UPI Payment: ನೀವು ತಪ್ಪಾದ ಸಂಖ್ಯೆಗೆ ಯುಪಿಐ ಪೇಮೆಂಟ್ ಮಾಡಿದ್ದೀರಾ? ಹಾಗಾದರೆ ಚಿಂತೆ ಮಾಡ್ಬೇಡಿ, ಈ ರೀತಿ ಮಾಡಿ; ನಿಮ್ಮ ಹಣ ವಾಪಸ್ ಬರುತ್ತೆ ನೋಡಿ

UPI Payment: ಭಾರತದಲ್ಲಿ ಈಗ ಹೆಚ್ಚಿನ ಜನರು ಯುಪಿಐ ಪಾವತಿಯನ್ನೇ ಮಾಡುತ್ತಾರೆ. ನಮ್ಮ ಖಾತೆಯಲ್ಲಿ ಹಣವಿದ್ದರೆ ಸಾಕು ನಾವು ಯುಪಿಐ ಪೇಮೆಂಟ್ ಮಾಡಬಹುದು. ದೇಶದೊಳಗೆ ಎಲ್ಲಿ ಬೇಕಾದರೂ ನಿಮಿಷದಲ್ಲಿ ನಾವು ಹಣ ವರ್ಗಾವಣೆ ಮಾಡಬಹುದು. ಈ ಯುಪಿಐ ಪಾವತಿ ವಿಧಾನದಿಂದ ನಾವು ಹಣವನ್ನು ಜೇಬಿನಲ್ಲಿ ಇಟ್ಟುಕೊಂಡು ಓಡಾಡೋದು ತಪ್ಪಿದೆ. ಒಂದು ವೇಳೆ ನಾವು ಈ ರೀತಿ ಯುಪಿಐ ಪಾವತಿ ಮಾಡುವ ವೇಳೆ ತಪ್ಪಾದ ವ್ಯಕ್ತಿಗೆ ಹಣ ಪಾವತಿ ಆದರೆ ಏನು ಮಾಡೋದು ಎನ್ನುವ ಚಿಂತೆ ಕಾಡಬಹುದು. ಇದಕ್ಕೂ ಸಹ ಉಪಾಯವನ್ನು ಆರ್ಬಿಐ ಕಂಡು ಹಿಡಿದಿದೆ. ನೀವು ಯಾವ ಸಂಖ್ಯೆಗೆ ಪಾವತಿ ಆಗಿದೆಯೋ ಅದನ್ನು ದೂರು ನೀಡಿದರೆ ನಿಮ್ಮ ಹಣ ವಾಪಸ್ ಬರಲಿದೆ. ಈ ದೂರು ನೀಡುವ ಪ್ರಕ್ರಿಯೆಯನ್ನು ರಿಸರ್ವ್ ಬ್ಯಾಂಕ್ ಸರಳಗೊಳಿಸಿದೆ.

ದೂರು ದಾಖಲಿಸುವ ವಿಧಾನ;

ನೀವು ತಪ್ಪಾದ ಸಂಖ್ಯೆಗೆ ಯುಪಿಐ ಮೂಲಕ ಹಣ ವರ್ಗಾವಣೆ ಮಾಡಿದ್ದಲ್ಲಿ ನೀವು ಟೋಲ್ ಫ್ರಿ ಸಂಖ್ಯೆಯಾಗಿರುವ 18೦೦12೦174೦ ಸಂಖ್ಯೆಗೆ ಕರೆ ಮಾಡಿ ದೂರು ಸಲ್ಲಿಸಬೇಕು. ಈ ಸಂದರ್ಭದಲ್ಲಿ ನೀವು ಹಣ ವರ್ಗಾವಣೆ ಮಾಡಿರುವ ಸಂಖ್ಯೆಯ ಮಾಹಿತಿ ನೀಡಬೇಕು. ಆ ಬಳಿಕ ನೀವು ಖಾತೆ ಹೊಂದಿರುವ ಬ್ಯಾಂಕ್ಗೆ ತೆರಳಿ ಅಲ್ಲಿ ಎಲ್ಲ ಮಾಹಿತಿಗಳೊಂದಿಗೆ ಅರ್ಜಿ ಸಲ್ಲಿಸಬೇಕು. ಆಗ ಬ್ಯಾಂಕ್ ಮ್ಯಾನೇಜರ ಅರ್ಜಿ ಸಂಖ್ಯೆಯನ್ನು ನಿಮಗೆ ನೀಡುತ್ತಾರೆ. ಇದನ್ನು ನೀವು ಆರ್ಬಿಐಗೆ ಮೇಲ್ ಮಾಡಬೇಕು. ನೀವು ಸರಿಯಾದ ಕ್ರಮದಲ್ಲಿ ಅರ್ಜಿ ಸಲ್ಲಿಸಿದ್ದಲ್ಲಿ 48 ಗಂಟೆಯೊಳಗೆ ಅಂದರೆ ಎರಡು ದಿನದೊಳಗೆ ನೀವು ಎಷ್ಟು ಹಣವನ್ನು ವರ್ಗಾವಣೆ ಮಾಡಿದ್ದೀರೋ ಅಷ್ಟು ಹಣ ನಿಮ್ಮ ಖಾತೆಗೆ ವಾಪಸ್ ಜಮಾ ಆಗಲಿದೆ.

ನೀವು ಹಣ ಕಳುಹಿಸಿದ ಸಂದೇಶ ಅಳಿಸಬೇಡಿ;

ನೀವು ಹಣ ವರ್ಗಾವಣೆ ಮಾಡಿದ ನಂತರ ನಿಮ್ಮ ಸಂಖ್ಯೆಗೆ ಒಂದು ಸಂದೇಶ ಬರುತ್ತದೆ. ನಿಮ್ಮ ಹಣ ಇಂತಹ ಖಾತೆಗೆ ವರ್ಗಾವಣೆ ಆಗಿದೆ ಎಂದು. ಈ ಸಂದೇಶವನ್ನು ಯಾವುದೇ ಕಾರಣಕ್ಕೂ ಡಿಲೀಟ್ ಮಾಡಲು ಹೋಗಬೇಡಿ. ಇದೇ ನಿಮ್ಮ ಹಣವನ್ನು ವಾಪಸ್ ಕೊಡಿಸುತ್ತದೆ. ನೀವು ಬ್ಯಾಂಕ್ನಲ್ಲಿ ಅರ್ಜಿ ಸಲ್ಲಿಸುವ ವೇಳೆ ಪಿಪಿಬಿಎಲ್ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ. ಹಾಗಾಗಿ ಈ ಸಂದೇಶ ಇಟ್ಟುಕೊಳ್ಳಬೇಕು.

ಇಷ್ಟು ದಿನದೊಳಗೆ ದೂರು ದಾಖಲಿಸಿ;

ನೀವು ಹಣ ವರ್ಗಾವಣೆ ಮಾಡಿದ ಮೂರು ದಿನದ ಒಳಗೆ ದೂರು ದಾಖಲಿಸಬೇಕಾಗುತ್ತದೆ. ನಿಮ್ಮ ಖಾತೆ ವೆರಿಫೈ ಆದಲ್ಲಿ ನಿಮ್ಮ ದೂರು ಸರಿಯಾದ ಕ್ರಮದಲ್ಲಿ ಇದ್ದಾಗ 48 ಗಂಟೆಯೊಳಗೆ ನಿಮ್ಮ ಹಣ ನಿಮ್ಮ ಖಾತೆಗೆ ಜಮಾ ಆಗುತ್ತದೆ.

Comments are closed.