Health Benefits of Buttermilk: ಈ ಒಂದು ಖಾಯಿಲೆಗೆ ಧರೆಯ ಅಮೃತ ಮಜ್ಜಿಗೆ ಸೇವಿಸಿದ್ರೆ ಸಾಕು, ಯಾವ ಔಷಧಿಯೂ ಬೇಕಾಗಿಲ್ಲ; ಟ್ರೈ ಮಾಡ್ ನೋಡಿ!

Health Benefits of Buttermilk: ಪ್ರತಿಯೊಬ್ಬ ವ್ಯಕ್ತಿಗೂ ಹಣಕ್ಕಿಂತ ಆರೋಗ್ಯವೇ ಮುಖ್ಯ. ಅದಕ್ಕಾಗಿಯೇ ನಮ್ಮ ಹಿರಿಯರು ಆರೋಗ್ಯವೇ ಭಾಗ್ಯ ಎಂದು ಒಂದೇ ಮಾತಿನಲ್ಲಿ ಹೇಳಿದ್ದಾರೆ. ಈ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾದರೆ ನಾವು ಪೌಷ್ಟಿಕಾಂಶಯುಕ್ತ ಆಹಾರವನ್ನು ಸೇವಿಸಬೇಕು. ಹಿತಮಿತವಾಗಿ ಸೇವಿಸಬೇಕು. ಈ ರೀತಿ ನಮ್ಮ ಆರೋಗ್ಯ ಕಾಪಾಡುವ ಆಹಾರದಲ್ಲಿ ಮಜ್ಜಿಗೆಯೂ ಒಂದಾಗಿದೆ. ಇದನ್ನೂ ಓದಿ: Jawan:ಕರ್ನಾಟಕದ ಥಿಯೇಟರ್ ನ್ನು ಚಿಂದಿ ಮಾಡಿದ ಜವಾನ್ ಚಿತ್ರದ ಅಭಿನಯಕ್ಕೆ ಲೇಡಿ ಸೂಪರ್ ಸ್ಟಾರ್, ವಿಜಯ್ ಸೇತುಪತಿಗೆ ಸಿಕ್ಕ ಸಂಭಾವನೆ ಎಷ್ಟು ಗೊತ್ತಾ? ಒಬ್ಬೊಬ್ಬರ ಸಂಭಾವನೆ ಕೇಳಿದ್ರೆ ತಲೆ ತಿರುಗೋದು ಖಚಿತ !

ಮಜ್ಜಿಗೆಯನ್ನು ಭೂಲೋಕದ ಅಮೃತ ಎಂದು ಕರೆಯಾಲಾಗುತ್ತದೆ. ಮಜ್ಜಿಗೆಯನ್ನು ಬೇಸಿಗೆ ಕಾಲದಲ್ಲಿ ಹೆಚ್ಚಿಗೆ ಬಳಸಲಾಗುತ್ತದೆ. ಆದರೆ ಮಜ್ಜಿಗೆಯನ್ನು ದಿನನಿತ್ಯವೂ ಬಳಕೆ ಮಾಡುವುದರಿಂದ ಹಲವಾರು ಲಾಭಗಳಿವೆ. ಅದರ ಬಗ್ಗೆ ತಿಳಿದುಕೊಳ್ಳೊಣ.

ಮಜ್ಜಿಗೆಗೆ ಎರಡು ರೀತಿಯ ಗುಣಗಳಿವೆ. ಅದೆನೆಂದರೆ ಆರೋಗ್ಯವಂತ ವ್ಯಕ್ತಿಗಳು ಸೇವಿಸಿದರೆ ಅವರ ಆರೋಗ್ಯವನ್ನು ಕಾಪಾಡುತ್ತದೆ. ಇನ್ನು ಅನಾರೋಗ್ಯ ಪೀಡಿತರು ಸೇವನೆ ಮಾಡಿದರೆ ಅವರ ಆನಾರೋಗ್ಯವನ್ನು ಗುಣಪಡಿಸುತ್ತದೆ. ಮಜ್ಜಿಗೆಗೆ ಆಯುರ್ವೇದದಲ್ಲಿ ಬಹಳ ಮಹತ್ವದ ಸ್ಥಾನವಿದೆ. ಮಜ್ಜಿಗೆಯು ಒಗರು ಹಾಗೂ ಹುಳಿ ಅಂಶ ಹೊಂದಿರುವ ಒಂದು ದ್ರವ ಪದಾರ್ಥವಾಗಿದೆ. ಇದು ಉಷ್ಣದ ಅಂಶ ಹೊಂದಿದೆ. ಆದ್ದರಿಂದ ಇದು ದೀಪನ ಶಕ್ತಿ ಹೊಂದಿದೆ ಎಂದು ಹೇಳಲಾಗುತ್ತದೆ.

