Bengaluru land: ಬೆಂಗಳೂರಿನಲ್ಲಿ ಸೈಟ್ ತಗೊಂಡವರಿಗೂ, ತಗೊಳ್ಳುವವರಿಗೂ ಸಂಕಷ್ಟ; ನಡೆದಿದೆ ಸಾವಿರಾರು ಎಕರೆ ಅಕ್ರಮ, ನಿಮ್ಮ ಸೈಟ್ ನಿಮ್ಮದಲ್ಲ ಎನ್ನುತ್ತಿದೆಯಾ ಸರ್ಕಾರ!

Bengaluru land: ಬೆಂಗಳೂರಿನಂತಹ ಮಹಾನಗರದಲ್ಲಿ ನಿವೇಶನವೊಂದನ್ನು ಖರೀದಿಸಿ ಮನೆ ಕಟ್ಟಿಕೊಳ್ಳಬೇಕು ಎನ್ನುವುದು ಹಲವರ ಕನಸಾಗಿರುತ್ತದೆ. ಅದಕ್ಕಾಗಿಯೇ ಸಾಲ ಸೋಲ ಮಾಡಿ ನಿವೇಶನ ತೆಗೆದುಕೊಂಡಿರುತ್ತಾರೆ. ಅಂತಹ ನಿವೇಶನ ಅತಿಕ್ರಮಣದ ಜಾಗದಲ್ಲಿ ಬಂದಿದ್ದರೆ ಅದನ್ನು ತೆರವು ಮಾಡಲಾಗುತ್ತದೆ ಎಂದರೆ ಎಂತಹವರಿಗೂ ಒಂದು ಸಲ ಆಘಾತವಾಗುತ್ತದೆ. ಇದನ್ನೂ ಓದಿ: Gruhalakshmi Scheme: ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ ಮೇಲೆ ಈ ತಪ್ಪು ಮಾಡಿದ್ದೀರಾ? ಹಾಗಾದರೆ ಖಾತೆಗೆ ಹಣ ಜಮಾ ಆಗದೇ ಇರಬಹುದು; ತಕ್ಷಣವೇ ಸರಿಪಡಿಸಿಕೊಳ್ಳಿ!

ಹೌದು, ಅತಿಕ್ರಮಣ ಮಾಡಿ ನಿವೇಶನ ಮಾಡಿದ ಜಾಗದ ಆಡಿಟ್ ಮಾಡಲು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಸರ್ಕಾರದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಖಡಕ್ ಆದೇಶ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಬೆಂಗಳೂರಿನಲ್ಲಿ ವ್ಯಾಸಯೋಗಿ ಆಶ್ರಯ ಮನೆಗಳ ನಿರ್ಮಾಣಕ್ಕಾಗಿ ೫-೬ ಸಾವಿರ ಎಕರೆ ಜಮೀನನ್ನು ಒತ್ತುವರಿ ಮಾಡಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ. ಈ ವಿಚಾರವನ್ನು ನಮ್ಮ ರಾಜ್ಯದ ಮುಖ್ಯಮಂತ್ರಿಗಳಾದಂತಹ ಸಿದ್ದರಾಮಯ್ಯ ಅವರು ಬಹಳ ಗಂಭೀರವಾಗಿ ಪರಿಗಣನೆ ಮಾಡಿದ್ದಾರೆ. ಬಡವರಿಗೆ ನೀಡಬೇಕಾದ ಸೌಲತ್ತು ದುರ್ಬಳಕೆ ಆಗಬಾರದು ಎನ್ನುವ ಕಾರಣಕ್ಕಾಗಿ ಈ ಕುರಿತು ಸರ್ಕಾರವೇ ಆಡಿಟ್ ಮಾಡಬೇಕು ಎಂದು ಅವರು ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದಾರೆ. ಇದೊಂದೆ ಅಲ್ಲದೆ ಬೆಂಗಳೂರಿನಿಂದ ೧೦೦ ಕಿಮೀ ಸುತ್ತಮುತ್ತ ಎಲ್ಲೆಲ್ಲಿ ಒತ್ತುವರಿ ನಡೆದಿದೆ ಎನ್ನುವುದನ್ನು ಸಹ ಆಡಿಟ್ ಮಾಡಿ ವರದಿ ನೀಡಿ ಎಂದು ಸೂಚನೆ ನೀಡಿದ್ದಾರೆ ಎನ್ನುವುದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಇದನ್ನೂ ಓದಿ: Business Idea: 9 to 5 ಜಾಬ್ ಇಷ್ಟವಿಲ್ವಾ ಬಿಟ್ಟುಬಿಡಿ; ಈ ಬ್ಯುಸನೆಸ್ ಶುರುಹಚ್ಕೊಳ್ಳಿ, ತಿಂಗಳಿಗೆ ಗಳಿಸಿ 5೦,೦೦೦ರೂ.ಗೂ ಅಧಿಕ ಹಣ!

