Agriculture: ತುಂತುರು ನೀರಾವರಿಗೆ ರೈತರಿಗೆ ಸಿಗಲಿದೆ 90% ರಷ್ಟು ಸಬ್ಸಿಡಿ; ಸೀಮಿತ ಅವಧಿಗೆ ಮಾತ್ರ ಈಗಲೇ ಅರ್ಜಿ ಸಲ್ಲಿಸಿ!

Agriculture: ಭಾರತ ಕೃಷಿ ಪ್ರಧಾನ ರಾಷ್ಟ್ರ. ಇಲ್ಲಿ ಹಲವು ರೀತಿಯ ಕೃಷಿಗಳನ್ನು ಕೈಗೊಳ್ಳಲಾಗುತ್ತದೆ. ಅದರಲ್ಲಿ ಹನಿ ನೀರಾವರಿ ಪದ್ಧತಿ ಬಳಸಿ ಕೃಷಿ ಮಾಡುವುದು ಒಂದು. ಈ ಹನಿ ನೀರಾವರಿಗೆ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಅಡಿಯಲ್ಲಿ ಶೇ.9೦ ರಷ್ಟು ಸಹಾಯಧನ ಸಿಗಲಿದೆ. ಇದನ್ನೂ ಓದಿ: Post Office Scheme: ಇಲ್ಲಿ ಹೂಡಿಕೆಯ ಮೊತ್ತ ಅಧಿಕವಲ್ಲ; ಆದ್ರೇ ರಿಟರ್ನ್ ಪಡೆಯುವ ಹಣ ಮಾತ್ರ ಲಕ್ಷ ಲಕ್ಷ; ಇಂದೇ ಈ ಯೋಜನೆಯಲ್ಲಿ ಹೂಡಿಕೆ ಮಾಡಿ 100% ಗ್ಯಾರಂಟಿರೀ!  

2೦23-24 ರ ಸಾಲಿನ ಕೇಂದ್ರ ಪುರಸ್ಕೃತ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ (PM Chinchayi Yojana) ರಾಜ್ಯ ಸರ್ಕಾರವು ಜಾರಿಗೆ ತರುತ್ತಿದೆ. ಮೈಸೂರು ಜಿಲ್ಲೆಗೆ ಸಂಬಂಧಿಸಿ ತೋಟಗಾರಿಕಾ ಇಲಾಖೆಗೆ ಸಂಬಂಧಿಸಿದಂತೆ ಅರ್ಜಿ ಆಹ್ವಾನ ಮಾಡಲಾಗಿದೆ. ಆಸಕ್ತ ರೈತರು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು.

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಆರ್.ಡಿ ಸಂಖ್ಯೆ ಹೊಂದಿರುವ ರೈತರಿಗೆ ಗರಿಷ್ಟ 2 ಎಕರೆ ಜಮೀನಿಗೆ ಈ ಸಹಾಯ ಧನ ಸಿಗಲಿದೆ. ಶೇ.9೦ ರಷ್ಟು ಸಹಾಯಧನವನ್ನು ಸರ್ಕಾರವು ಒದಗಿಸಲಿದೆ.ಇತರೆ ರೈತರಿಗೆ ಶೇ.75 ರಷ್ಟು ಸಹಾಯಧನ ಸಿಗಲಿದೆ. ಕೇಂದ್ರ ಸರ್ಕಾರದ ಸೂಚನೆಯಂತೆ ಗರಿಷ್ಟ 2 ಎಕರೆಯಿಂದ ಐದು ಎಕರೆ ವರೆಗೆ ಸಹಾಯ ಧನ ಸಿಗಲಿದೆ. ಆಸಕ್ತ ರೈತರು ಮೈಸೂರಿನ ಎಲ್ಲ ತಾಲೂಕುಗಳ ತೋಟಗಾರಿಕಾ ನಿರ್ದೇಶಕರ ಕಚೇರಿಗೆ ಕರೆ ಮಾಡಿ ಇಲ್ಲವೇ ಕುದ್ದು ಭೇಟಿ ನೀಡಿ ಹೆಚ್ಚಿನ ವಿವರ ಪಡೆದು ಅರ್ಜಿ ಸಲ್ಲಿಸಿ ಈ ಯೋಜನೆಯ ಲಾಭ ಪಡೆದುಕೊಳ್ಳಬಹುದು.

