Hyundai I20:  ಕೆಲವೇ ದಿನಕ್ಕೆ ಸೀಮಿತ ಹುಂಡೈ ನ ಈ ಕೊಡುಗೆ; ಹೊಸ ಐ-2೦ ಕೈಗೆಟುಕುವ ಬೆಲೆಯಲ್ಲಿ, ಈಗಲೇ ಬುಕ್ ಮಾಡಿ!

Hyundai I20: ಯಾವುದೇ ಒಂದು ವಸ್ತುವನ್ನು ತಯಾರಿಸಿದಾಗ ಅದರ ಅಪ್ಡೇಟ್ ವರ್ಷನ್ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಲೇ ಇರಬೇಕಾಗುತ್ತದೆ. ಗ್ರಾಹಕರ ಅಭಿರುಚಿಗೆ ತಕ್ಕಂತೆ ವಸ್ತುಗಳನ್ನು ಸಿದ್ದಪಡಿಸಬೇಕಾಗುತ್ತದೆ. ಇದಕ್ಕೆ ಕಾರುಗಳು ಸಹ ಹೊರತಲ್ಲ. ಇದೀಗ ಹುಂಡೈ ಐ 2೦ ಕಂಪನಿಯು ಹೊಸ ಕಾರನ್ನು ಗ್ರಾಹಕರಿಗೆ ಪರಿಚಯಿಸಿದ್ದು, ಇದರಲ್ಲಿ ನೂತನ ಫೀಚರ್ಸ್ ಹಾಗೂ ಸಾಕಷ್ಟು ವೈಶಿಷ್ಟ್ಯತೆಗಳನ್ನು ಕಾಣಬಹುದು. ಇದನ್ನೂ ಓದಿ: Kannada language: ಇನ್ನು ಮುಂದೆ ಬ್ಯಾಂಕ್ ನಲ್ಲಿ ಯಾರೂ ’ಕನ್ನಡ್ ಗೊತ್ತಿಲ್ಲ’ ಎನ್ನುವ ಹಾಗಿಲ್ಲ ಎಂದ ರಾಜ್ಯ ಸರ್ಕಾರ; ’ಕನ್ನಡಿಗರಿಗೆ ಕೆಲಸ’ ಕೂಡ ಸಿಗಲಿದ್ಯಾ?

ಹೌದು, ಹುಂಡೈ ಐ-2೦ ಕಾರಿನ ಕಂಪನಿಯೂ ಯಾವಾಗಲೂ ಗ್ರಾಹಕ ಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತಿದೆ. ತನ್ನ ಗ್ರಾಹಕರಿಗೆ ಏನು ಬೇಕೋ ಅದನ್ನು ಅರಿತು ಕಾರಿನಲ್ಲಿ ಅದೇ ರೀತಿಯ ಮಾರ್ಪಾಟುಗಳನ್ನು ಮಾಡಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ.

ಭಾರತದ ಮಾರುಕಟ್ಟೆಯಲ್ಲಿ ಇರುವ ಜನಪ್ರಿಯ ಕಾರು ಕಂಪನಿಗಳಲ್ಲಿ ಹುಂಡೈ ಕಂಪನಿಯೂ ಒಂದಾಗಿದೆ. ಇದೀಗ ಈ ಕಂಪನಿಯೂ ತನ್ನ ಹೊಸ ಮಾಡೆಲ್ ಕಾರನ್ನು ಮೊದಲು ಯೂರೋಪ್ ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು. ನಂತರ ಇದೀಗ ಭಾರತೀಯ ಮಾರುಕಟ್ಟೆಗೂ ಬಿಡುಗಡೆ ಮಾಡಿದೆ. ಈ ಕಾರಿನ ಬೆಲೆ ಕೇವಲ 6.99 ಲಕ್ಷ ರೂ.ಗಳು. ಇದುವೇ ಹುಂಡೈ ಐ-2೦ ಹ್ಯಾಚ್ ಬ್ಯಾಕ್ ಕಾರ್.