ಇಂತಹ ಒತ್ತುವರಿ ಕಾರಣಗಳಿಂದಲೇ ಬೆಂಗಳೂರಿನಲ್ಲಿ ನಿವೇಶನಗಳ ಬೆಲೆ ಗಗನಮುಖಿಯಾಗಿದೆ. ಬಡವರು, ಮಧ್ಯಮ ವರ್ಗದವರು ನಿವೇಶನಗಳನ್ನು ಕೊಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಇಂತಹ ಒತ್ತುವರಿ ತೆರವು ಮಾಡಿದಾಗ ಮಾತ್ರ ಬಡವರಿಗೆ ಅನುಕೂಲವಾಗಲಿದೆ.

ಇದೇ ವಿಚಾರವಾಗಿ ವಿಧಾನ ಪರಿಷತ್ ಸದಸ್ಯರಾದ ರಮೇಶ್ ಬಾಬು ಅವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಅದರದಲ್ಲಿಯೂ ಭೂಮಿಯ ಆಡಿಟ್ ಮಾಡುವಂತೆ ವಿನಂತಿ ಮಾಡಿದ್ದಾರೆ.

ಬೆಂಗಳೂರಿನಿಂದ ನೂರು ಕಿಮೀ ವ್ಯಾಪ್ತಿಯಲ್ಲಿ ಸ್ಟಾರ್ ಹೊಟೇಲ್, ರೆಸಾರ್ಟ್, ಹೋಮ್ ಸ್ಟೇಗಳು ಸೇರಿದಂತೆ ವಿವಿಧ ಕಾರಣಕ್ಕಾಗಿ ಭೂಮಿಯನ್ನು ಅಕ್ರಮವಾಗಿ ತಮ್ಮ ವಶಕ್ಕೆ ಪಡೆದು ಸರ್ಕಾರಕ್ಕೆ ಮೋಸ ಮಾಡಲಾಗಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಕೊಟ್ಯಂತರ ರೂ. ನಷ್ಟವಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ವಿವಿಧ ರೀತಿಯ ಯೋಜನೆಗಳಲ್ಲಿ ಐದರಿಂದ ಆರು ಸಾವಿರ ಎಕರೆ ಸೇರಿದಂತೆ ಒಟ್ಟು ಇಲ್ಲಿಯವರೆಗೆ ಎಪ್ಪತೈದು ಸಾವಿರಕ್ಕೂ ಅಧಿಕ ಎಕರೆ ಜಾಗವನ್ನು ಅಕ್ರಮವಾಗಿ ಬಳಸಿಕೊಳ್ಳಲಾಗುತ್ತಿದೆ. ಸಾರ್ವಜನಿಕರ ಹಿತಾಸಕ್ತಿಗಾಗಿ ಈ ಎಲ್ಲ ಜಮೀನುಗಳ ಆಡಿಟ್ ಮಾಡಬೇಕು. ಅದನ್ನು ಒತ್ತುವರಿ ಆಗಿದ್ದಲ್ಲಿ ಅದನ್ನು ಸರ್ಕಾರ ವಾಪಸ್ ಪಡೆದುಕೊಳ್ಳಬೇಕು ಎಂದು ವಿ.ಪ. ಸದಸ್ಯ ರಮೇಶ ಬಾಬು ಅವರು ತಾವು ಬರೆದ ಪತ್ರದಲ್ಲಿ ಮನವಿ ಮಾಡಿದ್ದಾರೆ.

ಈ ವಿಚಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಗಂಭೀರವಾಗಿ ಪರಿಗಣಿಸಿದ್ದು ಆಡಿಟ್ ಮಾಡಿ ವರದಿ ನೀಡುವಂತೆ ಸರ್ಕಾರದ ಮುಖ್ಯಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದಾರೆ. ಇದನ್ನೂ ಓದಿ: Property News: ನೀವು ಜಮೀನು ಮಾರಾಟ ಮಾಡ್ಬೇಕಾ? ಹಾಗಾದರೆ ಈ ಹೊಸ ರೂಲ್ಸ್ ತಿಳಿದುಕೊಳ್ಳಿ; ಕೃಷಿ ಜಮೀನಿಗೂ ಟಾಕ್ಸ್ ಕಟ್ಟಬೇಕಾ?

Comments are closed.