Gruhalakshmi: ಗೃಹಲಕ್ಷ್ಮಿ ಯೋಜನೆಯ 2,000ರೂ ಬಂದಿಲ್ಲಾ ಅಂತ ಚಿಂತೆಬೇಡ; ಒಟ್ಟಿಗೇ 4,000 ರೂ. ಗಳು ನಿಮ್ಮ ಖಾತೆಗೆ ಜಮಾ; ಎರಡನೇ ಕಂತು ಬಿಡುಗಡೆಗೆ ದಿನಾಂಕ ಫಿಕ್ಸ್ ಮಾಡಿದ ಸರ್ಕಾರ!

Gruhalakshmi: ಪ್ರಸ್ತುತ ರಾಜ್ಯ ಸರ್ಕಾರವು ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದು, ಅವುಗಳಲ್ಲಿ ಗೃಹಲಕ್ಷ್ಮಿ ಯೋಜನೆಯೂ ಒಂದು. ಕಳೆದ ತಿಂಗಳು ಈ ಯೋಜನೆಗೆ ಚಾಲನೆ ನೀಡಲಾಯಿತು. ಜಾರಿಯಾದ ಬಳಿಕ ಹಲವು ಫಲಾನುಭವಿಗಳ ಖಾತೆಗೆ ಹಣ ಬಂದಿರಲಿಲ್ಲ.ಇದರಿಂದ ಫಲಾನುಭವಿಗಳು ಬೇಸರ ವ್ಯಕ್ತಪಡಿಸಿದ್ದರು. ಆದರೆ ಇದೀಗ ಸರ್ಕಾರ ಒಂದು ಸಿಹಿ ಸುದ್ದಿ ನೀಡಿದ್ದು, ಅಗಷ್ಟ ಹಾಗೂ ಸಪ್ಟೆಂಬರ್ ಎರಡು ತಿಂಗಳ ಹಣ ಜಮಾ ಮಾಡುವುದಾಗಿ ತಿಳಿಸಿದೆ.

ಹೌದು, ಅಗಷ್ಟ ತಿಂಗಳಲ್ಲಿ ನಮ್ಮ ಖಾತೆಗೆ ಹಣ ಬಂದಿಲ್ಲ. ನಾವು ಮುಂಚೆಯೇ ಅರ್ಜಿ ಸಲ್ಲಿಸಿದ್ದೇವು. ಆದರೂ ಹಣ ಬಂದಿಲ್ಲ ಎನ್ನುವ ಚಿಂತೆಯಲ್ಲಿದ್ದ ಫಲಾನುಭವಿಗೆ ಇದು ಖುಷಿಯ ವಿಚಾರವಾಗಿದೆ. ಕೆಲವೊಂದು ಫಲಾನುಭವಿಗಳ ಖಾತೆಗೆ ಆಧಾರ್ ಸರಿಯಾಗಿ ಜೋಡಣೆ ಆಗದಿರುವುದು, ಕೆಲವು ಖಾತೆಗಳು ಬಂದ್ ಆಗಿರುವುದು ಸೇರಿದಂತೆ ಕೆಲವೊಂದು ತಾಂತ್ರಿಕ ಕಾರಣಗಳಿಂದ ಕಳೆದ ತಿಂಗಳ ಹಣ ಪಾವತಿ ಮಾಡುವುದು ವಿಳಂಭವಾಗಿತ್ತು. ಆದರೆ ಈ ತಿಂಗಳ ವಿಳಂಭವಾಗುವುದಿಲ್ಲ. ಸೆ.೧೫ರಿಂದ ಫಲಾನುಭವಿಗಳ ಖಾತೆಗೆ ಹಣ ಜಮಾ ಮಾಡುವ ಪ್ರಕ್ರಿಯೆ ಆರಂಭವಾಗಲಿದೆ ಎಂದು ಸರ್ಕಾರ ತಿಳಿಸಿದೆ.