ಈ ಹೊಸ ಕಾರಿನಲ್ಲಿ ಪ್ರಯಾಣಿಕರ ಸುರಕ್ಷತೆಗೆ ಗರಿಷ್ಠ ಪ್ರಮಾಣದ ಆದ್ಯತೆ ನೀಡಲಾಗಿದೆ. ಪ್ರಮುಖವಾಗಿ ಕಾರಿನಲ್ಲಿ 6 ಏರ್ ಬ್ಯಾಗ್ ಗಳಿವೆ. ಅಲ್ಲದೆ ನೀವು ಕಾರಿನಲ್ಲಿ ಕುಳಿತ ನಂತರ ಸಿಟ್ ಬೆಲ್ಟ್ ಹಾಕಿಕೊಳ್ಳದಿದ್ದರೆ ಎಚ್ಚರಿಸುವ ತಂತ್ರಜ್ಞಾನವನ್ನೂ ಅಳವಡಿಸಲಾಗಿದೆ. ಕಾರನ್ನು ಹಿಮ್ಮುಖವಾಗಿ ಚಾಲನೆ ಮಾಡುವಾಗ ಅನುಕೂಲವಾಗಲಿ ಎಂದು ಕಾರಿನ ಹಿಂದುಗಡೆ ಕ್ಯಾಮರಾ ಇಡಲಾಗಿದೆ. ಇದರಿಂದ ಚಾಲಕರು ಸುಲಭವಾಗಿ ಹಿಮ್ಮುಖವಾಗಿ ಚಲಿಸಬಹುದಾಗಿದೆ. ಇದನ್ನೂ ಓದಿ: TTD: ಇನ್ನು ಮೇಲೆ ತಿರುಪತಿಗೆ ಹೋಗಲು ಬಯಸುವವರಿಗೆ ಫ್ರೀ VIP ದರ್ಶನ; ಅದಕ್ಕೆ ನೀವು ಈ ಒಂದು ಕೆಲಸ ಮಾಡ್ಬೇಕು ಏನು ಗೊತ್ತಾ?

ಹುಂಡೈ ಐ-2೦ ಕಾರು ಬಹಳ ಬಲಿಷ್ಠವಾಗಿದೆ. 1.2 ಲೀಟರ್, ನಾಲ್ಕು- ಸಿಲಿಂಡರ್ ಎನ್ಎ ಪೆಟ್ರೋಲ್ ಮೋಟಾರು, ಐದು ಹೈಸ್ಪೀಡ್ ಮ್ಯಾನ್ಯುವಲ್ ಅಥವಾ ಐವಿಟಿಗೆ ಜೋಡಿಸಲಾಗಿದೆ. ಈ ಮೋಟಾರು 83 ಬಿಎಚ್ಪಿ  ಹಾಗೂ 114.7 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಅಲ್ಲದೆ ಜನರೇಟರ್ ಜೊತೆಗೆ ಇದು ಸಹ ಬರುತ್ತದೆ. ಇಂತಹ ಸಿಸ್ಟಮ್ ಇದೇ ಮೊದಲ ಬಾರಿ ಅಳವಡಿಸಲಾಗಿದೆ.

ಕಾರಿನ ಒಳಭಾಗದ ವಿನ್ಯಾಸ ಸಹ ಬಹಳ ಸುಂದರಾಗಿದೆ. ಯಾರಿಗೆ ಆದರೂ ಒಂದು ಬಾರಿ ಡ್ರೈವ್ ಮಾಡಿ ನೋಡಬೇಕು ಎಂದೆನಿಸುತ್ತದೆ. ಗ್ರಾಹಕರ ಅಭಿರುಚಿಗೆ ತಕ್ಕಂತೆ ಬೂದು ಹಾಗೂ ಕಪ್ಪು ಬಣ್ಣಗಳಲ್ಲಿದ್ದರೂ 7 ಬಣ್ಣದ ಸ್ಟಿಕರ್ ಅಳವಡಿಸಲಾಗಿದೆ. ಅರೆ ಲೇಥರ್ ಸೀಟುಗಳು, ಪ್ಲಾಟ್ ಬಾಟಮ್ ಸ್ಟೇರಿಂಗ್ ವೀಲ್, ಡೋರ್ ಆಮ್ರೆಸ್ಟ್ಗಳನ್ನು ಈ ಕಾರು ಒಳಗೊಂಡಿದೆ. ಇದನ್ನೂ ಓದಿ: Jawan:ಕರ್ನಾಟಕದ ಥಿಯೇಟರ್ ನ್ನು ಚಿಂದಿ ಮಾಡಿದ ಜವಾನ್ ಚಿತ್ರದ ಅಭಿನಯಕ್ಕೆ ಲೇಡಿ ಸೂಪರ್ ಸ್ಟಾರ್, ವಿಜಯ್ ಸೇತುಪತಿಗೆ ಸಿಕ್ಕ ಸಂಭಾವನೆ ಎಷ್ಟು ಗೊತ್ತಾ? ಒಬ್ಬೊಬ್ಬರ ಸಂಭಾವನೆ ಕೇಳಿದ್ರೆ ತಲೆ ತಿರುಗೋದು ಖಚಿತ !

Comments are closed.