ಮಜ್ಜಿಗೆಯೂ ವಾತ ಮತ್ತು ಪಿತ್ತ ಸಂಬಂಧಿತ ಕಾಯಿಲೆಗಳನ್ನು ಅತ್ಯಂತ ಶೀಘ್ರವಾಗಿ ಗುಣಪಡಿಸುತ್ತದೆ. ಅದಕ್ಕಾಗಿ ಉದರ ಸಂಬಂಧಿತ ಕಾಯಿಲೆ ಇರುವವರು ಮಜ್ಜಿಗೆಯನ್ನು ಸೇವನೆ ಮಾಡುವುದರಿಂದ ಬೇಗ ಗುಣಮುಖರಾಗಬಹುದು. ಇದನ್ನೂ ಓದಿ: PM Kisan Samman Scheme: ಸದ್ಯದಲ್ಲಿಯೇ ಬಿಡುಗಡೆಯಾಗಲಿರುವ ಪಿಎಂ ಕಿಸಾನ್ ಸಮ್ಮಾನ್ 2,೦೦೦ ರೂ. ತಂದೆಯ ಜೊತೆ ಮಗನಿಗೂ ಸಿಗಲಿದ್ಯಾ? 15 ನೇ ಕಂತಿನ ಹಣ ಯಾರ ಕೈಸೇರಲಿದೆ!  

ಉದರ ಕಾಯಿಲೆಗಳಾದ ಊಟ ಮಾಡಿದ ತಕ್ಷಣ ಮಲವಿಸರ್ಜನೆಗೆ ತೆರಳುವುದು, ಹೊಟ್ಟೆ ಉಬ್ಬರಿಸುವುದು, ಗ್ಯಾಸ್ ಸಮಸ್ಯೆ, ಹಾಗೂ ಅಸೈಟಿಸ್ ರೋಗಗಳಿಗೆ ಮಜ್ಜಿಗೆಯು ರಾಮಬಾಣವಾಗಿದೆ.

ಹೊಟ್ಟೆ ಸಮಸ್ಯೆ ಇರುವವರು ಪ್ಯೂರ್ ಮಜ್ಜಿಗೆ ಅಂದರೆ ಆಗ ತಾನೆ ಮೊಸರನ್ನು ಕಡೆದು ಬೆಣ್ಣೆಯನ್ನು ತೆಗೆದ ಮಜ್ಜಿಗೆ ಸೇವನೆ ಮಾಡಬೇಕು. ಮಜ್ಜಿಗೆಯನ್ನು ತಯಾರಿಸಿದ ೨-೩ ಗಂಟೆಯ ಬಳಿಕ ಸೇವಿಸಿದರೆ ಅದು ಹುಳಿ ಹೆಚ್ಚಾಗುವುದರಿಂದ ಅಷ್ಟೊಂದು ಪರಿಣಾಮಕಾರಿಯಾಗಿರುವುದಿಲ್ಲ.

ಮಜ್ಜಿಗೆಗೆ ಸ್ವಲ್ಪ ಶುಂಠಿ ಹಾಗೂ ಸ್ವಲ್ಪ ಸೈಂದವ ಲವಣ, ಕೊತ್ತಂಬರಿ ಸಪ್ಪನ್ನು ಸೇರಿಸಿ ಸೇವನೆ ಮಾಡುವುದರಿಂದ ಗ್ಯಾಸ್ ಸಂಬಂಧಿತ ಸಮಸ್ಯೆಗಳು ನಿವಾರಣೆಯಾಗುತ್ತದೆ.

ಇನ್ನು ಗ್ರಹಣಿ ರೋಗಕ್ಕೆ ಮಜ್ಜಿಗೆ ೨ ಕಾಳುಮೆಣಸು, ಸ್ವಲ್ಪ ಶುಂಠಿ ಹಾಗೂ ಹಿಪ್ಲಿಯನ್ನು ಸೇರಿಸಿ ಸೇವಿಸಬೇಕು. ಮಲವಿಸರ್ಜನೆ ಸರಿಯಾಗಿ ಆಗಿದ್ದವರು ಸ್ವಲ್ಪ ಹುಳಿ ಇರುವ ಮಜ್ಜಿಗೆ ಸೇವನೆ ಮಾಡಬೇಕು. ಇದರಿಂದ ಮಲವಿಸರ್ಜನೆ ಸರಾಗವಾಗಿ ಆಗುತ್ತದೆ.

ಇನ್ನು ಹೊಟ್ಟೆ ಉಬ್ಬರದಂತಹ ಸಮಸ್ಯೆಗಳು ಕಾಣಿಸಿಕೊಂಡಾಗ ಮಜ್ಜಿಗೆಗೆ ಸ್ವಲ್ಪ ಶುಂಠಿ ಹಾಗೂ ಬೆಲ್ಲ ಸೇರಿಸಿ ತೆಗೆದುಕೊಳ್ಳುವುದರಿಂದ ಸಮಸ್ಯೆ ನಿವಾರಣೆಯಾಗಲಿದೆ.

ಹೀಗೆ ಮಜ್ಜಿಗೆಯು ಮನುಷ್ಯನಿಗೆ ಹಲವಾರು ರೀತಿಯಲ್ಲಿ ಪ್ರಯೋಜನಕ್ಕೆ ಬರುವುದರಿಂದಲೇ ಇದನ್ನು ಧರೆಯ ಅಮೃತ ಎಂದು ಕರೆಯಲಾಗಿದೆ. ಹಾಗಾಗಿ ಪ್ರತಿಯೊಬ್ಬರು ಪ್ರತಿದಿನ ಮಜ್ಜಿಗೆಯನ್ನು ಸೇವಿಸುವ ಪದ್ಧತಿ ರೂಢಿಸಿಕೊಂಡಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ.

Comments are closed.