Arecanut farming: ಒಂದೇ ಒಂದು ಎಕರೆ ಜಾಗವಿದ್ದರೂ ಸಾಕು, ಈ ಬೆಳೆ ಬೆಳೆದರೆ ಚಿನ್ನವನ್ನೇ ಬೆಳೆದ ಹಾಗೆ; ವರ್ಷಾಂತ್ಯದಲ್ಲಿ ಕೈತುಂಬಾ ಆದಾಯ!

Arecanut farming: ಭಾರತದ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಅಡಿಕೆಗೆ ಮಹತ್ವದ ಸ್ಥಾನವಿದೆ. ಅಡಿಕೆಯನ್ನು ಕರ್ನಾಟಕದಲ್ಲಿ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಹೆಚ್ಚು ಬೆಳೆಯಲಾಗುತ್ತದೆ. ಅಡಿಕೆಗೆ ಧಾರ್ಮಿಕವಾಗಿಯೂ ಬಹಳ ಮಹತ್ವವಿದೆ. ನಿಮಗೆ ಒಂದು ಎಕರೆ ಸಮತಟ್ಟಾದ ಭೂಮಿ ಇದ್ದರೆ ನೀವು ಸಹ ಅಡಿಕೆ ಬೆಳೆದು ಲಕ್ಷಾಧೀಶರಾಗಬಹದು. ಆದರೆ ಇದಕ್ಕೆ ನೀವು ಕನಿಷ್ಠ ಐದು ವರ್ಷ ಕಾಯಬೇಕಾಗುತ್ತದೆ.

 ಅಡಿಕೆಯೂ ವಾರ್ಷಿಕ ಬೆಳೆಯಾಗಿದ್ದು, ವರ್ಷದಲ್ಲಿ ಒಂದು ಅಥವಾ ಎರಡು ಬಾರಿ ಕೊಯ್ಲು ಮಾಡಬಹುದಾಗಿದೆ. ಇದೀಗ ಅಡಿಕೆಯಲ್ಲಿಯೂ ಸುಧಾರಿತ ತಳಿಗಳು ಬಂದಿದ್ದು, ಐದು ವರ್ಷಕ್ಕೆ ಫಲ ನೀಡುವ ಅಡಿಕೆ ಮರಗಳು ಇವೆ. ಕೃಷಿಯಲ್ಲಿ ಕೂಲಿಯಾಳುಗಳ ಸಮಸ್ಯೆ ಬಹಳವಾಗಿ ಕಾಡುತ್ತಿರುವುದರಿಂದ ಈ ನಾಟಿ ಮಾಡುವ ಮರಗಳು ಹೆಚ್ಚು ಎತ್ತರ ಬೆಳೆಯದಂತೆ ತಳಿಗಳನ್ನು ಅಭಿವೃದ್ಧಿ ಪಡಿಸಲಾಗಿದೆ.

ಅಡಿಕೆ ಬೆಳೆಯಲು ಸಮತಟ್ಟಾದ ಜಾಗ ಬೇಕಾಗುತ್ತದೆ. ನಿಮ್ಮ ಜಮೀನು ಇಳಿಜಾರಾಗಿದ್ದರೆ ನೀವು ಅಡಿಕೆ ಬೆಳೆಯಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಸಮತಟ್ಟಾದ ಜಮೀನು ಇರಬೇಕಾಗುತ್ತದೆ. ಒಂದು ಎಕರೆ ವಿಸ್ತಿರ್ಣದಲ್ಲಿ ಕನಿಷ್ಠ 5೦೦ ಅಡಿಕೆ ಸಸಿಗಳನ್ನು ನೀವು ನೆಡಬಹುದಾಗಿದೆ. ನೆಟ್ಟ ನಂತರ ಅದಕ್ಕೆ ಸಾವಯವ ವಿಧಾನದಲ್ಲಿ ಬೆಳೆಸುವುದು ಉತ್ತಮ ಎನ್ನುವುದು ಪ್ರಗತಿಪರ ಅಡಿಕೆ ಬೆಳೆಗಾರರ ಅಭಿಪ್ರಾಯವಾಗಿದೆ. ಕೊಟ್ಟಿಗೆ ಗೊಬ್ಬರ, ಅಥವಾ ಬೆಟ್ಟದಲ್ಲಿ ಸಿಗುವ ಮರದ ಎಲೆಗಳನ್ನು ತಂದು ಗೊಬ್ಬರ ಮಾಡಿ ಹಾಕಬಹುದು. ಅಲ್ಲದೆ ಮಣ್ಣನ್ನು ಕಾಲಕಾಲಕ್ಕೆ ನೀಡಬೇಕಾಗುತ್ತದೆ. ಅಡಿಕೆಯೂ ಹೆಚ್ಚಿನ ನೀರನ್ನು ಬಯಸುವುದರಿಂದ ಬೇಸಿಗೆ ಕಾಲದಲ್ಲಿ ನೀವು ಕೆರೆ ಅಥವಾ ಹಳ್ಳದ ನೀರನ್ನು ಪಂಪ್ ಮಾಡಿ ಪೂರೈಸಬೇಕಾಗುತ್ತದೆ. ಹೀಗೆ ಸರಿಯಾದ ಕ್ರಮದಲ್ಲಿ ನೀವು ಅಡಿಕೆ ಕೃಷಿ ಮಾಡಿದಲ್ಲಿ 5-6 ವರ್ಷದಲ್ಲಿ ಅದು ಫಲ ನೀಡುತ್ತದೆ.

