Property News: ನೀವು ಜಮೀನು ಮಾರಾಟ ಮಾಡ್ಬೇಕಾ? ಹಾಗಾದರೆ ಈ ಹೊಸ ರೂಲ್ಸ್ ತಿಳಿದುಕೊಳ್ಳಿ; ಕೃಷಿ ಜಮೀನಿಗೂ ಟಾಕ್ಸ್ ಕಟ್ಟಬೇಕಾ?

Property News: ಸಾಲ (Loan) ಹೆಚ್ಚಾದಾಗಲೋ, ಅಥವಾ ನಮ್ಮ ವಾಸಸ್ಥಳ ಬದಲಾವಣೆ ಆಗುವ ಸಮಯದಲ್ಲಿ ನಾವು ನಮ್ಮ ಜಮೀನನ್ನು ಮಾರಾಟ ಮಾಡುತ್ತೇವೆ. ಹೀಗೆ ಜಮೀನನ್ನು ಮಾರಾಟ ಮಾಡುವ ವೇಳೆ ಸರ್ಕಾರ (Central Government)  ಯಾವ ಯಾವ ರೂಲ್ಸ್ ಜಾರಿಗೆ ತಂದಿದೆ ಎಂದು ನೋಡಿಕೊಳ್ಳಬೇಕು. ಸರ್ಕಾರಗಳು ಕಾಲ ಕಾಲಕ್ಕೆ ಜಮೀನು, ಸೈಟ್ ಸೇರಿದಂತೆ ಸ್ಥಿರಾಸ್ಥಿ ಮಾರಾಟದ ನಿಯಮಗಳನ್ನು ತಿದ್ದುಪಡಿ ಮಾಡುತ್ತ ಇರುತ್ತವೆ. ಇವುಗಳನ್ನು ತಿಳಿದುಕೊಳ್ಳುವುದು ಅಗತ್ಯ. ಇದನ್ನೂ ಓದಿ: Property Rules: ನಿಮ್ಮ ಆಪ್ತರೇ ಆಗಿದ್ರೂ ಅವರಿಗೆ ಆಸ್ತಿ ವರ್ಗಾಯಿಸುವ ಹಾಗಿಲ್ಲ; ಈ ತಪ್ಪು ಮಾಡಿದ್ರೆ ನಿಮ್ಮ ಸಂಪೂರ್ಣ ಆಸ್ತಿ ಸರ್ಕಾರದ ಪಾಲಾಗುತ್ತೆ ನೋಡಿ!

 ಜಮೀನು ಮಾರಾಟದ ವಿಚಾರದಲ್ಲಿ ಹಲವರಲ್ಲಿ ಗೊಂದಲಗಳು ಇರುತ್ತವೆ. ನಾವು ಮಾರಾಟ ಮಾಡುವ ಜಮೀನುಗೂ ತೆರಿಗೆ ಪಾವತಿ ಮಾಡಬೇಕೆ ಎನ್ನುವುದು. ಜಮೀನನ್ನು ಕ್ಯಾಪಿಟಲ್ ಅಸೆಟ್ ಎಂದು ಕರೆಯಲಾಗುತ್ತದೆ. ಹಾಗಾಗಿ ತೆರಿಗೆ ಪಾವತಿ ಮಾಡಬೇಕಾಗುತ್ತದೆ. ಈ ರೀತಿಗೆ ಪಾವತಿಸುವ ತೆರಿಗೆಗೆ ಗೇಯ್ನ ಟ್ಯಾಕ್ಸ್ ಎಂದು ಕರೆಯಲಾಗುತ್ತದೆ. ಇದು ಕೃಷಿ ಜಮೀನಿಗೂ (Agriculture Land)  ಅನ್ವಯಿಸುತ್ತದೆ ಎಂದು ಕೇಳಬಹುದು. ನಿಮ್ಮ ಜಮೀನು ನಗರಸಭೆ ವ್ಯಾಪ್ತಿಯೊಳಗೆ ಬಂದರೆ ನೀವು ಗೇಯ್ನ ಟ್ಯಾಕ್ಸ್ ಪಾವತಿಸಬೇಕಾಗುತ್ತದೆ. ಇದರಲ್ಲಿ ಎರಡು ವಿಧಗಳಿವೆ. ಒಂದು ಲಾಂಗ್ ಟರ್ಮ್ ಗೆಯ್ನ ಟ್ಯಾಕ್ಸ್. ಇನ್ನೊಂದು ಶಾರ್ಟ್ ಟರ್ಮ್ ಗೆಯ್ನ ಟ್ಯಾಕ್ಸ್. ಗ್ರಾಮೀಣ ಭಾಗದ ಜಮೀನಿಗೆ ಯಾವುದೇ ರೀತಿಯ ತೆರಿಗೆ ಇರುವುದಿಲ್ಲ.

