Kannada entertainment: ಬಿಗ್ ಬಾಸ್ TRP ಮುಂದೆ ಧಾರಾವಾಹಿಗಳು ತಂದುಕೊಡುವ TRP ಲೆಕ್ಕಕ್ಕೆ ಇಲ್ವಾ: ಅರ್ಧದಲ್ಲಿಯೇ ಜನರ ನೆಚ್ಚಿನ ಧಾರಾವಾಹಿಗಳು ಮುಗಿಯುತ್ತಾ? ಇದು ಸರಿನಾ!

Kannada entertainment: ಟಿಆರ್ ಪಿ (TRP) ಆರಂಭವಾದ ನಂತರ ಪ್ರತಿಯೊಂದು ಕಾರ್ಯಕ್ರಮವು ಅದರ ಮೇಲೆ ಅವಲಂಭಿತವಾಗಿದೆ. ಟಿಆರ್ಪಿ ಬಾರದಿದ್ದರೆ ಎಂತಹ ಕಾರ್ಯಕ್ರಮವನ್ನಾದರೂ ಮುಲಾಜಿಲ್ಲದೆ ವಾಹಿನಿಯೂ ನಿಲ್ಲಿಸಿಬಿಡುತ್ತದೆ. ಲಾಭವೊಂದೇ ಉದ್ದೇಶವಾದಾಗ ಈ ರೀತಿ ಆಗುವುದು ಸಹಜ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಇದೀಗ ಮತ್ತೆ ಬಿಗ್ ಬಾಸ್ ರಿಯಾಲಿಟಿ ಶೋ ಆರಂಭವಾಗಲಿದೆ. ಇದು ವಾಹಿನಿಗೆ ಹೆಚ್ಚಿನ ಪ್ರಮಾಣದಲ್ಲಿ ಟಿಆರ್ಪಿ ತಂದುಕೊಡುವ ಶೋ ಆಗಿದೆ. ಇದಕ್ಕೆ ಮುಖ್ಯ ಕಾರಣ ಇದರ ನಿರೂಪಕ ಕಿಚ್ಚ ಸುದೀಪ್ ಅವರು ಎಂದರೆ ತಪ್ಪಾಗಲಿಕ್ಕಿಲ್ಲ. ಈ ಬಿಗ್ ಬಾಸ್ (Bigg Boss) ರಿಯಾಲಿಟಿ ಶೋ 1.3೦ ಗಂಟೆ ಪ್ರಸಾರವಾಗುವುದರಿಂದ ಮೂರು ಧಾರಾವಾಹಿಗಳನ್ನು ನಿಲ್ಲಿಸಬಹುದು ಎನ್ನಲಾಗುತ್ತಿದೆ.

ಹೌದು, ಕಲರ್ಸ್ ಕನ್ನಡದ ಅತ್ಯಂತ ದೊಡ್ಡ ರಿಯಾಲಿಟಿ ಶೋ ಎಂದರೆ ಅದು ಬಿಗ್ ಬಾಸ್ ರಿಯಾಲಿಟಿ ಶೋ. ಇಲ್ಲಿಯವರೆಗೆ ೯ ಸೀಸನ್ಗಳು ಮುಗಿದಿದ್ದು, ಈ ಬಾರಿ 1೦ನೇ ಸೀಸನ್ (Bigg Boss Season 10) ಶುರುವಾಗಲಿದೆ. ಈ ಕುರಿತು ವಾಹಿನಿ ಪ್ರೋಮೋ ಬಿಡುಗಡೆ ಮಾಡುವ ಮೂಲಕ ಅಧಿಕೃತವಾಗಿ ಘೋಷಿಸಿದೆ.  ಬಿಗ್ ಬಾಸ್ ಶೋ ಸಾಮಾನ್ಯವಾಗಿ 1.3೦ ಗಂಟೆ ಪ್ರಸಾರವಾಗುತ್ತದೆ. ಹಾಗಾಗಿ 3 ಸಿರಿಯಲ್ಗಳನ್ನು ನಿಲ್ಲಿಸಬೇಕಾಗುತ್ತದೆ. ಇಲ್ಲವೇ ಬದಲಿ ಸಮಯದಲ್ಲಿ ಪ್ರಸಾರ ಮಾಡಬೇಕಾಗುತ್ತದೆ. ಒಂದು ವೇಳೆ ಸಿರಿಯಲ್ (Serial) ನಿಲ್ಲಿಸುವುದಾದರೆ ಯಾವ ಯಾವ ಸೀರಿಯಲ್ ನಿಲ್ಲಬಹುದು ಎಂದು ಈಗ ನೋಡೋಣ. ಇದನ್ನೂ ಓದಿ: PM Kisan Samman Scheme: ಸದ್ಯದಲ್ಲಿಯೇ ಬಿಡುಗಡೆಯಾಗಲಿರುವ ಪಿಎಂ ಕಿಸಾನ್ ಸಮ್ಮಾನ್ 2,೦೦೦ ರೂ. ತಂದೆಯ ಜೊತೆ ಮಗನಿಗೂ ಸಿಗಲಿದ್ಯಾ? 15 ನೇ ಕಂತಿನ ಹಣ ಯಾರ ಕೈಸೇರಲಿದೆ!  