ಸದ್ಯ ಮಾರುಕಟ್ಟೆಯಲ್ಲಿ ಅಡಿಕೆ ಕ್ವಿಂಟಾಲ್ಗೆ 4೦ ಸಾವಿರ ರೂ. ಆಸುಪಾಸಿನಲ್ಲಿದೆ. ಒಂದು ಮರವು ಸಾಧಾರಣವಾಗಿ 4-6 ಗೊನೆಗಳನ್ನು ಬಿಡುತ್ತದೆ. ಅಂದರೆ ಸರಿ ಸುಮಾರು 6 ಕೆ.ಜಿ ಅಡಿಕೆ ಸಿಗುತ್ತದೆ. ನೀವು 5೦೦ ಅಡಿಕೆಗಳನ್ನು ಹಾಕಿದರೆ 6 ಕೆ.ಜಿಯಂತೆ ಮೂರು ಕ್ವಿಂಟಾಲ್ ಅಡಿಕೆ ಆಗುತ್ತದೆ. ಒಂದು ಕೆ.ಜಿ ಅಡಿಕೆಗೆ 3೦೦ ರೂ. ಎಂದರೂ 9 ಲಕ್ಷ ರೂ.ಗಳನ್ನು ನೀವು ಗಳಿಸಬಹುದು. ಅಲ್ಲದೆ ಅಡಿಕೆಯೂ ಹಳೆಯದಾದ ಹಾಗೆ ಅದರ ದರವು ಹೆಚ್ಚಾಗುತ್ತದೆ. ಒಮ್ಮೊಮ್ಮೆ ನಿಮಗೆ ಒಂದು ಕೆ.ಜಿ. ಅಡಿಕೆಗೆ 55 ಸಾವಿರ ರೂ.ನಿಂದ 6೦ ಸಾವಿರ ರೂ. ವರೆಗೂ ಮಾರಾಟವಾಗುವ ಸಾಧ್ಯತೆ. ಈ ರೀತಿ ಆದಲ್ಲಿ ನೀವು ಮತ್ತೂ ಹೆಚ್ಚಿನ ಹಣ ಗಳಿಸಬಹುದಾಗಿದೆ.

ನೀವು ಅಡಿಕೆ ಕೃಷಿಯಲ್ಲಿ ಲಾಭ ಗಳಿಸಲು ಮೊದಲು ನೀವೇ ಸ್ವತಃ ಕೆಲಸ ಮಾಡುವ ಸಾಮರ್ಥ್ಯವುಳ್ಳವರಾಗಿರಬೇಕು. ಅಲ್ಲದೆ ಕೂಲಿಯಾಳುಗಳು ಕೊರತೆ ನೀಗಿಸಲು ಮಷೀನ್ಗಳ ಬಳಕೆ ನಿಮಗೆ ತಿಳಿದಿರಬೇಕು. ಇವೆಲ್ಲವುಗಳಿಂಗಿಂತ ಮುಖ್ಯವಾಗಿ ನೀವು ರಾಸಾಯನಿಕ ಬಳಕೆ ಬಿಟ್ಟು ಸಾವಯವ ಕೃಷಿ ಮಾಡಿದರೆ ನಿಮ್ಮ ತೋಟಕ್ಕೂ ಹಾನಿಯಾಗುವುದಿಲ್ಲ. ಖರ್ಚು ಸಹ ಕಡಿಮೆ ಆಗಲಿದೆ. ಇದರಿಂದ ನೀವು ಹೆಚ್ಚಿನ ಲಾಭ ಗಳಿಸಲು ಸಾಧ್ಯವಾಗುತ್ತದೆ.

Comments are closed.