ಗೃಹ ಲಕ್ಷ್ಮಿ ಯೋಜನೆಗೆ ಯಾವಾಗ ಬೇಕಾದ್ರೂ ಅರ್ಜಿ ಸಲ್ಲಿಸಿ:

ಕಳೆದ ತಿಂಗಳು ಅರ್ಜಿ ಸಲ್ಲಿಸದ ಮಹಿಳೆಯರಲ್ಲಿ ಕೆಲವೊಂದು ಗೊಂದಲಗಳಿತ್ತು. ಅರ್ಜಿ ಸಲ್ಲಿಕೆ ಪ್ರಕ್ರಿಯೆ ನಿಲ್ಲಬಹುದೇ? ಎಂದು. ಆದರೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರೇ ಈ ವಿಚಾರವಾಗಿ ಸ್ಪಷ್ಟನೆ ನೀಡಿದ್ದು, ಗೃಹ ಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಸ್ಥಗಿತಗೊಳ್ಳುವುದಿಲ್ಲ. ಯಾವಾಗ ಅರ್ಜಿ ಸಲ್ಲಿಸುತ್ತೀರೋ ಆ ತಿಂಗಳಿಂದ ನಿಮ್ಮ ಖಾತೆಗೆ ಹಣ ಜಮಾ ಆಗಲಿದೆ ಎಂದು ತಿಳಿಸಿದ್ದಾರೆ.

 ಈ ತಿಂಗಳು ಜಮಾ ಆಗಲಿದೆ 4,000 ರೂ. !

ಈ ತಿಂಗಳ 15 ರಿಂದ ಎರಡನೇ ತಿಂಗಳ ಹಣ ಪಾವತಿ ಪ್ರಕ್ರಿಯೆ ಆರಂಭಗೊಳ್ಳಲಿದೆ. ಕಳೆದ ತಿಂಗಳು ಬಾರದವರಿಗೆ ಈ ತಿಂಗಳು 4,000ರೂ.ಗಳನ್ನು ಜಮಾ ಮಾಡಲಾಗುತ್ತದೆ. ಹಾಗಾಗಿ ನಿಮ್ಮ ಖಾತೆ ಸರಿಯಾಗಿ ಇದ್ದಲ್ಲಿ, ಯಾವುದೇ ತಾಂತ್ರಿಕ ಸಮಸ್ಯೆಗಳು ಎದುರಾಗದಿದ್ದಲ್ಲಿ ಇನ್ನೊಂದು ವಾರದ ಒಳಗೆ ನಿಮ್ಮ ಖಾತೆಗೆ ೪೦೦೦ ರೂ. ಹಣ ಜಮಾ ಆಗಲಿದೆ ಎಂದು ಸರ್ಕಾರವು ತಿಳಿಸಿದೆ.

ಅಂಗನವಾಡಿ ಕಾರ್ಯಕರ್ತೆರಿಗೆ ಟಾಸ್ಕ್

ಇನ್ನು ಮುಂದೆ ಯಾರೂ ಅರ್ಹ ಫಲಾನುಭವಿಗಳು ಊರಿನಲ್ಲಿ ಇರುತ್ತಾರೋ, ಈ ಯೋಜನೆಯಡಿ ಅರ್ಜಿ ಸಲ್ಲಿಸಿಲ್ಲವೋ ಅಂತಹವರನ್ನು ಹುಡುಕಿ ಅರ್ಜಿ ಸಲ್ಲಿಸುವ ಟಾಸ್ಕ್ನ್ನು ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡಲಾಗಿದೆ. ಹಾಗಾಗಿ ಅವರು ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಲಿದ್ದಾರೆ. ಒಂದು ವೇಳೆ ಅರ್ಜಿ ಸಲ್ಲಿಸದ ಅರ್ಹ ಫಲಾನುಭವಿಗಳು ಇದ್ದಲ್ಲಿ ಅವರಿಗೆ ಮಾಹಿತಿ ನೀಡಿ ಅರ್ಜಿ ಸಲ್ಲಿಸುವಂತೆ ಮಾಡಲಿದ್ದಾರೆ.

ಒಟ್ಟಿನಲ್ಲಿ ರಾಜ್ಯದಲ್ಲಿರುವ ಯಾವುದೇ ಒಬ್ಬ ಅರ್ಹ ಫಲಾನುಭವಿಯೂ ಈ ಗೃಹಲಕ್ಷ್ಮಿ ಯೋಜನೆಯಿಂದ ವಂಚಿತರಾಗಬಾರದು ಎನ್ನುವುದು ಸರ್ಕಾರದ ಉದ್ದೇಶವಾಗಿದೆ.

Comments are closed.