ಕಲರ್ಸ್ ಕನ್ನಡ ವಾಹಿನಿಯಲ್ಲಿ ಅತ್ಯಂತ ಕಡಿಮೆ ಟಿಆರ್ಪಿ ಗಳಿಕೆ ಮಾಡಿದ ಪುಣ್ಯವತಿ, ಲಕ್ಷಣ ಹಾಗೂ ತ್ರಿಪುರ ಸುಂದರಿ ಧಾರವಾಹಿಗಳು ತಮ್ಮ ಕಥೆಗೆ ವಿದಾಯ ಹೇಳಬಹುದು ಎನ್ನಲಾಗುತ್ತಿದೆ. ಆದರೆ ಈ ವಿಚಾರವನ್ನು ವಾಹಿನಿಯೂ ಇನ್ನು ಅಧಿಕೃತವಾಗಿ ಪ್ರಕಟಿಸಿಲ್ಲ. ಇದರಿಂದ ಈ ಸಿರಿಯಲ್ಗಳನ್ನು ಪ್ರತಿನಿತ್ಯ ನೋಡುವವರಿಗೆ ನಿರಾಸೆ ಉಂಟಾಗಬಹುದು.

ಈ ಬಾರಿಯ ಬಿಗ್ ಬಾಸ್ ರಿಯಾಲಿಟಿ ಶೋನ (Reality Show) ಪ್ರೋಮೋ ಬಿಡುಗಡೆಯಾಗಿದ್ದು, ಸಮ್ಥಿಂಗ್ ಸ್ಪೆಶಲ್ (Something Special) ಎನ್ನುವ ಅಡಿಬರಹವಿದೆ. ಪ್ರತಿ ಸಲದ ಹಾಗೆ ಒಂದು ಮನೆಯನ್ನು ತೋರಿಸದೆ ರಸ್ತೆಯಲ್ಲಿ ಕ್ಯಾಮರಾಗಳನ್ನು ಇಟ್ಟಿರುವುದನ್ನು ತೋರಿಸಲಾಗಿದೆ. ಇದರಿಂದ ಜನರ ಕುತೂಹಲ ಇನ್ನಷ್ಟು ಹೆಚ್ಚಿದೆ.

ಇನ್ನು ಈ ಬಾರಿ ದೊಡ್ಮನೆಗೆ ಯಾರೆಲ್ಲ ಪ್ರವೇಶ ಮಾಡಬಹುದು ಎನ್ನುವ ಚರ್ಚೆ ಸಮಾಜಿಕ ಜಾಲತಾಣದಲ್ಲಿ ಜೋರಾಗಿ ನಡೆಯುತ್ತಿದೆ. ವಾಹಿನಿಯು ಈ ವಿಚಾರದಲ್ಲಿ ಗೌಪ್ಯತೆಯನ್ನು ಕಾಪಾಡಿಕೊಂಡಿದೆ. ಹಾಗಾಗಿ ಸ್ಪರ್ಧಿಗಳ ವಿಚಾರದಲ್ಲೂ ಜನರಲ್ಲಿ ಸಾಕಷ್ಟು ಕುತೂಹಲವಿದೆ.

ಇನ್ನು ಈ ಬಾರಿ ಸೂಪರ್ ಸ್ಟಾರ್, ಬಾದ್ ಷಾ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kichha Sudeep) ಅವರು ನಿರೂಪಣೆ ಮಾಡುವುದಿಲ್ಲವಾ ಎನ್ನುವ ಪ್ರಶ್ನೆಯೂ ಎದ್ದಿದೆ. ಇದಕ್ಕೆ ಕಾರಣ ಪ್ರೋಮೋದಲ್ಲಿ ಅವರ ಧ್ವನಿ ಇಲ್ಲದಿರುವುದು. ಈ ವಿಚಾರಕ್ಕೂ ವಾಹಿನಿಯ ಕಡೆಯಿಂದಲೇ ಸ್ಪಷ್ಟನೆ ಸಿಗಬೇಕಿದೆ. 9 ಸೀಸನ್ಗಳನ್ನು ಹೆಚ್ಚಿನ ಜನರು ಕಿಚ್ಚ ಸುದೀಪ್ ಅವರು ನಿರೂಪಣೆ ಮಾಡುತ್ತಾರೆ ಎನ್ನುವ ಸಲುವಾಗಿಯೇ ನೋಡುತ್ತಿದ್ದರು. ಅವರು ಸ್ಪರ್ಧಿಗಳಿಗೆ ಹೇಳುವ ಬುದ್ದಿಮಾತು, ಅವರ ಕಾಲೆಳೆಯುವ ರೀತಿ, ಸ್ಪರ್ಧಿಗಳಲ್ಲಿ ಅವರು ಉತ್ಸಾಹ ತುಂಬುವುದು ಎಲ್ಲವು ವೀಕ್ಷಕರಿಗೆ ಬಹಳಾನೇ ಇಷ್ಟವಾಗಿದ್ದವು. ಈ ಬಾರಿಯೂ ಕಿಚ್ಚ ಸುದೀಪ್ ಅವರೇ ನಿರೂಪಣೆ ಮಾಡಲಿ ಎನ್ನುವ ಒತ್ತಾಯವೂ ಕೇಳಿಬಂದಿದೆ. ಇದನ್ನೂ ಓದಿ: Gruhalakshmi Scheme: ತಾತ್ಕಾಲಿಕವಾಗಿ ಗೃಹಲಕ್ಷ್ಮಿ ಯೋಜನೆಯ ನೋಂದಣಿ ಸ್ಥಗಿತಗೊಳಿಸಿದ ರಾಜ್ಯ ಸರ್ಕಾರ: ಲಕ್ಷಾಂತರ ಮಹಿಳೆಯರಿಗೆ ನಿರಾಸೆ!

Comments are closed.