ಯಾವ ಯಾವ ಆಸ್ತಿ ಮಾರಾಟ ಮಾಡಿದರೆ ತೆರಿಗೆ ಪಾವತಿಸಬೇಕು?:

ನಾವು ಮಾಡಿದಂತಹ ಯಾವುದೇ ಸ್ಥಿರಾಸ್ಥಿಯನ್ನು ಮಾರಾಟ ಮಾಡಿದಲ್ಲಿ ನಾವು ತೆರಿಗೆ ಪಾವತಿ ಮಾಡಬೇಕಾಗುತ್ತದೆ. ಇದು ಎಲ್ಲರಿಗೂ ತಿಳಿದಿರುವ ವಿಚಾರವೇ ಸರಿ. ಈ ಸ್ಥಿರಾಸ್ಥಿಗಳನ್ನು ಮಾರಾಟ ಮಾಡಿದಾಗ ಕ್ಯಾಪಿಟಲ್ ಗೆಯ್ನ ಟಾಕ್ಸ್ (CGP) ಪಾವತಿಸಬೇಕಾಗುತ್ತದೆ. ಆದರೆ ನಾವು ನಮ್ಮ ಹೊಲವನ್ನು ಅಥವಾ ತೋಟವನ್ನು ಮಾರಾಟ ಮಾಡಿದರೂ ಟ್ಯಾಕ್ಸ್ ಕಟ್ಟಬೇಕಾ ಎನ್ನುವ ಗೊಂದಲ ಹಲವರಲ್ಲಿ ಇರುತ್ತದೆ. ಆಗ ನಿಮ್ಮ ಜಮೀನು ಎಲ್ಲಿದೆ ಎನ್ನುವದರ ಮೇಲೆ ಅದು ನಿರ್ಧಾರವಾಗುತ್ತದೆ. ನಿಮ್ಮ ಜಮೀನು ಗ್ರಾಮ ಪಂಚಾಯತ್ ವ್ಯಾಪ್ತಿಯ ಒಳಗಡೆ ಇದ್ದರೆ ಅದಕ್ಕೆ ನೀವು ತೆರಿಗೆ ಪಾವತಿ ಮಾಡುವ ಅವಶ್ಯಕತೆ ಇಲ್ಲ. ಒಂದು ಒಂದು ವೇಳೆ ನಿಮ್ಮ ಜಮೀನು ನಗರಸಭೆ, ಮಹಾನಗರ ಪಾಲಿಕೆ ವ್ಯಾಪ್ತಿಗೆ ಬಂದರೆ ಅದಕ್ಕೆ ನೀವು ತೆರಿಗೆ ಪಾವತಿ ಮಾಡಬೇಕಾಗುತ್ತದೆ. ಇದನ್ನೂ ಓದಿ: Cricket News: ಲಿಟಲ್ ಮಾಸ್ಟರ್ ದಾಖಲೆಯನ್ನೇ ಮುರಿದ ಈ ಆಟಗಾರ; ಯಾರು ಈ ಸ್ಪೋಟಕ ಬ್ಯಾಟ್ಸಮನ್?

ಸ್ಥಿರಾಸ್ಥಿಗಳು ಯಾವುದು ಗೊತ್ತಾ?:

ಮನೆ, ಜಮೀನು, ಕಾರು, ಶೇರ್ ಬಾಂಡ್ ಪೇಪರ್ಗಳನ್ನು ಸ್ಥಿರಾಸ್ಥಿಗಳು ಎಂದು ಪರಿಗಣಿಸಲಾಗುತ್ತದೆ. ಇದನ್ನು ವಾಣಿಜ್ಯ ಭಾಷೆಯಲ್ಲಿ ಕ್ಯಾಪಿಟಲ್ ಅಸೆಟ್  ಎಂದು ಕರೆಯಲಾಗುತ್ತದೆ. ಈ ಸ್ಥಿರಾಸ್ಥಿಗಳನ್ನು ನೀವು ಮಾರಾಟ ಮಾಡಿದಾಗ ನಿಮಗೆ ಸಿಗುವ ಲಾಭದ ಆಧಾರದ ಮೇಲೆ ನೀವು ತೆರಿಗೆ ಪಾವತಿ ಮಾಡಬೇಕಾಗುತ್ತದೆ. ಅಲ್ಲದೆ ನೀವು ಆಸ್ತಿಯನ್ನು ಯಾವಾಗ ಖರೀದಿಸಿದ್ದೀರಿ, ಎಷ್ಟು ವರ್ಷದ ನಂತರ ಮಾರಾಟ ಮಾಡುತ್ತಿದ್ದೀರಿ ಎನ್ನುವುದು ಸಹ ಇಲ್ಲಿ ಪರಿಗಣಿಸಲ್ಪಡುತ್ತದೆ.

Comments are closed.