ಮೈಸೂರು ಒಂದೇ ಅಲ್ಲದೆ ಚಿಕ್ಕಮಗಳೂರು ಜಿಲ್ಲೆಯಲ್ಲಿಯೂ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಅನುಷ್ಟಾನಗೊಳಿಸಲಾಗುತ್ತಿದೆ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿ ಈ ಯೋಜನೆ ಅನುಷ್ಠಾನ ಆಗುತ್ತಿದೆ. ತರೀಕೆರೆ ತಾಲೂಕಿನ ರೈತರು ತಮ್ಮ ತಾಲೂಕಿನ ತೋಟಗಾರಿಕಾ ಇಲಾಖಾ ನಿರ್ದೇಶಕರ ಕಚೇರಿಗೆ ಭೇಟಿ ನೀಡಿ ಹೆಚ್ಚಿನ ವಿವರ ಪಡೆಯಬಹುದು.

ಬೆಳೆಗಾರರು ಅನುಮೋದನೆಗೊಂಡ ಕಂಪನಿಗಳ ಮಾಹಿತಿ ಪಡೆದು ನೋಂದಣಿ ಮಾಡಿಸಿಕೊಂಡು ನೇರವಾಗಿ ಕಂಪನಿಯೊಂದಿಗೆ ಮಾತನಾಡಿ ತಮ್ಮ ತೋಟಗಳಲ್ಲಿ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳಬಹುದು. ಇದನ್ನೂ ಓದಿ: Guhalakshmi Scheme: ಗೃಹಲಕ್ಷ್ಮಿ ಯೋಜನೆ ಹಣ ಪಡೆಯೋದಕ್ಕೆ ಕಡೆಗೂ ಸಿಕ್ತು ಪರಿಹಾರ; ಹೀಗೆ ಮಾಡಿ ಥಟ್ ಅಂತ ಹಣ ನಿಮ್ಮ ಖಾತೆಗೆ ಬಂದು ತಲುಪುತ್ತೆ!

ಸರ್ಕಾರಗಳು ರೈತರಿಗಾಗಿಯೇ ಹಲವಾರು ಯೋಜನೆಗಳನ್ನು ಜಾರಿ ಮಾಡುತ್ತ ಇರುತ್ತವೆ. ರೈತರು ಈ ಯೋಜನೆಗಳ ಮಾಹಿತಿ ಪಡೆದುಕೊಂಡು ಕಚೇರಿಗಳಿಗೆ ಭೇಟಿ ನೀಡಿ ಅಧಿಕಾರಿಗಳನ್ನು ಭೇಟಿಯಾಗಿ ಸರಿಯಾದ ಕ್ರಮದಲ್ಲಿ ಅರ್ಜಿ ಸಲ್ಲಿಸಿ ಸಹಾಯಧನ ಪಡೆದು ಕೃಷಿ ಮಾಡಿ ಲಾಭಗಳಿಸಿ ಆರ್ಥಿಕವಾಗಿ ಸದೃಢರಾಗಬಹುದು. ಇದನ್ನೂ ಓದಿ: Property Rules: ನಿಮ್ಮ ಆಪ್ತರೇ ಆಗಿದ್ರೂ ಅವರಿಗೆ ಆಸ್ತಿ ವರ್ಗಾಯಿಸುವ ಹಾಗಿಲ್ಲ; ಈ ತಪ್ಪು ಮಾಡಿದ್ರೆ ನಿಮ್ಮ ಸಂಪೂರ್ಣ ಆಸ್ತಿ ಸರ್ಕಾರದ ಪಾಲಾಗುತ್ತೆ ನೋಡಿ!

Comments are closed.