್ಲಿ ನಿಮ್ಮ ಪ್ರತಿಭೆಗಳನ್ನು ಪ್ರದರ್ಶಿಸಲು ಅವಕಾಶ ಸಿಗಲಿಲ್ಲ. ಇದರಿಂದ ಯಾವುದೇ ಬದಲಾವಣೆ ಆಗಿಲ್ಲ ಎನ್ನುತ್ತಿರುವವರಿಗೆ ಅವಕಾಶಗಳು ಹುಡುಕಿಕೊಂಡು ಬರಲಿವೆ. ಶುಕ್ರನ ಸಂಚಾರದಿಂದ ನಿಮ್ಮ ಮನೆಯಲ್ಲಿ ಸಂಪತ್ತು, ಉದ್ಯೋಗದಲ್ಲಿ ಅಭಿವೃದ್ಧಿ ಕಾಣಬಹುದಾಗಿದೆ. ಅದರಲ್ಲೂ ವಿಶೇಷವಾಗಿ ವಿದ್ಯಾಭ್ಯಾಸ ಮುಗಿಸಿ ಕೆಲಸ ಸಿಗಲಿಲ್ಲ ಎಂದು ಕೊರಗುತ್ತಿರುವವರಿಗೆ ಈ ಸಮಯದಲ್ಲಿ ನೀವು ನಿರೀಕ್ಷೆ ಮಾಡಿದ ಕೆಲಸ ನಿಮಗೆ ಒಲಿಯಲಿದೆ. ಅಲ್ಲದೆ ಕೆಲಸ ಬದಲಾವಣೆ ಮಾಡುವವರಿಗೂ ಇದು ಸೂಕ್ತ ಸಮಯವಾಗಿದೆ.

ಕನ್ಯಾ ರಾಶಿ;

ಈ ರಾಶಿಯಲ್ಲಿ ಜನಿಸಿದವರಿಗೂ ಶುಕ್ರನು ನೇರವಾಗಿ ಸಂಚರಿಸುತ್ತಿದ್ದಾನೆ. ಶುಕ್ರನು ಕನ್ಯಾ ರಾಶಿಯ ಎರಡನೆ ಮನೆಯಲ್ಲಿ ಸಂಚಾರ ಮಾಡುತ್ತಿದ್ದು, ಭಾಗ್ಯಗಳನ್ನು ಕರುಣಿಸಲಿದ್ದಾನೆ. ಇದರಿಂದ ನಿಮ್ಮ ಆದಾಯದಲ್ಲಿ ಹೆಚ್ಚಳ ಆಗಲಿದೆ. ಯಾವುದಾದರೂ ಉದ್ಯಮ ನಡೆಸುತ್ತಿರುವವರು ಈ ಸಮಯದಲ್ಲಿ ಹೆಚ್ಚಿನ ಲಾಭ ಗಳಿಸುತ್ತಾರೆ. ಅಲ್ಲದೆ ಹೊಸ ಉದ್ಯಮ  ಆರಂಭಕ್ಕೂ ಮುಂದಾಗಲಿದ್ದಾರೆ. ಹೀಗೆ ಮಾಡುವುದರಿಂದ ಅವರು ಆರಂಭಿಸುವ ಉದ್ಯಮದಲ್ಲೂ ಲಾಭ ಗಳಿಸಲಿದ್ದಾರೆ. ಅಲ್ಲದೆ ಕನ್ಯಾ ರಾಶಿಯವರಿಗೆ ಶುಕ್ರನ ಚಲನೆಯಿಂದ ಅನಿರೀಕ್ಷಿತ ಲಾಭಗಳು ಬರಲಿವೆ. ಅಲ್ಲದೆ ವೈವಾಹಿಕ ಜೀವನದಲ್ಲಿ ಏನಾದರೂ ಸಮಸ್ಯೆಗಳು ಇದ್ದಲ್ಲಿ ಅವುಗಳು ಬಗೆಹರಿದು ನೆಮ್ಮದಿಯ ಜೀವನ ನಿಮ್ಮದಾಗಲಿದೆ.

ಮಿಥುನ ರಾಶಿ;

ಶುಕ್ರನ ಸಂಚಾರದಿಂದ ಮಿಥುನ ರಾಶಿಯವರಿಗೂ ಅದೃಷ್ಟ ಅರಸಿ ಬರಲಿದೆ. ಈ ರಾಶಿಯಲ್ಲಿ ಜನಿಸಿದವರ ಐದು ಹಾಗೂ ಹನ್ನೆರಡನೆ ಮನೆಯಲ್ಲಿ ಶುಕ್ರನ ಸಂಚರಿಸುತ್ತಿದ್ದಾನೆ. ಇದರಿಂದ ಸಂತಾನ ಆಗದ ದಂಪತಿಗಳಿಗೆ ಸಂತಾನ ಹಾಗೂ ಅನಿರೀಕ್ಷಿತ ಲಾಭಗಳು ಸಿಗುವುದನ್ನು ಸೂಚಿಸುತ್ತದೆ. ಈ ಶುಕ್ರನ ಸಂಚಾರದ ಅವಧಿಯು ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸುವುದಕ್ಕೆ ಸೂಕ್ತ ಸಮಯವಾಗಿದೆ. ಅಲ್ಲದೆ ನೀವು ಮಾಡುತ್ತೀರುವ ಉದ್ಯೋಗದಲ್ಲಿಯೂ ಯಶಸ್ಸು ಕಾಣುತ್ತೀರಿ. ಈ ಮೂಲಕ ನೆಮ್ಮದಿಯ ಜೀವನ ನಿಮ್ಮದಾಗಲಿದೆ.

Comments are closed.