PM Kisan samman Nidhi Yojana: ಸೆ. 3೦ರೊಳಗೆ ಈ ಕೆಲಸ ಮಾಡದೇ ಇದ್ದಲ್ಲಿ ರೈತರ ಖಾತೆಗೆ ಉಚಿತವಾಗಿ ಬರುವ 2,000ರೂ. ಬರುವುದಿಲ್ಲ; ಈಗಲೇ ಈ ಕೆಲಸ ಮಾಡಿ!

PM Kisan samman Nidhi Yojana ಪ್ರಸ್ತುತ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಯೋಜನೆಯ ಲಾಭ ಸಿಗಬೇಕು ಎಂದು ಯೋಚಿಸುತ್ತಿದೆ. ಇದಕ್ಕಾಗಿಯೇ ಮಧ್ಯವರ್ತಿಗಳ ಕಾಟ ತಪ್ಪಿಸಿ ನೇರವಾಗಿ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡುತ್ತಿದೆ. ಅಲ್ಲದೆ ರೈತರಿಗೆ, ಮಹಿಳೆಯರಿಗೆ, ನಿರುದ್ಯೋಗಿಗಳಿಗೆ ಹೀಗೆ ಸಮಾಜದ ಎಲ್ಲ ವರ್ಗದವರ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಈ ಯೋಜನೆಗಳನ್ನು ತಿಳಿದುಕೊಂಡು ಸಮರ್ಪಕವಾಗಿ ಅರ್ಜಿ ಸಲ್ಲಿಸಿದರೆ ನಿಮ್ಮ ಖಾತೆಗೆ ಹಣ ಬರುತ್ತದೆ. ಇದನ್ನೂ ಓದಿ: Gruhalakshmi Scheme: ತಾತ್ಕಾಲಿಕವಾಗಿ ಗೃಹಲಕ್ಷ್ಮಿ ಯೋಜನೆಯ ನೋಂದಣಿ ಸ್ಥಗಿತಗೊಳಿಸಿದ ರಾಜ್ಯ ಸರ್ಕಾರ: ಲಕ್ಷಾಂತರ ಮಹಿಳೆಯರಿಗೆ ನಿರಾಸೆ!

ಕೇಂದ್ರ ಸರ್ಕಾರವು ರೈತರಿಗೆ ಆರ್ಥಿಕ ಶಕ್ತಿ ತುಂಬುವ ಸಲುವಾಗಿ ಪ್ರಧಾನ ಮಂತ್ರಿ  ಕಿಸಾನ್ ಸಮ್ಮಾನ್ ಯೋಜನೆಯನ್ನು ಜಾರಿಗೊಳಿಸಿದೆ. ಈ ಯೋಜನೆ ಅನ್ವಯ ವರ್ಷಕ್ಕೆ ಮೂರು ಬಾರಿ 2೦೦೦ ರೂ.ನಂತೆ 6೦೦೦ ರೂ.ಗಳನ್ನು ರೈತರ ಖಾತೆಗೆ ಜಮಾ ಮಾಡಲಾಗುತ್ತದೆ.

ಈ ಯೋಜನೆಯ ಫಲಾನುಭವಿಯಾಗಲು ನಿಮ್ಮ ಹೆಸರಲ್ಲಿ ಕೃಷಿ ಜಮೀನು ಇರಬೇಕಾಗುತ್ತದೆ. ಅಂತಹವರಿಗೆ ಮಾತ್ರ ಈ ಯೋಜನೆಯ ಲಾಭ ಸಿಗಲಿದೆ. ಈಗಾಗಲೇ ಈ ಯೋಜನೆ ಅಡಿಯಲ್ಲಿ ಲಾಭ ಪಡೆಯುತ್ತಿರುವ ರೈತರು ಮತ್ತೊಮ್ಮೆ ಈ ಕೆವೈಸಿ (E-KYC) ಮಾಡಿಸಿಕೊಳ್ಳಬೇಕಾಗಿದೆ. ಅದಕ್ಕೆ ಸೆ.3೦ ಕೊನೆಯ ದಿನವಾಗಿದೆ. ಇದನ್ನೂ ಓದಿ: Electric two-wheeler problems: ಪೆಟ್ರೋಲ್ ಸ್ಕೂಟರ್ ದುಬಾರಿ ಅಂತ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿ ಮಾಡಿದ್ರೆ ಇದರಲ್ಲೂ ಇಂತಹ ಸಮಸ್ಯೆ ಇದೆಯಾ; ಖರೀದಿಗೂ ಮೊದಲು ನೂರು ಬಾರಿ ಯೋಚನೆ ಮಾಡಿ!

ಹೌದು, ಪಿಎಂ ಕಿಸಾನ್ ಯೋಜನೆ 14 ಕಂತಿನ ಹಣವು ಯಶಸ್ವಿಯಾಗಿ ರೈತರ  ಬ್ಯಾಂಕ್ ಖಾತೆಗೆ ಸೇರಿದೆ. ಇದೀಗ 15 ನೇ ಕಂತನ್ನು ಪಾವತಿ ಮಾಡಲು ಕೇಂದ್ರ ಸರ್ಕಾರವು ಸಿದ್ದತೆ ನಡೆಸಿದೆ. ಈ ಯೋಜನೆಯಿಂದ ಲಕ್ಷಾಂತರ ರೈತರಿಗೆ ಬಹಳ ಅನುಕೂಲವಾಗಿದೆ. ಆದರೆ ಈ ಯೋಜನೆ ಅನರ್ಹರ ಕೈ ಸೇರಬಾರದು ಎನ್ನುವ ಸಲುವಾಗಿ ಸರ್ಕಾರವು ಈ ಕೆವೈಸಿ ಮಾಡಿಸುವ ನಿಯಮ ರೂಪಿಸಿದೆ.

ಪಿಎಂ ಕಿಸಾನ್ ಫಲಾನುಭವಿ ರೈತರು ತಮ್ಮ ಹತ್ತಿರದ ಸಿಎಸ್ಸಿ ಕೇಂದ್ರ, ಗ್ರಾಮ ಒನ್  ಕೇಂದ್ರಗಳಿಗೆ ತೆರಳಿ ತಮ್ಮ ಜಮೀನಿನ ದಾಖಲೆಗಳನ್ನು ತೋರಿಸಿ ಅರ್ಜಿ ಭರ್ತಿ ಮಾಡಿ ಈ ಕೆವೈಸಿ ಮಾಡಿಸಬೇಕು. ಆಗ ಮಾತ್ರ ನಿಮಗೆ 15 ನೇ ಕಂತಿನ ಹಣ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ. ಈ ಕೆಲಸವನ್ನು ನೀವು ಇದೆ ತಿಂಗಳು ಅಂದರೆ ಸಪ್ಟೆಂಬರ್ 3೦ರ ಒಳಗಾಗಿ ಮಾಡಿಸಿಕೊಳ್ಳಬೇಕು ಎಂದು ಕೇಂದ್ರ ಸರ್ಕಾರವು ತಿಳಿಸಿದೆ.

Comments are closed.